ಖುಷಿಯ ಸೀಕ್ರೆಟ್: ಬೇರೆಯವರಿಗಾಗಿ, ಬೇರೆಯವರ ಖುಷಿಗಾಗಿ ಬದುಕಲು ಸಾಧ್ಯವೇ?

ಎಷ್ಟೋ ಬಾರಿ ಅನಿಸುತ್ತೆ ನಾವು ಹಾಗಿದ್ದರೆ ಚೆನ್ನಾಗಿರುತ್ತಿತ್ತು. ಹೀಗೆ ನಡೆದುಕೊಂಡಿದ್ದರೆ ಅವರಿಗೂ ಖುಷಿಯಾಗುತ್ತಿತ್ತೇನೋ ಎಂದು. ಆದರೆ ಇದೆಲ್ಲ ನಮ್ಮ ಭಾವನೆಗಳು ಅಷ್ಟೇ. ಯಾವುದೇ ಒಬ್ಬ ವ್ಯಕ್ತಿಯನ್ನು ನಾವು ಸಂತೋಷದಿಂದ ಇಡಲು ಸಾಧ್ಯವೇ ಇಲ್ಲ ಅಥವಾ ಅವರನ್ನ ತೃಪ್ತಿಪಡಿಸಲು ಸಾಧ್ಯವೇ ಇಲ್ಲ. ಯಾರನ್ನಾದರೂ ಸಂತೋಷ ಪಡಿಸಲು ಪ್ರಯತ್ನಿಸಿದರೆ ಅದು ವ್ಯರ್ಥ ಪ್ರಯತ್ನವಾಗುತ್ತದೆಯೇ ಹೊರತು ಜೀವನಪರ್ಯಂತ ಆ ವಿಷಯದಲ್ಲಿ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯವೇ ಇಲ್ಲ.

ಹೌದು, ನಾವು ಮಾತ್ರವಲ್ಲ ದೇವರು ಕೂಡ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಉದಾಹರಣೆಗೆ ನೋಡಿ ನಾವು ಎಷ್ಟೋ ಬಾರಿ ದೇವರನ್ನ ದೂರುತ್ತೇವೆ. ನನಗೆ ಅದನ್ನು ಕೊಟ್ಟೆ, ಇದನ್ನು ಕೊಟ್ಟಿಲ್ಲ ಅಂತ ಬೈದುಕೊಳ್ಳುತ್ತೇವೆ ಇದರ ಜೊತೆಗೆ ಕೆಟ್ಟವರು ಕೂಡ ದೇವರನ್ನು ಪೂಜಿಸುತ್ತಾರೆ. ಜೊತೆಗೆ ನಿಂದಿಸುತ್ತಾರೆ ಹಾಗಂದ ಮಾತ್ರಕ್ಕೆ ದೇವರು ಎಲ್ಲರನ್ನ ಖುಷಿಯಾಗಿ ಇಡಲು ಮಾಡಬಾರದನ್ನ ಮಾಡಲು ಸಾಧ್ಯವಿಲ್ಲ ಅಲ್ಲವೇ? ಹಾಗಾಗಿ ದೇವರು ಕೂಡ ಒಬ್ಬ ಮನುಷ್ಯನನ್ನು ತೃಪ್ತಿಯಿಂದ ಇಡಲು ಸಾಧ್ಯವೇ ಇಲ್ಲ.

Happy secret

ಸಂತೋಷ ಮನಸ್ಸಿಗೆ ಸಂಬಂಧಪಟ್ಟದ್ದು!
ಮೊಟ್ಟಮೊದಲನೆಯದಾಗಿ ನಾವು ಯಾರಿಂದಲಾದರೂ ಸಂತೋಷವಾಗಿ ಇರಬಲ್ಲೆವು ಅಥವಾ ನಾವು ಬೇರೆಯವರಿಗೆ ಸಂತೋಷ ಕೊಡಬಲ್ಲೆವು ಎಂದು ಅಂದುಕೊಳ್ಳುವುದೇ ದೊಡ್ಡ ತಪ್ಪು. ಸಂತೋಷ ಎನ್ನುವುದು ನಮ್ಮ ಮನಸ್ಸಿನಲ್ಲಿ ನಮ್ಮ ದೃಷ್ಟಿಕೋನದಲ್ಲಿ ಇರುವಂತದ್ದು. ನಾವು ಬೇರೆಯವರನ್ನು ಉತ್ತಮರು ಎಂದು ಭಾವಿಸಿದರೆ ಆಗ ನಮ್ಮ ಎದುರಿಗೆ ಇರುವವರು ಒಳ್ಳೆಯವರಾಗಿ ಕಾಣಿಸುತ್ತಾರೆ ಅವರಿಂದ ನಮ್ಮ ಮನಸ್ಸಿಗೆ ಸಂತೋಷವೂ ಸಿಗುತ್ತದೆ. ಅದೇ ನಮ್ಮ ಎದುರಿಗೆ ಇರುವ ವ್ಯಕ್ತಿ ಕೆಟ್ಟವರು ಎಂದು ಭಾವಿಸಿದರೆ ಅವರು ಎಷ್ಟು ದೊಡ್ಡ ಕೆಲಸ ಮಾಡಿದರು ಕೂಡ ಅದು ನಮ್ಮ ಮನಸ್ಸಿಗೆ ಖುಷಿ ಕೊಡುವುದಿಲ್ಲ.

