Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಆಷಾಢದ ಮಹತ್ವವೇನು..? ಜುಲೈನಲ್ಲಿ ಆಷಾಢ ಆಚರಿಸೋದ್ಯಾಕೆ..?
ಹಿಂದೂ ಕ್ಯಾಲೆಂಡರ್‌ನ 4ನೇ ತಿಂಗಳು ಆಷಾಢ ಮಾಸವಾಗಿರಲಿದೆ. ಈ ತಿಂಗಳಿನಲ್ಲಿ ಕುಮಾರ ಷಷ್ಠಿ, ಶಮಿ ಗೌರಿ ವ್ರತ, ಭಾನು ಸಪ್ತಮಿ, ಚಾತುರ್ಮಾಸ ವ್ರತ, ಭೀಮನ ಅಮವಾಸ್ಯೆ ಹೀಗೆ ಪ್ರಮುಖ ಆಚರಣೆಗಳು ಸಹ ಬರುತ್ತವೆ. 2024ರಂದು ಜುಲೈ ತಿಂಗಳಿನಲ್ಲಿ ಆಷಾಢ ಮಾಸ ಆರಂಭಗೊಳ್ಳುತ್ತಿದೆ. ಹಾಗಾದ್ರೆ ಯಾವಾಗ ಆಷಾಢ ಮಾಸ ಆರಂಭವಾಗುತ್ತದೆ. ಯಾವ ತಿಂಗಳಿನಲ್ಲಿ ಕೊನೆಯಾಗಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ಆಷಾಢ ಮಾಸ ಆರಂಭಗೊಂಡರೆ ಶುಭ ಕಾರ್ಯಗಳು ಕಡಿಮೆಯಾಗುತ್ತವೆ. ಹಿಂದೂಗಳ ಈ ಮಾಸದಲ್ಲಿ ಯಾವ ಶುಭ ಕಾರ್ಯಕ್ಕೂ ಮುಂದಾಗುವುದಿಲ್ಲ. ಜೊತೆಗೆ ಹಲವು ಕಠಿಣ ನಿಯಮಗಳನ್ನು ಅನುಸರಿಸುತ್ತಾರೆ. ಪ್ರತಿ ವಾರದಲ್ಲಿ ಒಂದು ದಿನ ಉಪವಾಸ, ಮಾಂಸಾಹಾರ ತ್ಯಜಿಸುವುದು, ದೇವರಲ್ಲಿ ಕಠಿಣ ವ್ರತಾಚರಣೆಯಂತಹ ಕಾರ್ಯದಲ್ಲಿ ಅವರು ತೊಡಗುತ್ತಾರೆ.

ಆಷಾಢ ಮಾಸ 2024
ಹಿಂದೂ ಕ್ಯಾಲೆಂಡರ್ ಪ್ರಕಾರ ಹುಣ್ಣಿಮೆಯ ದಿನ ಚಂದ್ರನು ಉತ್ತರಾಷಾಢ ಅಥವಾ ಪೂರ್ವಾಷಾಢ ನಕ್ಷತ್ರಗಳಲ್ಲಿ ಇರುವಾಗ ಆಷಾಢ ಮಾಸ ಎಂದು ಕರೆಯಲಾಗುತ್ತದೆ. ಸೂರ್ಯ ಮಿಥುನ ರಾಶಿಯಿಂದ ಕರ್ಕಾಟಕಕ್ಕೆ ಪ್ರವೇಶಿಸುತ್ತಾನೆ. ಇದರೊಂದಿಗೆ ಉತ್ತರಾಯಣ ಪುಣ್ಯಕಾಲ ಮುಗಿದು ದಕ್ಷಿಣಾಯಣ ಪ್ರಾರಂಭವಾಗುತ್ತದೆ.
ಈ ವರ್ಷ ಆಷಾಢ ಮಾಸವು ಜುಲೈ 6 ರಿಂದ ಆರಂಭಗೊಂಡು ಆಗಸ್ಟ್ 4 ರಂದು ಕೊನೆಗೊಳ್ಳುತ್ತದೆ. ಈ ತಿಂಗಳು ಶೂನ್ಯ ತಿಂಗಳು ಅಂತಲೂ ಕರೆಯಲಾಗುತ್ತದೆ.
ಆಷಾಢ ಮಾಸದ ಮಹತ್ವವೇನು?
