Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಚಾಣಕ್ಯ ನೀತಿ: ಈ ರೀತಿ ಮಾಡುವುದರಿಂದ ದರಿದ್ರತನ ಬರಲಿದೆಯಂತೆ..!
ಪ್ರಾಚೀನ ಭಾರತದ ಮಹಾನ್ ವಿದ್ವಾಂಸ ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ಹಲವು ವಿಚಾರಧಾರೆಗಳ ಹೇಳಿದ್ದಾರೆ. ಅವರು ಜೀವನ ಮತ್ತು ಅದನ್ನು ಪಾಲಿಸುವ ವಿಧಾನವನ್ನು ತಿಳಿಸಿದ್ದಾರೆ. ಯಾವೆಲ್ಲಾ ಮಾರ್ಗವನ್ನು ನೀವು ಅನುಸರಿಸಿದರೆ ಉತ್ತಮ ಜೀವನ ನಿಮ್ಮದಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಜೀವನದ ಪ್ರತಿಯೊಂದು ವಿಚಾರಗಳಿಗೂ, ನಮ್ಮ ನಡುವೆ ಸಂಭವಿಸುವ ಘಟನಾವಳಿಗಳಿಗೂ ನಾವೇ ಕಾರಣ ಎಂದಿದ್ದಾರೆ. ನಮ್ಮ ಹಿಂದೆ ನಡೆದಿರುವುದಕ್ಕೂ ಮತ್ತು ಭವಿಷ್ಯದಲ್ಲಿ ನಡೆಯುವುದಕ್ಕೂ ನಾವೇ ಕಾರಣಕರ್ತರು ಎಂದಿದ್ದಾರೆ. ಅಲ್ಲದೆ ಜೀವನದಲ್ಲಿ ಯಶಸ್ಸು ಸಾಧಿಸಲು ಯಾವ ರೀತಿಯ ನಿಯಮಗಳ ಪಾಲಿಸಬೇಕು ಎಂಬುದನ್ನು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ.

ಚಾಣಕ್ಯನು ತನ್ನ ಅಧ್ಯಯನ ಮತ್ತು ಅನುಭವದ ಆಧಾರದ ಮೇಲೆ ತಿಳಿದಿರುವ ಅಥವಾ ಅರ್ಥಮಾಡಿಕೊಂಡ ಯಾವುದನ್ನಾದರೂ ಅವನು ತನ್ನ ಚಾಣಕ್ಯ ತತ್ವಗಳಲ್ಲಿ ಸೇರಿಸಿದನು. ನೂರಾರು ವರ್ಷಗಳು ಕಳೆದರೂ ಇಂದಿಗೂ ಚಾಣಕ್ಯನ ನೀತಿಯ ಜನಪ್ರಿಯತೆ ಕಡಿಮೆಯಾಗಿಲ್ಲ.
ಚಾಣಕ್ಯ ತತ್ವಗಳ ಪ್ರಕಾರ, ಕೆಟ್ಟ ಅಭ್ಯಾಸಗಳನ್ನು ಹೊಂದಿರುವ ಜನರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಯಾರ ಬಳಿಯಾದರು ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಅದು ಅವರ ಅಭ್ಯಾಸದ ಕಾರಣದಿಂದಾಗಿ ಎಂಬುದು ಚಾಣಕ್ಯನ ವಾದವಾಗಿದೆ. ಹಾಗಾದರೆ ಚಾಣಕ್ಯನ ಪ್ರಕಾರ ಯಾವ ರೀತಿಯ ಜನರು ಹಣವನ್ನು ಉಳಿಸಬಹುದು, ಯಾವ ರೀತಿಯ ಅಭ್ಯಾಸಗಳು ನಮ್ಮಲ್ಲಿ ಎಂಬುದನ್ನು ಇಲ್ಲಿ ತಿಳಿಯಿರಿ.
ತಡವಾಗಿ ಏಳುವುದು
ಚಾಣಕ್ಯನ ಪ್ರಕಾರ ತಡವಾಗಿ ಏಳುವವರ ಬಳಿ ಹಣವು ಶಾಶ್ವತವಾಗಿ ನೆಲೆಸುವುದಿಲ್ಲವಂತೆ. ಏಕೆಂದರೆ ಅವರು ದಿನದ ಹೆಚ್ಚಿನ ಸಮಯವನ್ನು ನಿದ್ದೆಯಲ್ಲಿ ಕಳೆಯುತ್ತಾರೆ. ಇದರಿಂದ ಭವಿಷ್ಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಣವು ಸಹ ಚಲನಶೀಲತೆಯಲ್ಲಿರಲು ಬಯಸುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.
