Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
Bank Janardhan: ಸಾವು ಗೆದ್ದು ಬಂದಿದ್ದ ಬ್ಯಾಂಕ್ ಜನಾರ್ಧನ್ ಕೊನೆಯುಸಿರು..! ಅವರಿಗಿದ್ದ ಸಮಸ್ಯೆ ಏನು?
ಹಿರಿಯ ನಟ ಬ್ಯಾಂಕ್ ಜನಾರ್ಧನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಕುಟುಂಬಸ್ಥರ ಮಾಹಿತಿಯ ಪ್ರಕಾರ ವಯೋಸಹಜ ಕಾಯಿಲೆಗೆ ಒಳಗಾಗಿದ್ದ ಅವರು ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಅವರು ನಿಧರಾಗಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್ ಅವರು ಕೊನೆಯುಸಿರೆಳೆದಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ನಟ ಬ್ಯಾಂಕ್ ಜನಾರ್ಧನ್ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 1949ರಲ್ಲಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಅವರು ಜನಿಸಿದರು. 1985ರಲ್ಲಿ ಪಿತಾಮಹ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಹಾಗೆ ಹತ್ತಾರು ಧಾರವಾಹಿಗಳಲ್ಲಿಯೂ ಸೇರಿ ಒಟ್ಟು 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅವರಿಗೆ ಈಗ ಸುಮಾರು 76 ವರ್ಷ ವಯಸ್ಸಾಗಿತ್ತು.

ಬ್ಯಾಂಕ್ ಜನಾರ್ಧನ್‌ಗೆ ಕಾಡಿದ್ದ ಅನಾರೋಗ್ಯವೇನು?
ಬ್ಯಾಂಕ್ ಜನಾರ್ಧನ್ ಅವರು 2023ರಿಂದ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದರು. 2023ರ ಸೆಪ್ಟೆಂಬರ್ ನಲ್ಲಿ ಅವರು ಸಾವು ಗೆದ್ದು ಬಂದಿದ್ದರು. ಅಂದು ತೀವ್ರ ಹೃದಯಾಘಾತಕ್ಕೆ ಒಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಅವರು ಗುಣಮುಖರಾಗಿ ಬಂದಿದ್ದರು. ಆಗಲು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಹಾಗೆ ಹೃದಯ ಸಂಬಂಧಿ ಚಿಕಿತ್ಸೆ ಆಂಜಿಯೋಗ್ರಾಮ್‌ಗೆ ಒಳಗಾಗಿದ್ದರು.
ಇದಾದ ಬಳಿಕ ಅವರು ಗುಣಮುಖರಾಗಿ ಡಿಶ್ಚಾರ್ಚ್ ಆಗಿದ್ದರು, ಆದ್ರೆ ಅಲ್ಲಿಂದ ಅವರ ಆರೋಗ್ಯದಲ್ಲಿ ಏರುಪೇರು ಸಂಭವಿಸುತ್ತಿತ್ತು, ಹೀಗಾಗಿ ಸಿನಿಮಾ ರಂಗದಿಂದ ದೂರವೇ ಉಳಿದಿದ್ದ ಅವರು ಸಣ್ಣ ಪುಟ್ಟ ಪಾತ್ರಗಳನ್ನೂ ಸಹ ಮಾಡಿರಲಿಲ್ಲ. ಕೆಲವು ಮಾಧ್ಯಮಗಳಲ್ಲಿ ಸಂದರ್ಶನ ಮೂಲಕ ಕಾಣಿಸಿಕೊಂಡಿದ್ದರು. ಈ ವೇಳೆ ಕೂಡ ಅನಾರೋಗ್ಯ ಕುರಿತಾಗಿ ಹೇಳಿಕೊಂಡಿರಲಿಲ್ಲ.
ಆಂಜಿಯೋಗ್ರಾಮ್ ಮಾಡೋದು ಏಕೆ?
