Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಗಸ್ಟ್ 31ಕ್ಕೆ ಶನಿ ತ್ರಯೋದಶಿ: ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರಿಗೆ ದೋಷ ಪರಿಹಾರಕ್ಕೆ ಶ್ರೇಷ್ಠ ದಿನ
ಈ ವರ್ಷ ಎರಡು ಬಾರಿ ಶನಿ ತ್ರಯೋದಶಿ ಬಂದಿದೆ, ಏಪ್ರಿಲ್‌ನಲ್ಲಿ ಸಂಭವಿಸಿತ್ತು, ಇದೀಗ ನಾಳೆ ಅಂದರೆ ಆಗಸ್ಟ್ 31ರಂದು ಶನಿ ತ್ರಯೋದಶಿ ಉಂಟಾಗಿದೆ. ಪ್ರದೋಷ ವ್ರತ ಶನಿವಾರದಂದು ಬಂದರೆ ಶನಿ ತ್ರಯೋದಶಿಯೆಂದು ಹೇಳಲಾಗುವುದು. ಯಾರೆಲ್ಲಾ ಶನಿಯ ಕಾಟದಿಂದ ತುಂಬಾನೇ ಕಷ್ಟ ಅನುಭವಿಸುತ್ತಿದ್ದಾರೋ ಆ ಕಷ್ಟ ನಿವಾರಣೆಗೆ ಅತ್ಯಂತ ಪವರ್‌ಫುಲ್ ದಿನ ಎಂದು ಕರೆಯಲಾಗುವುದು.

ಶನಿದೋಷದಲ್ಲಿ ಶನಿ ಸಾಡೇಸಾತಿ, ಅಷ್ಟಮ ಶನಿ, ಅರ್ಧಾಷ್ಟಮ ಶನಿ, ಶನಿ ಧೈಯ್ಯ, ಪಂಚಮಿ ಶನಿ ಈ ಬಗೆಯ ಶನಿದೋಷ ಇರುವವರು ಈ ದಿನವನ್ನು ಮಿಸ್ ಮಾಡಲೇಬಾರದು. ಶನಿ ತ್ರಯೋದಶಿಯಂದು ಶನಿಗೆ ಸಂಬಂಧಿಸಿದ ಪರಿಹಾರ ಮಾಡಿದರೆ ಶನಿಯ ಕಷ್ಟಗಳಿಂದ ಪರಿಹಾರ ಪಡೆಯಲು ಈ ದಿನಕ್ಕಿಂತ ಶುಭದಿನ ಮತ್ತೊಂದಿಲ್ಲ.
ಶನಿ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ:
ಶನಿ ದೋಷಕ್ಕೆ ಒಳಗಾದವರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ,ಆರ್ಥಿಕವಾಗಿ ಹಲವು ಸಮಸ್ಯೆಗಳು ಕಂಡು ಬರುವುದು, ಕುಟುಂಬದಲ್ಲಿ ಹಲವು ಸಮಸ್ಯೆಗಳು ಕಂಡು ಬರುವುದು, ಸಾಮಾಜಿಕವಾಗಿ ಹೆಸರಿಗೆ ಕೆಲ ಧಕ್ಕೆ ಉಂಟಾಗುತ್ತದೆ, ಸುಮ್ಮನೆ ಕೆಲ ಅಪವಾದಗಳನ್ನು ಕೇಳಬೇಕಾಗುತ್ತದೆ ಹೀಗೆ ಶನಿ ದೋಷದಿಂದ ವ್ಯಕ್ತಿಯು ಅನುಭವಿಸುವ ಕಷ್ಟ ಒಂದಲ್ಲಾ ಎರಡಲ್ಲ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ದಿನ ಶನಿಯ ಮೂಲ ಮಂತ್ರವನ್ನು ಪಠಿಸಿ ಶನಿಗೆ ಸಂಬಂಧಿಸಿದ ಪರಿಹಾರವನ್ನು ಮಾಡಬೇಕು.
