Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಮಾಸಿಕ ಭವಿಷ್ಯ: ಆಗಸ್ಟ್‌ನಲ್ಲಿ ಎಚ್ಚರವಹಿಸಬೇಕಾದ 4 ರಾಶಿಗಳಿವು
ಆಗಸ್ಟ್ ತಿಂಗಳಿನಲ್ಲಿ ಈ 4 ರಾಶಿಯವರಲ್ಲಿ ಪ್ರಮುಖ ಗ್ರಹಗಳಾದ ಸೂರ್ಯ, ಶುಕ್ರ, ಗುರು, ರಾಹು-ಕೇತು, ಶನಿ, ಬುಧ ಅನುಕೂಲಕ ಸ್ಥಾನದಲ್ಲಿ ಇಲ್ಲ. ಗ್ರಹಗತಿಗಳ ಸ್ಥಾನದ ಪ್ರಕಾರ ಈ ತಿಂಗಳು ಈ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ.
ವೃಷಭ ರಾಶಿ
ವೃಷಭ ರಾಶಿಯವರು ಈ ತಿಂಗಳಿನಲ್ಲಿ ಹೆಚ್ಚು ಪ್ರಯತ್ನಿಸಬೇಕಾಗುತ್ತದೆ. ವೃತ್ತಿ ಬದುಕಿನಲ್ಲಿ ಹಲವು ಸವಾಲುಗಳು ಕಂಡು ಬರಲಿದೆ. ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ. ಕಾರಣ ಶುಕ್ರ ದುರ್ಬಲ ಸ್ಥಾನದಲ್ಲಿದೆ. ಬುಧನು ಆಗಸ್ಟ್ 24ಕ್ಕೆ ಹಿಮ್ಮುಖ ಚಲನೆ ಪ್ರಾರಂಭಿಸಿದಾಗ ಧನಹಾನಿಯಾಗುವ ಸಂಭವವಿದೆ. ವ್ಯಾಪಾರಸ್ಥರಿಗೂ ಈ ಅವಧಿಯಲ್ಲಿ ಬಯಸಿದ ಲಾಭ ಪಡೆಯಲು ಕಷ್ಟವಾಗುವುದು. ಇನ್ನು ಆರೋಗ್ಯದ ವಿಷಯದಲ್ಲಿ ಕೂಡ ಈ ತಿಂಗಳು ಅನುಕೂಲಕರವಲ್ಲ. ವೈವಾಹಿಕ ಜೀವನದಲ್ಲೂ ಕೆಲ ಸಮಸ್ಯೆಗಳು ಇರಲಿದೆ, ಕುಟುಂಬ ಜೀವನದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಲಿದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ತಿಂಗಳು ಆರ್ಥಿಕ ಖರ್ಚು ಹೆಚ್ಚು ಬರಲಿದೆ. ಅಲ್ಲದೆ ಶುಕ್ರನ ಸ್ಥಾನ ಅನುಕೂಲಕರವಲ್ಲ, ಆದ್ದರಿಂದ ಧನನಷ್ಟವಾಗಬಹುದು, ಅಗ್ಯತ ವಸ್ತುಗಳನ್ನು ಖರೀದಿಸಲು ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುವುದು. ವ್ಯಾಪಾರಸ್ಥರಿಗೂ ಈ ತಿಂಗಳು ಅನುಕೂಲಕರವಲ್ಲ. ಅದಲ್ಲದೆ ಆರೋಗ್ಯದಲ್ಲೂ ಹಲವು ಸಮಸ್ಯೆಗಳು ಕಂಡು ಬರಬಹುದು. ರಾಹು ಮತ್ತು ಕೇತು 8ನೇ ಮನೆಯಲ್ಲಿದೆ ಇದರಿಂದಾಗಿ ಜೀರ್ಣಕ್ರಿಯೆ ಹಾಗೂ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಬಹುದು. ವೈವಾಹಿಕ ಜೀವನದಲ್ಲಿ ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಈ ಸಮಯದಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಕುಂಭ ರಾಶಿ
ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಲ್ಲ. ನೀವು ವೃತ್ತಿ ಜೀವನ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಲು ಒದ್ದಾಡಬೇಕಾಗುವುದು. ನಿಮ್ಮ ಗುರಿ ಸಾಧನೆಗೆ ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ. ವೃತ್ತಿ ಜೀವನದಲ್ಲೂ ಹಲವು ಸವಾಲುಗಳಿಂದ ಕೂಡಿರಲಿದೆ. ಗುರು