Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಶೃಂಗೇರಿ ವಿದ್ಯಾಶಂಕರ ದೇವಾಲಯದಲ್ಲಿರುವ 12 ಕಂಬಗಳಿಗೂ ಸೂರ್ಯಪಥಕ್ಕೂ ಇರುವ ಸಂಬಂಧವೇನು?
ವಿದ್ಯಾಶಂಕರ ದೇವಾಲಯವು ಪ್ರಸಿದ್ಧ ವಿದ್ಯಾತೀರ್ಥ ಲಿಂಗ ಹೊಂದಿದೆ, ಈ ದೇವಾಲಯವನ್ನು ಗುರು ವಿದ್ಯಾಶಂಕರರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ಪ್ರಸಿದ್ಧ ವಿದ್ಯಾತೀರ್ಥ ಲಿಂಗವನ್ನು ಹೊಂದಿದೆ, ಈ ದೇವಾಲಯವನ್ನು ಗುರು ವಿದ್ಯಾಶಂಕರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ಖಗೋಳ ಪರಿಕಲ್ಪನೆಯ 12 ಸ್ತಂಭಗಳು ಇಲ್ಲಿಯ ಪ್ರಮುಖ ಆಕರ್ಷಣೆ.
ವಿದ್ಯಾಶಂಕರ ದೇವಾಲಯವು ಕರ್ನಾಟಕ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಶೃಂಗೇರಿಯಲ್ಲಿರುವ ಈ ದೇವಾಲಯದಲ್ಲಿ 12 ಕಂಬಗಳಿವೆ, ಆ 12 ಕಂಬಗಳ ವಿಶೇಷತೆಯಿಂದಾಗಿ ತುಂಬಾನೇ ಗಮನ ಸೆಳೆಯುವುದು.
ಶೃಂಗೇರಿ ಶಾರದಾಂಬೆಯ ಸನ್ನಿಧಿಗೆ ಹೋದಾಗ ಈ ದೇವಾಲಯವು ಸಿಗುತ್ತದೆ. ಇದನ್ನು ವಿಜಯನಗರ ಸಾಮ್ರಾಜ್ಯದ ಸಂಸ್ಫಾಪಕರಾದ ಹಕ್ಕ-ಬುಕ್ಕರ ಗುರು ಮಹರ್ಷಿ ವಿದ್ಯಾರಣ್ಯರು ಕಟ್ಟಿದರು. ಈ ದೇವಾಲಯದ ವಿಶೇಷತೆಯೆಂದರೆ ಈ ದೇವಾಲಯದಲ್ಲಿ ವಿಜಯನಗರ ಕಾಲದ ಶಿಲ್ಪಕಲೆ ಹಾಗೂ ಹೊಯ್ಸಳ ಶಿಲ್ಪ ಕಲೆಯನ್ನು ಕಾಣಬಹುದು. ಈ ದೇವಾಲಯದ ಶಿಲ್ಪಕಲೆಯ ಪ್ರಮುಖ ಆಕರ್ಷಣೆಯೆಂದರೆ ಅಲ್ಲಿರುವ 12 ಕಂಬಗಳು. ಸೂರ್ಯನ ರಾಶಿ ಬದಲಾವಣೆಗೂ ಆ ಕಂಬಗಳಿಗೂ ಸಂಬಂಧವಿದೆ!

ವಿದ್ಯಾಶಂಕರ ದೇವಾಲಯದಲ್ಲಿ 0.46 ಮೀಟರ್ ಎತ್ತರದ ಭವ್ಯವಾದ ಶ್ರೀ ವಿದ್ಯಾಶಂಕರ ಲಿಂಗವಿದೆ. ಅಲ್ಲದೆ ದೇವಾಲಯದ ಒಳಭಾಗದಲ್ಲಿಯೇ 12 ಕಲ್ಲಿನ ಮಂಟಪವಿದ್ದು ಈ ಕಲ್ಲಿನ ಮೂಲಕ ಸೌರ ಪಥವನ್ನು ಗುರುತಿಸಬಹುದಾಗಿದೆ.
