Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮುಂಬೈ ಗಣಪನಿಗೆ 20 ಕೆ.ಜಿ ಚಿನ್ನದ ಕಿರೀಟ ಕೊಡುಗೆ ನೀಡಿದ ಅನಂತ್ ಅಂಬಾನಿ!
ಗೌರಿ ಗಣೇಶನ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಮಹಾ ನಗರಗಳು ಸೇರಿ ಹಳ್ಳಿ ಹಳ್ಳಿಗಳಲ್ಲೂ ಗಣೇಶನ ಮೂರ್ತಿ ತಲೆ ಎತ್ತಲಿವೆ. ಒಂದೊಂದು ಗಣೇಶ ಮೂರ್ತಿಗಳು ಕೂಡ ವಿಶೇಷತೆಗಳಿಂದ ಕೂಡಿರುತ್ತವೆ. ಇನ್ನು ಈ ಹಬ್ಬದಲ್ಲಿ ವಿಶೇಷವಾಗಿ ಗಮನ ಸೆಳೆಯುವ ಗಣೇಶೋತ್ಸವ ಅಂದರೆ ಅದು ಮುಂಬೈನ ಅತೀ ದೊಡ್ಡ ಗಣೇಶನ ಮೂರ್ತಿಯಾಗಿದೆ.
ಮುಂಬೈನ ಲಾಲ್ಚೌಚಾ ಗಣೇಶನ ಮೂರ್ತಿ ವರ್ಷಗಳಿಂದಲೂ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ಈ ಗಣೇಶನ ನೋಡಲೆಂದು ಬಾಲಿವುಡ್‌ನ ಸೆಲೆಬ್ರಿಟಿಗಳು ಸಹ ಬರುವುದು ನೋಡಬಹುದು. ಆದ್ರೆ ಈಗ ಉದ್ಯಮಿ ಅನಂತ್ ಅಂಬಾನಿ 20 ಕೆ.ಜಿ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಂದು ಈ ಗಣೇಶನ ಮೂರ್ತಿಯನ್ನು ಅನಾವರಣಗೊಳಿಸಲಾಗಿದ್ದು, 20 ಕೆ.ಜಿ ಮೌಲ್ಯದ ಚಿನ್ನದ ಕಿರೀಟ ಎಲ್ಲರ ಗಮನ ಸೆಳೆದಿದೆ.

ಮೆರೂನ್ ಬಣ್ಣದ ವಸ್ತ್ರ ಧರಿಸಿ, ಆಭರಣಗಳಿಂದ ಕಂಗೊಳಿಸುತ್ತಿದ್ದ ಗಣೇಶನ ದರ್ಶನ ಪಡೆದ ಭಕ್ತರು ನಿಬ್ಬೆರಗಾದರು. ಈ ವರ್ಷದ ಲಾಲ್‌ಬಾಗ್ಚಾ ರಾಜಾ ಗಣೇಶನಿಗೆ ಅನಂತ್ ಅಂಬಾನಿ 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನದ ಕಿರೀಟ ಉಡುಗೊರೆಯಾಗಿ ನೀಡಿದ್ದಾರೆ. ಅನಂತ್ ಅಂಬಾನಿ ಅವರು ಕಳೆದ 15 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳ ನಡೆಸಿಕೊಡುವ ಮೂಲಕ ಲಾಲ್ಬೌಚಾ ರಾಜಾ ಸಮಿತಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ಲಾಲ್‌ಬೌಚಾ ರಾಜಾ ಅವರ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು.
