Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಆಷಾಢದಲ್ಲಿ ನವ ವಿವಾಹಿತರು ಜೊತೆಯಲ್ಲಿ ಇರಬಹುದು ಎಂಬುವುದಕ್ಕೆ ಇದೆ 4 ವೈಜ್ಞಾನಿಕ ಕಾರಣಗಳು
ಆಷಾಢದಲ್ಲಿ ಹಲವು ಸಂಪ್ರದಾಯಗಳಿವೆ, ಅದರಲ್ಲೊಂದು ನವಜೋಡಿ ಈ ಸಮಯದಲ್ಲಿ ಜೊತೆಯಲ್ಲಿ ಇರಬಾರದು, ಹೀಗಾಗಿ ಈ ಅವಧಿಯಲ್ಲಿ ನವ ವಿವಾಹಿತೆ ತವರು ಮನೆಗೆ ಬರುತ್ತಾಳೆ. ಇದೊಂದು ಆಚರಣೆ ಅಷ್ಟೇ...
ಆದರೆ ಈ ಆಚರಣೆಯ ಹಿಂದೆ ಹಲವಾರು ಕಾರಣಗಳಿವೆ ಎಂಬುವುದು ಮಾತ್ರ ಬಹುತೇಕರಿಗೆ ಗೊತ್ತಿರುವುದಿಲ್ಲ, ಹೌದು ನಮ್ಮ ಹಿರಿಯರು ನ ಮಾಡಿರುವ ಆಚರಣೆಯ ಹಿಂದೆ ಹಲವಾರು ಕಾರಣಗಳಿರುತ್ತದೆ, ಆದರೆ ಅದನ್ನು ಡಿಕೋಡ್ ಮಾಡದೆ ಮೂಢ ನಂಬಿಕೆ ಎಂದು ದೂರ ತಳ್ಳುತ್ತೇವೆ, ಆಷಾಢದಲ್ಲಿ ಗಂಡ-ಹೆಂಡತಿ ಏಕೆ ಜೊತೆಯಲ್ಲಿ ಇರಬಾರದು ಎಂಬುವುದಕ್ಕೆ ವೈಜ್ಞಾನಿಕ ಕಾರಣಗಳಿವೆ, ಸಂಬಂಧದ ದೃಷ್ಟಿಯಿಂದಲೂ ಇದು ಮುಖ್ಯ.

ಆಷಾಢದಲ್ಲಿ ನವ ವಿವಾಹಿತೆಯನ್ನು ತವರು ಮನೆಗೆ ಕಳುಹಿಸುವುದರ ಹಿಂದಿರುವ ವೈದ್ಯಕೀಯ ಕಾರಣಗಳು
ಆಷಾಢದಲ್ಲಿ ಗರ್ಭ ಧಾರಣೆಯಾದರೆ ಒಳ್ಳೆಯದಲ್ಲ:
ಆಷಾಢದಲ್ಲಿ ಗರ್ಭಧಾರಣೆಯಾದರೆ ಅದು ಒಳ್ಳೆಯದಲ್ಲ ಎಂಬುವುದಕ್ಕೆ ಕಾರಣವಿದೆ, ಆಷಾಢದಲ್ಲಿ ಗರ್ಭದಾರಣೆಯಾದರೆ ಆ ಮಗು ಏಪ್ರಿಲ್, ಮೇ ತಿಂಗಳಿನಲ್ಲಿ ಜನಿಸುತ್ತದೆ, ಈ ಮಾಸದಲ್ಲಿ ಅಧಿಕ ಉಷ್ಣಾಂಶವಿರುತ್ತದೆ, ಈ ಅತಿಯಾದ ಉಷ್ಣಾಂಶ ಆ ನವಜಾತ ಶಿಶುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಗುವಿನ ಮೈ ಮೇಲೆ ಗುಳ್ಳೆಗಳು ಏಳುವುದು, ಅತಿಯಾದ ಉಷ್ಣಾಂಶದಿಂದ ತಾಯಿ- ಮಗುವಿಗೆ ನಿದ್ದೆಗೆ ತೊಂದರೆಯಾಗುವುದು, ಏಕೆಂದರೆ ಈ ಸಮಯದಲ್ಲಿ ತಾಯಿಗೂ ನಿದ್ದೆ ಬೇಕು, ಮಗುವಿನ ಬೆಳವಣಿಗೆ ದೃಷ್ಟಿಯಿಂದಲೂ 16-18 ಗಂಟೆ ನಿದ್ದೆ ಅವಶ್ಯಕ.
ಎಸಿ, ಫ್ಯಾನ್ ಇದೆಯಲ್ಲಾ ಎಂದು ಹೇಳುವುದಾದರೆ...
ಈಗ ಸೌಲಭ್ಯ ಹೆಚ್ಚಿದೆ ಫ್ಯಾನ್, ಎಸಿ ಇದೆಯಂದು ಹೇಳಬಹುದು, ಆದರೆ ನೀವು ಯಾವುದೇ ವೈದ್ಯರನ್ನು ಕೇಳಿ, ಅವರು ಮಗುವಿಗೆ ಫ್ಯಾನ್, ಎಸಿ ಒಳ್ಳೆಯದು ಎಂದು ಹೇಳುವುದಿಲ್ಲ, ಆದರೆ ಸೆಕೆ ತಡೆಯಲು ಸಾಧ್ಯವಾಗದೆ ಇರುವಾಗ ಹಾಕಲೇಬೇಕಾದ ಅನಿರ್ವಾಯತೆ ಉಂಟಾಗುವುದು.
