Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಗುಡ್ಡ ಕುಸಿತದಲ್ಲಿ ಬದುಕುಳಿದ ಕರುನಾಡ ಕುಟುಂಬ! ಕ್ಷಣದಲ್ಲಿ ಕಾಪಾಡಿದ ಜಾನುವಾರುಗಳು.!!
ಕೇರಳದಲ್ಲಿ ಹಿಂದೆಂದು ಕಂಡು ಕೇಳಿರದ ದುರಂತವೇ ನಡೆದಿದೆ. ಭಾರೀ ಮಳೆಗೆ ಗುಡ್ಡ ಕುಸಿದು 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೂರು ಗ್ರಾಮಗಳು ಸಂಪೂರ್ಣ ಕೊಚ್ಚಿ ಹೋಗಿದ್ದು, ಊರಿಗೆ ಊರೇ ಸ್ಮಶಾನವಾಗಿ ಮಾರ್ಪಟ್ಟಿದೆ. ಗುಡ್ಡದ ಮೇಲಿನಿಂದ ಹರಿಯುತ್ತಿದ್ದ ಚಿಕ್ಕ ನದಿಯೊಂದು ಉಗ್ರ ಸ್ವರೂಪ ತಳೆದು ನರಕವನ್ನೇ ಸೃಷ್ಟಿಸಿದೆ.
ಟೀ ಎಸ್ಟೇಟ್‌ನಲ್ಲಿ ಕೆಲಸಕ್ಕೆಂದು ಬಂದವರು ನಾಪತ್ತೆಯಾಗಿದ್ದಾರೆ. ಅದೆಷ್ಟು ಮಂದಿ ಕೆಸರಿನ ಅಡಿ ಸಿಲುಕಿ ಮೃತಪಟ್ಟಿದ್ದಾರೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ ಈಗ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಅಲ್ಲದೆ ಸೇನೆ ತಾತ್ಕಾಲಿಕ ಸೇತುವೆಯನ್ನೂ ನಿರ್ಮಿಸಿದ್ದು ರಕ್ಷಣಾ ಕಾರ್ಯಕ್ಕೆ ವೇಗ ಸಿಕ್ಕಿದೆ.

ಆದ್ರೆ ರಾಜ್ಯದಿಂದ ತೆರಳಿ ಅಲ್ಲಿಯೇ ಮನೆ ಮಾಡಿ ವಾಸವಿದ್ದ ಕುಟುಂಬವೊಂದು ಈ ದುರಂತದಲ್ಲಿ ಸಾವು ಗೆದ್ದು ಬಂದಿದೆ. ಅಚ್ಚರಿ ಏನೆಂದರೆ ವಿನೋದ್ ಎಂಬುವರ ಕುಟುಂಬ ಈ ಗುಡ್ಡ ಕುಸಿತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಚಾಲಿಯಾರ್ ನದಿ ಉಕ್ಕಿ ಹರಿಯುವ ಮುನ್ನ ಅವರು ಎಚ್ಚರಗೊಂಡು ಮನೆಯಿಂದ ಹೊರಬಂದಿದ್ದರಿಂದ 5 ಜನರ ಕುಟುಂಬ ಬದುಕುಳಿದಿದೆ. ಜೊತೆಗೆ ಒಟ್ಟು 10 ಜನರನ್ನು ಅವರು ಎಚ್ಚರಿಸಿದ್ದಾರೆ.
ಜಲ ಪ್ರಳಯದಿಂದ ಬದುಕುಳಿದಿದ್ದು ಹೇಗೆ?
ಗುಡ್ಡ ಕುಸಿಯಲು ಆರಂಭವಾಗಿದ್ದು ರಾತ್ರಿ 1 ಗಂಟೆಯ ನಂತರವಂತೆ. ಆದರೆ ಗುಡ್ಡ ಕುಸಿಯುತ್ತಿದ್ದಂತೆ ವಿನೋದ್ ಎಂಬುವರ ಮನೆಯ ಜಾನುವಾರುಗಳು ಕೂಗಲು ಆರಂಭಿಸಿವೆ. ಇದರಿಂದ ಎಚ್ಚರಗೊಂಡ ವಿನೋದ್ ಹೊರಬಂದು ನೋಡಿದಾಗ ಗುಡ್ಡದಿಂದ ಕಲ್ಲುಗಳು ಉರುಳಿ ಬರುತ್ತಿರುವುದು ಕಂಡುಬಂದಿದೆ. ತಕ್ಷಣ ಅವರು ಜಾನುವಾರುಗಳ ಹಗ್ಗ ಬಿಚ್ಚಿ ಹೊರಗೆ ಓಡಿಸಿದ್ದಾರೆ. ನಂತರ ಮನೆಯೊಳಗಿದ್ದ ಎಲ್ಲರನ್ನು ಎಬ್ಬಿಸಿ ಹೊರಗೆ ಬಂದಾಗ ಗುಡ್ಡ ಕುಸಿಯಲು ಆರಂಭಿಸಿ ಅಷ್ಟರಾಗಲೆ ಕೆಸರು ಅವರ ಮನೆಗೆ ನುಗ್ಗಿದೆ. ತಕ್ಷಣ ಅವರು ಎತ್ತರದ ಪ್ರದೇಶಕ್ಕೆ ಓಡಿದ್ದಾರೆ. ಇಷ್ಟೊತ್ತಿಗಾಗಲೇ ಇಡೀ ಮನೆ ಕೊಚ್ಚಿ ಹೋಗಿದೆ. ಜೊತೆಗೆ ಒಂದರ ಹಿಂದೆ ಒಂದರಂತೆ ಗುಡ್ಡ ಕುಸಿತ ಉಂಟಾಗುತ್ತಲೇ ಸಾಗಿದೆ.
