Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆ್ಯಂಕರ್ ಅನುಶ್ರೀ ವಿವಾಹ: ಆಕೆಯ ಆಸ್ತಿ ಎಷ್ಟು ಗೊತ್ತಾ?
ನಟಿ, ನಿರೂಪಕಿಯಾಗಿರುವ ಅನುಶ್ರೀ ಮದುವೆ ಯಾವಾಗ ಎಂಬ ಪ್ರಶ್ನೆಗೆ ಸದ್ಯ ಬ್ರೇಕ್ ಬಿದ್ದಿದೆ. ಅವರು ಮದುವೆಯಾಗುವುದಾಗಿ ಹರಿದಾಡುತ್ತಿದ್ದ ಸುದ್ದಿಗೆ ಸಾಕ್ಷಿಯಾಗಿ ಈಗ ಅವರ ವಿವಾಹ ಆಮಂತ್ರಣ ಪತ್ರಿಕೆ ಹೊರಬಿದ್ದಿದೆ. ಆ್ಯಂಕರ್ ಅನುಶ್ರೀ ವಿವಾಹವಾಗುವುದಾಗಿ ತಿಳಿಸಿದ್ದು, ಇದೇ ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದ ರೆಸಾರ್ಟ್‌ಲ್ಲಿ ಅವರ ವಿವಾಹ ನೆರವೇರುತ್ತಿದೆ.
ಕೊಡಗು ಮೂಲದ ಉದ್ಯಮಿಯಾಗಿರುವ ರೋಷನ್ ಎಂಬುವರ ಜೊತೆಗೆ ಅವರ ವಿವಾಹ ನಿಶ್ಚಯವಾಗಿದೆ. ಮೊದಲೇ ಇಬ್ಬರಿಗೂ ಪರಿಚಯವಿತ್ತು ಎಂದು ಕೂಡ ತಿಳಿದುಬಂದಿದೆ. ಅನಂತರ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಅವರ ವಿವಾಹ ಆಹ್ವಾನ ಪತ್ರಿಕೆ ಕೂಡ ಬಹಳ ಸರಳತೆಯಿಂದ ಕೂಡಿದೆ. ಅದರಲ್ಲಿ 'ನೀವೆಲ್ಲ ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರ, ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರ' ಎಂದು ಲಗ್ನ ಪತ್ರಿಕೆಯಲ್ಲಿ ಅನುಶ್ರೀ ಬರೆಸಿದ್ದಾರೆ. ಮಂಗಳೂರಿನ ಸುರತ್ಕಲ್‌ನಲ್ಲಿ ಜನಿಸಿದ್ದ ಅನುಶ್ರೀ ನಿರೂಪಣೆಯಿಂದ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದರು.
ಆರಂಭದ ದಿನದಲ್ಲಿ ಅವರು ಹಲವು ವೇದಿಕೆಗಳಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಇದೆಲ್ಲದರ ನಡುವೆ ಸಿನಿಮಾಗಳಲ್ಲು ಕೂಡ ನಟಿಸಿದ್ದರು. ಬೆಂಕಿಪಟ್ನ ಎಂಬ ಸಿನಿಮಾದಲ್ಲಿನ ಅವರ ನಟನೆ ಎಲ್ಲರ ಗಮನ ಸೆಳೆದಿತ್ತು. ಹಾಗೆ ಖಾಸಗಿ ಕಾರ್ಯಕ್ರಮಗಳಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದರು. ಹಾಗೆ ಅವರು ಕನ್ನಡ ನಂಬರ್ ಒನ್ ನಿರೂಪಕಿಯಾಗಿಯೂ ಹೆಸರು ಗಳಿಸಿದರು. ಹಾಗೆ ಬಿಗ್ ಬಾಸ್ ಸ್ಪರ್ಧಿಯಾಗಿಯೂ ಅವರು ಕಾಣಿಸಿಕೊಂಡಿದ್ದರು.
ನಿರೂಪಕಿ ಅನುಶ್ರೀ ಅವರು ಮದುವೆಯಾಗುತ್ತಿರುವ ಹುಡುಗ ರೋಷನ್ ಅವರು ರಾಮಮೂರ್ತಿ ಅವರ ಪುತ್ರನಾಗಿದ್ದಾರೆ. ಕೊಡಗು ಮೂಲದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ.
ಆ್ಯಂಕರ್ ಅನುಶ್ರೀ ಆಸ್ತಿ ಎಷ್ಟಿದೆ?
ನಟಿ, ನಿರೂಪಕಿಯಾಗಿ ಅನುಶ್ರೀ ಹಲವು ವರ್ಷಗಳಿಂದಲು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆ ಸಿನಿಮಾಗಳಲ್ಲು ನಟಿಸಿದ್ದಾರೆ. ಆದ್ರೆ ಅವರ ಆಸ್ತಿ ಸಂಬಂಧವಾಗಿ ಆವರು ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಮೂಲಗಳ ಪ್ರಕಾರ ಆಸ್ತಿ ಸುಮಾರು 50 ಕೋಟಿ ರೂಪಾಯಿ ಇರಬಹುದು ಎಂದು ಹೇಳಲಾಗುತ್ತದೆ. ಹಾಗೆ ಬೆಂಗಳೂರಿನಲ್ಲಿ ಮನೆ, ಹಾಗೂ ಹುಟ್ಟೂರಿನಲ್ಲಿ ಒಂದು ಮನೆ ಇದೆ. ಹಾಗೆ ಇತ್ತೀಚಿಗೆ ದುಬಾರಿ ಬೆಲೆಯ ಕಾರು ಕೂಡ ಖರೀದಿಸಿದ್ದರು.
ಆಮಂತ್ರಣ ಪತ್ರಿಕೆಯಲ್ಲಿ ಏನಿದೆ?
ಅನುಶ್ರೀ ವಿವಾಹ ಆಮಂತ್ರಣ ಪತ್ರಿಕೆ ಸರಳವಾಗಿದೆ. ಹಾಗೆ ಇಂಗ್ಕೀಷ್ ಹಾಗೂ ಕನ್ನಡದಲ್ಲೂ ಮುದ್ರಿಸಲಾಗಿದೆ. 'ನೀವೆಲ್ಲ ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರ, ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರ' ಎಂದು ಆರಂಭದಲ್ಲಿ ನೋಡಬಹುದು. ಸರಳವಾಗಿ ಮುಹೂರ್ಥ, ಸಮಯದ ಮಾಹಿತಿ ನೀಡಲಾಗಿದೆ. ಹಾಗೆ ನಿಮ್ಮ ಆಗಮನವೇ ಉಡುಗೊರೆ ಎಂದು ಸಹ ಮುದ್ರಿಸಲಾಗಿದೆ.



Click it and Unblock the Notifications
