Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಶ್ರಾವಣದಲ್ಲಿ ಅಜಾ ಏಕಾದಶಿ: ಈ ಏಕಾದಶಿಯ ಮಹತ್ವವೇನು? ಯಾವಾಗ ಆಚರಿಸಲಾಗುವುದು?
ಶ್ರಾವಣ ಮಾಸದ ಕೊನೆಯ ಏಕಾದಶಿ ಅಜಾ ಏಕಾದಶಿ. ವರ್ಷದಲ್ಲಿ ಒಟ್ಟು 24 ಏಕಾದಶಿಗಳಿವೆ, ಅದರಲ್ಲೊಂದು ಅಜಾ ಏಕಾದಶಿ. ಈ ಏಕಾದಶಿಯನ್ನು ಸೆಪ್ಟೆಂಬರ್ 10ರಂದು ಆಚರಿಸಲಾಗುವುದು. ಈ ವರ್ಷದ ಅಜಾ ಏಕಾದಶಿಯಂದು ಎರಡು ವಿಶೇಷ ಕಾಕತಾಳೀಯಗಳು ಕೂಡ ಸಂಭವಿಸಲಿದೆ. ಈ ಅಜಾ ಏಕಾದಶಿಯ ಮಹತ್ವವೇನು? ಪೂಜೆಗೆ ಶುಭ ಮುಹೂರ್ತ ಯಾವಾಗ?ಪೂಜಾ ವಿಧಿಗಳೇನು ಎಂದು ನೋಡೋಣ:

ಡ್ರಿಕ್ ಪಂಚಾಂಗ ಪ್ರಕಾರ ಅಜಾ ಏಕಾದಶಿ ಶುಭ ಮುಹೂರ್ತ
ಏಕಾದಶಿ ತಿಥಿ ಪ್ರಾರಂಭ: ಸೆಪ್ಟೆಂಬರ್ 09 ಸಂಜೆ 07:17ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಸೆಪ್ಟೆಂಬರ್ 10 ರಾತ್ರಿ 09:28ಕ್ಕೆ
ಪಾರಣ ಸಮಯ: ಸೆಪ್ಟೆಂಬರ್ 11 ಬೆಳಗ್ಗೆ 06:08ರಿಂದ 08:36ರವರೆಗೆ
ಏಕಾದಶಿಯಂದು 2 ವಿಶೇಷ ಯೋಗಗಳು ಏರ್ಪಡಲಿದೆ
ಈ ವರ್ಷ ಅಜ ಏಕಾದಶಿಯಂದು ಎರಡು ಶುಭ ಕಾಕತಾಳೀಯಗಳು ಸಂಭವಿಸಲಿದೆ.
ಮೊದಲನೆಯದು ರವಿ ಪುಷ್ಯ ಯೋಗ
ಎರಡನೆಯದು ಸರ್ವಾರ್ಥಸಿದ್ಧಿ ಯೋಗ.
ರವಿ ಪುಷ್ಯ ಯೋಗ: ಸಂಜೆ 05:06 ನಿಮಿಷದಿಂದ ಮರುದಿನ ಬೆಳಗ್ಗೆ 06:0 4 ನಿಮಿಷದವರೆಗೆ ಇರಲಿದೆ
ಸರ್ವಾರ್ಥ ಸಿದ್ಧಿ ಯೋಗ: ಸೆಪ್ಟೆಂಬರ್ 11 ರಂದು ಸಂಜೆ 05:06 ರಿಂದ ಬೆಳಗ್ಗೆ 06:04 ರವರೆಗೆ ಇರಲಿದೆ.
ಅಜಾ ಏಕಾದಶಿ ಉಪವಾಸದ ಮಹತ್ವವೇನು?
ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಈ ಅಜಾ ಏಕಾದಶಿಯ ವಿಶೇಷವೆಂದರೆ ಇದನ್ನು ಮಾಡುವುದರಿಂದ ಭೂತ-ಪ್ರೇತ ಭಯದಿಂದ ಮುಕ್ತರಾಗುತ್ತಾರೆ. ಅಲ್ಲದೆ ಏಕಾದಶಿ ಆಚರಣೆ ಮಾಡುವುದರಿಂದ ಮೋಕ್ಷ ಪ್ರಾಪ್ತಿ ಸಿಗಲಿದೆ. ಯಾರು ಅಜಾ ಏಕಾದಶಿಯನ್ನು ಆಚರಿಸುತ್ತಾರೋ ಅವರು ಅಶ್ವಮೇಧ ಯಾಗ ಮಾಡಿದಷ್ಟು ಪುಣ್ಯ ಪಡೆಯುತ್ತಾರೆ ಎಂದು ಹೇಳಲಾಗುವುದು.
ಅಜ ಏಕಾದಶಿ ಪೂಜಾ ವಿಧಾನ
* ಈ ದಿನ ಸೂರ್ಯೋದಯಕ್ಕೆ ಮುನ್ನ ಎದ್ದೇಳಬೇಕು.
* ನಂತರ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಹಳದಿ ಬಣ್ಣದ ವಸ್ತ್ರ ಧರಿಸುವುದು ಒಳ್ಳೆಯದು
* ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ವಿಷ್ಣುವಿನ ವಿಗ್ರಹವನ್ನು ಸ್ಥಾಪಿಸಿ.
* ನಂತರ ಸಂಕಲ್ಪ ತೆಗೆದುಕೊಳ್ಳಿ.
* ಹೂವು, ತೆಂಗಿನಕಾಯಿ, ವೀಳ್ಯದೆಲೆ, ಹಣ್ಣುಗಳು, ಲವಂಗ, ಅಗರಬತ್ತಿ, ತುಪ್ಪ, ಪಂಚಾಮೃತ , ಎಣ್ಣೆ ದೀಪ, ತುಳಸಿ, ಬೇಳೆಕಾಳುಗಳು, ಶ್ರೀಗಂಧ ಮುಂತಾದ ಕೆಲವು ಪೂಜಾ ಸಾಮಗ್ರಿಗಳನ್ನು ಜೋಡಿಸಿ ಪೂಜೆ ಆರಂಭಿಸಿ
* ಶ್ರೀ ವಿಷ್ಣುವಿನ ಮಂತ್ರ ಹೇಳಿ. ಶ್ರೀ ವಿಷ್ಣುವಿಗೆ ನೈವೇದ್ಯ ಅರ್ಪಿಸಿ, ನಂತರ ಆರತಿ ಮಾಡಿ.
ಅಜಾ ಏಕಾದಶಿಯ ಕತೆಯನ್ನು ಕೇಳಿ ಅಥವಾ ಓದಿ
ಅಜಾ ಏಕದಶಿ ವ್ರತ ಕತೆ
ಯುಧಿಷ್ಠರನು ಕೃಷಣನ ಬಳಿ ಅಜಾ ಏಕಾದಶಿಯ ಮಹತ್ವದ ಕುರಿತು ಹೇಳುವಂತೆ ಹೇಳುತ್ತಾನೆ, ಆವಾಗ ಶ್ರೀಕೃಷ್ಣ ಈ ವ್ರತ ಮಹತ್ವವನ್ನು ಈ ಕತೆಯ ಮೂಲಕ ಹೇಳುತ್ತಾನೆ. ಸತ್ಯಯುಗದಲ್ಲಿದೇವತೆಗಳು ರಾಜ ಹರಿಶ್ಚಂದ್ರನನ್ನು ಪರೀಕ್ಷೆಗೆ ಒಳಪಡಿಸುತ್ತಾರೆ, ಆವಾಗ ಹರಿಶ್ಚಂದ್ರ ಮಿಶ್ವಾಮಿತ್ರ ಋಷಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಹರಿಶ್ಚಂದ್ರನು ತನ್ನೆಲ್ಲಾ ರಾಜ್ಯವನ್ನು ಜೊತೆಗೆ ತನ್ನ ಹೆಂಡತಿ ಮತ್ತು ಮಗನನ್ನು ಕೂಡ ದಾನವಾಗಿ ನೀಡಿ, ಚಂಡಾಲನ ಸೇವಕನಾಗಿ ಕೆಲಸಕ್ಕೆ ಸೇರುತ್ತಾನೆ, ಆದರೂ ಹರಿಶ್ಚಂದ್ರ ತನ್ನ ಧರ್ಮ ನಿಷ್ಠೆ ಮರೆಯಲಿಲ್ಲ. ಒಮ್ಮೆ ಋಷಿಗಳು ಹರಿಶ್ಚಂದ್ರನ ಬಳಿ ಅಜಾ ಏಕಾದಶಿ ಆಚರಿಸುವಂತೆ ಹೇಳುತ್ತಾನೆ. ಅದರಂತೆ ಅಜಾ ಏಕಾದಶಿ ವ್ರತವನ್ನು ಪಾಲಿಸಿದ್ದ.
