Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಅಭಿಮಾನಿ ಪುತ್ರನ ದತ್ತು ಪಡೆದ ನಟ..! ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಮಹೇಶ್ ಬಾಬು..!
ನಟರು ಅಂದ್ರೆ ಬರಿ ಸಿನಿಮಾ ಮಾಡೋದು ಹಣ ಮಾಡೋದು ಅಲ್ಲ. ಜೊತೆಗೆ ಒಂದಿಷ್ಟು ಒಳ್ಳೆಯ ಕೆಲಸವನ್ನು ಅವರು ಮಾಡುತ್ತಾರೆ. ಅಲ್ಲದೆ ಕೋಟಿ ಕೋಟಿ ಅಭಿಮಾನಿಗಳ ಹೊಂದಿರುತ್ತಾರೆ. ಭಾರತದಲ್ಲಂತು ಸಿನಿಮಾ ನಾಯಕರಿಗೆ ದೇವಾಲಯವನ್ನೇ ಕಟ್ಟುತ್ತಾರೆ. ನಾಯಕರು ಸಹ ಅವರಿಗೆ ಅಷ್ಟೇ ಪ್ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಅಭಿಮಾನಿಗಳ ಕಷ್ಟಕ್ಕೆ ಮಿಡಿಯುತ್ತಾರೆ.
ಈಗ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ತಮ್ಮ ಅಭಿಮಾನಿಯೊಬ್ಬರ ಕಷ್ಟಕ್ಕೆ ಮಿಡಿದಿದ್ದಾರೆ. ಹಲವು ಸಮಾಜಮುಖಿ ಕಾರ್ಯಗಳಿಂದಲೇ ಮನೆ ಮಾತಾಗಿರುವ ಅವರು ಈಗ ಅಭಿಮಾನಿಯೊಬ್ಬರ ಬೆನ್ನಿಗೆ ನಿಂತಿದ್ದಾರೆ. ಆಪತ್ತಿನಲ್ಲಿದ್ದವರಿಗೆ ಸಹಾಯ ಮಾಡುವುದರಲ್ಲಿ ಮಹೇಶ್ ಬಾಬು ಮುಂದಿದ್ದಾರೆ.

ಸಹಾಯ ಎಂದು ಕೇಳಿಕೊಂಡು ಬರುವವರಿಗೆ ಯಾವಾಗಲು ಸ್ಪಂಧಿಸುತ್ತಾರೆ. ಈ ಮೊದಲು ಮಹೇಶ್ ಬಾಬು ಹಲವು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಮರುಜನ್ಮ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಹೃದ್ರೋಗದಿಂದ ಬಳಲುತ್ತಿದ್ದ ನೂರಾರು ಮಕ್ಕಳಿಗೆ ಸಹಾಯ ಮಾಡಿ ಹೊಸ ಬದುಕನ್ನು ಕಟ್ಟಿ ಕೊಟ್ಟಿದ್ದರು.
ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಮಹೇಶ್ ಬಾಬು ರಿಯಲ್ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದಾರೆ. ಇವರ ಹೆಸರಿನಲ್ಲಿ ಮಹೇಶ್ ಬಾಬು ಫೌಂಡೇಶನ್ ಎಂಬ ದತ್ತಿ ಸಂಸ್ಥೆಯನ್ನು ಸ್ಥಾಪಿಸಿ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಅಭಿಮಾನಿಗಳಿಗೂ ಬೆಂಬಲ ನೀಡುತ್ತಿದ್ದಾರೆ. ಇತ್ತೀಚೆಗೆ, ಮಹೇಶ್ ಬಾಬು ತಮ್ಮ ನಾಯಕನಿಗೆ ಜೀವನದಲ್ಲಿ ಮರೆಯಲಾಗದ ಸಹಾಯ ಹಸ್ತ ನೀಡಿದ ಕೆಲಸ ಮಾಡಿದ್ದಾರೆ.