ಪ್ರತಿತಿಂಗಳು ಸೂರ್ಯ ತನ್ನ ರಾಶಿ ಬದಲಾವಣೆ ಮಾಡುತ್ತಾನೆ. ಇಲ್ಲಿರುವ 12 ಕಂಬಗಳು 12 ರಾಶಿಯನ್ನು ಸೂಚಿಸುವುದು ಮಾತ್ರವಲ್ಲ ಸೂರ್ಯ ರಾಶಿ ಬದಲಾವಣೆ ಮಾಡಿದಾಗ ಸೂರ್ಯನ ಮೊದಲ ಕಿರಣ ಆಯಾ ರಾಶಿಯ ಕಲ್ಲಿನ ಮೇಲೆ ಮೊದಲು ಬೀಳುತ್ತದೆ. ಸೂರ್ಯ ಮೇಷ ರಾಶಿಗೆ ಸಂಚರಿಸಿದಾಗ ಮೇಷ ರಾಶಿಯ ಚಿತ್ರವಿರುವ ಕಂಬದ ಮೇಲೆ ಬೀಳುತ್ತದೆ. ಅದರಂತೆ ಪ್ರತಿತಿಂಗಳು ಆಯಾ ರಾಶಿಯ ಕಂಬದ ಮೇಲೆ ಬೀಳುತ್ತಾ ಫೆಬ್ರವರಿ ಸಮಯದಲ್ಲಿ ಮೀನ ರಾಶಿಯ ಕಂಬದ ಮೇಲೆ ಬೆಳಕು ಬೀಳುವುದು.
ಇಲ್ಲಿರುವ 12 ಕಂಬಗಳಲ್ಲಿ ಪ್ರತಿ ರಾಶಿಯ ಪ್ರತಿನಿಧಿ ದೇವತೆಗಳ ಚಿತ್ರವನ್ನು ಕೆತ್ತಲಾಗಿದೆ. ಎರಡೂ ಕಾಲಿನ ಮೇಲೆ ನಿಂತ ಭಂಗಿಯಲ್ಲಿರುವ ಸಿಂಹದ ಮುಂಗಾಲಿನ ಸಂದಿ ಮೂಲಕ ಬರುವ ಸೂರ್ಯನ ರಶ್ಮಿ ಆಯಾ ತಿಂಗಳಿನಲ್ಲಿ ನಿಗದಿತ ರಾಶಿಯ ಮೇಲೆ ಬೀಳುವುದು ತುಂಬಾನೇ ಅಚ್ಚರಿ ಮೂಡಿಸುವುದು. ನಮ್ಮ ಪೂರ್ವಜರು ವಿಜ್ಞಾನ-ವೈದಿಕ ಜ್ಞಾನದಲ್ಲಿ ಎಷ್ಟು ಪಾಂಡಿತ್ಯ ಹೊಂದಿದ್ದರು ಎಂಬುವುದಕ್ಕೆ ಈ ದೇವಾಲಯ ಕೂಡ ಸಾಕ್ಷಿಯಾಗಿದೆ.
ಶೃಂಗೇರಿ ಎಂಥ ಸ್ಥಳ ಎಂಬುವುದರ ಕುರಿತು ಹೇಳುವಾಗ ಈ ಕತೆಯನ್ನು ಹೇಳಲಾಗುವುದು
ಶೃಂಗೇರಿ ಎಂಬುವುದು ಪ್ರಕೃತಿ ಸೌಂದರ್ಯದ ಸುಂದರ ತಾಣ. ಒಮ್ಮೆ ಆದಿ ಶಂಕರಚಾರ್ಯರು ಈ ಸ್ಥಳಕ್ಕೆ ಬರುತ್ತಾರೆ, ಅವರು ಅಲ್ಲಿ ಸುತ್ತಾಡುತ್ತಿರುವಾಗ ಅಲ್ಲಿ ಬಲು ಅಪರೂಪದ ದೃಶ್ಯವೊಂದನ್ನು ಕಾಣುತ್ತಾರೆ. ಉರಿ ಬಿಸಿಲಿನಿಂದ ಗರ್ಭಿಣಿ ಕಪ್ಪೆಗೆ ರಕ್ಷಿಸಲು ಹಾವೊಂದು ಹೆಡೆ ಬಿಚ್ಚಿ ನಿಂತಿದೆ. ಕಪ್ಪೆಯನ್ನು ಕಂಡರೆ ಹಾವು ತಿನ್ನುತ್ತದೆ, ಆದರೆ ಇಲ್ಲಿ ನೋಡಿದರೆ ಕಪ್ಪೆಗೆ ಹಾವೇ ನೆರಳಾಗಿ ನಿಂತಿದೆ, ಆಗ ಇದು ಎಂಥ ಪುಣ್ಯ ಭೂಮಿಯಾಗಿರಬಹುದು ಎಂದು ಭಾವಿಸಿದ ಶಂಕರಚಾರ್ಯರು ತಮ್ಮ ಮಠವನ್ನು ಈ ಸ್ಥಳದಲ್ಲಿಯೇ ನಿರ್ಮಿಸಲು ಬಯಸುತ್ತಾರೆ. ಇಲ್ಲಿಯ ಶಾರದಾ ಪೀಠಕ್ಕೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.



Click it and Unblock the Notifications
