Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಭರತ್ ಜೈನ್: ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ, ಈತ ಮುಂಬಯಿಯ ಕೋಟಿ ಬೆಲೆಯ ಫ್ಲ್ಯಾಟ್‌ನ ಒಡೆಯ ಕೂಡ ಹೌದು!
ಈ ಸ್ಟೋರಿ ಓದಿದ ಮೇಲೆ ಭಿಕ್ಷುಕರಿಗೆ ದುಡ್ಡು ಹಾಕುವಾಗ ಖಂಡಿತ ಒಂದು ಕ್ಷಣ ಯೋಚಿಸುತ್ತೀರಿ, ಯಾರಿಗೆ ಗೊತ್ತು ನಮ್ಮಿಂದ ಭಿಕ್ಷೆ ಬೇಡುತ್ತಿರುವ ಅವನು ನಮಗಿಂತಲೂ ಹತ್ತು ಪಟ್ಟು ಅಲ್ಲಲ್ಲ ನೂರು ಪಟ್ಟು ಶ್ರೀಮಂತನಿರಬಹುದು! ಹೌದು ಈ ಕೋಟ್ಯಾಧಿಪತಿ ಭಿಕ್ಷುಕನ ಬಗ್ಗೆ ತಿಳಿದ ಮೇಲೆ ನಿಮಗೆ ಖಂಡಿತ ಅನಿಸದಿರಲ್ಲ.
ಇದೀಗ ಈ ಭಿಕ್ಷುಕ ಸಕತ್ ಸುದ್ದಿಯಲ್ಲಿದ್ದಾನೆ, ಅವನು ಮಾಡಿರುವ ಆಸ್ತಿ ಕೇಳಿದರೆ ಒಂದು ಕ್ಷಣ ನಮ್ಮ ತಲೆ ಗಿರ್ .. ಅಂತ ಸುತ್ತುವುದು, ಈತ ಅಷ್ಟೊಂದು ಶ್ರೀಮಂತ, ಈತನ ಆದಾಯ ಮೂಲ ಭಿಕ್ಷಾಟನೆ!

ಈ ಭಿಕ್ಷುಕನ ಹೆಸರು ಭರತ್ ಜೈನ್, ವಿಶ್ವದ ಶ್ರೀಮಂತ ಭಿಕ್ಷುಕ ಈತ, ಇತ್ತೀಚೆಗೆ ಎಕಾನಿಮಿಕ್ ಟೈಮ್ಸ್ ಈತ ₹7.5 ಕೋಟಿಯ ಒಡೆಯ ಎಂದು ಹೇಳಿದೆ. ಈತ ಮುಂಬಯಿನಲ್ಲಿ 1.2 ಕೋಟಿ ಬೆಲೆ ಬಾಳುವ 2 BHK ಫ್ಲ್ಯಾಟ್ ಹೊಂದಿದ್ದಾಬೆ, ಅಷ್ಟು ಮಾತ್ರವಲ್ಲ ತಾಣೆಯಲ್ಲಿ ಎರಡು ಶಾಪ್ ಇದ್ದು ಅದರಿಂದ ತಿಂಗಳಿಗೆ ರುಪಾಯಿ 30, 000 ಬಾಡಿಗೆ ಬರುತ್ತದೆ.
ಇಷ್ಟೆಲ್ಲಾ ಆಸ್ತಿ ಹೊಂದಿದ್ದರೂ ಭಿಕ್ಷೆ ಬೇಡಿ ಜೀವನ
ಹೌದು ಈತ ಇಷ್ಟೆಲ್ಲಾ ಆಸ್ತಿ ಹೊಂದಿದ್ದರೂ ದಿನನಿತ್ಯ ಭಿಕ್ಷೆ ಬೇಡಿ ಜೀವನ ನಡೆಸುತ್ತಾನೆ. ಕನ್ನಡದಲ್ಲಿ ಸಾಧುಕೋಕಿಲಾ ಅವರ ಚಿತ್ರ ನೆನೆಪಿಗೆ ಬರಬಹುದು ಅಲ್ವಾ? ಈತನ ಸ್ಟೋರಿ ಥೇಟ್ ಹಾಗೆಯೇ ಇರಲಿದೆ. ಭಿಕ್ಷೆ ಬೇಡಿ ಹೈಫೈ ಲೈಫ್ ನಡೆಸುತ್ತಿದ್ದಾನೆ. ಮುಂಬಯಿನಲ್ಲಿ ಎರಡು ಬೆಡ್‌ರೂಂ ಫ್ಲ್ಯಾಟ್ ಓನರ್ ಎಂದರೆ ಸಾಮಾನ್ಯ ವಿಷಯವೇ?
