Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅತ್ಯಂತ ಕೆಟ್ಟ ಟೇಬಲ್ ಮ್ಯಾನರ್ಸ್

ಅದರಲ್ಲೂ ಸ್ಪೂನ್, ಫೋರ್ಕ್, ಚಾಕು ಬಳಸಿ ತಿನ್ನಲು ಗೊತ್ತಿದ್ದರೆ ಟೇಬಲ್ ಮ್ಯಾನರ್ಸ್ ಗೊತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಈ ಕೆಳಗಿನ ವರ್ತನೆಗಳನ್ನು ಕೆಲವರಲ್ಲಿ ಕಾಣುತ್ತೇವೆ. ಈ ವರ್ತನೆ ನಮ್ಮ ಆಪ್ತರಲ್ಲಿ ಇದ್ದರೆ ಅವರ ಆ ವರ್ತನೆಯನ್ನು ಸರಿಪಡಿಸಬೇಕು. ಸಾಮಾನ್ಯವಾಗಿ ಕಂಡು ಬರುವ ಟೇಬಲ್ ಮ್ಯಾನರ್ಸ್ ವರ್ತನೆ ಯಾವುವು ಎಂದು ತಿಳಿಯಲು ಮುಂದೆ ಮಾಡಿ.
ತೇಗುವುದು: ಟೇಬಲ್ ಮುಂದೆ ಕುಳಿತು ಊಟ ಮಾಡುವಾಗ ತೇಗುವುದು ಒಳ್ಳೆಯ ಅಭ್ಯಾಸವಿಲ್ಲ. ಒಂದು ವೇಳೆ ತೇಗು ಬಂದರೆ ಟೇಬಲ್ ಎದುರುಗಡೆಯಿಂದ ಎದ್ದು ಆಚೆ ಕಡೆ ಹೋಗಿ ತೇಗುವುದು ಒಳ್ಳೆಯದು. ಇದ್ದಕ್ಕಿದಂತೆ ತೇಗು ಬಂದರೆ ನೀರು ಕುಡಿಯಿರಿ ತೇಗು ನಿಂತು ಹೋಗುವುದು.
ಸ್ಪೂನ್ ಗಳನ್ನು ಶಬ್ದ ಮಾಡುವುದು: ಊಟಕ್ಕೆ ಕುಳಿತಾಗ ಸ್ಪೂನ್ ಗಳನ್ನು ಒಂದಕ್ಕೊಂದು ಬಡೆದು ಶಬ್ದ ಮಾಡುವುದು ಅಥವಾ ಸ್ಪೂನ್ ಅನ್ನು ತಟ್ಟೆಗೆ ತಾಗಿಸಿ ಶಬ್ದ ಬರುವಂತೆ ತಿನ್ನುವುದು ಮಾಡಬಾರದು.
ಬಾಯಿ ತುಂಬಾ ಆಹಾರ ಹಾಕಿ ಮಾತನಾಡುವುದು: ಬಾಯಲ್ಲಿ ತುಂಬಾ ಆಹಾರ ಹಾಕಿಕೊಂಡು ಮಾತನಾಡುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ. ಊಟ ಮಾಡುವಾಗ ಈ ರೀತಿ ಮಾಡಿದರೆ ನಿಮ್ಮ ಪಕ್ಕದಲ್ಲಿರುವವರೆಗೆ ಮುಜುಗರವಾಗುತ್ತದೆ.
ಶಬ್ದ ಮಾಡಿಕೊಂಡು ಕುಡಿಯುವುದು ಅಥವಾ ತಿನ್ನುವುದು: ಟೀ ಅಥವಾ ಜ್ಯೂಸ್ ಕುಡಿಯುವಾಗ ಶುರ್ರ್ ... ಅಂತ ಶಬ್ದ ಮಾಡಿಕೊಂಡು ತಿನ್ನುವುದು ಅಥವಾ ಆಹಾರವನ್ನು ಪಚ್...ಪಚ್ ಅಂತ ಶಬ್ದ ಮಾಡಿಕೊಂಡು ತಿನ್ನುವುದು ಟೇಬಲ್ ಮ್ಯಾನರ್ಸ್ ಅಲ್ಲ.
ತಟ್ಟೆ ತುಂಬಾ ಹಾಕಿಕೊಂಡು ತಿನ್ನುವುದು: ಹೊಟ್ಟೆ ತುಂಬಾ ತಿನ್ನಬೇಕು, ಆದರೆ ತಟ್ಟೆ ತುಂಬಾ ಹಾಕಿಕೊಂಡು ತಿನ್ನುವುದು ಒಳ್ಳೆಯದಲ್ಲ. ಆಹಾರವನ್ನು ತಟ್ಟೆಗೆ ಸ್ವಲ್ಪ ಹಾಕಿಕೊಳ್ಳಿ, ನಂತರ ಬೇಕಿದ್ದರೆ ಇನ್ನೂ ಸ್ವಲ್ಪ ಹಾಕಿಕೊಂಡು ತಿನ್ನಬೇಕು. ಅದರ ಬದಲು ತಟ್ಟೆಯಲ್ಲಿ ಚೆಲ್ಲುವಂತೆ ಹಾಕಿಕೊಂಡು ತಿನ್ನಬಹುದು.
ಚೆಲ್ಲುವುದು: ಊಟ ತಿನ್ನುವಾಗ ತಟ್ಟೆ ಸುತ್ತಾ ಚೆಲ್ಲುವುದು ಸರಿಯಾದ ತಿನ್ನುವ ಕ್ರಮವಲ್ಲ. ಊಟವನ್ನು ಸ್ವಲ್ಪವೂ ಪ್ಲೇಟ್ ನಿಂದ ಹೊರಗೆ ಚೆಲ್ಲದಂತೆ ತಿನ್ನಬೇಕು.
ಬೆರಳು ನೆಕ್ಕುವುದು: ತಿಂದ ಆದ ನಂತರ ಬೆರಳು ನೆಕ್ಕುವ ಅಭ್ಯಾಸ ಒಳ್ಳೆಯದಲ್ಲ. ಕೆಲವರಿಗೆ ಪ್ಲೇಟ್ ಅನ್ನು ಬೆರಳಿನಿಂದ ಒರೆಸಿ, ಬೆರಳು ನೆಕ್ಕುವ ಅಭ್ಯಾಸ ಇರುತ್ತದೆ. ಆ ರೀತಿಯ ಅಭ್ಯಾಸವಿಲ್ಲ.
ಈ ಮೇಲಿನ ಎಲ್ಲಾ ವರ್ತನೆಗಳು ಅತ್ಯಂತ ಕೆಟ್ಟ ಟೇಬಲ್ ಮ್ಯಾನರ್ಸ್ ಆಗಿದೆ.



Click it and Unblock the Notifications