ಆಷಾಢ ಮಾಸ ದಕ್ಷಿಣಾಯನದಿಂದ ಪ್ರಾರಂಭವಾಗುತ್ತದೆ. ಸೂರ್ಯ ದಕ್ಷಿಣಾಭಿಮುಖವಾಗಿ ಚಲಿಸಲು ಆರಂಭಿಸುತ್ತಾನೆ. ಉತ್ತರಾಯಣ ಪ್ರಾರಂಭವಾಗಿ 6 ತಿಂಗಳ ನಂತರ ದಕ್ಷಿಣಾಯನ ಪ್ರಾರಂಭವಾಗುತ್ತದೆ. ಆಷಾಢ ಮಾಸದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ಮುಂದಾಗುತ್ತಾರೆ. ಈ ತಿಂಗಳಿನಲ್ಲಿ ಮದುವೆ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಜೊತೆಗೆ ಇರುವುದಿಲ್ಲ. ಈ ತಿಂಗಳಿನಲ್ಲಿ ನವ ವಿವಾಹಿತೆ ತನ್ನ ತವರು ಮನೆಗೆ ಹೋಗಿ ಆಷಾಢ ಮುಗಿದ ಬಳಿಕ ಗಂಡನ ಮನೆಗೆ ಮರಳುವ ಆಚರಣೆಯು ಇದೆ.
ಮೈಸೂರು ಚಾಮುಂಡೇಶ್ವರಿ ದೇವಿಯ ಜನ್ಮ ದಿನವು ಆಷಾಡ ಮಾಸದಲ್ಲೇ ಬರುತ್ತದೆ. ಆಷಾಡ ಮಾಸದಲ್ಲಿ ಗುರುವಿನ ಪೂಜೆಯನ್ನು ಮಾಡಿದರೆ ಹೆಚ್ಚು ಫಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೇ ದೇವಿಯ ಪೂಜೆ ಮಾಡುವುದು ಕೂಡ ತುಂಬಾ ಮಂಗಳಕರ ಮತ್ತು ಶ್ರೇಯಸ್ಕರ ಎಂದು ನಂಬಲಾಗಿದೆ.
ಆಷಾಢ ಮಾಸದಲ್ಲಿ ಕೆಲವು ವಿಶೇಷ ವ್ರತ ಹಾಗೂ ಪೂಜೆಗಳನ್ನು ಕೈಗೊಳ್ಳಲಾಗುವುದು. ಅವುಗಳು ಅತ್ಯಂತ ಮಹತ್ವ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡಿವೆ. ದೇವರ ಈ ಶುಭ ಕಾರ್ಯವನ್ನು ಕೈಗೊಳ್ಳುವುದರಿಂದ ಅನೇಕ ಉತ್ತಮ ಫಲಗಳು ದೊರೆಯುತ್ತವೆ. ಜೀವನವೂ ಸುಂದರವಾಗಿರುತ್ತದೆ ಎಂದು ಹೇಳಲಾಗುವುದು. ಈ ಮಾಸದಲ್ಲೇ ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ.
ಇಂದ್ರನು ಗೌತಮರಿಂದ ಸಹಸ್ರಾಕ್ಷನಾಗು ಎಂಬ ಶಾಪ ಪಡೆದ, ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ 'ಸೋಮೇಶ್ವರ ಜಯಂತಿ' ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ ಎಂದು ಹೇಳಲಾಗುತ್ತದೆ.
ವರ್ಷ ಪೂರ್ತಿ ನಮ್ಮ ಜೀವನದ ಬಗ್ಗೆ ಸಾಕಷ್ಟು ಕನಸು ಹಾಗೂ ಅದರ ಗುಂಗಿನಲ್ಲಿಯೇ ಇರುತ್ತೇವೆ. ವರ್ಷದ ಒಂದು ಸಮಯವಾದರೂ ನಮ್ಮ ಒಳಿತಿಗಾಗಿ ಇರುವ ದೇವತೆಗಳ ಆರಾಧನೆ ಮಾಡಬೇಕು. ಒಂದು ತಿಂಗಳನ್ನು ದೇವರಿಗಾಗಿ ಮೀಸಲಾಗಿಟ್ಟರೆ, ಎಲ್ಲರೂ ತಮ್ಮ ಸ್ವಾರ್ಥಗಳನ್ನು ತೊರೆದು, ದೇವರ ನಾಮವನ್ನು ಸ್ಮರಿಸುತ್ತಾ ಪೂಜೆ, ವ್ರತ ಹಾಗೂ ಹವನಗಳನ್ನು ಕೈಗೊಳ್ಳುತ್ತಾರೆ. ಇದರಿಂದ ದೇವಾನು ದೇವತೆಗಳು ಸಂತೃಪ್ತರಾಗುತ್ತಾರೆ ಎಂದು ನಂಬಲಾಗಿದೆ.



Click it and Unblock the Notifications