ದಿನಕ್ಕೆ ರುಪಾಯಿ 2000ದಿಂದ 2500 ಗಳಿಕೆ
ಈತ ದಿನದಲ್ಲಿ 10-12 ಗಂಟೆ ಭಿಕ್ಷೆ ಬೇಡುತ್ತಾನೆ, ಹಾರ್ಡ್ ವರ್ಕರೇ ಬಿಡಿ, ಇದರಿಂದಾಗಿ ದಿನದಲ್ಲಿ ಸುಮಾರು 2000ದಿಮದ 2500 ರುಪಾಯಿ ಗಳಿಸುತ್ತಾನೆ. ಈತನು ಛತ್ರಪತಿ ಶಿವಾತಿ ಮಹಾರಾಜ ಟರ್ಮಿನಸ್ ರೈಲ್ವೆ ನಿಲ್ದಾಣ ಅಥವಾ ಅಜಾದ್ ಮೈದಾನದಲ್ಲಿ ಕಂಡು ಬರುತ್ತಾನೆ. ಕೆಲವರು ದಿನ ಪೂರ್ತಿ ಕಷ್ಟಪಟ್ಟು ದುಡಿದರೂ ರುಪಾಯಿ ಗಳಿಸುವುದು ಕಷ್ಟ, ಅಂಥದ್ದರಲ್ಲಿ ಈತ ಆರಾಮವಾಗಿ ಭಿಕ್ಷೆ ಬೇಡ ಸಾವಿರಾರು ರುಪಾಯಿ ಗಳಿಸುತತ್ತಾನೆ. ಈತನ ತಿಂಗಳ ಆದಾಯ 60 ಸಾವಿರದಿಂದ 65, 000 ರುಪಾಯಿ ಗಳಿಸುತ್ತಿದ್ದಾನೆ.
ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಓದಿಸಿದ್ದಾನೆ
ಈತ ಮದುವೆಯಾಗಿದ್ದಾನೆ, ಈತನಿಗೆ ಎರಡು ಮಕ್ಕಳಿದ್ದಾರೆ, ಅವರೆಲ್ಲಾ ತುಂಬಾ ಲಕ್ಷುರಿಯಾಗಿ ಜೀವನ ಮಾಡುತ್ತಿದ್ದಾರೆ, ಈತನ ಮಕ್ಕಳಿಗೆ ಕಾನ್ವೆಂಟ್‌ನಲ್ಲಿ ಕಳುಹಿಸಿ ಓದಿಸಿದ್ದಾನೆ. ಈತನ ಮನೆಯವರು ಸ್ಟೇಷನರಿ ಅಂಗಡಿ ನಡೆಸುತ್ತಿದ್ದಾರೆ. ಅವರೆಲ್ಲಾ ಈತನ ಬಳಿ ಭಿಕ್ಷಾಟನೆ ಬೇಡ ಎಂದರೂ ಕೇಳುತ್ತಿರಲಿಲ್ಲ, ಇಷ್ಟೆಲ್ಲಾ ಆದಾಯ ಬರುತ್ತಿರುವಾಗ ಹೇಗೆ ತಾನೆ ಬಿಡಲು ಸಾಧ್ಯ ಅಲ್ಲವೇ?
ಬರೀ ಭರತ್ ಜೈನ್ ಅಷ್ಟೇ ಈ ಹಿಂದೆ ಕೂಡ ಭಿಕ್ಷುಕರು ಸತ್ತಾಗ ಅವರ ಬಳಿ ಲಕ್ಷಗಟ್ಟಲೆ ಹಣ ಪತ್ತೆಯಾಗಿದೆ, ಆದ್ದರಿಂದ ಸುಮ್ಮನೆ ಭಿಕ್ಷೆ ಬೇಡುವರಿಗೆ ಹಣ ಹಾಕುವ ಬದಲಿಗೆ ನಿಮಗೆ ಚೆನ್ನಾಗಿ ಗೊತ್ತಿರುವ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ಹೆಚ್ಚಿನ ಪುಣ್ಯ ಪಡೆಯಬಹುದು, ಏನಂತೀರಿ?



Click it and Unblock the Notifications
