Latest Updates
-
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ
ಯಾವ ದಿನ ಯಾವ ಕೆಲಸ ಮಾಡಲೇಬಾರದು?
ನಾವು ಚಿಕ್ಕವರಿರಬೇಕಾದರೆ ಅಪ್ಪ ನಮ್ಮನ್ನು ಮಂಗಳವಾರ ಕ್ಷೌರಿಕನ ಅಂಗಡಿಗೆ ಕೂದಲು ತೆಗೆಸಲು ಕರೆದುಕೊಂಡು ಹೋಗುತ್ತಿರಲಿಲ್ಲ. ಯಾಕೆ ಅಂತ ಕೇಳಿದ್ರೆ ಈ ದಿನ ಕ್ಷೌರಿಕ ಅಂಗಡಿಗೆ ರಜಾ ಅಂತ ಹೇಳ್ತಿದ್ರು. ಮಂಗಳವಾರ ಕೂದಲು ತೆಗೆಸೋದಕ್ಕೆ ಶುಭ ದಿನವಲ್ಲ. ಹೀಗಾಗಿ ಆ ದಿನ ಹೆಚ್ಚಿನವರು ಕ್ಷೌರಿಕನ ಬಳಿಗೆ ಬರೋದಿಲ್ಲ. ಇದರ ಹಿಂದೆ ಒಂದು ಬಲವಾದ ಕಾರಣವಿತ್ತು. ಇದೇ ಕಾರಣಕ್ಕೆ ಆ ದಿನ ಯಾರೂ ಕೂಡ ಕೂದಲು ತೆಗೆಸುತ್ತತಿರಲಿಲ್ಲ.
ಇದೇ ರೀತಿ ಕೆಲವೊಂದು ದಿನಗಳಲ್ಲಿ ನಾವು ಮಾಡೋ ತಪ್ಪು ಕೆಲಸಗಳಿಗೆ ನಮಗೆ ಮನೆಯಲ್ಲಿ ಬೈಗುಳದ ಸುರಿ ಮಳೆಯೇ ಸಿಗುತ್ತಿತ್ತು. ಉದಾಹರಣೆಗೆ ಎಲ್ಲಂದರಲ್ಲಿ ಯಾವಾಗೆಂದರೆ ಆವಾಗ ಉಗುರು ಕತ್ತರಿಸಿ ಹಾಕುವುದಕ್ಕೆ. ಹಿರಿಯರು ಇಂತಹ ನಿಯಮಗಳನ್ನು ಸುಮ್ಮನೆ ಮಾಡಿರಲಿಲ್ಲ. ಇದ್ರ ಹಿಂದೆ ಕೂಡ ಕೆಲವೊಂದು ಬಲವಾದ ಕಾರಣಗಳು ಇದ್ದವು. ಇದೇ ಕಾರಣಕ್ಕೆ ಕೆಲವೊಂದು ವಿಚಾರಗಳಿಗೆ ಮನೆಯಲ್ಲಿ ನಿರ್ಬಂಧ ಹಾಕುತ್ತಿದ್ದರು. ಅಷ್ಟಕ್ಕು ಯಾವ ದಿನ ಯಾವ ಕೆಲಸಗಳನ್ನು ಮಾಡಬಾರದು ಅನ್ನೋದನ್ನು ತಿಳಿಯೋಣ.

ಈ ದಿನ ತಲೆಗೆ ಎಣ್ಣೆ ಹಾಕಬೇಡಿ!
