Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸೊಳ್ಳೆಗಳಿಗೆ ತನ್ನದೇ ರಕ್ತ ಕುಡಿಸುವ ಜೀವಶಾಸ್ತ್ರಜ್ಞ..! ಯಾಕೆ ಗೊತ್ತಾ?
ನಾವು ಸೊಳ್ಳೆಗಳು ಕಚ್ಚಿದ್ರೆ ಹೇಗಾದ್ರು ಅವುಗಳ ಹೊಡೆದು ಕೊಲ್ಲುತ್ತೇವೆ. ಇಲ್ಲವೆ ಯಾವುದಾದರು ಸೊಳ್ಳೆ ಓಡಿಸುವ ವಿಷಕಾರಿ ಕಾಯಿಲ್ ಹಚ್ಚುತ್ತೇವೆ. ಸೊಳ್ಳೆ ಕಚ್ಚುವುದರಿಂದ ಎಷ್ಟೆಲ್ಲ ಸಮಸ್ಯೆಯಾಗುತ್ತೆ ಅನ್ನೋದು ನಮಗೆ ಗೊತ್ತಿದೆ. ಒಂದು ಸೊಳ್ಳೆಯಿಂದ ಸಾವು ಸಹ ನಮ್ಮ ಕಾಡಬಹುದು. ಜೊತೆಗೆ ಡೆಂಗ್ಯೂ, ಮಲೇರಿಯಾದಂತಹ ಭಯಾನಕ ಕಾಯಿಲೆ ನಮ್ಮ ಕಾಡಬಹುದು.
ಹೀಗಾಗಿ ಸೊಳ್ಳೆಗಳು ಎಂದರೆ ಎಲ್ಲರಿಗೂ ಭಯ, ಈಗಂತು ಮಳೆಗಾಲದ ಆರಂಭದಲ್ಲಿ ಸೊಳ್ಳೆಗಳದ್ದೆ ಕಾರುಬಾರು. ಸೊಳ್ಳೆಗಳ ಕಾಟದಿಂದ ಜನರು ಹಾಸಿಗೆ ಹಿಡಿಯುವಂತಾಗಿರುತ್ತದೆ. ಕೆಲವೊಂದು ಬಾರಿ ಸಾವು ಬದುಕಿನ ನಡುವೆ ಹೋರಾಡುವ ರೀತಿ ಜೀವ ಹಿಂಡುತ್ತವೆ.

ಇನ್ನು ಹಲವು ಬಾರಿ ಸೊಳ್ಳೆಗಳು ಮಾರಣಾಂತಿಕ ಉರಿ, ಅಲರ್ಜಿ ಸಹ ಉಂಟು ಮಾಡುತ್ತವೆ. ಇನ್ನು ಮಕ್ಕಳ ಪಾಲಿಗೆ ಸೊಳ್ಳೆಗಳೇ ಶತ್ರುಗಳಾಗಿರುತ್ತವೆ. ಮಕ್ಕಳ ಚರ್ಮದ ಮೃದುವಾಗಿರುವ ಹಿನ್ನೆಲೆ ಮಕ್ಕಳ ಮೇಲೆ ದಾಳಿ ಮಾಡಿಬಿಡುತ್ತವೆ. ಆದ್ರೆ ಎಲ್ಲಾ ಸೊಳ್ಳೆ ಕಚ್ಚುವುದರಿಂದ ಹಾನಿ ಆಗುವುದಿಲ್ಲ. ಆದ್ರೆ ಹಗಲು ಹೊತ್ತು ಕಚ್ಚುವ ಸೊಳ್ಳೆ ಅತ್ಯಂತ ಭಯಾನಕ ಕಾಯಿಲೆ ಉಂಟು ಮಾಡುತ್ತದೆ ಎಂದು ನಾವು ತಿಳಿದಿದ್ದೇವೆ.
ಸೊಳ್ಳೆಗಳ ಕುರಿತು ಇಷ್ಟೆಲ್ಲಾ ಭಯಾನಕತೆ ಹರಡಿದ್ದರೂ ಇಲ್ಲೊಬ್ಬ ಜೀವಶಾಸ್ತ್ರಜ್ಞ ಸೊಳ್ಳೆಗಳಿಗೆ ರಕ್ತ ದಾನ ಮಾಡಿದ್ದಾನೆ. ಜೀವಶಾಸ್ತ್ರಜ್ಞ ಪೆರ್ರಾನ್ ರಾಸ್ ಅವರು ಪ್ರತಿದಿನ ಸೊಳ್ಳೆಗಳಿಗೆ ಆಹಾರ ನೀಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದೆ.
ಸೊಳ್ಳೆ ಸಂಶೋಧನೆಯಲ್ಲಿ ಆಳವಾಗಿ ಮುಳುಗಿರುವ ರಾಸ್, ಪ್ರಾಯೋಗಿಕ ಜೀವಶಾಸ್ತ್ರಜ್ಞನಾಗಿ ತನ್ನ ಪಾತ್ರವು ಜೀವಿಗಳಿಗೆ ಸಮರ್ಪಕವಾಗಿ ಆಹಾರವನ್ನು ನೀಡುವುದನ್ನು ಖಚಿತಪಡಿಸುತ್ತದೆ ಎಂದು ವಿವರಿಸುತ್ತಾನೆ. ಹೀಗಾಗಿ, ಕೀಟಗಳಿಗೆ ಪ್ರಾಥಮಿಕ ಆಹಾರದ ಮೂಲವಾಗಲು ಅವನು ತನ್ನ ರಕ್ತವನ್ನೇ ಅವುಗಳಿಗೆ ನೀಡುತ್ತಿದ್ದಾನಂತೆ.
