Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ ವಿಷಯಗಳು ಸ್ತ್ರೀಯರಿಗೆ ಇಷ್ಟ, ಪುರುಷರಿಗೆ ಕಷ್ಟ
ಹೆಣ್ಣು ಮತ್ತು ಗಂಡಿನ ಗುಣಗಳು ಸಂಪೂರ್ಣ ಭಿನ್ನವಾಗಿರುತ್ತದೆ. ಮಹಿಳೆಯರಿಗೆ ಇಷ್ಟವಾಗುವ ಎಷ್ಟೋ ವಿಷಯಗಳು ಪುರುಷರಿಗೆ ಇಷ್ಟವಾಗುವುದಿಲ್ಲ, ಇಬ್ಬರ ಆಲೋಚನೆಗಳು ಭಿನ್ನವಾಗಿರುತ್ತದೆ, ಟೇಸ್ಟ್ ವಿಭಿನ್ನವಾಗಿರುತ್ತದೆ.
ವಿಷಯ ಒಂದೇ ಆಗಿದ್ದರೂ ಅದಕ್ಕೆ ಪ್ರತಿಕ್ರಿಯಿಸುವ ರೀತಿ ಭಿನ್ನವಾಗಿರುತ್ತದೆ. ಅದರಲ್ಲೂ ಈ ಕೆಳಗಿನ ವಿಷಯಗಳಲ್ಲಿ ಪುರುಷರು ಮತ್ತು ಮಹಿಳೆಯರ ಗುಣಗಳಲ್ಲಿ ಹೋಲಿಕೆ ಕಂಡುಬರುವುದಿಲ್ಲ.

ಧಾರವಾಹಿ ವೀಕ್ಷಣೆ:
ಅಪ್ಪ-ಮಗನಿಗೆ ಸ್ಪೋರ್ಟ್ಸ್, ನ್ಯೂಸ್ ನೋಡಲು ಇಷ್ಟವಾದರೆ ಅಮ್ಮ ಬಂದು ಧಾರವಾಹಿ ಹಾಕಿ ಎಂದು ಹೇಳುತ್ತಾಳೆ. ಆಗ ಹಾಕಿಕೊಡದಿದ್ದರೆ ಆ ವಿಷಯಕ್ಕೆ ಮಾತು ಬೆಳೆಯುವುದು. ಅದೇ ಪುರುಷರಿಗೆ ಧಾರವಾಹಿ ಹಾಕಿ ಕೊಟ್ಟು ನೋಡು ಅಂದರೆ ಅಲ್ಲೇ ನಿದ್ದೆ ಮಾಡಿ ಬಿಡುತ್ತಾರೆ.
ಪುರುಷರು ಧಾರವಾಹಿ ನೋಡುವುದಿಲ್ಲವೆಂದಲ್ಲ ನೋಡುತ್ತಾರೆ, ಆದರೆ ಅವರ ಸಂಖ್ಯೆ ತುಂಬಾ ಕಡಿಮೆ, ಅಲ್ಲದೆ ತುಂಬ ಜನಪ್ರಿಯವಾದ ಧಾರವಾಹಿಗಳನ್ನಷ್ಟೇ ನೋಡುತ್ತಾರೆ.

ರೊಮ್ಯಾಂಟಿಕ್ ಕಾದಂಬರಿಯನ್ನು ಓದುವುದು:
ರೊಮ್ಯಾಂಟಿಕ್ ಕಾಂದಬರಿಗಳನ್ನು ಓದಲು, ರೊಮ್ಯಾಂಟಿಕ್ ಹಾಡುಗಳನ್ನು ಕೇಳಲು ಸ್ತ್ರೀಯರು ಇಷ್ಟಪಟ್ಟರೆ ಅದಕ್ಕೆ ವಿರುದ್ಧವಾಗಿ ಪುರುಷರು ಥ್ರಿಲ್ಲರ್ ಕಾದಂಬರಿಗಳನ್ನು ಓದಲು, ತುಂಬಾ ಫೈಟಿಂಗ್ ಇರುವ ಸಿನಿಮಾ ನೋಡಲು, ಕಿವಿ ಒಡೆದು ಹೋಗುವಂತೆ ಜೋರಾಗಿ ಹಾಡು ಹಾಕಿ ಕೇಳಲು ಇಷ್ಟಪಡುತ್ತಾರೆ.

ಗಾಸಿಪ್:
ನಾಲ್ಕು ಜನ ಜನ ಸ್ತ್ರೀಯರು ಜೊತೆ ಸೇರಿದರೆ ಸಾಕು, ಮತ್ತೊಬ್ಬರ ಬಗ್ಗೆ ಗಾಸಿಪ್ ಹೇಳುತ್ತಾ ಕಾಲ ಕಳೆಯುತ್ತಾರೆ. ಈ ರೀತಿತ ಹೇಳಿದರೆ ಮಹಿಳೆಯರಿಗೆ ಕೋಪ ಬರುತ್ತದೆ, ಆದರೆ ಈ ಗುಣಗಳನ್ನು ಹಳ್ಳಿ ಹೆಣ್ಣು ಮಕ್ಕಳಿಂದ ಹಿಡಿದು ಹೈಫೈ ಮಹಿಳೆಯರಲ್ಲೂ ಕೂಡ ಕಾಣಬಹುದು.

ಹುಡುಗಿಯರು ರಾತ್ರಿ ಹೊರಹೋಗುವುದು:
ಪಾರ್ಟಿ ಅಂತ ಮಹಿಳೆಯರು ರಾತ್ರಿ ಹೊತ್ತು ಹೊರಗಡೆ ಹೋದರೆ ಆ ಗುಣ ಪುರುಷರಿಗೆ ಇಷ್ಟವಾಗುವುದಿಲ್ಲ. ಪ್ರತಿಯೊಬ್ಬ ಗಂಡಸು ಮನೆ ಹೆಣ್ಣ ಮಗಳು ರಾತ್ರಿಯಾಗುವ ಮುಂಚೆ ಮನೆ ಸೇರಬೇಕೆಂದು ಬಯಸುತ್ತಾನೆ.

ಹೊಗಳುವಿಕೆ:
ಸ್ತ್ರೀಯರು ಹೊಗಳಿಕೆಯನ್ನು ತುಂಬಾ ಇಷ್ಟಪಡುತ್ತಾರೆ. ಪುರುಷರು ಹೊಗಳುವಾಗ ಅದು ಸುಳ್ಳೆಂದು ಗೊತ್ತಿದ್ದರೂ ಇಷ್ಟಪಡುತ್ತಾರೆ. ಆದರೆ ಪುರುಷರನ್ನು ಸುಳ್ಳು -ಸುಳ್ಳಾಗಿ ಹೊಗಳಿದರೆ ಅವರಿಗೆ ಇಷ್ಟವಾಗುವುದಿಲ್ಲ.



Click it and Unblock the Notifications