ಸಾವಿನಂಚಿನಲ್ಲಿರುವ ತಮ್ಮ ಅಭಿಮಾನಿಯೊಬ್ಬರ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿರುವುದಲ್ಲದೆ ಪುತ್ರನ ದತ್ತು ಪಡೆದಿದ್ದಾರೆ. ಆಂಧ್ರಪ್ರದೇಶದ ಮೋಪಿದೇವಿ ಮತ್ತು ಪೆದಪ್ರೋಲು ಮೂಲದ ಕಾಕರ್ಲಮುಡಿ ರಾಜೇಶ್ ಎಂಬ ವ್ಯಕ್ತಿ ಕೃಷ್ಣ ನಟ ಮಹೇಶ್ ಬಾಬು ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ರಾಜೇಶ್ ತಮ್ಮ ಮೂವರು ಪುತ್ರರಿಗೆ ಮಹೇಶ್ ಬಾಬು ಸಿನಿಮಾಗಳ ಹೆಸರನ್ನೇ ಇಟ್ಟಿದ್ದಾರೆ.
ಅವರ ಮಕ್ಕಳು ಹುಟ್ಟಿದಾಗ.. ಮಹೇಶ್ ಬಾಬು ಅವರ ಸಿನಿಮಾಗಳು ಬಿಡುಗಡೆಯಾದವು. ಅವರ ಹೆಸರನ್ನೇ ತಮ್ಮ ಮಗನಿಗೆ ಇಟ್ಟರು. ಆದ್ದರಿಂದ ಮಹೇಶ್ ತನ್ನ ಮೊದಲ ಮಗನಿಗೆ ಅರ್ಜುನ್, ಎರಡನೇ ಮಗನಿಗೆ ಅತಿಥಿ ಮತ್ತು ಮೂರನೇ ಮಗನಿಗೆ ಆಗಡು ಎಂದು ಹೆಸರಿಟ್ಟಿದ್ದಾರೆ.
ಈ ನಡುವೆ ರಾಜೇಶ್ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದರು. ತಂದೆ ಆಸ್ಪತ್ರೆ ಸೇರಿದ್ದರಿಂದ ಮಕ್ಕಳು ಓದು ನಿಲ್ಲಿಸಿದರು. ಜೊತೆಗೆ ಹಿರಿಯ ಮಗ ಕೆಲಸಕ್ಕೆ ಸೇರಿಕೊಂಡ, ಚಪ್ಪಲಿ ಅಂಗಡಿಯಲ್ಲಿ ದುಡಿದು ಮನೆ ನೋಡಿಕೊಳ್ಳುತ್ತಿದ್ದಾನೆ. ಈ ಪರಿಸ್ಥಿತಿ ನಟ ಮಹೇಶ್ ಬಾಬುಗೆ ತಿಳಿದುಬಂದಿದೆ. ತಕ್ಷಣ ಅವರು ಈ ಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡಿದ್ದಾರೆ.
ಈ ಸುದ್ದಿ ತಿಳಿದ ಮಹೇಶ್ ಬಾಬು ತಕ್ಷಣ ಪ್ರತಿಕ್ರಿಯಿಸಿದ್ದಾರೆ. ಅವರ ಮನೆಗೆ ತಮ್ಮ ತಂಡವನ್ನು ಕಳುಹಿಸಿ ರಾಜೇಶ್ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರ ಜೊತೆಯೂ ಮಾತುಕತೆ ನಡೆಸಿ ಅವರ ಶುಲ್ಕ ಪಾವತಿಗೆ ಮುಂದಾದರು. ಇಡೀ ಕುಟುಂವನ್ನು ದತ್ತು ಪಡೆಯುವುದಾಗಿ ಹೇಳಿದರು. ಮೂವರ ಮಕ್ಕಳ ಶೈಕ್ಷಣಿಕ ವೆಚ್ಚು ಭರಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅವರ ಈ ಕಾರ್ಯಕ್ಕೆ ಎಲ್ಲೆಡೆ ಈಗ ಮೆಚ್ಚುಗೆ ಕೇಳಿಬರುತ್ತಿದೆ. ಇಂತಹ ಕಾರ್ಯಗಳ ಮಾಡುವ ಮೂಲಕ ನೂರಾರು ಕುಟುಂಬಗಳಿಗೆ ಜೀವದಾನ ಮಾಡುವ ಪುಣ್ಯದ ಕೆಲಸದಲ್ಲಿ ತೊಡಗಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.



Click it and Unblock the Notifications