ಬೇರೆಯವರ ಖುಷಿಗಾಗಿ ಬದಲಾಗುವುದು!
ಈ ರೀತಿ ಯೋಚನೆ ಮಾಡುವುದು ಕೂಡ ತಪ್ಪು. ಅದೆಷ್ಟೋ ಬಾರಿ ನಾವು ನಮಗೆ ಇಷ್ಟವಾದ ಬಟ್ಟೆ ಬದಲಿಗೆ ಬೇರೆಯವರು ಏನೆಂದು ಕೊಳ್ಳುತ್ತಾರೋ ಎಂದು ವಿಚಾರ ಮಾಡಿ ಸಮಾಜಕ್ಕೆ ಸರಿ ಎನಿಸುವಂತಹ ಬಟ್ಟೆ ಧರಿಸುತ್ತೇವೆ. ಹಾಗಂದ ಮಾತ್ರಕ್ಕೆ ಸಮಾಜದಲ್ಲಿ ಇರುವ ಎಲ್ಲರಿಗೂ ಅದು ಇಷ್ಟವಾಗುತ್ತದೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ. ಒಬ್ಬರಿಗೆ ನೀವು ಧರಿಸಿರುವ ಬಟ್ಟೆ ಇಷ್ಟವಾದರೆ ಇನ್ನೊಬ್ಬರಿಗೆ ಇಷ್ಟವಾಗದೆ ಇರಬಹುದು ಒಬ್ಬರಿಗೆ ನಿಮ್ಮ ಸ್ವಭಾವ ಇಷ್ಟವಾದರೆ ಇನ್ನೊಬ್ಬರಿಗೆ ನಿಮ್ಮ ಸ್ವಭಾವ ಕಿರಿಕಿರಿ ಎನಿಸಬಹುದು. ಅಂದರೆ ನಾವು ಇರುವ ರೀತಿಯಲ್ಲಿ ಯಾವ ಬದಲಾವಣೆ ಮಾಡಿಕೊಂಡರು ಕೂಡ ಒಬ್ಬರಲ್ಲ ಒಬ್ಬರಿಗೆ ಅದರಿಂದ ಸಮಸ್ಯೆ ಇದ್ದೇ ಇರುತ್ತದೆ. ನೀವು ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಯಾರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ನಿಮಗೆ ಸೂಕ್ತವಾದ ಬದಲಾವಣೆ ಬೇಕು ಎಂದು ಅನಿಸಿದರೆ ನೀವು ನಿಮಗಾಗಿ ಬದಲಾಗಿ ಹೊರತು ಬೇರೆಯವರನ್ನ ಮೆಚ್ಚಿಸುವುದಕ್ಕೆ ಅಲ್ಲ.

ಬೇರೆಯವರಿಗಾಗಿ ಬದುಕುವುದು!

ಹಲವು ಬಾರಿ ನಾವು ನಮ್ಮ ಸ್ವಂತಿಕೆ ಅನ್ನೋದನ್ನ ಮರೆತೇ ಬಿಡುತ್ತೇವೆ. ಬೇರೆಯವರ ಖುಷಿಗಾಗಿಯೇ ನಮ್ಮ ಬದುಕನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಾನು ಹೀಗಿದ್ದರೆ ಅವರಿಗೆ ಖುಷಿ ಆಗಬಹುದು ನಾನು ಹೀಗೆ ಬದಲಾದರೆ ಅವರಿಗೆ ಆನಂದವಾಗಬಹುದು ಎಂದು ಬಯಸುತ್ತೇವೆ ಆದರೆ ಇದು ಅಕ್ಷರಶಃ ತಪ್ಪು. ನೀವು ಏನೇ ಸಾಧನೆ ಮಾಡಿದರು ಕೂಡ ಅದರಲ್ಲಿ ಒಂದು ಹುಳುಕು ಹುಡುಕುವ ಜನರು ಇದ್ದೇ ಇರುತ್ತಾರೆ ಹಾಗಾಗಿ ನಿಮ್ಮ ಪರಿವರ್ತನೆ ಅಂತಹ ಜನರ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂಬುದನ್ನು ನೆನಪಿಡಿ.