ಸಂಬಂಧದ ಕಾರಣ
ಆಷಾಢದಲ್ಲಿ ನವ ವಿವಾಹಿತರ ಬೇರೆ ಬೇರೆ ಇದ್ದಾಗ ಅವರ ನಡುವೆ ವಿರಹ ವೇದನೆ ಉಂಟಾಗುವುದು, ಆವಾಗ ಇಬ್ಬರು ಜೊತೆಯಾಗಿ ಬಾಳುವುದರ ಅರ್ಥ ಕಂಡು ಕೊಳ್ಳುತ್ತಾರೆ, ಅಲ್ಲದೆ ಮದುವೆಯಾದ ಮೇಲೆ ಆ ಹುಡುಗಿಗೆ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತೆ, ತವರು ಮನೆಯ ನೆನಪು ತುಂಬಾನೇ ಕಾಡುವುದು, ಈ ಸಮಯದಲ್ಲಿ ಈ ನೆಪದಲ್ಲಿ ತವರು ಮನೆಗೆ ಹೋಗಿ ಇದ್ದು ಬಂದಾಗ ಅವಳ ಮನಸ್ಸಿನಲ್ಲಿಯೂ ಖುಷಿ ಇರುತ್ತದೆ, ಅಲ್ಲದೆ ಗಂಡ ಬಿಟ್ಟು ಇದ್ದ ಕಾರಣ ಮತ್ತೆ ಅವನ ಸೇರಬೇಕೆಂಬ ತವಕ ಇರುತ್ತದೆ, ಹೀಗೆ ಸಂಬಂಧದ ದೃಷ್ಟಿಯಿಂದಲೂ ಈ ಆಚರಣೆ ಒಳ್ಳೆಯದು.
ಕೃಷಿ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ
ಈ ಸಮಯದಲ್ಲಿ ಕೃಷಿ ಕಾರ್ಯಗಳು ನಡೆಯುವುದು, ನವ ವಿವಾಹಿತರು ಸ್ವಲ್ಪ ಸಮಯ ಹನಿಮೂನ್ ಮೂಡ್‌ನಲ್ಲಿಯೇ ಇರುತ್ತಾರೆ, ಮನೆ ಮಗ ಹೀಗಿದ್ದರೆ ಕೃಷಿ ಕಾರ್ಯಗಳಿಗೆ ತೊಂದರೆಯಾಗುವುದು, ಅದೇ ಸೊಸೆಯನ್ನು ಅವಳ ಮನೆಗೆ ಕಳುಹಿಸಿದರೆ ಈತ ತನ್ನ ಕೆಲಸದತ್ತ ಗಮನಹರಿಸುತ್ತಾನೆ.
ಇದರ ಹಿಂದೆ ಜ್ಯೋತಿಷ್ಯ ಕಾರಣವೂ ಇದೆ
ಮೊದಲ ಮಗು ಮನೆಯ ವಾರಸುದಾರ ಎಂದು ಪರಿಗಣಿಸುತ್ತಾರೆ, ಹಾಗಾಗಿ ಮಗು ಆರೋಗ್ಯವಂತ ಹುಟ್ಟಬೇಕು ಎಂದು ಬಯಸುತ್ತಾರೆ, ಅದರೆ ಈ ಅವಧಿಯಲ್ಲಿ ಬುಧ ದುರ್ಬಲವಾಗಿರುತ್ತಾನೆ, ಹಾಗಾಗಿ ಈ ಸಮಯ ಒಳ್ಳೆಯದಲ್ಲ ಎಂದು ಹೇಳಲಾಗುವುದು. ಸಂತಾನಕ್ಕೆ ಶ್ರಾವಣ ಮಾಸ ಒಳ್ಳೆಯದು ಎಂದು ಹೇಳಲಾಗುವುದು.
ಹಾಗಾದರೆ ಮೊದಲ ಮಗು ಮಾತ್ರ ಆಷಾಢದಲ್ಲಿ ಗರ್ಭಧಾರಣೆಯಾಗಬಾರದು ಎರಡನೇ ಮಗುವಿಗೆಲ್ಲಾ ಇಲ್ಲವೇ ಈ ನಿಯಮ?
ಈ ಪ್ರಶ್ನೆ ಹಲವರಲ್ಲಿ ಇರಬಹುದು, ಗರ್ಭಧಾರಣೆಗೆ ಆಷಾಢ ಸೂಕ್ತವಲ್ಲ ಎಂಬ ಸುಳಿವು ದಂಪತಿಗೆ ಈ ಅಚರಣೆಯಿಂದ ತಿಳಿಯುತ್ತದೆ. ಹಿಂದೆಯೆಲ್ಲಾ ಈ ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುತ್ತಿರಲಿಲ್ಲ, ಆದರೆ ಇಂಥ ಆಚರಣೆಗಳ ಮೂಲಕ ತಿಳಿಸಿ ಕೊಡುತ್ತಿದ್ದರು.



Click it and Unblock the Notifications
