Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ದೇವರ ವಿಗ್ರಹ ಕದ್ದ ಕಳ್ಳ ಪಡಬಾರದ ಕಷ್ಟ ಬಂದು ಏಳೇ ದಿನಕ್ಕೆ ವಿಗ್ರಹ ಹಿಂತಿರುಗಿಸಿದ್ದಾನೆ, ಆತ ಬರೆದ ಪತ್ರದಲ್ಲಿ ಏನಿದೆ?
ದೇವರ ವಿಗ್ರಹ ಕದ್ದ ಕಳ್ಳನೊಬ್ಬ ಕ್ಷಮಾಪಣಾ ಪತ್ರದೊಂದಿಗೆ ವಿಗ್ರಹವನ್ನು ಮರಳಿ ತಂದು ಇಟ್ಟು ಹೋಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಅಕ್ಟೋಬರ್ 1ಕ್ಕೆ ನಡೆದಿದ್ದು ದೇವರ ಶಕ್ತಿಯನ್ನು ಜನರು ಕೊಂಡಾಡುತ್ತಿದ್ದಾರೆ, ದೇವರ ವಿಷಯಕ್ಕೆ ಬಂದರೆ ದೇವರು ಸುಮ್ಮನೆ ಬಿಡುತ್ತಾರಾ? ಇನ್ನಾದರು ದೇವರ ವಿಷಯಕ್ಕೆ ಬರುವವರು ಯೋಚನೆ ಮಾಡ್ತಾರೆ ಎಂದು ಭಕ್ತಾಧಿಗಳು ಮಾತನಾಡುತ್ತಿದ್ದಾರೆ.

ಇದೀಗ ದೇವಾಯಲಯಕ್ಕೆ ಮರಳಿ ಸೇರಿದ ಆ ವಿಗ್ರಹವನ್ನು ಶುದ್ಧ ಮಾಡಿ ಶಾಸ್ತ್ರೋಕ್ತವಾಗಿ ಪೂಜಿಸಿ ನಂತರ ಪ್ರತಿಷ್ಟಾಪನೆ ಮಾಡಲಾಗಿದೆ. ಹೀಗೆ ಆ ಶಕ್ತಿಸಾಲಿ ವಿಗ್ರಹ ಮರಳಿ ದೇವಾಲಯದಲ್ಲಿ ಪ್ರತಿಷ್ಟಾಪನೆಯಾಗಿದ್ದು ಭಕ್ತರಿಗೆ ಇದ್ದ ನಂಬಿಕೆ ಮತ್ತಷ್ಟು ಬಲವಾಗಿದೆ.
ಅಲ್ಲಿಯ ಅರ್ಚಕರು ಕಳ್ಳನು ಸೆಣಬಿನ ಚೀಲದಲ್ಲಿ ತುಂಬಿ ಆಶ್ರಮದ ಒಳಕ್ಕೆ ಬರುವ ದಾರಿಯಲ್ಲಿ ಇಟ್ಟು ಹೋಗಿದ್ದ, ಜನರು ಅಕ್ಟೋಬರ್ 1ರಂದು ಸುಮಶಾರು 11:30ಕ್ಕೆ ಒಂದು ಚೀಲ ಗಮನಿಸಿ ಅದರಲ್ಲಿ ಏನಿದೆ ಎಂದು ನೋಡಿದಾಗ ಕಳೆದು ಹೋದ ವಿಗ್ರಹ ಜೊತೆಗೆ ಒಂದು ಪತ್ರ ಸಿಕ್ಕಿದೆ.
