Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನೀಲಿ ಶಂಖ ಪುಷ್ಪದಲ್ಲಿ ವಿಶೇಷ 'ನೀಲಿ ಬಿರಿಯಾನಿ'..! ನೋಡಿದ್ರೆ ದಂಗಾಗ್ತಿರ.!
ಇತ್ತೀಚಿನ ದಿನಗಳಲ್ಲಿ ನಾವು ಚಿತ್ರ ವಿಚಿತ್ರ ರೀತಿಯ ಫುಡ್‌ಗಳನ್ನು ನೋಡಿದ್ದೇವೆ. ಅದ್ರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವ ಭರದಲ್ಲಿ ಜನ ಯಾವ ರೀತಿಯ ಫುಡ್ ಬೇಕಾದರು ತಿನ್ನುವ ಒಂದಿಷ್ಟು ಅಸಹ್ಯಕರ ವಿಡಿಯೋಗಳು ಸಹ ಹರಿದಾಡುತ್ತವೆ. ಅವು ಎಷ್ಟು ವಿಚಿತ್ರವಾಗಿರುತ್ತೆ ಅಂದ್ರೆ ನೀವು ಊಹಿಸಲು ಸಹ ಸಾಧ್ಯವಿಲ್ಲ.
ಈ ರೀತಿ ವಿಚಿತ್ರ ಆಹಾರದಲ್ಲಿ ಈಗ ಅವತಾರ್ ಬಿರಿಯಾನಿಯೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಹೌದು ಅವತಾರ್ ಎಂದರೆ ಇಂಗ್ಲಿಷ್‌ನ ಅವತಾರ್ ಸಿನಿಮಾದ ರೀತಿ ನೀಲಿ ಬಣ್ಣದ ಬಿರಿಯಾನಿ ಇದಾಗಿದೆ. ಬಿರಿಯಾನಿ ಅಂದರೆ ಅದು ಕೇಸರಿ ಬಣ್ಣದಲ್ಲಿರುವುದೇ ಹಚ್ಚು ಆದರೆ ಇಲ್ಲಿ ಕಡು ನೀಲಿ ಬಣ್ಣದಲ್ಲಿ ಕಂಡುಬಂದಿರುವುದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.

ವೈರಲ್ ವೀಡಿಯೊದಲ್ಲಿ ಪ್ರದರ್ಶಿಸಲಾದ ಬಿರಿಯಾನಿ ನೀಲಿ ಬಣ್ಣದ ಹೂವು ತುಪ್ಪ-ಇನ್ಫ್ಯೂಸ್ಡ್ ರೈಸ್ ಕಾಣಬಹುದು. ಆದರೆ ಈ ರೀತಿಯ ಖಾದ್ಯ ಇದೇ ಮೊದಲು ನೋಡುತ್ತಿರುವ ಮಂದಿ ಶಾಕ್ ಆಗಿದ್ದಾರೆ, ಅಲ್ಲದೆ ಇದನ್ನು ಸೇವಿಸುವ ಧೈರ್ಯ ಯಾರಿಗೆ ಇದೆ ಎಂದು ಪ್ರಶ್ನಿಸುತ್ತಿದ್ದಾರೆ.
ಏನಿದು ಈ ಅವತಾರ್ ಬಿರಿಯಾನಿ?
ನೀಲಿ ಬಣ್ಣದ ಆಹಾರ ಪದಾರ್ಥಗಳು ತಮ್ಮ ವಿಶಿಷ್ಟವಾದ ವರ್ಣಗಳಿಂದ ಗಮನ ಸೆಳೆಯುತ್ತವೆ, ಅವುಗಳ ವಿಶಿಷ್ಟ ನೋಟದಿಂದ ನಮ್ಮನ್ನು ಆಕರ್ಷಿಸುತ್ತವೆ. ಇತ್ತೀಚೆಗೆ, ನೀಲಿ ಬಣ್ಣದ ತುಪ್ಪದ ರೈಸ್ ಪಾಕವಿಧಾನ ಸಿಕ್ಕಾಪಟ್ಟೆ ವೈರಲ್ ಆಗಿದೆ. @thecookingamma ಅವರು Instagram ಹಂಚಿಕೊಂಡಿರುವ ವಿಡಿಯೋದಲ್ಲಿ ನೀಲಿ ಬಣ್ಣದ ಹೂವು ಬಳಸಿ ಮಾಡಲಾಗಿದೆ.
ಇದನ್ನು ನೀಲಿ ಶಂಖ ಎನ್ನಲಾಗುತ್ತದೆ. ಎಲ್ಲರ ಮನೆಯಲ್ಲೂ ಈ ಪುಷ್ಪ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಹೂವು ಶಿವನಿಗೆ ಅತ್ಯಂತ ಇಷ್ಟದ ಹೂವು ಎನ್ನಲಾಗುತ್ತದೆ. ಈ ಹೂವಿನ ಬಣ್ಣದಿಂದ ಈ ವೆಜ್ ಬಿರಿಯಾನಿ ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೆ.?
