Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಸೊಂಟದ ಬೊಜ್ಜನ್ನು ಮರೆಮಾಚುವ ಡ್ರೆಸ್ಸಿಂಗ್ ಟಿಪ್ಸ್
ನೋಡಲು ಆರ್ಷಕವಾಗಿ ಕಾಣಲು ಮಾಡಲ್ ಅಥವಾ ಸೆಲೆಬ್ರಿಟಿಗಳಂತಹ ಮೈ ಮಾಟ ಬೇಕೆಂದಿಲ್ಲ. ಡ್ರೆಸ್ಸಿಂಗ್ ಸ್ಟೈಲ್ ಗೊತ್ತಿದ್ದರೆ ಸಾಕು ಆಕರ್ಷಕವಾಗಿ ಕಾಣುವಿರಿ. ಸ್ವಲ್ಪ ದಪ್ಪಗಿರುವ ಹೆಣ್ಣು ಮಕ್ಕಳಲ್ಲಿ ಸ್ಟೈಲಿಷ್ ಡ್ರೆಸ್ ನನಗೆ ಹಾಕಲು ಸಾಧ್ಯವಿಲ್ಲ, ಅವುಗಳನ್ನು ಹಾಕಿದರೆ ಇನ್ನೂ ದಪ್ಪಗೆ ಅಸಹ್ಯ ಕಾಣುತ್ತೇನೆ ಎಂಬ ಭಾವನೆ ಇರುತ್ತದೆ. ಆದರೆ ದಪ್ಪಗಿರುವವರು ನಾನು ಯಾವ ರೀತಿ ಡ್ರೆಸ್ ಮಾಡಿದರೆ ಹೆಚ್ಚು ದಪ್ಪ ಕಾಣುವುದಿಲ್ಲ ಎಂಬ ಟ್ರಿಕ್ಸ್ ತಿಳಿದುಕೊಂಡರೆ ಫ್ಯಾಷನಬಲ್ ಡ್ರೆಸ್ ಧರಿಸಿ ಆಕರ್ಷಕವಾಗಿ ಕಾಣಬಹುದು.
ಸೊಂಟದ ಸುತ್ತವಿರುವ ಬೊಜ್ಜು ಎದ್ದು ಕಾಣದೆ ತೆಳ್ಳಗೆ ಕಾಣಿಸಲು ಯಾವ ರೀತಿಯಲ್ಲಿ ಡ್ರೆಸ್ಸಿಂಗ್ ಮಾಡಬೇಕು ಎಂದು ನೋಡೋಣ:

ಚಿರತೆ ಬಣ್ಣದ ಪ್ರಿಂಟ್
ಚಿರತೆಯ ಮೈ ಬಣ್ಣದಂತಹ ಪ್ರಿಂಟ್ ಇರುವ ಡ್ರೆಸ್ ಧರಿಸಿದರೆ ಇರುವ ದಪ್ಪಗಿಂತ ಸ್ವಲ್ಪ ತೆಳ್ಳಗೆ ಕಾಣಿಸುವಿರಿ.

ಫುಲ್ ಸ್ಲೀವ್ ಬ್ಲೌಸ್
ಸ್ಯಾರಿಗೆ ಚಿಕ್ಕ ಕೈಯ ಬ್ಲೌಸ್ ಹಾಕುವ ಬದಲು ಉದ್ದ ಕೈಯ ಬ್ಲೌಸ್ ಹಾಕಿದರೆ ಸೊಂಟದ ಸುತ್ತವಿರುವ ಬೊಜ್ಜು ಎದ್ದು ಕಾಣುವುದಿಲ್ಲ.

ಕುರ್ತಾ
ಟೈಟ್ ಜೀನ್ಸ್, ಲೆಗ್ಗಿನ್ಸ್ ಹಾಕಿ ಅದಕ್ಕೆ ಸೈಡ್ ಕಟ್ ಇಲ್ಲದ ಕುರ್ತಾ ಹಾಕಿದರೆ ಸ್ವಲ್ಪ ತೆಳ್ಳಗೆ ಕಾಣುವಿರಿ. ಕುರ್ತಾ ತುಂಬಾ ಬಿಗಿಯಾಗಿ ಹಾಕಬೇಡಿ, ಸ್ವಲ್ಪ ಸಡಿಲವಾಗಿರಲಿ.

