Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
6 ವರ್ಷಕ್ಕೆ 60 ಕೆ.ಜಿ ತೂಕವಿದೆ ಮಗು..!! ಮಗುವಿನ ತೂಕ ಹೆಚ್ಚಳಕ್ಕೆ ಕಾರಣವಾದರೆ ಪೋಷಕರು?
ಮಕ್ಕಳು ಹುಟ್ಟಿದಾಗ ಎಷ್ಟು ತೂಕ ಇರಬೇಕು? ಎಷ್ಟು ಆರೋಗ್ಯವಾಗಿವೇ ಎಂಬುದು ಬಹಳ ಮುಖ್ಯ. ಶಿಶು ಎಷ್ಟು ತೂಕವಿದೆ ಎಂಬುದರ ಮೇಲೆ ಅದು ಆರೋಗ್ಯವಾಗಿದೆಯೇ ಅಥವಾ ಇಲ್ಲವೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಒಂದು ವೇಳೆ ಮಗು ಕಡಿಮೆ ತೂಕ ಹೊಂದಿದ್ದರೆ ಅಗತ್ಯ ಪಾಲನೆ ಮಾಡಬೇಕಾಗುತ್ತದೆ. ಆದರೆ ಅಧಿಕ ತೂಕವಿದ್ದರೂ ಸಮಸ್ಯೆ ಖಚಿತ.
ಆದ್ರೆ ಮಕ್ಕಳು ಬೆಳವಣಿಗೆ ಹೊಂದಿದಂತೆ ಪೋಷಕರ ಪ್ರಕಾರ ತೂಕ ಹೆಚ್ಚಾಗುತ್ತಾ ಹೋಗಬೇಕು. ಕೆಲವರು ಪ್ರತಿ ವಾರ ಮಕ್ಕಳ ತೂಕ ಎಷ್ಟು ಎಂಬುದನ್ನು ಅಳತೆ ಮಾಡುತ್ತಾರೆ ಮಕ್ಕಳು ತೂಕ ಹೆಚ್ಚಿಸಿಕೊಳ್ಳುತ್ತಾ ಸಾಗಿದರೆ ಮಗು ಆರೋಗ್ಯವಾಗಿದೆ ಎಂಬ ತಪ್ಪು ಕಲ್ಪನೆ ಪೋಷಕರಲ್ಲಿದೆ. ಮಕ್ಕಳು ಎಷ್ಟು ವರ್ಷಕ್ಕೆ ಎಷ್ಟು ತಿಂಗಳಿಗೆ ಎಷ್ಟು ತೂಕ ಇರಬೇಕು ಎಂಬ ನಿಯಮವೂ ಇದೆ.

ಈ ನಿಯಮದ ಪ್ರಕಾರ ಮಕ್ಕಳು ಅವಧಿಗಿಂತ ಹೆಚ್ಚು ತೂಕ ಇರಬಾರದು. ಅಂದರೆ ಪೋಷಕರ ಪ್ರಕಾರ ಮಗುವಿನ ತೂಕ ಹೆಚ್ಚಾಗುತ್ತಿದೆ ಎಂದರೆ ಅದು ಆರೋಗ್ಯವಾಗಿದೆ ಎಂದುಕೊಳ್ಳುವುದು ತಪ್ಪಾಗುತ್ತದೆ. ಇಲ್ಲಿಯೂ ಸಹ ಪೋಷಕರ ಒಂದು ತಪ್ಪು ಮಗುವಿನ ಜೀವನಕ್ಕೆ ಅಪಾಯ ತಂದಿದ್ದು, ಕೇವಲ 6 ವರ್ಷದ ಮಗು ಬರೋಬ್ಬರಿ 60 ಕೆ.ಜಿ ತೂಕವಿದೆ.
ಇನ್ಸ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, 6 ವರ್ಷದ ಮಗು ಮಕ್ಕಳ ಪ್ಲೇ ಗ್ರೌಂಡ್‌ನಲ್ಲಿ ಆಟವಾಡಲು ಹರಸಾಹಸಪಡುತ್ತಿದೆ. ಇದಕ್ಕೆ ಕಾರಣವಾಗಿರುವುದು ಆ ಮಗುವಿನ ತೂಕ. ಆಕೆಯ ದೇಹದ ಗಾತ್ರ ನೋಡಿದವರು ಯಾರು ಸಹ ಆಕೆಗೆ ಇನ್ನೂ 6 ವರ್ಷ ಎಂದು ಹೇಳಲು ಸಾಧ್ಯವಿಲ್ಲ. ಆದರೆ ತೂಕ ಹೆಚ್ಚಳದ ಕಾರಣದಿಂದ ಮಗು ಎದ್ದು ನಡೆಯಲು ಸಹ ಸಾಧ್ಯವಾಗುತ್ತಿಲ್ಲ.