ಹೀಗಿರುವಾಗ ಹರಿಶ್ಚಂದ್ರನ ಪತ್ನಿ ತನ್ನ ಸತ್ತ ಮಗನ ಶವವನ್ನು ಎತ್ತಿಕೊಂಡು ಅಳುತ್ತಾ ಸ್ಮಶಾನದ ಕಡೆ ಬರುವುದನ್ನು ನೋಡುತ್ತಾನೆ. ರಾಜನು ತನ್ನ ಮಗನ ಅಂತ್ಯಕ್ರಿಯೆ ಮಾಡಲು ತನ್ನ ಹೆಂಡತಿಯಿಂದ ಹಣ ಕೇಳುತ್ತಾನೆ ಏಕೆಂದರೆ ಯಾರು ಅಂತಿಮ ವಿಧಿ ಪೂರೈಸಲು ಬರುತ್ತಾರೋ ಅವರು ಹಣಪಾವತಿ ಮಾಡಬೇಕು ಎಂದು ಚಾಂಡಾಲ ಹೇಳಿದ್ದನು. ಆದರೆ ಹರಿಶ್ಚಂದ್ರನ ಪತ್ನಿ ಬಳಿ ಹಣ ಇರಲಿಲ್ಲ, ಆದ್ದರಿಂದ ಅವಳು ಸೀರೆಯ ತುಂಡನ್ನು ಹರಿದು ಕೊಟ್ಟಳು. ರಾಜನ ಸತ್ಯವನ್ನು ನೋಡಿ, ಭಗವಂತನು ತುಂಬಾ ಸಂತೋಷಪಟ್ಟನು, ಅವನ ಮಗನಿಗೆ ಪುನರ್ಜನ್ಮ ನೀಡಿದನು ಮತ್ತು ಇಡೀ ರಾಜಮನೆತನದ ಸಂಪತ್ತನ್ನು ಹಿಂದಿರುಗಿಸಿದನು. ಹೀಗೆ ಅಜಾ ಏಕಾದಶಿಯ ಉಪವಾಸವನ್ನು ಆಚರಿಸುವುದರಿಂದ ರಾಜ ಹರಿಶ್ಚಂದ್ರನ ಎಲ್ಲಾ ದುಃಖಗಳು ಕೊನೆಗೊಂಡವು.
ಅದರಂತೆ ಯಾರು ಭಕ್ತಿಯಿಂದ ಅಜಾ ಏಕಾದಶಿ ವ್ರತವನ್ನು ಮಾಡುತ್ತಾರೋ ಅವರ ಎಲ್ಲಾ ಕಷ್ಟಗಳು ಕೊನೆಯಾಗುವುದು ಎಂಬ ನಂಬಿಕೆಯಿದೆ.



Click it and Unblock the Notifications