ಬ್ಲ್ಯಾಕ್ ಲೇಸ್
ಬ್ಲ್ಯಾಕ್ ಲೇಸ್ ಡ್ರೆಸ್ ಧರಿಸಿದರೆ ತುಂಬಾ ತೆಳ್ಳಗೆ ಕಾಣುವಿರಿ. ಇದಕ್ಕೆ ದಪ್ಪದ ಬೆಲ್ಟ್ ಧರಿಸಿದರೆ ಸೊಂಟದ ಬೊಜ್ಜು ಎದ್ದು ಕಾಣುವುದಿಲ್ಲ.

ಫ್ರಿಲ್ಸ್
ಫ್ರಿಲ್ಸ್ ಇರುವ ಡ್ರೆಸ್ ಧರಿಸಿದರೆ ನೋಡುಗರೆ ಫ್ರಿಲ್ಸ್ ಎದ್ದು ಕಾಣುವುದರಿಂದ ದಪ್ಪಗಿರುವಂತೆ ಕಾಣುವುದಿಲ್ಲ, ಸೊಂಟದ ಸುತ್ತ ಬೊಜ್ಜಿದ್ದರೆ ಈ ಡ್ರೆಸ್ ನಲ್ಲಿ ಸೊಂಟ ಸಪೂರದಂತೆ ಕಾಣುವುದು.

ಕಾಫ್ತಾನ್ಸ್
ಇದು ಕೂಡ ತೆಳ್ಳಗೆ ಕಾಣಲು ಫ್ಯಾಷನ್ ಟ್ರಿಕ್ಸ್. ಈ ರೀತಿಯ ಡ್ರೆಸ್ ಅನ್ನು ಸಿಲ್ಕ್ ಬಟ್ಟೆಯಲ್ಲಿ ಹೊಲಿಸಿ. ಈ ಡ್ರೆಸ್ ನಲ್ಲಿ ತೆಳ್ಳಗೆ ಮಾತ್ರವಲ್ಲಾ, ಅಲ್ಟ್ರಾ ಫ್ಯಾಷನಬಲ್ ಆಗಿ ಕಾಣುವಿರಿ.

ನಾಟ್ ಡ್ರೆಸ್
ದಾರ ಕಟ್ಟುವಂತಹ ಡ್ರೆಸ್ ನಲ್ಲಿ ಅಷ್ಟೇನು ದಪ್ಪ ಕಾಣುವುದಿಲ್ಲ. ಡ್ರೆಸ್ ಮುಂದುಗಡೆ ಡ್ರೆಸ್ ಕಟ್ಟುವ ರೀತಿಯಲ್ಲಿದ್ದರೆ ಹೊಟ್ಟೆಯ ಮತ್ತು ಸೊಂಟದ ಬೊಜ್ಜು ಕಾಣುವುದಿಲ್ಲ. ತೆಳ್ಳಗೆ ಕಾಣಿಸಲು ಈ ರೀತಿಯ ಡ್ರೆಸ್ ತುಂಬಾ ಬಿಗಿ ಇರಬಾರದು, ಸ್ವಲ್ಪ ಸಡಿಲವಾಗಿರಬೇಕು.

ಜಾಕೆಟ್
ಫಾರ್ಮಲ್ ಆಗಿ ಜೀನ್ಸ್ ಧರಿಸಿ ಅದಕ್ಕೆ ಜಾಕೆಟ್ ಹಾಕಿದರೆ ಸೊಂಟದ ಬೊಜ್ಜು ಎದ್ದು ಕಾಣದೆ ಆಕರ್ಷಕವಾಗಿ ಕಾಣುವಿರಿ.

ಉದ್ದ ಗೌನ್
ಉದ್ದದ ಗೌನ್ ಧರಿಸಿದರೆ ನೀವು ಸ್ವಲ್ಪ ಉದ್ದವಾಗಿ ಕಂಡು ಇರುವ ತೂಕಕ್ಕಿಂತ ಇನ್ನೂ ಸ್ವಲ್ಪ ತೆಳ್ಳಗೆ ಕಾಣುವಿರಿ.



Click it and Unblock the Notifications
