Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ದಿಬ್ಬಣ ಹೊರಟ ಮದುಮಗನಿಗೆ ಹೃದಯಾಘಾತ: ಈ ದೃಶ್ಯ ಎಂಥವರನ್ನೂ ನಡುಗಿಸುತ್ತೆ!
ಅಯ್ಯೋ ಈಗೀನ ಹಾರ್ಟ್ ಅಟ್ಯಾಕ್ ವೀಡಿಯೋಗಳನ್ನು ನೋಡುವಾಗ ಭಯವಾಗುತ್ತಿದೆ, ಮೊದಲೆಲ್ಲಾ ಹಾರ್ಟ್ ಅಟ್ಯಾಕ್ ಆದರೆ ಗೋಲ್ಡನ್ ಅವರ್ ಒಳಗಡೆ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರೆ ಬದುಕುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದರು, ಆದರೆ ಇತ್ತೀಚೆಗೆ ಬಂದ ಎಷ್ಟೋ ವೀಡಿಯೋಗಳನ್ನು ನೋಡಿದಾಗ ಆ ಗೋಲ್ಡನ್ ಅವರ್ ಅಂತ ಏನು ಹೇಳ್ತಾರೆ ಅದಕ್ಕೂ ಸಮಯ ನೀಡದಂತೆ ಪ್ರಾಣಪಕ್ಷಿ ಹಾರಿ ಹೋಗ್ತಾ ಇದೆ, ಅಬ್ಬಾ ಅಂಥ ದೈಶ್ಯ ನೋಡಿದಾಗ ನಮ್ಮನ್ನು ಕಾಡುತ್ತೆ, ಅರೇ ಜೀವನ ಎಂದರೆ ಇಷ್ಟೇನಾ? ಎಂಬ ಆತಂಕ ಕೂಡ ಉಂಟು ಮಾಡುತ್ತೆ.

ಎದೆನೋವು, ಸುಸ್ತುಅಂತ ಏನೂ ಇರಲ್ಲ, ಕುಣಿದು ಕುಪ್ಪಳಿಸುತ್ತಾ ಇರುವಾಗಲೇ ಪಟ್ ಅಂತ ಪ್ರಾಣ ಹೋಗ್ತಾ ಇದೆ. ಮೊನ್ನೆಯಷ್ಟೇ ಸಂಬಂಧಿಕರ ಮದುವೆಯಲ್ಲಿ ನೃತ್ಯ ಮಾಡುತ್ತಿದ್ದ 20 ವರ್ಷದ ಹೆಣ್ಮಗಳು ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದಳು, ಅದರ ಬೆನ್ನಲ್ಲೇ ಅಂಥದ್ದೇ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ, ಆತ ಮದುಮಗ, ಕುದುರೆಯನ್ನೇರಿ ಖುಷಿ ಖುಷಿಯಿಂದ ಮದುವೆ ಮಂಟಪದ ಕಡೆಗೆ ಬರ್ತಾ ಇದ್ದಾರೆ, ಅಲ್ಲಿಯೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಇತ್ತೀಚೆಗೆ ತೀರಿ ಹೋದ ಆ ಹುಡುಗಿ ಆರೋಗ್ಯಕರ ಮೈಕಟ್ಟು ಹೊಂದಿದ್ದಳು, ಈ ಮದುಮಗ ಕೂಡ ಹೆಚ್ಚೇನು ದಪ್ಪವಿಲ್ಲ, ಕಟ್ಟು ಮಸ್ತಾದ ದೇಹ, ನೋಡಿದರೆ ಆರೋಗ್ಯವಂತ ನೋಡಿದರೆ ಮದುವೆ ದಿನವೇ ಪ್ರಥಮ ಚಿಕಿತ್ಸೆ ನೀಡಲು ಕೂಡ ಸಮಯವಿಲ್ಲದಂತೆ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇಂಥ ದೃಶ್ಯ ನೋಡುವಾಗ ಜನರಲ್ಲಿ ಆತಂಕ ಮೂಡಿಸಿದೆ.
ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ
ಮದುವೆಯ ಮೆರವಣಿಗೆ ನಡೆಯುತ್ತಿತ್ತು, ಅಲ್ಲಿ ಸಂಭ್ರಮ ಮನೆಮಾಡಿತ್ತು, ಮದುಮಗ ಕುದರೆಯನ್ನೇರಿ ಖುಷಿಯಿಂದ ಬರ್ತಾ ಇದ್ದ, ಅಲ್ಲಿ ಎಲ್ಲವೂ ಸರಿಯಿತ್ತು, ನೋಡ ನೋಡುತ್ತಿದ್ದಂತೆ ಕುದುರೆ ಮೇಲಿದ್ದ ಹುಡುಗ ಮುಂದೆಕ್ಕೆ ವಾಲುತ್ತಾನೆ, ಅಲ್ಲಿಯೇ ಇದ್ದವರು ಆತನನ್ನು ಬೀಳದಂತೆ ಹಿಡಿಯುತ್ತಾರೆ. ಆದರೆ ಅಲ್ಲಿಯೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆ ಮದುಮಗನಬ ಹೆಸರು ಪ್ರದೀಪ್ ಜಾತ್.