ॐ ಪ್ರಾಂ ಪ್ರಿಯಂ ಪ್ರೌಂ ಸಃ ಶನೈಶ್ಚರಾಯ ನಮಃ
ಈ ದಿನ ಉಪವಾಸವಿರಬೇಕು
ಈ ದಿನ ಶನಿಗೆ ಪೂಜೆ ಮಾಡಬೇಕು.
ಈ ದಿನ ಕಪ್ಪು ಬಟ್ಟೆಯನ್ನು ಧರಿಸಬೇಕು
ಶನಿ ಮಂತ್ರಗಳನ್ನು ಪಠಿಸಬೇಕು.
ಈ ದಿನ ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ:
ಈ ದಿನ ಬಡವರಿಗೆ ದಾನ ಮಾಡಬೇಕು
ನಿರ್ಗತಿಕರಿಗೆ ಕಪ್ಪು ಬಟ್ಟೆಗಳನ್ನು ದಾನ ಮಾಡಿ.
ಆಹಾರ ವಸ್ತುಗಳನ್ನು ದಾನ ಮಾಡಿ.
ಶನಿ ದೇವನಿಗೆ ಎಳ್ಳೆಣ್ಣೆಯನ್ನು ದೇವಾಲಯಕ್ಕೆ ದಾನ ಮಾಡಿ
ಈ ದಿನ 10ಗ್ರಾಂ ಎಳ್ಳೆಣ್ಣೆ, ಇದ್ದಿಲು, ಕಪ್ಪು ರಿಬ್ಬನ್, 8 ಕಬ್ಬಿಣದ ಮೊಳೆ ಇವುಗಳನ್ನು ಶನಿ ದೇವನಿಗೆ ಅರ್ಪಿಸಿ.
ಈ ದಿನ ಎಣ್ಣೆ, ಚರ್ಮದ ವಸ್ತುಗಳು (ಬ್ಯಾಗ್, ಚಪ್ಪಲಿ), ಕೊಡೆ ಈ ಬಗೆಯ ವಸ್ತುಗಳನ್ನು ಖರೀದಿಸಬಾರದು.
ಈ ದಿನ ಅಕ್ಕಿ, ಉಪ್ಪು ಅರ್ಪಿಸಿ.
ಈಗ ಯಾವೆಲ್ಲಾ ರಾಶಿಗಳಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ?
ಇದೀಗ ಮಕರ, ಕುಂಭ, ಮೀನ ರಾಶಿಯವರಿಗೆ ಶನಿಯು ಸಾಡೇಸಾತಿ ನಡೆಯುತ್ತಿದೆ. ಮಕರ ರಾಶಿಯವರಿಗೆ ಶನಿಯ ಸಾಡೇಸಾತಿ ಕೊನೆಯ ಹಂತ ನಡೆಯುತ್ತಿದೆ. ಕುಂಭ ರಾಶಿಯಲ್ಲಿ ಸಾಡೇ ಸತಿಯ ಎರಡನೇ ಹಂತ ನಡೆಯುತ್ತಿದೆ, ಮೀನ ರಾಶಿಯವರಿಗೆ ಸಾಡೇ ಸತಿಯ ಮೊದಲ ಹಂತ ನಡೆಯುತ್ತಿದೆ. ಮೀನ ರಾಶಿಯವರಿಗೆ ಈ ಹಂತ ಘಟ್ಟ ಕಠಿಣವಾಗಿರುತ್ತದೆ, ಮೂರನೇಯ ಹಂತದಲ್ಲಿ ಇರುವಾಗ ಶನಿಯ ಪ್ರಭಾವ ಕಡಿಮೆಯಾಗಿರುತ್ತದೆ.
ಇನ್ನು ಕರ್ಕ ಮತ್ತು ವೃಶ್ಚಿಕ ರಾಶಿಗಳಲ್ಲಿ ಶನಿ ಧೈಯ್ಯ ನಡೆಯುತ್ತಿದೆ.
ಶನಿ ಗಾಯತ್ರಿ ಮಂತ್ರ
'ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್'



Click it and Unblock the Notifications