ನೈಸರ್ಗಿಕ ವಿಕೋಪಗಳನ್ನು ಪ್ರಾಣಿಗಳು ಮೊದಲೇ ಗ್ರಹಿಸುತ್ತವೆ ಎಂಬುದನ್ನು ನಾವು ಕೇಳಿದ್ದೇವೆ, ಇದು ಸತ್ಯವೂ ಹೌದು. ಇಲ್ಲಿಯೂ ಕೂಡ ಹಸುಗಳು ಗುಡ್ಡ ಕುಸಿತಕ್ಕೂ ಮುನ್ನ ಕಿರುಚಾಡಿವೆ. ಈ ಕೂಗಾಟ ಕೇಳಿ ಮನೆಯವರು ಹೊರಬಾರದೆ ಇದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು, ಮನೆಯವರೆಲ್ಲರು ಮಣ್ಣಿನ ಅಡಿ ಸಿಲುಕುತ್ತಿದ್ದರು, ಆದ್ರೆ ಈ ಜಾನುವಾರುಗಳು ಸರಿಯಾದ ಸಮಯದಲ್ಲಿ ಮನೆಯವರ ಜೀವ ಉಳಿಸಿವೆ. ಆದ್ರೆ ಗುಡ್ಡ ಕುಸಿತದಿಂದಾಗಿ ಈ ಜಾನುವಾರಗಳು ಕೊಚ್ಚಿ ಹೋಗಿವೆ ಎಂದು ತಿಳಿದುಬಂದಿದೆ. ಮೂಕ ಪ್ರಾಣಿಗಳು ಮನೆಯವರ ಜೀವ ಉಳಿಸಿ ಅವು ಪ್ರಾಣತ್ಯಾಗ ಮಾಡಿವೆ.
ಈಗ ಹೇಗಿದೆ ವಯನಾಡಿನ ಪರಿಸ್ಥಿತಿ
ಸದ್ಯ ಈಗ ವಯನಾಡಿನಲ್ಲಿ ಶವಗಳು ಪತ್ತೆಯಾಗುತ್ತಲೇ ಇವೆ. ಇನ್ನೂ 15ರಿಂದ 20 ದಿನಗಳ ಕಾಲ ಕಾರ್ಯಚರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಸುಮಾರು 300 ಶವಗಳನ್ನ ಹೊರತೆಗೆಯಲಾಗಿದ್ದು, ಜಿಲ್ಲಾಡಳಿತದ ವತಿಯಿಂದ ಅಂತಿಮ ಸಂಸ್ಕಾರ ನಡೆಯುತ್ತಿದೆ. ಎಲ್ಲಾ ಮೃತದೇಹಗಳಿಗೂ ಅಲ್ಲಿಯೇ ಅಂತಿಮ ಸಂಸ್ಕಾರ ನೆರವೇರಿಸಿ ಬಳಿಕ ಚಿತಾ ಭಸ್ಮವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಇಡೀ ಕುಟುಂಬವೇ ನಾಶವಾಗಿರೋದ್ರಿಂದ ಅಂತವರ ಶವವನ್ನು ಸಾಮೂಹಿಕವಾಗಿ ಅಂತಿಮ ಸಂಸ್ಕಾರ ಮಾಡಲಾಗುತ್ತಿದೆ.
ರಕ್ಷಣಾ ಕಾರ್ಯಚರಣೆಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಭೂಸೇನೆ, ವಾಯುಸೇನೆ ಸೇರಿ ಸ್ವಯಂ ಸೇವಕರು ಸಹ ಸ್ಥಳದಲ್ಲಿ ನಿರಂತರ ಕಾರ್ಯಚರಣೆಯಲ್ಲಿದ್ದಾರೆ. ಈಗಲೂ ಘಟನಾ ಸ್ಥಳದಲ್ಲಿ ಭಾರೀ ಮಳೆಯಾಗುತ್ತಿರುವುದು ರಕ್ಷಣಾ ಕಾರ್ಯಕ್ಕೆ ಸ್ವಲ್ಪ ಅಡಚಣೆಯಾಗಿದೆ. ಮೆಪ್ಪಾಡಿಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಯಾಚರಣೆ ವಿಳಂಬವಾಗುತ್ತಿದೆ.



Click it and Unblock the Notifications