ಮೊದಲು ಒಂದು ಮಡಕೆಯಲ್ಲಿ ನೀರು ಇಟ್ಟು ಅದು ಕುದಿಯುತ್ತಿರುವಾಗ ಅದಕ್ಕೆ ನೀಲಿ ಶಂಖ ಪುಷ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಲಾಗುತ್ತದೆ. ಈ ಹೂವುಗಳು ನೀರಿನಲ್ಲಿ ಕುದಿಯುವಾಗ ನೀಲಿ ಬಣ್ಣ ಬಿಡುತ್ತವೆ, ಬಳಿಕ ಹೂವುಗಳನ್ನು ಕುದಿಯುವ ನೀರಿನಿಂದ ತೆಗೆದು ಹೊರಗಿಟ್ಟು ಅದೇ ನೀರಿಗೆ ಬಿರಿಯಾನಿ ಅಕ್ಕಿ ಹಾಕಲಾಗುತ್ತದೆ.
ಈ ಅಕ್ಕಿಯಲ್ಲಿ ಅನ್ನ ಮಾಡಿದಾಗ ಅದು ನೀಲಿಯಾಗುತ್ತದೆ. ಈ ಬಣ್ಣದ ಅನ್ನ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋ 13 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಆದರೆ ಕೆಲವರು ಈ ವಿಡಿಯೋ ನೋಡಿ ಎಚ್ಚರಿಕೆಯ ಜೊತೆ ಈ ಖಾದ್ಯ ಮಾಡುವುದು ಉತ್ತಮ ಎಂಬ ಮಾತು ಕೇಳಿಬಂದಿದೆ. ಏಕೆಂದರೆ ಈ ಪುಷ್ಪದಿಂದ ಹೊರಬರುವ ಬಣ್ಣ ಕುದಿಯುವ ನೀರಿನಲ್ಲಿ ಬೆರೆತಾಗ ಅದು ಆರೋಗ್ಯಕ್ಕೆ ಉತ್ತಮವೇ ಅಥವಾ ಅನಾರೋಗ್ಯ ಕಾಡಬಹುದು ಎಂಬ ಕುರಿತು ಯಾವ ಪುರಾವೆಗಳಿಲ್ಲ. ಹೀಗಾಗಿ ಈ ರೀತಿ ಹೊಸ ಹೊಸ ಪ್ರಯೋಗ ಅದರಲ್ಲೂ ಆಹಾರದ ವಿಚಾರಲ್ಲಿ ಮಾಡುವುದು ಸ್ವಲ್ಪ ಅಪಾಯಕಾರಿ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಸುದ್ದಿಯಾಗಿತ್ತು ಇರುವೆಯ ಕಾಕ್‌ಟೈಲ್
ಮುಂಬೈ ಮೂಲದ ಕಂಟೆಂಡ್ ಕ್ರಿಯೇಟರ್ ನಿತಿನ್ ತಿವಾರಿ ಈಗ ಇರುವೆಯ ಕಾಕ್‌ಟೈಲ್ ಸೇವಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಆಕ್ರೋಶವೂ ಕೇಳಿಬಂದಿದೆ. ಮುಂಬೈನ ಬಾಂದ್ರಾದ ಹಿಲ್ ರೋಡ್‌ನಲ್ಲಿರುವ ಸೀಫಾ ರೆಸ್ಟೋರೆಂಟ್‌ನಲ್ಲಿ ಈ ರೀತಿ ಕಪ್ಪು ಇರುವೆಯ ಕಾಕ್‌ಟೈಲ್ ನೀಡುತ್ತಾರೆ ಎಂದು ಹೇಳಲಾಗಿತ್ತು.
ವೀಡಿಯೊದಲ್ಲಿ, ವ್ಲಾಗರ್ ಕಾಕ್‌ಟೈಲ್ ಸೇವಿಸಿ ರುಚಿಕರ ಎಂದು ವಿವರಿಸುವುದಲ್ಲದೆ, ಮೆನು ಕಾರ್ಡ್‌ನಲ್ಲಿ ಸ್ನೀಕ್ ಪೀಕ್ ಅನ್ನು ಒದಗಿಸುತ್ತದೆ, ಪಾನೀಯದ ಹೆಸರು 'ದಿ ಆಂಟ್ಜ್' ಎಂಬುದಾಗಿ ಬರೆಯಲಾಗಿದೆ. ಇದರಲ್ಲಿ ಮೆಜ್ಕಲ್, ಟಕಿಲಾ ಬ್ಲಾಂಕೊ, ದ್ರಾಕ್ಷಿಹಣ್ಣು, ವೆಟಿವರ್, ಸಲೈನ್ ಮತ್ತು, ವಿಶೇಷವಾಗಿ, ಕಪ್ಪು ಇರುವೆಗಳನ್ನು ಹಾಕಲಾಗಿತ್ತು, ಇದೊಂದು ವಿಶೇಷ ಮತ್ತು ವಿಲಕ್ಷಣ ಡ್ರಿಂಕ್ ಎಂದು ನೆಟ್ಟಿಗರು ಕಿಡಿ ಕಾರಿದ್ದರು.



Click it and Unblock the Notifications