ಕೋವಿಡ್ ಸಮಯದಲ್ಲಿ ಲಾಲ್‌ಬಾಗ್ಚಾ ರಾಜಾ ಗಣೇಶೋತ್ಸನ ಸಮಿತಿಯು ಸಮಾಜಿಕ ಕಾರ್ಯಗಳ ಮಾಡಲು ಮುಂದಾದಗ ಹಣಕಾಸಿನ ಸಮಸ್ಯೆಗೆ ಒಳಗಾಗಿತ್ತು. ಈ ವೇಳೆ ಸಹ ಅನಂತ್ ಅಂಬಾನಿ ಹಣಕಾಸಿನ ನೆರವು ನೀಡಿ ಸಮಾಜಮುಖಿ ಕಾರ್ಯಕ್ಕೆ ನೆರವಾಗಿದ್ದರು. ಈ ಸಮಿತಿಯ ಜೊತೆ ಸೇರಿ ಅಂಬಾನಿ ತಮ್ಮ ರಿಲಯನ್ಸ್ ಫೌಂಡೇಶನ್ ಜೊತೆಗೆ 24 ಡಯಾಲಿಸಿಸ್ ಯಂತ್ರವನ್ನು ಸಹಾಯ ನಿಧಿಗಾಗಿ ದಾನ ಮಾಡಿದ್ದರು. ಹೀಗಾಗಿ ಅನಂತ್ ಅಂಬಾನಿಯನ್ನು ಲಾಲ್‌ಬಾಗ್ಚಾ ರಾಜಾ ಗಣೇಶೋತ್ಸವ ಸಮಿತಿಯು ಕಾರ್ಯಕಾರಿ ಸಲಹೆಗಾರರನ್ನಾಗಿ ಮಾಡಿಕೊಂಡಿದೆ.
ಲಾಲ್‌ಬೌಚಾ ರಾಜಾ ಅಥವಾ 'ಕಿಂಗ್ ಆಫ್ ಲಾಲ್‌ಬಾಗ್' ಮುಂಬೈ ಮಾತ್ರವಲ್ಲ ಇಡೀ ಭಾರತದಲ್ಲಿ ಹೆಸರು ಮಾಡಿರುವ ಗಣಪತಿಯಾಗಿದೆ. ಈ ಗಣೇಶನ ದರ್ಶನಕ್ಕೆಂದು ಲಕ್ಷ ಲಕ್ಷ ಮಂದಿ ಆಗಮಿಸುತ್ತಾರೆ. ಅತ್ಯಂತ ವಿಜೃಂಭನೆಯಿಂದ ಈ ಗಣೇಶೋತ್ಸವ ನಡೆಯುತ್ತದೆ. ಇನ್ನು ರಾಜಬೀದಿ ಉತ್ಸವದಲ್ಲಿ ಲಕ್ಷ ಲಕ್ಷ ಮಂದಿ ಸೇರುವುದು ಒಂದು ದಾಖಲೆಯಾಗಿದೆ.
ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುವ ಗಣಪತಿ ಹಬ್ಬವು ಮಹಾರಾಷ್ಟ್ರದಲ್ಲಿ ಪ್ರಮುಖ ಆಚರಣೆಯಾಗಿದೆ. 11ನೇ ದಿನ ಮುಂಬೈನ ಪ್ರಮುಖ ಬೀದಿಯಲ್ಲಿ ಲಾಲಾಬಾಗ್ ಗಣೇಶನ ಮೆರವಣಿಗೆ ಸಾಗುತ್ತದೆ. ಈ ವೇಳೆ ಲಕ್ಷ ಲಕ್ಷ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಸೇರುತ್ತಾರೆ. ಮೆರವಣಿಗೆಯ ಉದ್ದಕ್ಕೂ ಸಾಂಸ್ಕೃತಿಕ ತಂಡಗಳು, ಕಲಾ ತಂಡಗಳು, ಭವ್ಯ ಸಂಗೀತ ನಡೆಯುತ್ತದೆ. ಬಳಿಕ ನಿಮಜ್ಜನ ಮಾಡಲಾಗುತ್ತದೆ.
ಇತ್ತೀಚಿಗೆ ವಿವಾಹವಾದ ಅನಂತ್ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಅವರು ಈ ಗಣೇಶೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಈ ಬಾರಿ ಅವರು ತಮ್ಮ ಪತ್ನಿ ಜೊತೆಗೆ ಆಗಮಿಸಿ ಕಿಂಗ್ ಆಫ್ ಲಾಲಾಬಾಗ್ ಗಣಪನ ದರ್ಶನ ಪಡೆಯುವ ಸಾಧ್ಯತೆ ಇದೆ.



Click it and Unblock the Notifications