ವಿಡಿಯೋದೊಂದಿಗೆ ರಾಸ್‌ನ ವಿಶಿಷ್ಟ ದಿನಚರಿಯ ಮೇಲೆ ಬೆಳಕು ಚೆಲ್ಲುತ್ತದೆ, ಅವನನ್ನು "ಸೊಳ್ಳೆ-ಮನುಷ್ಯ" ಎಂದು ವಿವರಿಸುತ್ತದೆ ಮತ್ತು ವಿಜ್ಞಾನದ ಹೆಸರಿನಲ್ಲಿ ಸಾವಿರಾರು ಸೊಳ್ಳೆ ಕಡಿತಕ್ಕೆ ಒಳಗಾಗಲು ಅವನ ಇಚ್ಛೆಯನ್ನು ವಿವರಿಸುತ್ತದೆ. ಶೀರ್ಷಿಕೆಯ ಪ್ರಕಾರ, ರಾಸ್ ಒಂದೇ ಅವಧಿಯಲ್ಲಿ 15,000 ಸೊಳ್ಳೆ ಕಡಿತವನ್ನು ಸಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ, ರಾಸ್ ಸೊಳ್ಳೆಗಳಿಂದ ತುಂಬಿದ ಗಾಜಿನ ಪೆಟ್ಟಿಗೆಯಲ್ಲಿ ತನ್ನ ಕೈಯನ್ನು ಸೇರಿಸುವಾಗ ತೆಳುವಾದ ಸಾಕ್ಸ್ ಧರಿಸಿರುವುದು ಕಂಡು ಬರುತ್ತದೆ. ತಕ್ಷಣವೇ, ಸೊಳ್ಳೆಗಳು ಅವನ ಕೈಯ ಸುತ್ತಲೂ ಸುತ್ತುತ್ತವೆ, ಆದರೆ ಅತ ತಾಳ್ಮೆಯಿಂದ ಅವುಗಳು ಕಚ್ಚಿ ರಕ್ತ ಹೀರುವವರೆಗೂ ಸುಮ್ಮನಿರುತ್ತಾನೆ. ಅವು ರಕ್ತ ಹೀರುವವರೆಗೂ ಸುಮ್ಮನಿದ್ದು, ಬಳಿಕ ಕೈಯನ್ನು ಹೊರಗೆ ತೆಗೆಯುತ್ತಾನೆ.
ಅಪ್‌ಲೋಡ್‌ನಿಂದ, ವಿಡಿಯೋ ಸುಮಾರು 7,100 ಲೈಕ್‌ಗಳ ಜೊತೆಗೆ 4.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಜೊತೆಗೆ ಟೀಕೆಗೂ ಕಾರಣವಾಗಿದೆ. ಆದರೆ ಈ ವಿಡಿಯೋ ನೋಡಿದ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಈ ರೀತಿ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಿರುವ ಆತನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಖಚಿತವಾಗಿ ಆತನಿಗೆ ಚಿಕಿತ್ಸೆಯ ಅಗತ್ಯವಿದೆ. ಸೊಳ್ಳೆಗಳು ಕಚ್ಚಿದಾಗ ಅಪಾಯಕಾರಿ ರೋಗ ಬರುವುದು ಖಚಿತ ಈತನಿಗೂ ರೋಗವಿದೆ, ಪರೀಕ್ಷೆಗೆ ಒಳಪಟ್ಟರೆ ತಿಳಿದುಬರುತ್ತದೆ ಎಂದು ಒಬ್ಬ ಬಳಕದಾರರು ಬರೆದುಕೊಂಡಿದ್ದಾರೆ. ಇದೊಂದು ಭಯಾನಕ ವಿಡಿಯೋ ಯಾರು ಈ ರೀತಿ ಅಪಾಯಕಾರಿಯಾಗಿ ತನ್ನ ಜೀವದ ಜೊತೆ ಆಟವಾಡುತ್ತಾರೆ. ಇದೆಲ್ಲಾ ಹುಚ್ಚುತನ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಜೀವಶಾಸ್ತ್ರಜ್ಞನಿಗೆ ಒಳ್ಳೆಯ ರೋಗ ನಿರೋಧಕ ಶ ಕ್ತಿ ಇರಬಹುದು ಹಾಗಾಗಿ ಆತನಿಗೆ ಸೊಳ್ಳೆಗಳು ಕಡಿದರು ಏನು ಆಗುತ್ತಿಲ್ಲ. ಒಂದು ವೇಳೆ ಬೇರೆ ಯಾರಾದರು ಈ ರೀತಿ ಪ್ರಯತ್ನಿಸಿದರೆ ಖಂಡಿತ ಆತ ರೋಗ ಹಿಡಿದು ಮಲಗಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.



Click it and Unblock the Notifications
