Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮೇದೋಜೀರಕ ಗ್ರಂಥಿ ದಾನ ಮಾಡಿದ 2 ವರ್ಷದ ಬಾಲಕ..! ಸೆಲ್ಯೂಟ್ ಮಾಡಿದ ಸಿಬ್ಬಂದಿ..!!
ನಾವು ಮರಣ ಹೊಂದಿದ ಬಳಿಕವೂ ಜೀವಿಸಬೇಕು ಅಂದ್ರೆ ಅಂಗಾಂಗ ದಾನ ಮಾಡಬೇಕಾಗುತ್ತದೆ. ಅಂಗಾಂಗ ದಾನ ಮಾಡೋದ್ರಿಂದ ನಾವು ಮತ್ತೊಬ್ಬರಿಗೆ ಜೀವನ ನೀಡಿದಂತೆ. ಹಿಂದಿನಿಂದಲೂ ಅಂಗಾಂಗ ದಾನ ಮಾಡುವುದು ನಾವು ನೋಡಬಹುದು. ಇಡೀ ದೇಹವನ್ನೇ ದಾನ ಮಾಡುವವರು ಕೂಡ ಇದ್ದಾರೆ. ನಾವು ಮರಣ ಹೊಂದಿದ ಬಳಿಕ ನಮ್ಮ ಅಂಗಾಂಗಳು ಕೆಲಸಕ್ಕೆ ಬರುತ್ತವೆ. ಕಣ್ಣು, ಕಿಡ್ನಿ, ಹೃದಯ ಸೇರಿ ಹಲವು ಅಂಗಗಳನ್ನು ಬೇರೆಯವರಿಗೆ ಕಸಿ ಮಾಡುವ ಮೂಲಕ ಅವರ ಜೀವನ ಬೆಳಗಬಹುದು.
ಹಾಗೆ ಇಲ್ಲೊಬ್ಬ 2 ವರ್ಷದ ಬಾಲಕ ಈಗ ಮೇದೋಜೀರಕ ಗ್ರಂಥಿ ಸೇರಿ ತನ್ನ ಹಲವು ಅಂಗಗಳ ದಾನ ಮಾಡಿ ಹತ್ತಾರು ಜನರಿಗೆ ನೆರವಾಗಿರುವುದಿಲ್ಲದೆ ಮಾನವೀಯ ಕಾರ್ಯದ ಮೂಲಕ ಹೆಸರಾಗಿದ್ದಾರೆ. ಕೀನ್ಯಾದ ಬಾಲಕ ಭಾರತದಲ್ಲಿ ತನ್ನ ಅಂಗಾಂಗ ದಾನ ಮಾಡುವ ಮೂಲಕ ಈ ದೇಶದ ಮೊಟ್ಟ ಮೊದಲ ಪ್ರಕರಣ ಎಂಬುದಕ್ಕೂ ಹೆಸರಾಗಿದೆ.

2 ವರ್ಷದ ಕೀನ್ಯಾದ ಬಾಲಕ ಚಂಡೀಗಢದ PGIMER ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿದ್ದು ಮೇದೋಜೀರಕ ಗ್ರಂಥಿ ದಾನ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಕೀರ್ತಿಗೂ ಪಾತ್ರರಾದರು. ಆತ ಮನೆಯಲ್ಲಿ ಆಟವಾಡುವಾಗ ಕುಸಿದು ಬಿದ್ದು ಬ್ರೈನ್ ಡೆಡ್ ಆಗಿತ್ತು. ಬರೋಬ್ಬರಿ 10 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು.
ಈಗ ಆತನಿಂದ ಮೇದೋಜೀರಕ ಗ್ರಂಥಿ, ಕಣ್ಣು, ಕಿಡ್ನಿಗಳನ್ನೂ ಪಡೆಯಲಾಗಿದೆ. ಲುಂಡಾ ಕಯುಂಬಾ ಎಂಬ 2 ವರ್ಷದ ಬಾಲಕ ಭಾರತದಲ್ಲಿ ಕುಟುಂಬಸ್ಥರೊಂದಿಗೆ ನೆಲಸಿದ್ದ ಆದ್ರೆ ಆಟವಾಡುವಾಗ ಬಿದ್ದು ಗಾಯಗೊಂಡಿದ್ದ. ಆಸ್ಪತ್ರೆಗೆ ಕರೆತಂದಾಗ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು. ಆದ್ರೆ ಕುಟುಂಬಸ್ಥರು ಆತನ ದೇಹದ ಅಂಗಾಂಗಳ ದಾನ ಮಾಡುವ ನಿರ್ಧಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವಿದೇಶಿ ಬಾಲಕನೊಬ್ಬ ಮೊಟ್ಟ ಮೊದಲ ಬಾರಿಗೆ ತನ್ನ ಅಂಗಾಂಗ ದಾನ ಮಾಡಿದ ಪ್ರಕರಣ ಇದಾಗಿದೆ. ಆತನಿಂದ ಪಡೆದ ಅಂಗಾಂಗಳನ್ನು ಒಟ್ಟು ನಾಲ್ಕು ಜನರಿಗೆ ಕಸಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಲುಂಡಾ ಕಯುಂಬಾ ಆತನನ್ನು ಪ್ರೀತಿಯಿಂದ ಪ್ರಾಸ್ಟರ್ ಎಂದು ಕರೆಯಲಾಗುತ್ತಿತ್ತು. ಆತ ಅಕ್ಟೋಬರ್ 17 ರಂದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಪ್ರಾಸ್ಪರ್‌ನ ಕಾರ್ನಿಯಾಗಳ ಕಸಿ ಮಾಡುವಿಕೆಯು ಈ ಹಿಂದೆ ಕಾರ್ನಿಯಲ್ ಕುರುಡರಾಗಿದ್ದ ಇಬ್ಬರು ವ್ಯಕ್ತಿಗಳಿಗೆ ತಮ್ಮ ದೃಷ್ಟಿಯನ್ನು ಮರಳಿ ಪಡೆಯಲು ಸಹಾಯ ಮಾಡಿದೆ.
ಸಾವಿನಲ್ಲೂ ಸಾರ್ಥಕತೆ ಕಂಡ ಕುಟುಂಬಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆ ಅವರ ಕಾರ್ಯ ಇನ್ನೊಂದಿಷ್ಟು ಜನರಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಲಾಗಿದೆ. 2 ವರ್ಷದ ಬಾಲಕನಂತೆ ಉಳಿದ ಮಂದಿ ಕೂಡ ಅಂಗಾಂಗ ದಾನ, ದೇಹದಾನ, ರಕ್ತದಾನದಂತಹ ಮಹತ್ ಕಾರ್ಯಗಳ ಮಾಡುವುದಕ್ಕೆ ಪ್ರೇರೇಪಿಸಲಾಗುತ್ತಿದೆ.



Click it and Unblock the Notifications
