Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ಷಯ ತೃತೀಯ 2023: ಕಾಕತಾಳೀಯವೆಂಬಂತೆ ಈ ವರ್ಷ 6 ಶುಭ ಯೋಗ ಏರ್ಪಟ್ಟಿದೆ
ಅಕ್ಷಯ ತೃತೀಯವನ್ನು ಅತ್ಯಂತ ಶುಭ ದಿನವೆಂದು ಆಚರಿಸಲಾಗುವುದು. ಈ ದಿನ ಹೂಡಿಕೆಗೆ, ಚಿನ್ನ ಖರೀದಿಗೆ, ಶುಭ ಕಾರ್ಯಗಳಿಗೆ ಅತ್ಯಂಥ ಶುಭ ದಿನವೆಂದು ಪರಿಗಣಿಸಲಾಗುವುದು. ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುವುದು. ಈ ವರ್ಷ ಅಕ್ಷಯ ತೃತೀಯವನ್ನು ಏಪ್ರಿಲ್ 22ರಂದು ಆಚರಿಸಲಾಗುವುದು. ಅಕ್ಷಯ ತೃತೀಯ ಮುಹೂರ್ತವು ಏಪ್ರಿಲ್ 22 ರಂದು ಬೆಳಗ್ಗೆ 7.49 ಕ್ಕೆ ಪ್ರಾರಂಭವಾಗಿ ಏಪ್ರಿಲ್ 23 ರಂದು ಬೆಳಿಗ್ಗೆ 7.47 ಕ್ಕೆ ಕೊನೆಗೊಳ್ಳುತ್ತದೆ.

ಈ ದಿನ ನಾವು ಚಿನ್ನವನ್ನು ಖರೀದಿಸುವುದರಿಂದ ನಮ್ಮಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬುವುದು ನಂಬಿಕೆ. ಚಿನ್ನವನ್ನು ಲಕ್ಷ್ಮಿಯ ಆಭರಣ ಎಂದು ಪರಿಗಣಿಸಲಾಗುವುದು, ಈ ದಿನವನ್ನು ಚಿನ್ನವನ್ನು ಮನೆಗೆ ತಂದರೆ ಲಕ್ಷ್ಮಿ ಮನೆನೆ ಬರುವುದು ಎಂಬ ನಂಬಿಕೆ. ಈ ಕಾರಣಕ್ಕೆ ಅಕ್ಷಯ ತೃತೀಯದ ದಿನದಂದು ಜನರು ಚಿನ್ನವನ್ನು ಖರೀದಿ ಮಾಡುತ್ತಾರೆ. ಈ ರೀತಿ ಖರೀದಿಸುವುದರಿಂದ ವ್ಯಕ್ತಿಯ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಎಂದಿಗೂ ಇರುವುದಿಲ್ಲ. ಈ ಕಾರಣಕ್ಕೆ ಈ ದಿನಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ.
ಅಕ್ಷಯ ತೃತೀಯ ದಿನದ ಪೂಜಾ ವಿಧಿ
* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಬೇಕು.
* ಸ್ನಾನದ ನಂತರ ಹಳದಿ ಬಟ್ಟೆಗಳನ್ನು ಧರಿಸಿ. ಪೂಜಾ ಶುಭ ಕಾರ್ಯಕ್ಕೆ ತುಂಬಾನೇ ಶುಭ ಎಂದು ಪರಿಗಣಿಸಲಾಗಿರುವುದರಿಂದ ಪೂಜೆಗೆ ಕೂರುವಾಗ ಹಳದಿ ಬಣ್ಣದ ಬಟ್ಟೆ ಧರಿಸಿ.
* ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವನ್ನು ಪೂಜಿಸಿ. ನಂತರ ವಿಷ್ಣು ಸಹಸ್ರನಾಮ ಪಠಿಸಿ. ಈ ದಿನ ಸಹಸ್ರನಾಮ ಪಠಿಸುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ಅಕ್ಷಯ ತೃತೀಯದಂದು ದಾನ-ಧರ್ಮದ ಮಹತ್ವ
* ಅಕ್ಷಯ ತೃತೀಯ ದಿನದಂದು ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ದಾನ ಮಾಡುವುದರಿಂದ ಆರ್ಥಿಕ ಸಂಕಷ್ಟಗಳು ದೂರಾಗಲಿದೆ.
