ಡಯಾನಾಳ ಸಾವು ಆಕಸ್ಮಿಕವೇ, ಕೊಲೆಯೇ?

ರಾಜಕುಮಾರಿ ಡಯಾನಾ ಈಗ ಒಂದು ದಂತಕಥೆ. ಸುರಸುಂದರಿಯಾಗಿದ್ದು ತುಂಬ ಜನಪ್ರಿಯವಾಗಿದ್ದ ಈ ರಾಜಕುಮಾರಿಯ ಬಗ್ಗೆ ಅನೇಕ ಗಾಸಿಪ್ ಗಳು ಕೇಳಿ ಬರುತ್ತಾ ಇದ್ದೆವು. 1997ರ ಆಗಸ್ಟ್ 31ರಂದು ನಡೆದ ಅಪಘಾತದಲ್ಲಿ ದುರಂತ ಅಂತ್ಯವನ್ನು ಕಂಡಳು. ಅವಳ ಸಾವಿನ ನಂತರ ಡಯಾನಾಳ ಸಾವಿನ ಹಿಂದೆ ಅನೇಕ ಪಿತೂರಿಗಳಿದ್ದವು, ಅವಳನ್ನು ಕೊಲೆ ಮಾಡಿಸಲಾಗಿದೆ ಎಂಬ ಗಾಸಿಪ್ ಗಳು ಕೇಳಿ ಬರುತ್ತಾ ಇವೆ. ಡಯಾನಾ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಡಿಯ ತಂದೆ ಮೊಹಮ್ಮದ್ ಅಲ್ ಪಾಯೆದ್ ಅವರನ್ನು ಪ್ರತಿನಿಧಿಸುತ್ತಿರುವ 68ರ ಹರೆಯದ ವಕೀಲ ಮ್ಯಾನ್‌ಫೀಲ್ಡ್ ಅಭಿಪ್ರಾಯಪಟ್ಟಿದ್ದಾರೆ.

ಈ ಅಪಘಾತದಲ್ಲಿ ಡಯಾನಾ ಪ್ರಿಯಕರ ಎಂದು ಹೇಳಲಾಗಿರುವ ದೋಡಿ ಕೂಡ ಮೃತರಾಗಿದ್ದರು. ಈ ಸಾವಿನ ಸುತ್ತ ಇವತ್ತಿಗೂ ಈ ಕೆಳಗಿನ ಅಭಿಪ್ರಾಯಗಳು ಕೇಳಿ ಬರುತ್ತಾ ಇವೆ.

Controversies Abot Pricess Diana's Death

1. ಪಾಪಾರಾಜಿಗಳಿಂದಾಗಿ ಅಪಘಾತ ಸಂಭವಿಸಿತು: ಡಯಾನಾ ಎಲ್ಲಿ ಹೋದರು ಪಾಪಾರಾಜಿಗಳು ಮಾಧ್ಯಮದವರು ಹಿಂಬಾಲಿಸುತ್ತಿದ್ದರು. ಡಯಾನಾ ತನ್ನ ಪ್ರಿಯಕರ ದೋಡಿ ಜೊತೆ ತಿರುಗುವುದನ್ನು ಫೋಟೊ ಜೊತೆ ಪ್ರಚಾರ ಮಾಡುತ್ತಿದ್ದರು. ಇದರಿಂದ ಡಯಾನಾಳಿಗೆ ಸಾಕಷ್ಟು ಮಾನಸಿಕ ಹಿಂಸೆ ಆಗುತ್ತಿತ್ತು. ಪಾಪಾರಾಜಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ವೇಗವಾಗಿ ಗಾಡಿ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಯಿತು. ಪಾಪಾರಾಜಿಗಳು ಹಿಂಬಾಲಿಸದೆ ಇದ್ದಿದ್ದರೆ ಆ ರೀತಿ ಆಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಾ ಇವೆ.