ಸೋಮಾರಿತನ
ಕೆಲವರು ತುಂಬಾ ಸೋಮಾರಿಗಳಾಗಿರುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ ಸೋಮಾರಿಗಳು ಎಂದಿಗೂ ಸಂಪತ್ತನ್ನು ಸಂಗ್ರಹಿಸಲಾರರಂತೆ. ಆರ್ಥಿಕ ಲಾಭದ ದಾರಿಯಿದ್ದರೂ ಇವರ ಸೋಮಾರಿತನದಿಂದಾಗಿ ಅವರಲ್ಲಿ ಸಂಪತ್ತನ್ನು ಸಂಗ್ರಹಿಸುವ ಮನಸ್ಸಾಗುವುದಿಲ್ಲವಂತೆ. ಇದರಿಂದ ಕೊನೆಯವರೆಗೂ ಬಡತನದಲ್ಲಿ ಜೀವನ ಮುಗಿಸಬೇಕಾಗುತ್ತದೆ ಎಂದಿದ್ದಾರೆ. ಅಂದರೆ ನಿಮ್ಮ ಬಡತನಕ್ಕೆ ಪ್ರಮುಖ ವೈರಿ ನಿಮ್ಮ ಸೋಮಾರಿತನ ಎಂಬುದು ಚಾಣಕ್ಯನ ವಾದವಾಗಿದೆ.
ಕೆಟ್ಟವರ ಸಹವಾಸ
ಸಮಾಜವು ವ್ಯಕ್ತಿಯ ಜೀವನದ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಕೆಟ್ವವರ ಸಹವಾಸವು ಜನರನ್ನು ದಾರಿ ತಪ್ಪಿಸುತ್ತದೆ. ಚಾಣಕ್ಯನ ಪ್ರಕಾರ, ತಪ್ಪು ಜನರ ಸಹವಾಸವನ್ನು ಹೊಂದಿರುವವರು ಜೀವನದಲ್ಲಿ ತಪ್ಪಾದ ಕೆಲಸಗಳ ಮಾಡುತ್ತಾರೆ. ಇಲ್ಲವೆ ಸಿಲುಕಿಕೊಳ್ಳುತ್ತಾರೆ. ಇದರಿಂದ ಹಣದ ಸಮಸ್ಯೆ ಯಾವಾಗಲು ಅವರ ಜೊತೆಗೆ ಇರುತ್ತದೆ ಎಂಬುದು ಚಾಣಕ್ಯನ ವಾದ.
ಮಹಿಳೆಯರ ಅವಮಾನಿಸುವುದು
ಚಾಣಕ್ಯನ ಪ್ರಕಾರ, ಮಹಿಳೆಯರನ್ನು ಅವಮಾನಿಸುವವರಿಗೆ ಎಂದಿಗೂ ಹಣ ಮತ್ತು ಸಂಪತ್ತಿನ ಪ್ರಾಪ್ತಿಯಾಗುವುದಿಲ್ಲವಂತೆ. ಏಕೆಂದರೆ ಸ್ತ್ರೀಯರನ್ನು ಅವಮಾನಿಸುವವನ ಮೇಲೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಪರಿಣಾಮವಾಗಿ ಜೀವನದಲ್ಲಿ ಹಣದ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗಿದೆ.
ಮಲಗಿದ ಹಾಸಿಗೆ ಹಾಗೆಯೇ ಇಡುವುದು
ರಾತ್ರಿ ಮಲಗಿದ್ದ ಹಾಸಿಗೆಯನ್ನು ಬೆಳಗ್ಗೆ ಎದ್ದ ಮೇಲೆಯೂ ಅಲ್ಲಿಯೇ ಇಟ್ಟರೆ ದರಿದ್ರವಂತೆ, ಇದರಿಂದ ಆತನ ಬಳಿ ಹಣದ ಸಮಸ್ಯೆ ಎದುರಾಗುತ್ತದೆ ಎಂಬುದು ಚಾಣಕ್ಯನ ನೀತಿಯಲ್ಲಿ ಹೇಳಲಾಗಿದೆ. ಹೀಗಾಗಿ ಎದ್ದ ಕೂಡಲೇ ಹಾಸಿಗೆ ಅಥವಾ ಚಾಪೆಯನ್ನು ಮಡಚಿಡಬೇಕು ಎಂದು ಹಿರಿಯರು ಸಹ ಹೇಳುತ್ತಾರೆ. ಅಲ್ಲದೆ ಮಲಗುವ ಕೋಣೆಯು ಸ್ವಚ್ಛವಾಗಿಡಬೇಕು ಎಂದು ಹೇಳಲಾಗಿದೆ.



Click it and Unblock the Notifications