ನಿಮ್ಮ ಮೂರನೇ ಮನೆಯಲ್ಲಿ ಇರುತ್ತಾನೆ. ಇದರಿಂದ ಈ ತಿಂಗಳು ನಿಮಗೆ ಯೋಚಿಸಿದಷ್ಟು ಲಾಭವನ್ನು ಗಳಿಸಲು ಸಾಧ್ಯವಾಗೋದಿಲ್ಲ. ಪಾಲುದಾರಿಕೆಯಲ್ಲಿ ನಡೆಸುವ ವ್ಯವಹಾರವು ನಿಮಗೆ ಪ್ರಯೋಜನಕಾರಿಯಾಗುವುದಿಲ್ಲ. ಪಾಲುದಾರಿಕೆಯಲ್ಲಿ ನೀವು ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಆರ್ಥಿಕ ತೊಂದರೆಗಳು ಎದುರಾಗಬಹುದು. ಶನಿ ಮತ್ತು ಕೇತು ಪ್ರತಿಕೂಲ ಮನೆಯಲ್ಲಿರುವುದರಿಂದ ಲಾಭ ಗಳಿಸುವುದಕ್ಕೆ ತುಂಬಾನೇ ಕಷ್ಟವಾಗುವುದು. ಈ ತಿಂಗಳು ನೀವು ಹಣದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಈ ತಿಂಗಳು ಹಣದ ನಷ್ಟವಾಗುವ ಸಾಧ್ಯತೆಗಳಿದೆ. ಅಲ್ಲದೆ ಈ ತಿಂಗಳಿನಲ್ಲಿ ಉದ್ಯಮಿಗಳು ಹಲವು ಸವಾಲುಗಳನ್ನು ಎದುರಿಸಬಹುದು. ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸುವ ಸಾಧ್ಯತೆಯಿದೆ. ಶುಕ್ರನು ಹಿಮ್ಮುಖ ಸ್ಥಿತಿಯಲ್ಲಿರುವುದರಿಂದ ಈ ತಿಂಗಳು ಅಧಿಕ ಹಣ ಖರ್ಚು ಮಾಡಬೇಕಾಗುವುದು.
ಮಕರ ರಾಶಿ
ಮಕರ ರಾಶಿಯವರಿಗೂ ಈ ತಿಂಗಳು ಅನುಕೂಲಕರವಲ್ಲ. ಈ ಸಮಯದಲ್ಲಿ ವೃತ್ತಿಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ವೃತ್ತಿ ಬದುಕಿನಲ್ಲಿ ಹಲವು ಸಮಸ್ಯೆಗಳಿರಬಹುದು, ಮಕರ ರಾಶಿಯವರ ಎರಡನೇ ಮನೆಯಲ್ಲಿ ಶನಿ, ಹತ್ತನೇ ಮನೆಯಲ್ಲಿ ಕೇತು ಸ್ಥಿತನಿದ್ದಾನೆ. ಇದರಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಆರ್ಥಿಕ ಜೀವನದ ದೃಷ್ಟಿಯಿಂದ ಈ ತಿಂಗಳು ಅನುಕೂಲಕರವಲ್ಲ, ಈ ತಿಂಗಳು ಹಣ ನಷ್ಟವಾಗುವ ಸಾಧ್ಯತೆ ಇದೆ.
ಆರ್ಥಿಕ ಜೀವನ ಆಗಸ್ಟ್ ತಿಂಗಳು ಮಕರ ರಾಶಿಯವರು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಈ ತಿಂಗಳು ನೀವು ಲಾಭ ಮತ್ತು ನಷ್ಟ ಎರಡನ್ನೂ ಹೊಂದುವ ಸಾಧ್ಯತೆಯಿದೆ. ಎರಡನೇ ಮನೆಯಲ್ಲಿ ಶನಿಯು ಹಿಮ್ಮುಖ ಸ್ಥಿತಿಯಲ್ಲಿದ್ದು, ನೀವು ಹೆಚ್ಚಿನ ಹಣವನ್ನು ಗಳಿಸುವಲ್ಲಿ ತೊಂದರೆಗಳನ್ನು ಎದುರಿಸಬಹುದು. ಖರ್ಚುಗಳನ್ನು ಸರಿಯಾಗಿ ನಿಭಾಯಿಸಲು ಕಷ್ಟವಾಗಬಹುದು, ಈ ಅವಧಿಯಲ್ಲಿ ಖರ್ಚು ತುಂಬಾ ಬರುವುದರಿಂದ ಸಾಲ ತೆಗೆದುಕೊಳ್ಳಬಹುದು. ವ್ಯಾಪಾರ ಮಾಡುವವರು ಈ ತಿಂಗಳು ಹಣದ ನಷ್ಟವನ್ನು ಎದುರಿಸಬೇಕಾಗಬಹುದು. ವ್ಯಾಪಾರಸ್ಥರು ಈ ತಿಂಗಳು ನೀವು ಬಯಸಿದ ಲಾಭವನ್ನು ಗಳಿಸಲು ಸಾಧ್ಯವಾಗುವುದಿಲ್ಲ ನೀವು ನಷ್ಟವನ್ನು ಎದುರಿಸಬೇಕಾಗಬಹುದು. ವ್ಯಾಪಾರದಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುವುದಿಲ್ಲ.



Click it and Unblock the Notifications
