Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮನೆಯಿಂದ ನಕಾರಾತ್ಮ ಶಕ್ತಿ ತೊಲಗಿಸೋದಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್!
ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಗಳು ನಮ್ಮ ಬದುಕಿನಲ್ಲಿ ತುಂಬಾನೇ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಿಂದೂ ಧರ್ಮದಲ್ಲಿ ಋಣಾತ್ಮಕ ಶಕ್ತಿಯನ್ನು ಅತೀ ಹೆಚ್ಚಾಗಿ ನಂಬಲಾಗುತ್ತದೆ. ಯಾಕಂದ್ರೆ ಒಂದು ಸಾರಿ ಮನೆಯೊಳಗಡೆ ಋಣಾತ್ಮಕ ಶಕ್ತಿ ಒಳಹೊಕ್ಕಿದರೆ ಆ ಮನೆಗೆ ಶುಭವಾಗೋದಿಲ್ಲ ಎಂದು ನಂಬಲಾಗಿದೆ. ಅಷ್ಟಕ್ಕೂ ಮನೆಯೊಳಗಡೆ ಋಣಾತ್ಮಕ ಶಕ್ತಿ ಇದೆ ಎಂದು ಗೊತ್ತಾಗೋದು ಹೇಗೆ? ಇದರ ಪರಿಹಾರಕ್ಕಾಗಿ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದನ್ನು ತಿಳಿಯೋಣ.

ಮನೆಯಲ್ಲಿರೋ ಋಣಾತ್ಮಕ ಶಕ್ತಿಯನ್ನು ಗುರುತಿಸೋದು ಹೇಗೆ?
ನಕಾರಾತ್ಮಕ ಶಕ್ತಿಯು ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ. ಅದು ನಮ್ಮ ಸುತ್ತಲೂ ಇರುತ್ತದೆ. ಜೀವನದಲ್ಲಿ ಧನಾತ್ಮಕವಾಗಿರಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಆದರೆ ಕೆಲವೊಂದು ಸಲ ಋಣಾತ್ಮಕ ಆಲೋಚನೆಗಳು ನಮ್ಮ ತಲೆಯಲ್ಲಿ ಬರುತ್ತಲೇ ಇರುತ್ತದೆ. ನಕಾರಾತ್ಮಕ ಶಕ್ತಿಯಿಂದಾಗಿ ಕುಟುಂಬ ಸದಸ್ಯರ ಆರೋಗ್ಯದಲ್ಲೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಆಗಾಗ್ಗೆ ಕುಟುಂಬದಲ್ಲಿ ವಾದಗಳು ಮತ್ತು ಜಗಳಗಳು ಉಂಟಾಗಬಹುದು. ಅಷ್ಟೇ ಅಲ್ಲದೇ, ಇದು ಜನರನ್ನು ಸೋಮಾರಿಯಾಗಿ ಮತ್ತು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ.
ಈ ರೀತಿ ಘಟನಾವಳಿಗಳು ನಡೆದಾಗ ಮನೆಯಿಂದ ಆದಷ್ಟು ಬೇಗ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕುವುದು ತುಂಬಾನೇ ಮುಖ್ಯವಾಗುತ್ತದೆ. ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕೋದಕ್ಕೆ ಈ ರೀತಿ ಮಾಡಿ.
ಕಿಟಕಿ ತೆರೆದಿಟ್ಟು ಗಾಳಿ ಒಳಬರಲು ಅವಕಾಶ ನೀಡಿ!
ಸೂರ್ಯನ ಬೆಳಕಿನ ಧನಾತ್ಮಕ ಶಕ್ತಿಯ ಲಾಭವನ್ನು ಪಡೆದುಕೊಳ್ಳಿ. ಕೋಣೆಯಲ್ಲಿ ನೈಸರ್ಗಿಕ ಬೆಳಕನ್ನು ಒಳಬರಲು ಅವಕಾಶ ನೀಡಿ. ನಿಮ್ಮ ಮನೆಯಿಂದ ವಿಷ ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಸುಲಭವಾದ ಮಾರ್ಗವೆಂದರೆ ಕಿಟಕಿಗಳನ್ನು ತೆರೆದಿಡುವುದು.
