Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಾಣಕ್ಯನ ಪ್ರಕಾರ ಈ ಸೂತ್ರಗಳನ್ನು ಪಾಲಿಸಿದ್ರೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ!
ಮದುವೆ ಅನ್ನೋದು ಒಂದು ಪವಿತ್ರವಾದ ಬಂಧ. ಇದನ್ನು ಪ್ರೀತಿ ಹಾಗೂ ನಂಬಿಕೆಯ ಮೇಲೆ ಕಟ್ಟಲಾಗಿದೆ. ಕೆಲವೊಂದು ಸಲ ಈ ಗಟ್ಟಿಯಾದ ಬಂಧವು ಕೂಡ ಕೆಲವೊಂದು ಸಲ ಸಡಿಲವಾಗಿ ಬಿಡುತ್ತೆ. ಸಂಬಂಧದಲ್ಲಿ ಒಂದು ಸಲ ನಂಬಿಕೆಯನ್ನು ಕಳೆದುಕೊಂಡರೆ ಅದನ್ನು ಮತ್ತೆ ಮರಳಿ ಪಡೆಯೋದು ತುಂಬಾನೇ ಕಷ್ಟ. ಹೀಗಾಗಿ ಮದುವೆ ಎಂಬ ಮೂರು ಗಂಟಿನ ನಂಟನ್ನು ಕಡೆವರೆಗೂ ಉಳಿಸಿಕೊಳ್ಳಬೇಕಾದರೆ ಚಾಣಕ್ಯನ ಈ ತತ್ವಗಳನ್ನು ಪಾಲನೆ ಮಾಡಲೇಬೇಕು.
ಚಾಣಕ್ಯ ಒಬ್ಬ ಪ್ರಮುಖ ತತ್ವಜ್ಞಾನಿ, ವಿದ್ವಾಂಸ ಹಾಗೂ ರಾಜಕೀಯ ಶಾಸ್ತ್ರಜ್ಞ ಅನ್ನೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇವರು ಹಾಕಿ ಕೊಟ್ಟ ಹಾದಿಯಲ್ಲಿ ನಡೆದವರೂ ಎಂದಿಗೂ ಸೋಲನ್ನ ಕಂಡೇ ಇಲ್ಲ. ಅದೇ ರೀತಿ ದಾಂಪತ್ಯ ಜೀವನ ಯಾವುದೇ ಅಡೆತಡೆಗಳಿಲ್ಲದೇ ಚೆನ್ನಾಗಿ ಸಾಗಬೇಕೆಂದರೆ ಚಾಣಕ್ಯನ ಈ ಸೂತ್ರಗಳನ್ನು ಪಾಲನೆ ಮಾಡೋದನ್ನು ಮರೀಬೇಡಿ. ಹಾಗಾದ್ರೆ ದಾಂಪತ್ಯ ಜೀವನಕ್ಕಾಗಿ ಚಾಣಕ್ಯ ಹೇಳಿಕೊಟ್ಟಿರುವ ಆ ತತ್ವಗಳ ಬಗ್ಗೆ ತಿಳಿಯೋಣ.

1. ಪ್ರೀತಿ ಎಂದಿಗೂ ಸೋಲೋದಿಲ್ಲ
ಪ್ರೀತಿಯು ಸಂಬಂಧದ ಅಡಿಪಾಯ ಇದ್ದ ಹಾಗೆ. ಚಾಣಕ್ಯನ ಪ್ರಕಾರ ಗಂಡ-ಹೆಂಡತಿ ಈ ಅಡಿಪಾಯವನ್ನು ಕೆಡವಲು ಬಿಡಬಾರದು. ಅವರಿಬ್ಬರು ಒಬ್ಬರನ್ನೊಬ್ಬರು ತುಂಬಾನೇ ಪ್ರೀತಿ ಮಾಡಬೇಕು ಹಾಗೂ ಆ ಪ್ರೀತಿಯನ್ನು ಎಂದಿಗೂ ಸಾಯೋದಕ್ಕೆ ಬಿಡಬಾರದು. ಯಾವುದೇ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಬಿಟ್ಟು ಕೊಡಬಾರದು. ಸಂಕಷ್ಟದ ಸಮಯದಲ್ಲಿ ಒಬ್ಬರಿಗೆ ಮತ್ತೊಬ್ಬರು ಹೆಗಲಾಗಿ ನಿಲ್ಲಬೇಕು. ಖುಷಿಯಾಗಿ ಇರೋದು ಮಾತ್ರ ಪ್ರೀತಿಯಲ್ಲ. ಸಂಗಾತಿಯ ಸಂಕಷ್ಟಕ್ಕೆ ಸ್ಪಂದಿಸೋದೇ ನಿಜವಾದ ಪ್ರೀತಿ. ಹೀಗಿದ್ದಾಗ ಮಾತ್ರ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಸಾಧ್ಯ.
