Latest Updates
-
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು!
ಆಷಾಢದಲ್ಲಿ ಹೆಣ್ಮಕ್ಕಳು ಕೈ-ಕಾಲುಗಳಿಗೆ ಮೆಹಂದಿ ಹಚ್ಚಬೇಕು ಎನ್ನುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ
ಆಷಾಢ ಮಾಸ ಶುರುವಾಗಿದೆ. ಆಷಾಢ ಮಾಸದಲ್ಲಿ ಹಲವಾರು ಆಚರಣೆಗಳನ್ನು ಪಾಲಿಸಲಾಗುವುದು, ಕೆಲವೊಂದು ಆಚರಣೆಗಳನ್ನು ನೋಡಿದಾಗ ಮೂಢನಂಬಿಕೆ ಅನಿಸಿದರೂ ಅದರ ಹಿಂದೆ ವೈಜ್ಞಾನಿಕ ಕಾರಣಗಳಿರುತ್ತದೆ, ಆದರೆ ಬಹುತೇಕರಿಗೆ ಅದು ಗೊತ್ತಿರುವುದಿಲ್ಲ, ಉದಾಹರಣೆಗೆ ಕೈ, ಕಾಲುಗಳಿಗೆ ಮೆಹಂದಿ ಹಾಕುವುದು.
ಆಷಾಢದಲ್ಲಿ ಹೆಣ್ಮಕ್ಕಳು ಕೈ-ಕಾಲುಗಳಿಗೆ ಮೆಹಂದಿ ಹಚ್ಚಬೇಕು ಎಂದು ಹೇಳಲಾಗುವುದು. ಈಗೀನವರಿಗೆ ಈ ಬಗ್ಗೆ ಹೇಳಿದರೆ ಆಷಾಢಕ್ಕೂ, ಕೈ-ಕಾಲುಗಳಿಗೆ ಮೆಹಂದಿ ಹಾಕುವುದಕ್ಕೂ ಏನು ಸಂಬಂಧ ಎಂದನಿಸಬಹುದು. ಈ ರೀತಿ ಅನಿಸುವುದಕ್ಕೂ ಕಾರಣವಿದೆ. ಮನೆಯಲ್ಲಿ ಹಿರಿಯರು ಆಷಾಢ ಕಾಲ ನೀನು ಕೈ-ಕಾಲುಗಳಿಗೆ ಮೆಹಂದಿ ಹಾಕು ಎಂದರೆ ಸಿಟ್ಟು ಬರಬಹುದು, ಆದರೆ ಅದನ್ನು ವೈಜ್ಞಾನಿಕವಾಗಿ ತಿಳಿಸಿ ಹೇಳಿದರೆ ಹೌದಲ್ವಾ ಎಂದನಿಸುವುದು.

ಆಷಾಢದಲ್ಲಿ ಮೆಹಂದಿ ಹಾಕಬೇಕು ಏಕೆ, ಇದರ ಹಿಂದಿನ ವೈಜ್ಞಾನಿಕ ಕಾರಣಗಳೇನು ಎಂದು ನೋಡಿದರೆ:
ಕರ್ನಾಟಕ, ಆಂಧ್ರಪ್ರದೇಶದಲ್ಲಿ ಆಷಾಢದಲ್ಲಿ ಹೆಣ್ಮಕ್ಕಳು ಕೈಗಳಿಗೆ ಮೆಹಂದಿ ಹಚ್ಚುವ ಆಚರಣೆಯಿದೆ. ಅನೇಕ ಕಾರಣಗಳಿಗೆ ಮೆಹಂದಿ ಹಚ್ಚಬೇಕು ಎಂದು ಹೇಳಲಾಗುವುದು, ಅದರಲ್ಲೊಂದು ಪ್ರಮುಖ ಕಾರಣ ಆರೋಗ್ಯ. ಮೆಹಂದಿಯನ್ನು ಕಾಲುಗಳಿಗೆ, ಕೈಗಳಿಗೆ ಹಚ್ಚುವುದರಿಂದ ಮಳೆಗಾಲದಲ್ಲಿ ಉಂಟಾಗುವ ತ್ವಚೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
1. ಆ್ಯಂಟಿಸೆಪ್ಟಿಕ್ ಗುಣವಿದೆ
ಮೆಹಂದಿಯಲ್ಲಿ ಆ್ಯಂಟಿಸೆಪ್ಟಿಕ್ ಗುಣವಿರುವುರಿಂದ ಮಳೆಗಾಲದಲ್ಲಿ ಓಡಾಡುವಾಗ ಕೆಸರು ಕಜ್ಜಿ ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ. ಅಲ್ಲದೆ ಈ ಸಮಯದಲ್ಲಿ ಹಳ್ಳಿ ಕಡೆಯಲ್ಲಿ ಬೆಳೆ ಬೆಳೆಯಲಾಗುವುದು, ರೈತಾಪಿ ಮಹಿಳೆಯರು ಬೆಳಗ್ಗೆಯಿಂದ ಸಂಜೆಯವರೆಗೆ ಮಣ್ಣಿನಲ್ಲಿ ದುಡಿಯುತ್ತಾರೆ, ಆವಾಗ ಕೈ, ಕಾಲುಗಳಲ್ಲಿ ಕೆಸರು ಕಜ್ಜಿ ಉಂಟಾಗುವ ಸಾಧ್ಯತೆ, ಈ ಮೆಹಂದಿ ಹಚ್ಚುವುದರಿಂದ ಇವುಗಳನ್ನು ತಡೆಗಟ್ಟಬಹುದು.
