Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
10ನೇ ಕ್ಲಾಸ್ ಓದು, ಬರಿಗೈಯಲ್ಲಿ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೇ ಈ ಗೋಲ್ಡ್ ಸುರೇಶ್
ಬಿಗ್‌ಬಾಸ್ ಕನ್ನಡ 11 ಸೀಸನ್ ಗ್ರ್ಯಾಂಡ್ ಆಗಿ ಓಪನ್ ಆಗಿದೆ. ಈ ಬಾರಿ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮದೇ ಕಾರಣಗಳಿಂದ ಗಮನ ಸೆಳೆದಿದ್ದಾರೆ, ಈ ಸ್ಪರ್ಧಿಗಳನ್ನು ನೋಡುವಾಗ ಈ ಬಾರಿಯ ಸ್ಪರ್ಧಾಳುಗಳು ಕಠಿಣ ಪೈಪೋಟಿ ನೀಡಬಹುದು ಎಂದು ಭರವಸೆ ಮೂಡಿಸಿದ್ದಾರೆ.
ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷತೆಗಳಿಂದ ವಿಭಿನ್ನವಾಗಿ ಗಮನವಾಗಿ ಗಮನ ಸೆಳೆದಿದ್ದಾರೆ, ಅವರಲ್ಲಿ ನೆನ್ನೆ ಗೋಲ್ಡ್ ಸುರೇಶ್ ಎಂಬುವವರು ಮೈಮೇಲೆ ರಾಶಿ ಚಿನ್ನ ಹಾಕಿ ಎಂಟ್ರಿ ಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಚಿನ್ನದ ಅಂಗಡಿಯೆ ನಡೆದಾಡುವಂತೆ ಬಂದಿರುವ ಗೋಲ್ಡ್ ಸುರೇಶ್
ನೆನ್ನೆ ಅಷ್ಟೊಂದು ಗೋಲ್ಡ್ ಹಾಕಿ ಬಂದಿರುವ ವ್ಯಕ್ತಿಯನ್ನು ನೋಡಿದವರು ಅಬ್ಬಾ! ಅಂತ ಅಚ್ಚರಿಕೊಂಡಿದ್ದರು, ಗೋಲ್ಡ್ ಸುರೇಶ್ ಎಂಟ್ರಿ ಕೊಡ್ತಾ ಇದ್ದಂತೆ ವರ್ತೂರ್ ಸಂತೋಷ್‌ರಂತೆಯೇ ಅಲ್ಲಲ್ಲ ಅವರಿಗಿಂತ ಹೆಚ್ಚು ಚಿನ್ನವನ್ನು ಹಾಕಿಕೊಂಡ ವ್ಯಕ್ತಿಯನ್ನು ನೋಡಿ ಬೆಂಗಳೂರಿನಲ್ಲಿ ಇಷ್ಟೊಂದು ಚಿನ್ನ ಹಾಕಿ ನಡೆದಾಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು, ಕಿಚ್ಚ ಸುದೀಪ್ ಅವರು ಈ ಬಗ್ಗೆ ಕೇಳಿದಾಗ ನನಗೆ ಬಾಡಿಗಾರ್ಡ್ ಇದ್ದಾರೆ ಎಂದು ಹೇಳಿದ್ದರು.
ಗೋಲ್ಡ್ ಸುರೇಶ್‌ಗೆ ಇರುವ ಬಾಡಿಗಾರ್ಡ್ಸ್ ನೋಡಿ ಅಬ್ಬಾ ಇಷ್ಟೊಂದು ವ್ಯಕ್ತಿಗಳನ್ನು ಬಾಡಿಗಾರ್ಡ್ ಆಗಿ ಇಟ್ಟುಕೊಂಡು ನಡೆಯಬೇಕೆಂದರೆ ಎಷ್ಟು ಶ್ರೀಮಂತನಿರಬಹುದು ಎಂದನಿಸಬಹುದು. ಸುರೇಶ್ ಈಗ ಕೋಟ್ಯಾಧಿಪತಿ ಹೌದು, ಆದರೆ ಒಂದು ಕಾಲದಲ್ಲಿ ಬರಿಗೈಯಲ್ಲಿ ಬಂದಿದ್ದ ವ್ಯಕ್ತಿ ಈಗ ಈ ಮಟ್ಟಕ್ಕೆ ಬೆಳೆದಿದ್ದಾರೆ.
ಒಂದು ಚಿಕ್ಕ ಕೆಲಸ ಸಿಕ್ಕಿದರೆ ಸಾಕೆಂದು ಬೆಂಗಳೂರಿಗೆ ಬಂದ ವ್ಯಕ್ತಿ ಇಂದು ಈ ಮಟ್ಟಿಗೆ ಬೆಳೆದಿದ್ದಾರೆ:
ಸುರೇಶ್ ಅವರು ಬೆಂಗಳೂರಿಗೆ ಬಂದಾಗ ಇತ್ತ ಕೈಯಲ್ಲಿ ದುಡ್ಡಿಲ್ಲ, ಒಂದೊಳ್ಳೆಯ ವಿದ್ಯಾಭ್ಯಾಸವೂ ಇಲ್ಲ, ಬೆಂಗಳೂರಿನಲ್ಲಿ ಏನಾದರೂ ಕೆಲಸ ಸಿಕ್ಕಿದರೆ ಸಾಕೆಂದು ಬೆಂಗಳೂರಿಗೆ ಬಂದಿದ್ದ ವ್ಯಕ್ತಿ. ಈಗ ತನ್ನದೇ ಕಂಪನಿ ಕಟ್ಟಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ.
ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಚಿಕ್ಕ ಕೆಲಸಕ್ಕೆ ಸೇರಿದ್ದರು
ಇವರು ಮೊದಲು ಕನ್ಸ್‌ಟ್ರಕ್ಷನ್ ಸೂಪರ್‌ವೈಸರ್ ಆಗಿ ಬೆಳೆದರು , ನಂತರ ಇಟ್ಟ ಪ್ರತಿ ಹೆಜ್ಜೆಯಲ್ಲಿಯೂ ಲಕ್ಷ್ಮಿ ಅವರಿಗೆ ಒಲಿಯಲಾರಂಭಿಸಿತು. ಈಗ ಇವರು Bharata led ಎಂಬ ಸಂಸ್ಥೆಯನ್ನು ಕಟ್ಟಿ ಅದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ತನ್ನ ಸಂಪತ್ತು ಬಂಗಾರದ ಮೂಲಕ ಪ್ರದರ್ಶನ ಮಾಡುವ ಕ್ರೇಝಿ ಇದೆ
ಎಷ್ಟೋ ಉದ್ಯಮಿಗಳು, ಶ್ರೀಮಂತರು ಇದ್ದಾರೆ, ಅದರೆ ಇವರು ಮಾತ್ರ ತಮ್ಮ ಸಂಪತ್ತನ್ನು ಚಿನ್ನದ ಶೋಕಿ ಮೂಲಕ ಪ್ರದರ್ಶನ ಮಾಡಿ ಗಮನ ಸೆಳೆಯುತ್ತಿರುವ ವ್ಯಕ್ತಿ.
ಇನ್‌ಸ್ಟಾದಲ್ಲಿ 19 ಸಾವಿರ ಫಾಲೋವರ್ಸ್ ಹೊಂದಿದ್ದಾರೆ
ಗೋಲ್ಡ್ ಸುರೇಶ್ ಎಂಬ ವ್ಯಕ್ತಿ ಇನ್‌ಸ್ಟಾದಲ್ಲಿ ಸಕ್ರೀಯರಾಗಿದ್ದಾರೆ, ಆದರೆ ಚಿನ್ನದ ರಾಶಿ ಹೇರಿಕೊಂಡು ಗಮನ ಸೆಳೆಯುತ್ತಿದ್ದಾರೆ, ಇವರ ಬಗ್ಗೆ ಸ್ಪೂರ್ತಿದಾಯಕ ವಿಷಯಗಳೇನು ಎಂಬುವುದು ಅಷ್ಟಾಗಿ ಜನರಿಗೆ ಪರಿಚಯವಿಲ್ಲ. ಈಗ ಬಿಗ್‌ಬಾಸ್ ಎಂಬ ವೇದಿಕೆ ಸಿಕ್ಕಿದೆ, ಖಂಡಿತ ಇವರ ಫಾಲೋವರ್ಸ್ ಹೆಚ್ಚಾಗಬಹುದು, ಚಿನ್ನದ ಸ್ಟೈಲ್ ಹೊರತು ಪಡಿಸಿ ಯಾವುದೇ ಕಾಂಟ್ರವರ್ಸಿ ಕೇಳಿ ಬಂದಿಲ್ಲ.
ಅಷ್ಟೊಂದು ಚಿನ್ನ ಹಾಕಿ ಮನೆಯೊಳಗೆ ಬಂದಿದ್ದಾರೆ
ಬಿಗ್‌ಬಾಸ್ ಮನೆಯೊಳಗೆ ಬೆಲೆ ಬಾಳುವ ಆಭರಣಗಳನ್ನು ತಗೊಂಡು ಬರಲು ಅವಕಾಶವಿಲ್ಲ, ಕಳೆದ ಬಾರಿ ವರ್ತೂರ್ ಸಂತೋಷ್ ಪ್ರಕರಣ ಬಳಿಕ ಬಿಗ್‌ಬಾಸ್ ಟೀಂ ಮತ್ತಷ್ಟು ಎಚ್ಚೆತ್ತುಕೊಂಡಿದೆ. ಬಹುಶಃ ಇಂದಿನಿಂದ ಸುರೇಶ್ ಗೋಲ್ಡ್ ಎಲ್ಲಾ ಬಿಚ್ಚಿಟ್ಟು ಬರಿ ಸುರೇಶ್ ಆಗಿ ಸ್ಪರ್ಧಾ ಕಣಕ್ಕೆ ಇಳಿಯಬೇಕಾಗಿದೆ.
ತನ್ನದೇ ಶ್ರಮದಿಂದ ಸೆಲೆಬ್ರಿಟಿಯಾಗಿ ಬದಲಾಗಿರುವ ಗೋಲ



Click it and Unblock the Notifications
