Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಮಲೇರಿಯಾಕ್ಕೆ ಬಲಿಯಾದ ಪ್ರಮುಖ 5 ವ್ಯಕ್ತಿಗಳು
ಮಲೇರಿಯಾ, ಡೆಂಗ್ಯೂ ಈ ಕಾಯಿಲೆಗಳು ಬಂದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಕಳೆದ ಒಂದು ಶತಕದಿಂದ 150-300 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಮಲೇರಿಯಾ ಕಾಯಿಲೆಗೆ ಸೊಳ್ಳೆಗಳು ಕಾರಣವಾಗಿವೆ. ಅದರಲ್ಲೂ ಹೆಣ್ಣು ಸೊಳ್ಳೆಗಳು ಮಲೇರಿಯಾ ಕಾಯಿಲೆ ಹರಡಲು ಪ್ರಮುಖ ಕಾರಣವಾಗಿವೆ. ಹೆಣ್ಣು ಸೊಳ್ಳೆ 2 ತಿಂಗಳ ಕಾಲ ಬದುಕಿದರೆ, ಗಂಡು ಸೊಳ್ಳೆ 14 ದಿನಗಳ ಕಾಲ ಮಾತ್ರ ಬದುಕುತ್ತದೆ.
ಸೊಳ್ಳೆಗಳು ಕೊಳಚೆ ಪ್ರದೇಶದಲ್ಲಿ ಮೊಟ್ಟೆ ಹಾಕಿ ಮರಿ ಮಾಡುತ್ತವೆ. ಈ ರೀತಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಸಂಜೆ ಹೊತ್ತಿನಲ್ಲಿ ಹೆಚ್ಚಿನ ಚಟುವಟಿಕೆಯಿಂದ ಇರುತ್ತವೆ. ಈ ಸೊಳ್ಳೆ ಮನುಷ್ಯನ್ನು ಕಚ್ಚಿದಾಗ ಮಲೇರಿಯಾ, ಡೆಂಗ್ಯೂ ಎಂಬ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಈಗೆಲ್ಲಾ ಈ ಕಾಯಿಲೆಗೆ ಔಷಧಿ ದೊರೆಯುತ್ತಿದ್ದು ಬದುಕಿ ಉಳಿಯುವ ಸಾಧ್ಯತೆ ಇದೆ, ಕೆಲವರಷ್ಟೆ ಸಾವನ್ನಪ್ಪುತ್ತಾರೆ . ಹಿಂದೆ ಈ ಕಾಯಿಲೆಗೆ ಅನೇಕ ಜನರು ಬಲಿಯಾಗಿದ್ದಾರೆ. ಇಲ್ಲಿ ನಾವು ಮಲೇರಿಯಾ ಕಾಯಿಲೆಯಿಂದ ಸಾವನ್ನಪ್ಪಿದ ಪ್ರಮುಖ ವ್ಯಕ್ತಿಗಳ ಬಗ್ಗೆ ಚಿತ್ರ ಮಾಹಿತಿ ನೀಡಿದ್ದೇವೆ ನೋಡಿ:

ಅಲೆಕ್ಸಾಂಡರ್:
ಅಲೆಕ್ಸಾಂಡರ್ ದಿ ಗ್ರೇಟ್ ಎಂದು ಪ್ರಸಿದ್ದವಾಗಿರುವ ಮಸೆಡೊನಿಯದ ಮುಮ್ಮುಡಿ ಅಲೆಕ್ಸಾಂಡರ್ ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಇವನು ಬಹುದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದನು. ಅಲೆಕ್ಸಾಂಡರ್ ಸಾಯುವ ಹೊತ್ತಿಗೆ ಸಾಕಷ್ಟು ಪ್ರದೇಶವನ್ನು ವಶಪಡಿಸಿಕೊಂಡಿದ್ದು ಗ್ರೀಸ್ ನಿಂದ ಹಿಮಾಲಿಯದ ತಪ್ಪಲಿನವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದನು.

ಕ್ಯಾರಾವಾಗ್ಗಿಯೋ:
ಈತ ಇಟಲಿಯ ಪ್ರಸಿದ್ಧ ಚಿತ್ರಕಾರನಾಗಿದ್ದ. ಈತನ ಚಿತ್ರಗಳು ವಾಸ್ತವಕ್ಕೆ ತುಂಬಾ ಹತ್ತಿರವಾಗಿದ್ದವು. ಬದುಕಿರುವಾಗ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದ ಈತ ಮಲೇರಿಯಾ ಕಾಯಿಲೆಯಿಂದ ಸಾವನ್ನಪ್ಪಿದನು.

ಲಾರ್ಡ್ ಬೈರೂನ್ :
ಬೈರೂನ್ ಇಂಗ್ಲೇಂಡ್ ನ ಪ್ರಸಿದ್ಧ ಕವಿಯಾಗಿದ್ದು ಅತೀ ಚಿಕ್ಕ ವಯಸ್ಸಿನಲ್ಲಿ ಮರಣವಪ್ಪಿದನು. ಈತ ಬರೆದ ರೊಮ್ಯಾಂಟಿಕ್ ಕವತೆಗಳು ಇಂದಿಗೂ ಜನಪ್ರಿಯತೆಯನ್ನು ಗಳಿಸಿದ್ದು 1824 ಏಪ್ರಿಲ್ 19 ರಂದು ಮಲೇರಿಯಾದಿಂದ ಇಹಲೋಕವನ್ನು ತ್ಯಜಿಸಿದರು.

ಅಮರೇಶ್ ಪುರಿ:
ಅಮರೇಶ್ ಪುರಿ ಭಾರತೀಯ ನಟ. ಹಿಂದಿ, ಕನ್ನಡ, ಹಾಲಿವುಡ್, ಪಂಜಾಬಿ, ಮಲೆಯಾಳ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇವರು 2005ರಲ್ಲಿ ಮಲೇರಿಯಾ ಬಂದು ಚಿಕಿತ್ಸೆ ತೆಗೆದುಕೊಳ್ಳುತ್ತಿರುವಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದರು.

ಓಲಿವರ್ ಕ್ರಾಂವೆಲ್:
ಇವರು ಇಂಗ್ಲೀಷ್ ಮಿಲಿಟರಿ ಹಾಗೂ ಬ್ರಿಟನ್ ನ ರಾಜಕೀಯ ನಾಯಕರಾಗಿದ್ದರು. ನಂತರ ಕಾಮನ್ ವೆಲ್ತ್ ಇಂಗ್ಲೇಂಡ್ ನ ಲಾರ್ಡ್ ಪ್ರೊಟೆಕ್ಟರ್ ಆಗಿದ್ದರು. 1658 ಸೆಪ್ಟಂಬರ್ 3 ರಂದು ಮಲೇರಿಯಾ ಕಾಯಿಲೆಯಿಂದ ಮೃತಪಟ್ಟರು.



Click it and Unblock the Notifications