ಸುಮಾರು 100 ವರ್ಷಕ್ಕೂ ಹಳೆಯ ಕೃಷ್ಣ ರಾಧೆಯ ಮೂರ್ತಿಯದು
ಈ ವಿಗ್ರಹವನ್ನು ಚಿನ್ನ, ಬೆಳ್ಳಿ, ತಾಮ್ರ, ಪಾದರಸ, ಕಂಚು, ಟಿನ್, ಕಬ್ಬಿಣ. ಸೀಸ ಬಳಸಿ ಈ ವಿಗ್ರಹ ತಯಾರಿಸಲಾಗಿದೆ. ಈ ವಿಗ್ರಹ ಸೆಪ್ಟೆಂಬರ್ 23ಕ್ಕೆ ಕಾಣೆಯಾಗಿತ್ತು, ವಿಗ್ರಹ ಕಳ್ಳತನವಾಗಿದ್ದಾಗ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೂಡ ಮಾಡಲಾಗಿತ್ತು, ಆದರೂ ಈ ವಿಗ್ರಹವನ್ನು ಯಾರು ಕದ್ದು ತಂದರು ಎಂಬುವುದು ಗೊತ್ತಿರಲಿಲ್ಲ. ಆದರೆ ದೇವರ ಶಕ್ತಿಯಿಂದಾಗಿ ಆ ವಿಗ್ರಹ ಮರಳಿ ಬಂದಿದೆ.
ಕಳ್ಳನಿಗೆ ಆ ವಿಗ್ರಹವನ್ನು ಹಿಂತಿರುಗಿಸುವ ಪರಿಸ್ಥಿತಿ ಏಕಾಯ್ತು? ಆ ಪತ್ರದಲ್ಲಿ ಏನಿದೆ?
ಈ ವಿಗ್ರಹವನ್ನು ಯಾರು ಕದ್ದಿದ್ದು ಎಂಬುವುದು ಗೊತ್ತಾಗಿಲ್ಲ, ಚಾಣಾಕ್ಷಾದಿಂದ ಕದ್ದ ಕಳ್ಳ ಅಷ್ಟೇ ಬುದ್ಧಿವಂತಿಕೆ ತೋರಿ ವಿಗ್ರಹ ಒಟ್ಟು ಹೋಗಿದ್ದಾನೆ, ಯಾರ ಕೈಗೂ ಸಿಕ್ಕಿ ಬಿದ್ದಿಲ್ಲ, ಅದರೆ ಆತ ಪತ್ರದಲ್ಲಿ "ನಾನು ತುಂಬಾ ದೊಡ್ಡ ತಪ್ಪು ಮಾಡಿದೆ. ಈ ವಿಗ್ರಹ ಕದ್ದ ಮೇಲೆ ತುಂಬಾ ಕೆಟ್ಟ ಕನಸು ಬೀಳ್ತಾ ಇತ್ತು, ನಿದ್ದೆ ಮಾಡಲು, ತಿನ್ನಲು ಸಾಧ್ಯವಾಗ್ತಾ ಇರಲಿಲ್ಲ, ಯಾವಾಗ ಆ ವಿಗ್ರಹ ಕದ್ದೆನೋ ನನ್ನ ನೆಮ್ಮದಿ ಸಂಪೂರ್ಣವಾಗಿ ಹಾಳಾಯ್ತು. ನನ್ನ ಮಗ ಹಾಗೂ ಪತ್ನಿಗೆ ತುಂಬಾನೇ ಅನಾರೋಗ್ಯ ಕಾಡಿತು. ಅಲ್ಪ ಹಣಕ್ಕಾಗಿ ತುಂಬಾನೇ ದೊಡ್ಡ ತಪ್ಪು ಮಾಡ್ಬಿಟ್ಟೆ, ನಾನು ಇದನ್ನು ಮಾರಾಟ ಮಾಡುವುದಕ್ಕೆ ಕದ್ದೆ, ಆದರೆ ಇದು ಕದ್ದ ಮೇಲಿಂದ ಒಂದು ದಿನವೂ ನಿದ್ದೆ ಮಾಡಲು ಸಾಧ್ಯವಾಗಿಲ್ಲ, ನನ್ನ ತಪ್ಪಿಗೆ ಕ್ಷಮಿಸಿ, ಈ ವಿಗ್ರಹವನ್ನು ಇಲ್ಲೇ ಬಿಟ್ಟು ಹೋಗ್ತಾ ಇದ್ದೀನಿ, ಈ ವಿಗ್ರಹ ಸ್ವೀಕರಿಸಿ, ನಮ್ಮ ಮಕ್ಕಳನ್ನು ಕ್ಷಮಿಸಿ' ಎಂದು ಬರೆದಿದ್ದಾನೆ, ಈತನ ಪತ್ರ ಕೂಡ ವೈರಲ್ ಆಗಿದೆ.