ಮದುವೆ ಮೆರವಣಿಗೆ ಹೋಗುತ್ತಿರುವಾಗೇ ಆತನಿಗೆ ಏನೋ ಅಸ್ವಸ್ಥತೆ ಅನಿಸಿತಂತೆ, ಅದಾಗಿ ಸ್ವಲ್ಪ ಹೊತ್ತಿನಲ್ಲಿ ಹೃದಯ ಸ್ತಂಭನವಾಗಿತ್ತು, ಆತ ಕುಸಿದು ಬಿದ್ದಾಗ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು, ಆದರೆ ವೈದ್ಯರು ಆತ ಮರಣವನ್ನಪ್ಪಿರುವುದಾಗಿ ತಿಳಿಸಿದರು, ಮದುವೆ ಮನೆ ಸಾವು ಮನೆಯಾಯ್ತು. ಆ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.
ಹುಡುಗನ ವಯಸ್ಸು ಬರಿ 23
ಮೊದಲೆಲ್ಲಾ ಹೃದಘಾತ 50 ವರ್ಷ ಮೇಲ್ಪಟ್ಟವರಿಗೆ ಕಂಡು ಬರ್ತಾ ಇತ್ತು, ಆದರೆ ಈಗ ತುಂಬಾ ಚಿಕ್ಕ ಪ್ರಾಯದವರಲ್ಲಿ ಕಂಡು ಬರುತ್ತಿದೆ, ಅದರಲ್ಲಿ ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪುತ್ತಿರುವ ಯುವಕ-ಯುವತಿಯರ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲವು ತಿಂಗಳಿನಿಂದ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿದೆ.
ಚಿಕ್ಕ ಪ್ರಾಯದಲ್ಲಿ ಹೃದಯಾಘಾತ ಉಂಟಾಗುತ್ತಿರುವುದಕ್ಕೆ ನಿಖರ ಕಾರಣ ಹೇಳಲು ಯಾವ ತಜ್ಞರಿಗೂ ಸಾಧ್ಯವಾಗಿಲ್ಲ, ಈ ಕಾರಣಗಳೂ ಹೌದು ಎಂದು ಹೇಳಲಾಗುತ್ತಿದೆ.
ಅತ್ಯಧಿಕ ಒತ್ತಡದ ಬದುಕು:
ಈಗ ಯುವಕ-ಯುವತಿಯರು ಅನೇಕ ಕಾರಣಗಳಿಂದಾಗಿ ಅತ್ಯಂತ ಒತ್ತಡದ ಬದುಕು ಬದುಕುತ್ತಿದ್ದಾರೆ, ಅತ್ಯಧಿಕ ಮಾನಸಿಕ ಒತ್ತಡ ಕೂಡ ಹೃದಯಾಘಾತ ಹೆಚ್ಚಾಗಲು ಕಾರಣವಾಗಿದೆ.
ಅನಾರೋಗ್ಯಕರ ಜೀವನಶೈಲಿ: ಅನಾರೋಗ್ಯಕರ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ, ವ್ಯಾಯಾಮ ಇಲ್ಲದಿರುವುದು, ನಿದ್ದೆ ಕಡಿಮೆ ಇವೆಲ್ಲಾ ಈ ಬಗೆಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಅತ್ಯಧಿಕ ರಕ್ತದೊತ್ತಡ
ಪರಿಸರ ಮಾಲಿನ್ಯ, ಅತ್ಯಧಿಕ ರಕ್ತದೊತ್ತಡ ಇವೆಲ್ಲಾ ರಕ್ತನಾಳಗಳಿಗೆ ಹಾನಿಯುಂಟು ಮಾಡುfತದೆ.
ಅತ್ಯಧಿಕ ಮದ್ಯ ಸೇವನೆ
ವಂಶವಾಹಿಯಾಗಿ ಕೂಡ ಬರುವುದು: ಈ ಹೃದಯ ಸ್ತಂಭನದಂಥ ಸಮಸ್ಯೆ ವಂಹಿವಾಇಯಾಗಿ ಬರುವುದು.
ಈ ಬಗೆಯ ಲಕ್ಷಣಗಳು ಕಂಡು ಬಂದರೆ ಒಂದು ಕ್ಷಣವೂ ನಿರ್ಲಕ್ಷ್ಯ ಮಾಡಬೇಡಿ
ಎದೆನೋವು, ಅಸ್ವಸ್ಥತೆ
ಉಸಿರಾಟದಲ್ಲಿ ತೊಂದರೆ
ತೋಳು, ಕುತ್ತಿಗೆ, ಹೊಟ್ಟೆ ಈ ಭಾಗಗಳಲ್ಲಿನೋವು
ವಾಂತಿ
ತಲೆಸುತ್ತುವುದು
ಸುಸ್ತು



Click it and Unblock the Notifications
