Latest Updates
-
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ!
ಯಾವತ್ತಿಗೂ ಮಂಕಾಗುವುದಿಲ್ಲ ಖಾದಿ ಫ್ಯಾಷನ್!
ಕಾಲಕ್ಕೆ ತಕ್ಕಂತೆ ನಮ್ಮ ಧಿರಿಸು ಬದಲಾಗುತ್ತಿರುತ್ತದೆ. ಹೊಸ ಮಾದರಿಯ ಫ್ಯಾಷನ್ ಬಟ್ಟೆ ಧರಿಸಲು ಹೆಚ್ಚು ಇಷ್ಟ ಪಡುತ್ತೇವೆ. ತುಂಬಾ ಬೆಲೆ ಕೊಟ್ಟು ಬಟ್ಟೆ ತಂದು ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಮತ್ತೊಂದು ಹೊಸ ಫ್ಯಾಷನ್ ಬಂದಿರುತ್ತದೆ.
ಅಷ್ಟರಲ್ಲಿ ನಾವು ಕೊಂಡು ಕೊಂಡಿದ್ದ ಬಟ್ಟೆ ಔಟ್ ಆಫ್ ಫ್ಯಾಷನ್ ಆಗಿ ಬಿಟ್ಟಿರುತ್ತದೆ. ಆದರೆ ಕೆಲವೊಂದು ಬಟ್ಟೆಗಳಿವೆ ಅವು ಯಾವತ್ತಿಗೂ ಔಟ್ ಆಫ್ ಫ್ಯಾಷನ್ ಅಂತ ಆಗುವುದೇ ಇಲ್ಲ. ಅಂತಹ ಬಟ್ಟೆಗಳೆಂದರೆ ಅಪ್ಪಟ ಸಂಸ್ಕೃತಿಯ ಬಟ್ಟೆಗಳಾದ ರೇಷ್ಮೆ ಮತ್ತು ಖಾದಿ.

ಅದರಲ್ಲಿ ರೇಷ್ಮೆ ಬಟ್ಟೆ ಸಿರಿವಂತರ ಬಟ್ಟೆಯಾದರೆ ಖಾದಿ ಬಡವರಿಂದ ಹಿಡಿದು ಸಿರಿವಂತರವರೆಗೆ ಕೊಂಡುಕೊಳ್ಳಬಹುದಾದ ಬಟ್ಟೆಯಾಗಿದೆ. ಆದ್ದರಿಂದಲೇ ಸ್ವತಂತ್ರ ಪೂರ್ವದಿಂದಲೂ ಜನಪ್ರಿಯವಾಗಿರುವ ಖಾದಿ ಬಟ್ಟೆ ಇಂದಿಗೂ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ! ಈಗ ಖಾದಿ ಬಟ್ಟೆಯ ಕುರ್ತಾ, ಸ್ಯಾರಿ, ಪೈಜಾಮ ಅನೇಕ ವಿನ್ಯಾಸದ ಬಟ್ಟೆಗಳು ದೊರೆಯುತ್ತಿದ್ದು ಸಾಮಾನ್ಯ ಬೆಲೆಯಿಂದ ಹಿಡಿದು ದುಬಾರಿ ಬೆಲೆಯಲ್ಲೂ ಈ ಬಟ್ಟೆಗಳು ದೊರೆಯುತ್ತಿದೆ. ಖಾದಿ ಬಟ್ಟೆ ಧರಿಸಿದರೆ ಅದು ನಿಮಗೆ ಫ್ರೊಫೆಷನ್ ಮತ್ತು ಗೌರವ ಲುಕ್ ನೀಡುತ್ತದೆ.