2. ಸಂಧಿವಾತ ಸಮಸ್ಯೆ ತಡೆಗಟ್ಟುತ್ತದೆ.
ಮಳೆಗಾಲದಲ್ಲಿ ಚಳಿಯಿಂದಾಗಿ ಕೈ ಕಾಲುಗಳಲ್ಲಿ ನೋವು ಉಂಟಾಗುವುದು, ಅದರಲ್ಲೂ ಸಂಧಿವಾತದ ನೋವು ಉಂಟಾಗುವುದು. ಇನ್ನು ಹೆಣ್ಮಕ್ಕಳು ಮನೆ ಒರೆಸುವುದು, ಬಟ್ಟೆ ಹೊಗೆಯುವುದು, ಪಾತ್ರೆ ತೊಳೆಯುವುದು ಅಂತ ಅಧಿಕ ಹೊತ್ತು ನೀರಿನಲ್ಲಿ ಕೆಲಸ ಮಾಡುತ್ತಾರೆ. ಈ ಕಾರಣಕ್ಕೆ ಕೈ ಕಾಲುಗಳಲ್ಲಿ ಸೆಳೆತ ಉಂಟಾಗುವುದು. ಇದನ್ನು ತಡೆಗಟ್ಟಲು ಮೆಹಂದಿ ಸಹಕಾರಿಯಾಗಿದೆ.
3. ಮಾನಸಿಕವಾಗಿ ಕೂಡ ಒಳ್ಳೆಯದು
ಮೆಹಂದಿ ಹಚ್ಚುವುದರಿಂದ ದೇಹದಲ್ಲಿ ಪಿತ್ತದ ಅಂಶ ಕಡಿಮೆಯಾಗುವುದು. ಅಲ್ಲದೆ ಮಾನಸಿಕ ಒತ್ತಡ, ಕೋಪ ಈ ಬಗೆಯ ಕಿರಿಕಿರಿಯನ್ನು ಕೂಡ ಮೆಹಂದಿ ಕಡಿಮೆ ಮಾಡುತ್ತದೆ. ಮೆಹಂದಿಯ ಆ ಸುವಾಸನೆ ಮನಸ್ಸಿಗೆ ತುಂಬಾನೇ ಮುದ ನೀಡುವುದು, ಈ ಸುವಾಸನೆಗೆ ಕೋಪವನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ.
4. ಅನೇಕ ಬಗೆಯ ತ್ವಚೆ ಸಮಸ್ಯೆ ಕಡಿಮೆಯಾಗುವುದು
ಮೆಹಂದಿ ಹಚ್ಚಿದರೆ ತುರಿಕೆ, ಮೈಯಲ್ಲಿ ಬೊಬ್ಬೆ ಬರುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಅಲ್ಲದೆ ಗುಳ್ಳೆಗಳು ಅಥವಾ ಕಜ್ಜಿಗಳು ಬೇಗನೆ ಒಣಗುವಂತೆ ಮಾಡುವ ಗುಣ ಮೆಹಂದಿಗೆ ಇದೆ.
5. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ
ಮೆಹಂದಿ ಹಚ್ಚುವುದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿಡುತ್ತದೆ, ಹೀಗಾಗಿ ಒಟ್ಟು ಮೊತ್ತ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು . ಇದರಿಂದ ಹೃದಯದ ಆರೋಗ್ಯಕ್ಕೆ ಕೂಡ ಒಳ್ಳೆಯದು.
ಕಾಮೋತ್ತೇಜಕ ಗುಣವೂ ಇದೆ
ಮದುವೆಗಳಲ್ಲಿ ಮೆಹಂದಿ ಹಚ್ಚುವ ಸಂಪ್ರದಾಯವೇ ಇದೆ. ಈ ಮೆಹಂದಿಗೆ ಕಾಮೋತ್ತೇಜಕ ಗುಣವಿದೆ. ಆದ್ದರಿಂದಲೇ ಮೆಹಂದಿ ಮದುವೆಯಲ್ಲಿ ತುಂಬಾನೇ ಪ್ರಾಮುಖ್ಯತೆ ಗಳಿಸಿದೆ. ಮದುವೆಯಲ್ಲಿ ಮದುಮಗ-ಮದುಮಗಳಿಗೆ ಮೆಹಂದಿ ಹಾಕಿದಾಗಲೇ ಮದುವೆಯ ಕಳೆ ಹೆಚ್ಚುವುದು ಅಲ್ವಾ?
ಹೀಗೆ ನಮ್ಮ ಹಿರಿಯರು ಪಾಲಿಸಿಕೊಂಡು ಬರುವ ಆಚರಣೆಯ ಹಿಂದೆ ಯಾವುದೋ ಒಂದು ಪ್ರಾಮುಖ್ಯತೆ ಇರುತ್ತದೆ, ಅದನ್ನು ತಿಳಿಯಲು ನಾವು ಪ್ರಯತ್ನಿಸಬೇಕಷ್ಟೇ...
ಸೂಚನೆ: ಮೆಹಂದಿ ನೈಸರ್ಗಿಕವಾದದ್ದನ್ನೇ ಬಳಸಿದರೆ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ.



Click it and Unblock the Notifications