Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಹಿಳೆಯರು ಪುರುಷರಿಗಿಂತ ಈ ನಾಲ್ಕು ವಿಚಾರಗಳಲ್ಲಿ ಯಾವತ್ತಿಗೂ ಮುಂದಿರುತ್ತಾರೆ : ಚಾಣಕ್ಯ
ಆಚಾರ್ಯ ಚಾಣಕ್ಯ ಒಬ್ಬ ಚತುರ ರಾಜಕಾರಣೆ, ಮೇಧಾವಿ, ಅರ್ಥಶಾಸ್ತ್ರಜ್ಞ. ಅವರು ಹೇಳಿ ಕೊಟ್ಟ ನೀತಿ ಪಾಠಗಳು ಇಂದಿಗೂ ನಮ್ಮ ಜೀವನಕ್ಕೆ ಅನ್ವಯವಾಗುತ್ತದೆ. ಯಾರು ಆಚಾರ್ಯರ ಮಾತುಗಳನ್ನು ಮೀರುವುದಿಲ್ಲವೋ ಅವರು ಹಾಕಿ ಕೊಟ್ಟ ದಾರಿಯಲ್ಲೇ ನಡೆಯುತ್ತಾರೋ ಖಂಡಿತ ಅಂತಹ ವ್ಯಕ್ತಿಗಳು ಯಶಸ್ಸಿನ ಉತ್ತಂಗಕ್ಕೆ ಏರುತ್ತಾರೆ.
ಅದೇ ರೀತಿ ಮಹಿಳೆಯರು ಕೂಡ. ಹಿಂದಿನ ಕಾಲದಲ್ಲಿ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಮಹಿಳೆ ಬಾಹ್ಯಾಕಾಶದವರೆಗೂ ಹೆಜ್ಜೆ ಇಟ್ಟಿದ್ದಾಳೆ. ಹಾಗೆಂದ ಮಾತ್ರಕ್ಕೆ ಆಕೆಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ ಅಂತ ಹೇಳೋದಿಕ್ಕಾಗೋದಿಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ಈ ನಾಲ್ಕು ವಿಚಾರಗಲ್ಲಿ ಯಾವತ್ತಿಗೂ ಪುರುಷರಿಗಿಂತ ಮುಂದಿರುತ್ತಾರೆ. ಹಾಗಾದ್ರೆ ಆ ನಾಲ್ಕು ವಿಚಾರಗಳು ಯಾವುದು ಅನ್ನೋದನ್ನ ನೋಡೋಣ.

1. ಬುದ್ಧಿವಂತಿಕೆ
ಚಾಣಕ್ಯನ ಪ್ರಕಾರ ಪುರುಷರಿಗಿಂತ ಮಹಿಳೆಯರು ತುಂಬಾನೇ ಬುದ್ಧಿವಂತರಾಗಿರುತ್ತಾರಂತೆ. ಮಹಿಳೆಯರ ಈ ಬುದ್ಧಿವಂತಿಕೆಯೇ ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರೋದು. ಉದಾಹರಣೆಗೆ ಮನೆಯಲ್ಲೇ ಹಣಕಾಸಿನ ಸಮಸ್ಯೆ ಇರಬಹುದು, ಅಥವಾ ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮಹಿಳೆಯರು ಸುಲಭವಾಗಿ ಬಗೆ ಹರಿಸುತ್ತಾರೆ.