ಖಾದಿ ಬಟ್ಟೆಯ ಈ ಕೆಳಗಿನ ಡ್ರೆಸ್ ಗಳು ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಿವೆ:
ಖಾದಿ ಸ್ಯಾರಿ: ಖಾದಿ ಸ್ಯಾರಿಯನ್ನು ಸಾಮಾನ್ಯ ಮಹಿಳೆಯರಿಗೆ ಮಾತ್ರವಲ್ಲ , ಸೆಲೆಬ್ರಿಟಿಯವರಿಗೂ ಅಚ್ಚು ಮೆಚ್ಚಿನ ುಡುಗೆಯಾಗಿದೆ. ಖಾದಿ ಸ್ಯಾರಿ ಉಟ್ಟು ಹಣೆಗೆ ಒಂದು ಬಿಂದಿ ಉಟ್ಟು, ಫ್ಲಾಟ್ ಚಪ್ಪಲಿ ಧರಿಸಿದರೆ ಇದು ನಿಮಗೆ ಮಾಡರ್ನ್ ಲುಕ್ ಜೊತೆ ತುಂಬಾ ಫ್ರೊಫೆಷನಲ್ ಲುಕ್ ಕೊಡುತ್ತದೆ. ಸ್ಯಾರಿಯಲ್ಲೂ ಸಾಮಾನ್ಯ ಬೆಲೆಯ ಸ್ಯಾರಿಯಿಂದ ಹಿಡಿದು ದುಬಾರಿ ಬೆಲೆಯ ಸ್ಯಾರಿಯವರೆಗೂ ಲಭ್ಯವಿದೆ.
ಖಾದಿ ದುಪ್ಪಟ: ಬೇರೆಲ್ಲಾ ದಪ್ಪಟ್ಟಕ್ಕಿಂತ ಖಾದಿ ದುಪ್ಪಟ್ಟ ನಿಮ್ಮ ಲುಕ್ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಜೀನ್ಸ್ ಮತ್ತು ಟೀ ಶರ್ಟ್ ಧರಿಸಿ ಅಲ್ಟ್ರಾ ಲುಕ್ ನೀಡುತ್ತದೆ.
ಖಾದಿ ಟಾಪ್: ಖಾದಿ ಟಾಪ್ ನಲ್ಲಿ ಸಿಂಪಲ್ ಟಾಪ್ ನಿಂದ ಹಿಡಿದು ಆಕರ್ಷಕ ವಿನ್ಯಾಸದ ಟಾಪ್ ವರೆಗೂ ಲಭ್ಯವಿದೆ. ಖಾದಿಯಲ್ಲೂ ಅನೇಕ ವಿಧಗಳಿವೆ ಫ್ಯಾಬ್ರಿಕ್ ಮಿಶ್ರಿತ ಖಾದಿ, ಶುದ್ಧ ಖಾದಿ ಬಟ್ಟೆ ಹೀಗೆ ಅನೇಕ ವಿಧಗಳಿವೆ. ಜೀನ್ಸ್ ಗೆ ಖಾದಿ ಟಾಪ್ ಧರಿಸಿ ಕೂದಲನ್ನು ಜುಟ್ಟು ಕಟ್ಟಿ ಅಥವಾ ಗಾಳಿಗೆ ಹಾರಾಡಲು ಬಿಟ್ಟರೆ ಸಿಂಪಲ್ ಬ್ಯೂಟಿ ನೀವಾಗುವಿರಿ. ಹುಡುಗರಿಗೆ ಆಕರ್ಷಕವಾದ ಖಾದಿ ಪೈಜಾಮಗಳು ದೊರೆಯುತ್ತದೆ. ಪುರುಷರು ಫಾರ್ಮಲ್ ಡ್ರೆಸ್ ಗಿಂತಲೂ ಖಾದಿ ಪೈಜಾಮದಲ್ಲಿ ತುಂಬಾ ಆಕರ್ಷಕವಾಗಿ ಕಾಣಬಹುದು.
ಖಾದಿ ಪರ್ಸ್ ಅಥವಾ ಬ್ಯಾಗ್: ಖಾದಿ ಬಟ್ಟೆ ಧರಿಸಿದರೆ ಖಾದಿಯಿಂದ ತಯಾರಿಸಿದ ಬ್ಯಾಗ್ ಅಥವಾ ಪರ್ಸ್ ಕೈಯಲ್ಲಿ ಹಿಡಿದರೆ ಮತ್ತಷ್ಟು ಫ್ಯಾಷನೇಬಲ್ ಆಗಿ ಕಾಣಬಹುದು.



Click it and Unblock the Notifications