ನಮ್ಮಲ್ಲಿ ಹೆಚ್ಚಿನವರು ವಾರಕ್ಕೆ ಎರಡು ಬಾರಿ ತಲೆಗೆ ಎಣ್ಣೆ ಹಾಕೋದನ್ನು ರೂಢಿ ಮಾಡಿಕೊಂಡಿದ್ದಾರೆ. ಇತ್ತೀಚಿನ ಯುವಕರು ತಲೆಗೆ ಎಣ್ಣೆ ಮುಟ್ಟಿಸೋದೇ ಇಲ್ಲ. ಇನ್ನೂ ಕೆಲವರಂತೂ ನಿತ್ಯ ತಲೆಗೆ ಎಣ್ಣೆ ಹಾಕ್ತಾರೆ. ಹಾಗಂತಾ ಎಣ್ಣೆ ಹಾಕೋದಕ್ಕೆ ದಿನ ಎಲ್ಲಾ ನೋಡೋದಿಲ್ಲ. ತಮಗಿಷ್ಟ ಬಂದ ದಿನ ಎಣ್ಣೆ ಹಾಕುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರ ಹಾಗೂ ಬುಧವಾರ ತಲೆಗೆ ಎಣ್ಣೆ ಹಾಕಿದರೆ ತುಂಬಾನೇ ಒಳ್ಳೆಯದಂತೆ. ಇನ್ನೂ ಗುರುವಾರ ಹಾಗೂ ಶುಕ್ರವಾರ ಯಾವುದೇ ಕಾರಣಕ್ಕೂ ತಲೆಗೆ ಹಾಕಬಾರದಂತೆ. ಇದರಿಂದ ನಿಮ್ಮ ಗುರು ಹಾಗೂ ಶನಿ ದುರ್ಬಲರಾಗುತ್ತಾರಂತೆ.
ಈ ದಿನ ಉಗುರು ಕತ್ತರಿಸಬೇಡಿ!
ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಉಗುರುಗಳನ್ನು ಕತ್ತರಿಸುವುದರಿಂದ ನಮ್ಮ ರಾಶಿ ಗ್ರಹಗಳ ರಾಶಿಗಳು ದುರ್ಬಲವಾಗುತ್ತಂತೆ. ಇದರಿಂದ ಆ ವ್ಯಕ್ತಿಯು ಅನೇಕ ರೀತಿಯ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಕಷ್ಟಗಳೇ ಬಂದೊದಗೋ ಸಾಧ್ಯತೆಗಳು ಹೆಚ್ಚಾಗಿದೆ. ಸೋಮವಾರವನ್ನು ಉಗುರು ಕತ್ತರಿಸಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇನ್ನೂ ಕೆಲವರಿಗೆ ಉಗುರು ಕಚ್ಚೋ ಅಭ್ಯಾಸವಿರುತ್ತೆ. ಇದರಿಂದ ಮನೆಗೆ ದಾರಿದ್ರ್ಯ ಸುತ್ತುಕೊಳ್ಳುತ್ತಂತೆ. ಹೀಗಾಘಿ ಈ ಅಭ್ಯಾಸವನ್ನೂ ಬಿಟ್ಟು ಬಿಡಿ.
ಈ ದಿನ ಮನೆ ಸಾಮಾಗ್ರಿಗಳನ್ನು ಖರೀದಿಸಬೇಡಿ
ಮಂಗಳವಾರದ ದಿನ ಸ್ಟೀಲ್ ಪಾತ್ರೆಗಳು ಮತ್ತು ಮನೆಗೆ ಬೇಕಾದ ಸಾಮಾಗ್ರುಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡೋದಕ್ಕೆ ಹೋಗಬೇಡಿ. ಉದಾಹರಣೆಗೆ ಚಾಕು, ನೈಲ್ ಕಟ್ಟರ್, ಕತ್ತರಿಯನ್ನು ಖರೀದಿ ಮಾಡಬಾರದು. ಇದರ ಜೊತೆಗೆ ಮಂಗಳವಾರದ ದಿನ ಹೊಸ ವಾಹನ ಖರೀದಿ, ಸಾಲ ತೆಗೆದುಕೊಳ್ಳುವುದು, ಸಾಲ ಕೊಡುವುದು ಕೂಡ ಶುಭಕರವಲ್ಲ.