ಆಂಜಿಯೋಗ್ರಾಮ್ ರಕ್ತನಾಳ ಅಥವಾ ಹೃದಯದ ಮೂಲಕ ರಕ್ತದ ಹರಿವನ್ನು ಪರೀಕ್ಷಿಸಲು ಬಳಸುವ ವೈದ್ಯಕೀಯ ಸಾಧನ ಎನ್ನಬಹುದು. ಸಾಮಾನ್ಯವಾಗಿ ರಕ್ತದ ಹರಿವಿನಲ್ಲಿ ಯಾವುದೇ ಅಡಚಣೆ ಎದುರಾಗಿ ಹೃದಯಾಘಾತವಾದ ಸಂರ್ಭದಲ್ಲಿ ಮಾಡಲಾಗುವ ಚಿಕಿತ್ಸೆ ಇದು. ಇದರಲ್ಲಿ ಕ್ಯಾತಿಟರ್‌ಗಳು ಎಂದು ಕರೆಯಲ್ಪಡುವ ತೆಳುವಾದ ಕೊಳವೆಗಳನ್ನು ಬಳಸಲಾಗುತ್ತದೆ.
ಉಂಟಾದಾಗ ಬಳಸಲಾಗುತ್ತದೆ. ಕರೋನರಿ ಆಂಜಿಯೋಗ್ರಾಮ್‌ಗಳು ಕಾರ್ಡಿಯಾಕ್ ಕ್ಯಾತಿಟೆರೈಸೇಶನ್ ಎಂದು ಕರೆಯಲ್ಪಡುವ ಪರೀಕ್ಷೆಗಳು ಮತ್ತು ಕಾರ್ಯವಿಧಾನಗಳ ಗುಂಪಿನ ಭಾಗವಾಗಿದೆ. ಗಾಜಿಯಾಬಾದ್‌ನ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಕಾರ್ಡಿಯಾಲಜಿಸ್ಟ್ ಡಾ. ಅಭಿಷೇಕ್ ಸಿಂಗ್ ಅವರ ಪ್ರಕಾರ, ಈ ವಿಧಾನವು ಕ್ಯಾತಿಟರ್‌ಗಳು ಎಂದು ಕರೆಯಲ್ಪಡುವ ತೆಳುವಾದ ಕೊಳವೆಗಳನ್ನು ಬಳಸುತ್ತದೆ, ಇದು ದೇಹ ಮತ್ತು ಹೃದಯದ ಪ್ರಮುಖ ರಕ್ತನಾಳಗಳ ಒಳಗೆ ಹೋಗುತ್ತದೆ. ಇದು ಅತ್ಯಂತ ಸುರಕ್ಷಿತ ಚಿಕಿತ್ಸಾ ವಿಧಾನವಾಗಿದೆ.
ಬ್ಯಾಂಕ್ ಕೆಲಸದ ಜೊತೆಗೆ ಸಿನಿಮಾಗೂ ಎಂಟ್ರಿ ಕೊಟ್ಟಿದ್ದ ಜನಾರ್ಧನ್
ಆರಂಭಿಕ ಹಂತದಲ್ಲಿ ಬ್ಯಾಂಕ್‌ನಲ್ಲಿ ಕ್ಲರ್ಕ್ ಹುದ್ದೆ ಸೇರಿಕೊಂಡ ಅವರು ನಂತರ ನಾಟಕಗಳ ಆಡುವ ಅಭ್ಯಾಸ ಬೆಳೆಸಿಕೊಂಡಿದ್ದರು. ನಂತರ ಸಿನಿಮಾ ರಂಗಕ್ಕೂ ಬಂದರೂ. ಸಿನಿಮಾ ಪ್ರವೇಶದ ಬಳಿಕವೂ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಬ್ಯಾಂಕ್ ಜನಾರ್ಧನ್ ಎಂಬ ಹೆಸರು ಕೂಡ ಬಂದಿತ್ತು. ಪೊಲೀಸ್ ಹೆಂಡತಿ, ಶ್ , ತರ್ಲೆ ನನ್ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಮಣ್ಯ, ಕೌರವ, ರೂಪಾಯಿ ರಾಜ, ಚೆಲುವ ಸೇರಿ ನೂರಾರು ಸಿನಿಮಾಗಳು ಹೆಸರು ತಂದು ಕೊಟ್ಟವು. ಅವರ ಶ್ ಸಿನಿಮಾದಲ್ಲಿನ ಪೊಲೀಸ್ ಪಾತ್ರವು ಜನರ ಮನದಲ್ಲಿ ಉಳಿಯಿತು.
ಬ್ಯಾಂಕ್ ಜನಾರ್ಧನ್ ಕನ್ನಡದ ಹಿರಿಯ ದಿಗ್ಗಜ ನಟರ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾದಲ್ಲೂ ಅವರು ಇದ್ದೇ ಇರುತ್ತಿದ್ದರು.



Click it and Unblock the Notifications