ಮಗು ಮಕ್ಕಳ ಜಾರುವ ಆಟವನ್ನು ಏರಲು ಕಷ್ಟಪಡುತ್ತಿದೆ. ಕೆಳಗಿನಿಂದ ಮಗುವಿನ ತಾಯಿ ಆಕೆಗೆ ಹುರಿದುಂಬಿಸುತ್ತಿರುವುದನ್ನು ನಾವು ಕಾಣಬಹುದು. ಆದರೆ ಈ ಮಗುವನ್ನು ನೋಡಿದರೆ ಮಗುವಿಗೆ ಏನಿಲ್ಲ ಅಂದ್ರು 15ರಿಂದ 20 ವರ್ಷ ಆಗಿರಬಹುದು ಎನಿಸುತ್ತೆ. ಆದ್ರೆ ಇನ್ನೂ 6 ವರ್ಷ ಎಂದರೆ ಯಾರು ಸಹ ನಂಬಲಾಗದು.
ತಪ್ಪು ಮಾಡಿದ್ರಾ ಪೋಷಕರು?
ಈ ವಿಡಿಯೋ ನೋಡಿದ ಮಂದಿ ಇದು ಪೋಷಕರ ತಪ್ಪಿನಿಂದಾಗಿರುವ ಸಮಸ್ಯೆ, ಖಂಡಿತ ಇದು ಮಕ್ಕಳ ಮೇಲಿನ ದೌರ್ಜನ್ಯ ಎನ್ನುತ್ತಿದ್ದಾರೆ. ಜೊತೆಗೆ ಪೋಷಕರಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನುತ್ತಿದ್ದಾರೆ. ಏಕೆಂದರೆ ಇಷ್ಟೊಂದು ತೂಕ ಹೆಚ್ಚಳಕ್ಕೆ ಮನೆಯಲ್ಲಿ ನೀಡಲಾಗುವ ಆಹಾರವೂ ಒಂದು ಕಾರಣವಾಗಿರುತ್ತದೆ. ಹುಟ್ಟುವಾಗ ಮಗು ಸಾಮಾನ್ಯ ತೂಕವಿದ್ದು ಬಳಿಕ ತೂಕ ಹೆಚ್ಚಳವಾಗುವುದು ಮನೆಯ ಪರಿಸರದಿಂದಾಗಿ. ಹೀಗಾಗಿ ಈ ಮಗುವಿನ ಸಮಸ್ಯೆಗೆ ಪೋಷಕರು ಕಾರಣ ಎಂದು ದೂರಲಾಗುತ್ತಿದೆ.
ಆದ್ರೆ ಈ ರೀತಿಯ ಸಮಸ್ಯೆಗೆ ಹಲವು ರೀತಿಯ ವೈದ್ಯಕೀಯ ಸಮಸ್ಯೆಯೂ ಇದ. ಅದ್ರಲ್ಲೂ ಥೈರಾಯ್ಡ್ ಸಮಸ್ಯೆ ಹಾಗೂ ವಂಶಾವಳಿಯ ಸಮಸ್ಯೆಯೂ ಇರಲಿದೆ. ಮಕ್ಕಳಲ್ಲಿ ತೂಕ ಹೆಚ್ಚಳವಾಗಲು ಇಂತಹ ವೈದ್ಯಕೀಯ ಸಮಸ್ಯೆಗಳು ಸಹ ಪ್ರಮುಖ ಕಾರಣವಾಗುತ್ತದೆ. ಇಲ್ಲಿ ಈ 6 ವರ್ಷದ ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸದಿದ್ದರೆ ಬಹುಕಾಳ ಬದುಕುಳಿಯುವುದೇ ಅನುಮಾನವಾಗಲಿದೆ.
ಈ ವಿಡಿಯೋ ಎಕ್ಸ್‌ನಲ್ಲಿ ಹಂಚಿಕೊಂಡ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಗುವನ್ನು ನೋಡಿದ ಜನ ಶಾಕ್ ಆಗಿರುವ ಜೊತೆಗೆ ಇಂತಹ ಮಕ್ಕಳು ಮುಂದೆ ಹೇಗೆ ಬದುಕುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮಗು ಹುಟ್ಟಿದಾಗ ಈ ರೀತಿ ಇಲ್ಲದಿದ್ದರೆ ಈ ಗಾತ್ರಕ್ಕೆ ಪೋಷಕರು ಕಾರಣರಾಗುತ್ತಾರೆ, ಮಗು ಎಲ್ಲವನ್ನೂ ತಿನ್ನಲು ಸಾಧ್ಯವಿಲ್ಲ, ಅದರ ಕೈಗೆ ನೀಡಿದ ಆಹಾರ ಅದು ತಿನ್ನುತ್ತದೆ, ಇದು ಪೋಷಕರ ನಿರ್ಲಕ್ಷ್ಯಕ್ಕೆ ಬಲಿಯಾದ ಮಗು ಎಂದು ಆಕ್ರೋಶ ಹೊರಹಾಕಿದ್ದಾರೆ.



Click it and Unblock the Notifications