ಈ ದಿನ ಕೂದಲಿಗೆ ಸ್ನಾನ ಮಾಡಬೇಡಿ
ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಸೋಮವಾರ, ಬುಧವಾರ ಮತ್ತು ಗುರುವಾರ ತಲೆಗೆ ಸ್ನಾನ ಮಾಡಬಾರದು. ಅದ್ರಲ್ಲೂ ಮಹಿಳೆಯರಂತೂ ಈ ದಿನ ತಲೆ ಸ್ನಾನ ಮಾಡಲೇಬಾರದು. ಯಾರು ಈ ದಿನ ತಲೆಗೆ ಸ್ನಾನ ಮಾಡುತ್ತಾರೋ ಇದರ ಪರಿಣಾಮವಾಗಿ ಅವರ ಸಹೋದರರು ಕಷ್ಟ ಎದುರಿಸಬೇಕಾಗುತ್ತಂತೆ. ಹೀಗಾಗಿ ತಲೆ ಸ್ನಾನ ಮಾಡುವಾಗಲೂ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.
ಈ ದಿನ ಕೂದಲು ಕತ್ತರಿಸಬೇಡಿ!
ಕೂದಲು ಕತ್ತರಿಸುವುದನ್ನು ಮಂಗಳವಾರ, ಗುರುವಾರ ಮತ್ತು ಶನಿವಾರದ ದಿನ ನಿಷೇಧ ಮಾಡಲಾಗಿದೆ. ಒಂದು ವೇಳೆ ಆ ದಿನ ಕೂದಲು ಕತ್ತರಿಸಿದ್ದೇ ಆದರೆ ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಂತೆ. ಇನ್ನೂ ಗುರುವಾರ ಕೂದಲು ಕತ್ತರಿಸೋದ್ರಿಂದ ನೀವು ಆರ್ಥಿಕ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಇನ್ನು ಭಾನುವಾರ ಹಾಗೂ ಸೋಮವಾರದ ದಿನ ಕೂದಲು ಕತ್ತರಿಸಲು ಉತ್ತಮ ದಿನಗಳಾಗಿದೆ.
ಈ ದಿನ ಮನೆ ಸ್ವಚ್ಛಗೊಳಿಸಲು ಶುಭ ದಿನವಲ್ಲ!
ಸಾಮಾನ್ಯವಾಗಿ ನಾವು ಪ್ರತಿದಿನ ಮನೆಯನ್ನು ಸ್ವಚ್ಛ ಗೊಳಿಸುತ್ತೇವೆ. ಆದರೆ ಸಮಯ ಸಿಕ್ಕಾಗ ಇಡೀ ಮನೆಯನ್ನು ಸ್ವಚ್ಛ ಮಾಡುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಡೀ ಮನೆಯನ್ನು ಸ್ವಚ್ಛ ಗೊಳಿಸೋದಕ್ಕೆ ಶನಿವಾರ ಹಾಗೂ ಭಾನುವಾರ ಸೂಕ್ತ ದಿನಗಳು. ಇನ್ನೂ ಗುರುವಾರದ ದಿನ ಇಡೀ ಮನೆಯನ್ನು ಸ್ವಚ್ಛ ಗೊಳಿಸೋದ್ರಿಂದ ಸಂಪತ್ತು ನಷ್ಟ ಉಂಟಾಗುತ್ತಂತೆ.
ಹಿರಿಯರು ಮಾಡಿರೋ ಪ್ರತಿಯೊಂದು ನಿಯಮಗಳ ಹಿಂದೆ ಒಂದಲ್ಲ ಒಂದು ಬಲವಾದ ಕಾರಣವಿತ್ತು. ಹೀಗಾಗಿ ಯಾವುದೇ ಕಾರಣಕ್ಕೂ ಈ ದಿನಗಳಲ್ಲಿ ಮೇಲೆ ಹೇಳಿರುವ ತಪ್ಪುಗಳನ್ನು ಮಾಡದಿರಿ.



Click it and Unblock the Notifications