2. ಧೈರ್ಯ
ಚಾಣಕ್ಯನ ಪ್ರಕಾರ ಮಹಿಳೆಯರಿಗಿಂತ ಪುರುಷರು ಹೆಚ್ಚಿನ ದೈರ್ಯ ಹೊಂದಿದ್ದಾರೆ. ಹೌದು, ಪುರುಷರಿಗಿಂತ ಮಹಿಳೆಯರೇ ಆರು ಪಟ್ಟು ದೈರ್ಯವನ್ನು ಹೊಂದಿದ್ದಾರಂತೆ. ಎಂತಹ ಪರಿಸ್ಥಿತಿ ಬಂದರೂ ಕೂಡ ಅದನ್ನು ದೈರ್ಯವಾಗಿ ಎದುರಿಸುವ ಶಕ್ತಿ ಅವರಲ್ಲಿದೆ. ಆದರೆ ಹೆಚ್ಚಿನ ಸಮಯದಲ್ಲಿ ಕೆಲಸದ ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರ ಪರ್ಫಾಮೆನ್ಸ್ ಕಡಿಮೆ ಇರುತ್ತದೆ. ಕಾರಣ ಪುರುಷರಿಗಿಂತ ಮಹಿಳೆಯರಿಗೆ ಒತ್ತಡ ಹೆಚ್ಚು. ಆದರೆ ದೈರ್ಯದ ವಿಚಾರಕ್ಕೆ ಬಂದರೆ ಮಹಿಳೆಯರೇ ಯಾವಾಗಲೂ ಒಂದು ಕೈ ಮೇಲೂ.
3. ಹಸಿವು
ಚಾಣಕ್ಯರ ಪ್ರಕಾರ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರಿಗೆ ಹಸಿವು ಹೆಚ್ಚು. ಮಹಿಳೆಯರೇ ಪುರುಷರಿಗಿಂತ ಮಹಿಳೆಯರು ಹೆಚ್ಚಿಗೆ ತಿನ್ನುತ್ತಾರೆ. ಕಾರಣ ಅವರ ದೇಹ ರಚನೆ. ಪುರುಷರಿಗೆ ಹೋಲಿಸಿದ್ರೆ ಮಹಿಳೆಯರಿಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿರುತ್ತಾರೆ. ಹೀಗಾಗಿ ಅವರಿಗೆ ಹೆಚ್ಚಿನ ಪ್ರಮಾಣದ ಕ್ಯಾಲೋರಿಯ ಅಗತ್ಯವಿರುತ್ತದೆ. ಹೀಗಾಗಿ ಅವರಿಗೆ ಹಸಿವು ಕೂಡ ಹೆಚ್ಚು. ಹಾಗಾಗಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬೇಕು.
4. ಸೂಕ್ಷ್ಮತೆ
ಮಹಿಳೆಯರು ಪುರುಷರಿಗಿಂತ ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ಯಾವುದೇ ವಿಚಾರವನ್ನೇ ಆಗಲಿ ಅವರು ಬೇಗನೆ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಅವರ ನೋವು ಕಣ್ಣೀರಿನ ರೂಪದಲ್ಲಿ ಹೊರ ಬರುತ್ತದೆ. ಇನ್ನೂ ಮಹಿಳೆಯರ ದೇಹವು ಕೂಡ ತುಂಬಾ ಸೂಕ್ಷ್ಮ. ಕೊಂಚ ನೋವಾದರೂ ಅವರಿಗೆ ತಡೆದುಕೊಳ್ಳುವ ಶಕ್ತಿಯಿಲ್ಲ. ಚಾಣಕ್ಯನ ಪ್ರಕಾರ ಪುರುಷರಿಗಿಂತ ಮಹಿಳೆಯರು ಎಂಟು ಪಟ್ಟು ಸೂಕ್ಮ ಅಂತ ಹೇಳಿದ್ದಾರೆ.
ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಈ ವಿಚಾರಗಳಲ್ಲಿ ಯಾವತ್ತಿಗೂ ಮುಂದಿರುತ್ತಾರೆ. ಕೆಲವೊಂದು ವಿಚಾರಗಳಲ್ಲಿ ಮಹಿಳೆಯರು ಪುರುಷರಿಗಿಂತ ಮುಂದಿರೋದು ಖುಷಿಯ ವಿಚಾರವೇ. ಆದರೆ ಇನ್ನೂ ಕೆಲವು ವಿಚಾರಗಳಲ್ಲಿ ಮಹಿಳೆಯರು ಸದೃಢರಾಗಬೇಕಿರೋದು ತುಂಬಾನೇ ಮುಖ್ಯ.



Click it and Unblock the Notifications