ಕೋಪ ಮತ್ತು ಉದ್ವೇಗವು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಕೆಲವು ಲಕ್ಷಣಗಳಾಗಿವೆ. ಮನೆಯನ್ನು ಸ್ವಚ್ಛಗೊಳಿಸಲು ತಾಜಾ ಗಾಳಿಯನ್ನು ಒಳಬರಲು ಬಿಟ್ಟರೆ ನಕಾರಾತ್ಮಕ ಶಕ್ತಿ ಹೊರಹೋಗಲಿ. ಸಾಕಷ್ಟು ನೈಸರ್ಗಿಕ ಸೂರ್ಯನ ಬೆಳಕನ್ನು ಪಡೆಯುವುದರಿಂದ ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡೋದಕ್ಕೆ ಸಹಕರಿಸುತ್ತೆ ಎಂದು ನಂಬಲಾಗಿದೆ.
ಗಾಳಿ ಸಂಚರಿಸೋದಕ್ಕೆ ಅವಕಾಶ ನೀಡಿ!
ನಕಾರಾತ್ಮಕ ಗಾಳಿಯನ್ನು ಹೊರಹಾಕುವ ಮೂಲಕ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ. ಕೋಣೆಗೆ ತಾಜಾ ಗಾಳಿಯನ್ನು ಅನುಮತಿಸಲು ಸಾಧ್ಯವಾದಾಗ ಎಲ್ಲಾ ಕಿಟಕಿಗಳನ್ನು ತೆರೆಯಿರಿ. ಕೊಠಡಿಯಲ್ಲಿರುವ ದಿಂಬುಗಳು, ಹೊದಿಕೆಗಳು ಮತ್ತು ಕಾರ್ಪೆಟ್‌ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಿ.
ಮನೆಯಲ್ಲಿ ಮುರಿದು ಹೋದ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬೇಡಿ!
ವಾಸ್ತು ಶಾಸ್ತ್ರದ ಪ್ರಕಾರ ಪೀಠೋಪಕರಣಗಳು, ಗಡಿಯಾರಗಳು ಮುಂತಾದ ಒಡೆದ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಇಂತಹ ವಸ್ತುಗಳು ಮನೆಯ ಅಲಂಕಾರವನ್ನು ಹಾಳು ಮಾಡುವುದಲ್ಲದೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಈ ವಸ್ತುಗಳನ್ನು ತೆಗೆದುಹಾಕಬೇಕು ಅಥವಾ ಸರಿಪಡಿಸಬೇಕು.
ಉಪ್ಪನ್ನು ಬಳಸಿ!
ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ಮನೆಯ ಋಣಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣ ಹೊಂದಿದೆ. ನೆಲವನ್ನು ಒರೆಸುವಾಗ ನೀರಿಗೆ ಸಮುದ್ರದ ಉಪ್ಪನ್ನು ಸೇರಿಸಿ. ನೀವು ಗುರುವಾರ ಈ ಈ ರೀತಿ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ಗಾಜಿನ ಪಾತ್ರೆಯಲ್ಲಿ ಸಮುದ್ರದ ಉಪ್ಪನ್ನು ಇಡುವುದರಿಂದ ನಿಮ್ಮ ಮನೆಯಿಂದ ನಕಾರಾತ್ಮಕತೆಯನ್ನು ದೂರವಿಡುತ್ತದೆ.
ನಿಮ್ಮ ಬಾತ್‌ರೂಮ್‌ನಲ್ಲಿ ವಾಸ್ತು ದೋಷವಿದ್ದರೆ ಅಲ್ಲಿ ಉಪ್ಪನ್ನು ಇಡುವುದು ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮನೆಯ ಮುಖ್ಯ ಬಾಗಿಲನ್ನು ಕಲ್ಲು-ಉಪ್ಪು ನೀರಿನಿಂದ ಒರೆಸಿದರೆ ನಕಾರಾತ್ಮಕತೆಯು ನಿಮ್ಮ ಮನೆಗೆ ಪ್ರವೇಶಿಸುವುದಿಲ್ಲ.
ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸೋ ಸಸ್ಯಗಳನ್ನು ನೆಡಿ!
ಸಸ್ಯಗಳು ಗಾಳಿಯಿಂದ ವಿಷವನ್ನು ಹೀರಿಕೊಳ್ಳುತ್ತವೆ. ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಧನಾತ್ಮಕ ಶಕ್ತಿ, ಶಾಂತಿ ಮತ್ತು ಸಂತೋಷವನ್ನು ಮನೆಗೆ ತರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯ ಉತ್ತರ ಅಥವಾ ಈಶಾನ್ಯ ಭಾಗದಲ್ಲಿ ಇರಿಸಿ. ಏಕೆಂದರೆ ಇದು ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಓಡಿಸಲು ಮತ್ತು ಮನೆಗೆ ಉತ್ತಮ ಶಕ್ತಿಯನ್ನು ತರಲು ಸಹಾಯ ಮಾಡುತ್ತದೆ.
ಬಿದಿರು ಸಸ್ಯವು ಅದೃಷ್ಟವನ್ನು ತರುತ್ತದೆ. ಇದು ಆರೋಗ್ಯ ಮತ್ತು ಪ್ರೀತಿಯ ಜೀವನವನ್ನು ಉತ್ತಮಗೊಳಿಸುತ್ತದೆ. ರಸದಿಂದ ತುಂಬಿದ ಸಸ್ಯ, ಮತ್ತು ಅಲೋವೆರಾ ದುರದೃಷ್ಟ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರ ಓಡಿಸುತ್ತದೆ. ಜೊತೆಗೆ ಗಾಳಿಯನ್ನು ಶುದ್ಧೀಕರಿಸುತ್ತದೆ. ಜಾಸ್ಮಿನ್ ಸಸ್ಯವು ಉತ್ತಮ ಶಕ್ತಿಯನ್ನು ಆಕರ್ಷಿಸುತ್ತದೆ. ಮತ್ತು ಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಅದೇ ರೀತಿ ಮನಿ ಪ್ಲಾಂಟ್ಸ್, ಪೀಸ್ ಲಿಲ್ಲಿಗಳು, ಸ್ಪೈಡರ್ ಪ್ಲಾಂಟ್‌ಗಳಂತಹ ಸಸ್ಯಗಳು ಮನೆಗೆ ಸಂತೋಷವನ್ನು ತರುತ್ತವೆ ಮತ್ತು ಒಳ್ಳೆಯ ಭಾವನೆಗಳನ್ನು ಜಾಗೃತಗೊಳಿಸುವ ಮೂಲಕ ಕೆಟ್ಟ ಭಾವನೆಗಳನ್ನು ತೆಗೆದುಹಾಕುತ್ತವೆ.
ನಕಾರಾತ್ಮಕ ಶಕ್ತಿ ಹೊರ ಹಾಕಲು ಕರ್ಪೂರವನ್ನು ಸುಡಬೇಕು!
ಕರ್ಪೂರ ಅಥವಾ ಸುಗಂಧ ದ್ರವ್ಯಗಳನ್ನು ಸುಡುವುದರಿಂದ ನಕಾರಾತ್ಮಕ ಶಕ್ತಿ ಹೊರ ಹೋಗುತ್ತೆ ಎಂದು ಬಂನಲಾಗಿದೆ. ಹೀಗಾಗಿ ಮನೆಯಲ್ಲಿ ಪೂಜೆಯ ನಂತರ ಕರ್ಪೂರ ಅಥವಾ ಸುಗಂಧ ದ್ರವ್ಯಗಳನ್ನು ಹಚ್ಚೋದನ್ನು ಮರೀಬೇಡಿ.
ಹೀಗೆ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರ ಹಾಕೋದಕ್ಕೆ ಹಲವಾರು ವಿಧಾನಗಳಿದೆ. ಈ ವಿಧಾನಗಳನ್ನು ಪಾಲಿಸಿದ್ರೆ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂದು ನಂಬಲಾಗಿದೆ.



Click it and Unblock the Notifications