ಹಣದ ಆಸೆ ಅಷ್ಟಧಾತುವಿನ ಈ ವಿಗ್ರಹ ಕದ್ದಿದ್ದ
ಈ ವಿಗ್ರಹ ಮಾರಿದರೆ ಹಣ ಸಿಗುತ್ತೆ ಅದರಿಂದ ನಾನು-ನನ್ನ ಮಕ್ಕಳು ಚೆನ್ನಾಗಿರಬಹುದೆಂದು ಕದ್ದು ಅದನ್ನು ಮಾರಾಟ ಮಾಡುವ ಸಲುವಾಗಿ ಚೆನ್ನಾಗಿ ಪಾಲಿಷ್ ಕೂಡ ಮಾಡಿದ್ದ, ಅದರೆ ಯಾವಾಗ ವಿಗ್ರಹ ಕದ್ದ ಆ ಕ್ಷಣದಿಂದ ಅವನು ಹೆಜ್ಜೆ ಹೆಜ್ಜೆಗೂ ತುಂಬಾ ಕಷ್ಟಪಟ್ಟ, ಸೆಪ್ಟೆಂಬರ್ 23ಕ್ಕೆ ಕದ್ದಿದ್ದು ಅಷ್ಟೇ, ಏಳು ದಿನಗಳಲ್ಲಿ ಅಂದರೆ ಅಕ್ಟೋಬರ್ 1ಕ್ಕೆ ಅವನ ಬದುಕಿನಲ್ಲಿ ಅಷ್ಟೊಂದು ಕಷ್ಟ ಬಂದಿದೆ ಹಾಗಾಗಿಯೇ ಆತ ವಿಗ್ರಹ ಮರಳಿಸಿದ್ದಾನೆ.
ಹಲವು ಕಡೆ ಇಂಥ ಪ್ರಕರಣಗಳು ನಡೆದಿವೆ. ಯಾರಾದರು ವಸ್ತು ಕಳ್ಳತನವಾದಾಗ ದೇವರಿಗೆ ಹರಿಕೆ ಹೊತ್ತ ಬಳಿಕ ಕದ್ದ ಕಳ್ಳ ಅದನ್ನು ಮರಳಿಸಿರುವ ಘಟನೆಗಳಿವೆ. ಇನ್ನು ನಿಮಗೆ ಮಂಗಳೂರಿನಲ್ಲಿ ನಡೆದ ಘಟನೆ ನೆನಪಿರಬಹುದು. ಸ್ವಾಮಿ ಕೊರಗಜ್ಜ ಕ್ಷೇತ್ರದ ಹುಂಡಿಯಲ್ಲಿ ಕಾಂಡೋಮ್ ಹಾಕಿ ಹೋದ ಅನ್ಯಕೋಮಿನ ಯುವಕರಿಬ್ಬರು ಬಂದು ತಪ್ಪೊಪ್ಪಿಗೆ ಮಾಡಿದ್ದರು, ಅವರು ಆ ರೀತಿ ಮಾಡಿದ ರಕ್ತ ವಾಂತಿ ಮಾಡಲಾರಂಭಿಸಿದರು, ಇನ್ನು ನಮಗೆ ಉಳಿಗಾಲವಿಲ್ಲ ಎಂದರ್ಥ ಅವರು ನಮ್ಮಿಂದ ತಪ್ಪಾಯ್ತು ಕೊರಗಜ್ಜ ನಮ್ಮನ್ನು ಕ್ಷಮಿಸಬೇಕು, ಇನ್ನೆಂದು ಬೇಡಲ್ಲ ಎಂದು ಅಷ್ಟು ಜನರ ಮುಂದೆ ಕ್ಷಮೆ ಕೋರಿದ್ದರು.
ಎಲ್ಲಾ ದೇವಾಲಯದಲ್ಲಿ ಶಕ್ತಿ ಎಂಬುವುದಿದೆ, ಆ ಶಕ್ತಿಗೆ ಅಪಮಾನ ಮಾಡಿದರೆ ಖಂಡಿತ ಅವರು ಅದಕ್ಕಿರುವ ಶಿಕ್ಷೆ ಅನುಭವಿಸುತ್ತಾರೆ.



Click it and Unblock the Notifications