ಅವರಿಗೆ ಇಷ್ಟವಾಗುತ್ತಿಲ್ಲ ಪರವಾಗಿಲ್ಲ ಬಿಡಿ!
ನಮ್ಮ ಪ್ರತಿ ನಡೆ-ನುಡಿ, ಆಚಾರ ವಿಚಾರ, ತೊಡುವ ಬಟ್ಟೆ ಧರಿಸುವ ಮೇಕಪ್, ಊಟ ತಿಂಡಿ ಎಲ್ಲವೂ ಬೇರೆಯವರು ನೋಡಿದರೆ ಏನೆಂದುಕೊಳ್ಳುತ್ತಾರೋ ಎನ್ನುವ ಆಲೋಚನೆಯ ಸುತ್ತವೇ ಸುತ್ತುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ನಾವು ನಮಗೆ ಬೇಕಾದ ಹಾಗೆ ಬದುಕುವುದನ್ನೇ ಮರೆತುಬಿಡುತ್ತೇವೆ. ಎದುರಿಗೆ ಇರುವವರಿಗಾಗಿ ನಮ್ಮ ಪದ್ಧತಿಗಳನ್ನು, ನಾವಿರುವ ರೀತಿಗಳನ್ನು ಬದಲಾಯಿಸಿಕೊಳ್ಳಲು ಹೋಗುತ್ತೇವೆ ಇದು ಒತ್ತಾಯಪೂರ್ವಕವಾದ ಬದಲಾವಣೆ ಆಗಿರುತ್ತದೆ ಹೊರತು ನಮ್ಮ ಮನಸ್ಸಿಗೆ ಇಷ್ಟಪಟ್ಟು ಆಗಿರುವಂತಹ ಬದಲಾವಣೆ ಆಗಿರುವುದಿಲ್ಲ. ಇದರಿಂದಾಗಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗುತ್ತೀರಿ. ಬೇರೆಯವರು ನಿಮ್ಮ ಈ ಬದಲಾವಣೆಯನ್ನು ಗುರುತಿಸುವುದಿಲ್ಲ ಬದಲಾಗಿ ಈ ಬದಲಾವಣೆಯಲ್ಲಿಯೂ ಕೂಡ ತಪ್ಪನ್ನು ಹುಡುಕುತ್ತಾರೆ.

ನೀವು ಇರುವ ರೀತಿ ಬೇರೆಯವರಿಗೆ ಇಷ್ಟವಾಗುತ್ತಿಲ್ಲ ಪರವಾಗಿಲ್ಲ ಬಿಡಿ, ನೀವು ಬೇರೆಯವರನ್ನ ಖುಷಿ ಪಡಿಸಲು ಸಾಧ್ಯವಾಗುತ್ತಿಲ್ಲ ಪರವಾಗಿಲ್ಲ ಬಿಡಿ, ಸೃಷ್ಟಿಕರ್ತನಿಗೆ ಸೃಷ್ಟಿಸಿದ ಜನರನ್ನ ತೃಪ್ತಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದ ಮೇಲೆ ನಾವಂತೂ ಹುಲು ಮಾನವರು, ನಾವು ಯಾರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲ. ಹಾಗಾಗಿ ನೀವು ಯಾವುದು ಸರಿ ಎನಿಸುತ್ತೋ ಹಾಗೆ ಜೀವಿಸಿ. ನಿಮ್ಮ ಮನಸ್ಸಿಗೆ ಖುಷಿ ಇದ್ದರೆ ಅದೇ ರೀತಿ ವರ್ತಿಸಿ. ಅದರ ಹೊರತಾಗಿ ಬೇರೆಯವರಿಗಾಗಿ ನಿಮ್ಮ ಜೀವನವನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುವುದು ವ್ಯರ್ಥ ಪ್ರಯತ್ನ.

English summary

You Cannot Make Everyone Happy That's Ok In Kannada

Happy Seceret: You don't worry, you cannot make everyone happy read on..
Story first published: Wednesday, November 29, 2023, 21:50 [IST]
X
Desktop Bottom Promotion