Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮನೆಯ ಯಜಮಾನ ಅನ್ನಿಸಿಕೊಳ್ಳಬೇಕಾದರೆ ಈ ಗುಣ ಇರಬೇಕು ಅಂತಾರೆ ಚಾಣಕ್ಯ
ಒಂದು ಮನೆ ಅಂದಮೇಲೆ ಅಲ್ಲಿ ಯಜಮಾನ ಇರಲೇಬೇಕು. ಯಜಮಾನ ಆದಮೇಲೆ ಆತ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಮನೆಯವರ ಬೇಕು-ಬೇಡಗಳನ್ನು ಅಥೈಸಿಕೊಳ್ಳಬೇಕು. ಅಷ್ಟಕ್ಕೆ ಮಾತ್ರ ಅವನು ಯಜಮಾನ ಅನ್ನಿಸಿಕೊಳ್ಳೋದಿಲ್ಲ.
ಕೆಲವೊಂದು ಮನೆಗಳಲ್ಲಿ ನಾವು ಗಮನಿಸಿರಬಹುದು ಹೆಸರಿಗೆ ಮಾತ್ರ ಆತ ಯಜಮಾನ ಆಗಿರುತ್ತಾನೆ. ಅಧಿಕಾರ ಬೇರೆಯವರ ಕೈಯಲ್ಲಿ ಇರುತ್ತದೆ. ಇನ್ನೂ ಕೆಲವು ಮನೆಯಲ್ಲಿ ಯಜಮಾನನ ಆಡಳಿತ ಹಿಟ್ಲರ್‌ನ ಆಡಳಿತದ ರೀತಿಯಲ್ಲಿ ಇರುತ್ತದೆ.

ಚಾಣಕ್ಯನ ಪ್ರಕಾರ ಯಜಮಾನನಲ್ಲಿ ಕೆಲವೊಂದು ಗುಣಗಳು ಇರಬೇಕು. ಈ ಗುಣಗಳು ಇದ್ದಾಗ ಮಾತ್ರ ಆತ ಸಮರ್ಥ ಯಜಮಾನ ಅನ್ನಿಸಿಕೊಳ್ಳುತ್ತಾನೆ. ಅಷ್ಟಕ್ಕು ಚಾಣಕ್ಯನ ಪ್ರಕಾರ ಯಜಮಾನನಿಗೆ ಯಾವೆಲ್ಲಾ ಗುಣಗಳು ಇರಬೇಕು ಅನ್ನೋದನ್ನ ನೋಡೋಣ.
1. ಅನವಶ್ಯಕವಾಗಿ ಖರ್ಚು ಮಾಡಬಾರದು
ಮನೆಯಲ್ಲಿ ಮಕ್ಕಳು ಜೀವನ ಪಾಠಗಳನ್ನು ಕಲಿಯುವುದೇ ಮನೆಯ ಹಿರಿಯರನ್ನು ನೋಡಿಕೊಂಡು. ಇಂತಹ ಪರಿಸ್ಥಿತಿಯಲ್ಲಿ ಮನೆಯ ಯಜಮಾನನಾದವನು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇನ್ನೂ ಹಣದ ವಿಚಾರದಲ್ಲಿ ಕೂಡ ಹಾಗೇ ಯಜಮಾನನಾದವನು ಅಳೆದು-ತೂಗಿ ಖರ್ಚು ಮಾಡಬೇಕು. ಅದನ್ನು ಬಿಟ್ಟು ತಾನೇ ಕುಡಿಯುವುದು, ಮೋಜು-ಮಸ್ತಿ ಮಾಡುವುದು ಇಂತಹ ದುಸ್ಚಟಗಳನ್ನು ಮೈಗೂಡಿಸಿಕೊಳ್ಳಬಾರದು. ಮಕ್ಕಳಿಗೂ ಕೂಡ ಹಣದ ಮಹತ್ವದ ಬಗ್ಗೆ ತಿಳಿ ಹೇಳಬೇಕು. ಎಷ್ಟು ಖರ್ಚು ಮಾಡಬೇಕು? ಹೇಗೆ ಖರ್ಚು ಮಾಡಬೇಕು ಅನ್ನೋದನ್ನು ಅರ್ಥೈಸಿ.
2. ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯಬೇಕು
ಚಾಣಕ್ಯನ ಪ್ರಕಾರ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೂಡ ಆತ ಕುಟುಂಬ ಸದಸ್ಯರಿಗಾಗಿ ಸಮಯವನ್ನು ಮೀಸಲಿಡಲೇಬೇಕು. ಸಮಯ ಸಿಕ್ಕಾಗಲೆಲ್ಲಾ ಮನೆಯವರನ್ನೆಲ್ಲಾ ಒಟ್ಟಾಗಿಸಿ ಅವರ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯಬೇಕು. ಆಗ ಅವರ ಕಷ್ಟ-ಸುಖ ,ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಹುದು. ಮನೆಯವರೊಂದಿಗೆ ಬರೆತು ಮಾತನಾಡಿದಾಗ ಮಾತ್ರ ಮನೆಯಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗೋದು.
3. ಸಹೋದರರ ಜೊತೆಗೆ ಸಂಬಂಧ ಚೆನ್ನಾಗಿರಲಿ
ಚಾಣಕ್ಯನ ಪ್ರಕಾರ ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ ನೆಲೆಸಿರಬೇಕೆಂದರೆ ಯಜಮಾನನಾದವನು ತನ್ನ ಸಹೋದರ ಹಾಗೂ ಸಹೋದರಿ ಜೊತೆಗೆ ಉತ್ತಮ ಬಾಂಧವ್ಯದಿಂದಿರಬೇಕು. ಸಹೋದರರು ಕಚ್ಚಾಡೋದು ಮನೆಗೆ ಖಂಡಿತ ಶೋಭೆ ತರೋದಿಲ್ಲ. ಆದಷ್ಟು ಮನೆಯವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಮನೆ ನಡೆಸಬೇಕು.
ಬಡವರರಾಗಲಿ ಶ್ರೀಮಂತರಾಗಲಿ ಮನೆಯಲ್ಲಿ ಯಜಮಾನನ ಪಾತ್ರ ತುಂಬಾನೇ ಮುಖ್ಯವಾಗುತ್ತದೆ. ಮನೆಯನ್ನು ಯಾರು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಾರೋ ಅಂತಹ ಕುಟುಂಬದಲ್ಲಿ ಸಂತೋಷದಿಂದಿರುತ್ತದೆ.



Click it and Unblock the Notifications