* ಈ ದಿನ ನಿರ್ಗತಿಕರಿಗೆ ಆಹಾರ, ವಸ್ತ್ರವನ್ನು ದಾನ ಮಾಡಿ.
* ಈ ದಿನ ಬ್ರಾಹ್ಮಣರಿಗೆ ಆಹಾರ, ವಸ್ತ್ರವನ್ನು ದಾನ ಮಾಡಿ.
* ಅಕ್ಷಯ ತೃತೀಯ ದಿನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಮಾಡಿಸಿ.
ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ ಈ ದಿನದಂದು ಮಾಡಿದ ದಾನಗಳು ವ್ಯಕ್ತಿಯ ಜೀವನದಲ್ಲಿ ಸಮೃದ್ಧಿಯನ್ನು ತರುತ್ತವೆ ಎಂದು ಹೇಳಲಾಗುವುದು.
ಈ ವರ್ಷ ಅಕ್ಷಯ ತೃತೀಯದಂದು 6 ಶುಭಯೋಗ ಏರ್ಪಟ್ಟಿದೆ
ಈ ವರ್ಷ ಅಕ್ಷಯ ತೃತೀಯದ 6 ಶುಭ ಯೋಗಗಳ ಕಾಕತಾಳೀಯವಾಗಿ ಬಂದಿದೆ
* ತ್ರಿಪುಷ್ಕರ ಯೋಗವು 05:49 AM ಕ್ಕೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 07:49 AM ವರೆಗೆ ಮುಂದುವರಿಯುತ್ತದೆ.
* ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವು ರಾತ್ರಿ 11:24 ಕ್ಕೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 05:48 ರವರೆಗೆ ಇರುತ್ತದೆ.
* ರವಿ ಯೋಗವು ರಾತ್ರಿ 11:24 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಿಗ್ಗೆ 05:48 ರವರೆಗೆ ಮುಂದುವರೆಗೆ ಇರಲಿದೆ
* ಆಯುಷ್ಮಾನ್ ಯೋಗವು ಸೂರ್ಯೋದಯಕ್ಕೆ ಮುಂಚೆಯೇ ಪ್ರಾರಂಭವಾಗಿ ಬೆಳಗ್ಗೆ 9.26 ರವರೆಗೆ ಇರಲಿದೆ
* ಆಯುಷ್ಮಾನ್ ಯೋಗದ ನಂತರ ಸೌಭಾಗ್ಯ ಯೋಗವು ತಕ್ಷಣವೇ ಪ್ರಾರಂಭವಾಗುತ್ತದೆ. ಈ ಯೋಗದ ಪರಿಣಾಮ ಇಡೀ ರಾತ್ರಿ ಇರಲಿದೆ.
ಹೂಡಿಕೆ, ಚಿನ್ನ ಖರೀದಿ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳಿಗೆ ಈ ಯೋಗ ಅತ್ಯಂತ ಶ್ರೇಷ್ಠವಾಗಿದೆ.
ಅಕ್ಷಯ ತೃತೀಯ ಧಾರ್ಮಿಕ ಮಹತ್ವ
* ಈ ದಿನ ಪರುಶುರಾಮ ಜಯಂತಿಯನ್ನು ಆಚರಿಸಲಾಗುವುದು.
* ಈ ದಿನ ತ್ರೇತಾಯುಗ ಪ್ರಾರಂಭವಾಯಿತು
* ವೇದವ್ಯಾಸರು ಈ ದಿನದಂದು ಮಹಾಭಾರತ ಬರೆಯಲು ಪ್ರಾರಂಭಿಸಿದರು.
* ಪುರಿ ಜಗ್ನನಾಥ ರಥ ಯಾತ್ರೆ ಪ್ರಾರಂಭ.



Click it and Unblock the Notifications