2. ರಾಜಮನೆತನದ ಗೌರವ ಕಾಪಾಡಲು ಡಯಾನಾಳ ಕೊಲೆಯಾಯಿತು: ಬ್ರಿಟನ್ ನ ಏಜೆನ್ಸಿ MI6 ಬ್ರಿಟನ್ ನ ರಾಜಮನೆತನದ ಗೌರವವನ್ನು ಕಾಪಾಡಿಕೊಂಡು ಬರುವ ಕಾರ್ಯವನ್ನು ನಿರ್ವಹಿಸುತ್ತಿದೆ. ಡಯಾನಾಳ ನಡುವಳಿಕೆಯಿಂದ ಬ್ರಿಟನ್ ನ ರಾಜಮನೆತನಕ್ಕೆ ಕುಂದು ಉಂಟಾಗಬಹುದೆಂದು ಅವಳನ್ನು ಕೊಲೆ ಮಾಡಿಸಲಾಗಿದೆ ಎಂಬ ಗಾಸಿಪ್ ಕೂಡ ಕೇಳಿ ಬಂದಿದೆ. ಈ ಸಂಶಯ ಬರಲು ಕಾರಣ ಡಯಾನಾಳಿದ್ದ ಗಾಡಿ ಪುಡಿಪುಡಿಯಾಗಿ ಯಾರೂ ಬದುಕುಳಿಯುವ ಸಾಧ್ಯತೆ ಇರಲಿಲ್ಲ. ಆದರೆ ಡ್ರೈವರ್ ಮಾತ್ರ ಬದುಕಿಳಿದಿದ್ದ, ಆ ಡ್ರೈವರ್ ಮಾಜಿ ಸೈನಿಕನಾಗಿದ್ದ. ಇವೆಲ್ಲಾ ಅಂಶಗಳನ್ನು ಒಂದಕ್ಕೊಂದು ತಾಳಿ ಮಾಡಿ ಕೆಲವರು ಅವಳನ್ನು ಕೊಲೆ ಮಾಡಲಾಗಿದೆ ಎಂಬ ಅಭಿಪ್ರಾಯವನ್ನು ಹೇಳುತ್ತಾರೆ.

4 ರಾಜಮನೆತನವರು ಕೊಲೆ ಮಾಡಿಸಿರಬಹುದು: ಡಯಾನ ರಾಜಕುಮಾರ ಪ್ರಿನ್ಸ್ ಗೆ ವಿಚ್ಛೇದನ ನೀಡಿ ತನ್ನ ಪ್ರಿಯಕರ ದೋಡಿ ಜೊತೆ ಸುತ್ತುತ್ತಿರುವುದು ರಾಜಮನೆತನಕ್ಕೆ ಮುಜುಗರವನ್ನು ತರುತ್ತಿತ್ತು. ಇದರಿಂದಾಗಿ ಕೊಲೆ ಮಾಡಿಸಿರಬಹುದೆಂಬ ಸಂಶಯ ವ್ಯಕ್ತ ಪಡಿಸುತ್ತಾರೆ.

5. ಡೋಡಿಯನ್ನು ಗುರಿಮಾಡಲಾಗಿತ್ತು: ರಾಜಕುಮಾರಿ ಪ್ರಯಾಣಿಸುತ್ತಿದ್ದದ್ದು ಅವಳ ಬಾಯ್ ಫ್ರೆಂಡ್ ದೋಡಿಯ ಕಾರ್ ಆಗಿತ್ತು. ಅವನ ತಂದೆ ತುಂಬಾ ಶ್ರೀಮಂತನಾಗಿದ್ದು ಸ್ವಲ್ಪ ಶತ್ರುಗಳು ಕೂಡ ಇದ್ದರು. ದೋಡಿಯ ತಂದೆಯ ಶತ್ರುಗಳು ದೋಡಿಯನ್ನು ಅಪಘಾತದಲ್ಲಿ ಸಾಯಿಸಲು ಪ್ಲಾನ್ ಮಾಡಿರಬಹುದು, ಆಗ ಜೊತೆಗಿದ್ದ ಡಯಾನಾ ಕೂಡ ಅಂತ್ಯಳಾದಳು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಾ ಇವೆ.

X
Desktop Bottom Promotion