2. ಒಬ್ಬರಿಗೊಬ್ಬರು ಗೌರವ ಕೊಡಬೇಕು
ದಂಪತಿಗಳ ಮಧ್ಯೆ ಗೌರವ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಚಾಣಕ್ಯನ ಪ್ರಕಾರ ಗಂಡನಷ್ಟೇ ಹೆಂಡತಿಯು ಕೂಡ ಗೌರವ ಪಡೆದುಕೊಳ್ಳೋದಿಕ್ಕೆ ಅರ್ಹಳು. ಕೆಲವೊಂದು ಮನೆಗಳಲ್ಲಿ ಹೇಗಾಗುತ್ತೆ ಎಂದರೆ ಪತ್ನಿಯು ಪತಿಗೆ ಗೌರವ ನೀಡುತ್ತಾಳೆ. ಆದರೆ ಪತಿಯಾದವನು ಹೆಂಡತಿಯನ್ನು ಕೀಳಾಗಿ ನಡೆಸಿಕೊಳ್ಳುತ್ತಾನೆ. ಇದು ಸರಿಯಾದ ಪದ್ಧತಿಯಲ್ಲ. ಹೆಂಡತಿಯ ಗೌರವಕ್ಕೆ ಧಕ್ಕೆ ಬಾರದ ಹಾಗೇ ನೋಡಿಕೊಳ್ಳೋದು ಪತಿಯಾದವನ ಕರ್ತವ್ಯ.
ಗೌರವ ಎಂದರೆ ಒಬ್ಬರನ್ನೊಬ್ಬರು ಪೂಜ್ಯ ಭಾವದಲ್ಲಿ ಕಾಣಬೇಕು. ಕೆಟ್ಟ ಮಾತುಗಳಿಂದ ನಿಂದಿಸೋದಾಗಲಿ, ಹೊಡೆಯೋದು, ಬಡಿಯೋದನ್ನು ಮಾಡಲೇಬಾರದು. ಗಂಡ-ಹೆಂಡತಿಯೆಂದ ಮೇಲೆ ಆ ಸಂಬಂಧದಲ್ಲಿ ಜಗಳ, ಮನಸ್ಥಾಪ, ಬಿರುಕು ಉಂಟಾಗೋದು ಸಾಮಾನ್ಯ. ಹಾಗಂತ ಅದನ್ನೇ ದೊಡ್ಡದು ಮಾಡುತ್ತಾ, ಒಬ್ಬರಿಗೊಬ್ಬರು ಅಗೌರವ ತೋರಲೇಬಾರದು. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎನ್ನುವ ಹಾಗೆ ಅದನ್ನು ಸರಿಪಡಿಸಿಕೊಂಡು ಜೀವನ ಸಾಗಿಸಬೇಕು.
3. ದಾಂಪತ್ಯದಲ್ಲಿ ಸಂವಹನ ನಿರಂತರವಾಗಿರಬೇಕು
ಉತ್ತಮವಾದ ಸಂವಹನವು ದಾಂಪತ್ಯದಲ್ಲಿ ಸಂತೋಷಕ್ಕೆ ಕಾರಣವಾಗುತ್ತದೆ. ಆದರೆ ದಂಪತಿಗಳ ಮಧ್ಯೆ ಕೊಂಚ ಜಗಳ ಉಂಟಾದಾಗ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡೋದಕ್ಕೆ ಇಷ್ಟ ಪಡೋದಿಲ್ಲ. ದಾಂಪತ್ಯದಲ್ಲಿ ಎಂತಹದ್ದೇ ಸಮಸ್ಯೆ ಎದುರಾದರೂ ಕೂಡ ಅದನ್ನು ನಿಭಾಯಿಸಿಕೊಂಡು ಹೋಗಬೇಕೇ ಹೊರತು ಮಾತು ಬಿಡುವುದು ಅದಕ್ಕೆ ಪರಿಹಾರವಲ್ಲ.
ಮಾತು ಮನೆಕೆಡಿಸಿತು ಅಂತಾರಲ್ಲ, ಅದೇ ರೀತಿ ಮಾತನಾಡದೇ ಇದ್ದರೂ ಕೂಡ ಮನೆ ಕೆಡುತ್ತದೆ. ಸಣ್ಣ ಜಗಳಕ್ಕೆ ಮಾತು ಬಿಟ್ಟರೆ ಏನು ಪ್ರಯೋಜನ? ಇದರಿಂದ ನಿಮ್ಮ ಇಬ್ಬರ ನಡುವಿನ ಅಂತರ ಹೆಚ್ಚಾಗುತ್ತೆ, ಸಂಬಂಧ ಹಾಳಾಗುತ್ತೆ. ದಾಂಪತ್ಯದಲ್ಲಿ ಒಂದು ಸಾರಿ ಬಿರುಕು ಕಂಡು ಬಂದರೆ ಆ ಬಿರುಕನ್ನು ಸರಿ ಪಡಿಸೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಗಂಡನಾಗಲಿ/ಹೆಂಡತಿಯಾಗಲಿ ಬಿರುಕಿಗೆ ಅವಕಾಶ ಕೊಡಲೇಬಾರದು.
ಚಾಣಕ್ಯನ ಪ್ರಕಾರ ಪ್ರೀತಿ, ಗೌರವ ಮತ್ತುಸಂವಹನ ದಾಂಪತ್ಯವನ್ನು ಮತ್ತಷ್ಟು ಗಟ್ಟಿ ಮಾಡುತ್ತೆ ಎಂದು ನಂಬಿದ್ದರು. ಸುಂದರವಾದ ದಾಂಪತ್ಯಕ್ಕೆ ಚಾಣಕ್ಯನ ಸೂತ್ರಗಳನ್ನು ಪಾಲಿಸೋದು ತುಂಬಾನೇ ಮುಖ್ಯ.



Click it and Unblock the Notifications

