Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಮನೆಯಲ್ಲಿ ಈ ವಾಸ್ತು ದೋಷಗಳಾದರೆ ಸಾಲ ಗ್ಯಾರಂಟಿ!
ಹೆಚ್ಚಿನ ಮನೆಗಳಲ್ಲಿ ಆರ್ಥಿಕ ಮುಗ್ಗಟ್ಟು ಇದ್ದೇ ಇರುತ್ತದೆ. ಎಷ್ಟೇ ದುಡಿದ್ರೂ ಕೂಡ ಒಂದಲ್ಲ ಒಂದು ತಾಪತ್ರಯ ಎದುರಾಗುತ್ತಲೇ ಇರುತ್ತದೆ. ಕೆಲವೊಂದು ಮನೆಗಳಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿದರೂ ಕೂಡ ತಿಂಗಳ ಕೊನೆಯಾದ್ರೆ ಕೈಯಲ್ಲಿ ದುಡ್ಡು ಉಳಿಯೋದಿಲ್ಲ. ಕೆಲವೊಂದು ಸಲ ಅನವಶ್ಯಕ ವಿಚಾರಗಳಿಗೆ ದುಡ್ಡು ಖರ್ಚು ಮಾಡೋದ್ರಿಂದ ನೀವು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ.

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ನಿಮ್ಮ ಮನೆಯಲ್ಲಿ ಇರುವ ಕೆಲವೊಂದು ವಾಸ್ತು ದೋಷಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವೊಂದು ತಪ್ಪುಗಳು ಆಗಿರಬಹುದು. ಅಂತಹ ತಪ್ಪುಗಳು ಆಗಿದ್ದರೆ ಇಂದೇ ಸರಿಪಡಿಸಿ. ಅಷ್ಟಕ್ಕೂ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವ ವಾಸ್ತು ದೋಷಗಳು ಯಾವುದು ಅನ್ನೋದನ್ನು ತಿಳಿದುಕೊಳ್ಳೋಣ.
ಮಲಗುವ ಕೋಣೆಯ ಹಾಸಿಗೆ ಮುಂದೆ ಕನ್ನಡಿ ಇರಬಾರದು!
ನಿಮ್ಮ ಮಲಗುವ ಕೋಣೆಯಲ್ಲಿ ಹಾಸಿಗೆಯ ಮುಂದೆ ಕನ್ನಡಿ ಇರಬಾರದು. ಇದು ವಾಸ್ತು ದೋಷಗಳಿಗೆ ಪ್ರಮುಖ ಕಾರಣವಾಗಿದೆ. ನಿಮ್ಮ ಮನೆಯಲ್ಲಿಯೂ ಈ ರೀತಿ ಇದ್ದರೆ ಈಗಲೇ ಬದಲಾಯಿಸಿ. ಇಂತಹ ಮನೆಗಳಲ್ಲಿ ಪತಿ-ಪತ್ನಿಯರ ನಡುವೆ ಆಗಾಗ ಜಗಳ ನಡೆಯುತ್ತದೆ. ಮತ್ತಿ ಸುಖ-ಶಾಂತಿಯ ಕೊರತೆ ಕಾಡುತ್ತದೆ. ಅಪ್ಪಿತಪ್ಪಿಯೂ ಹಾಸಿಗೆಯ ಮುಂದೆ ಕನ್ನಡಿ ಹಾಕಬೇಡಿ. ಒಂದು ವೇಳೆ ಆ ಕನ್ನಡಿಯನ್ನು ತೆಗೆದು ಹಾಕಲು ಸಾಧ್ಯವಾಗದಿದ್ದರೆ ಅದನ್ನು ಮುಚ್ಚುವುದು ಒಳ್ಳೆಯದು.
ಅಡುಗೆಮನೆಯ ಒಂದೇ ದಿಕ್ಕಿನಲ್ಲಿ ಗ್ಯಾಸ್ ಸ್ಟೌವ್ ಮತ್ತು ನೀರಿನ ಮೂಲ ಇರಬಾರದು!
ನಿಮ್ಮ ಮನೆಯ ಅಡುಗೆಮನೆಯಲ್ಲಿ ಒಂದೇ ದಿಕ್ಕಿನಲ್ಲಿ ಗ್ಯಾಸ್ ಸ್ಟೌವ್ ಮತ್ತು ನೀರಿನ ಮೂಲವಿದ್ದರೆ ಅದು ಪ್ರಮುಖ ವಾಸ್ತು ದೋಷಕ್ಕೆ ಕಾರಣವಾಗುತ್ತಂತೆ. ತಕ್ಷಣ ಅದನ್ನು ಸರಿಪಡಿಸಿ. ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಈ ರೀತಿ ಇದ್ದರೆ ಪರಸ್ಪರ ಸಂಬಂಧಗಳು ಮಧುರವಾಗಿರುತ್ತವೆ ಮತ್ತು ಹಣದ ಕೊರತೆ ಎದುರಾಗೋದಿಲ್ಲ.
ಮುರಿದ ಬಾಗಿಲು ಮತ್ತು ಕಿಟಕಿಗಳು!
ನಿಮ್ಮ ಮನೆಯ ಕಿಟಕಿಗಳು ಮತ್ತು ಬಾಗಿಲುಗಳು ಮುರಿದಿದ್ದರೆ ಅಥವಾ ಅವುಗಳಿಂದ ಶಬ್ದ ಬಂದರೆ ಅದನ್ನು ಪ್ರಮುಖ ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಕಿಟಕಿಗಳು ಮತ್ತು ಬಾಗಿಲುಗಳಿಂದ ಬರುವ ಯಾವುದೇ ರೀತಿಯ ಶಬ್ದದಿಂದ ನಕಾರಾತ್ಮಕ ಶಕ್ತಿಯು ಉತ್ಪತ್ತಿಯಾಗುತ್ತದೆ. ಅದಕ್ಕೇ ಸದ್ದು ಬರದಂತೆ ಕಾಲಕಾಲಕ್ಕೆ ಅವುಗಳ ಕೀಲುಗಳಿಗೆ ಎಣ್ಣೆ ಹಾಕುತ್ತಲೇ ಇರುತ್ತಾರೆ.
ಮನೆಯ ಮಧ್ಯದಲ್ಲಿ ಬೃಹತ್ ವಸ್ತುಗಳನ್ನು ಇಡಬಾರದು!
ನಿಮ್ಮ ಮನೆಯ ಮಧ್ಯದಲ್ಲಿ ಯಾವುದೇ ಭಾರವಾದ ವಸ್ತುವನ್ನು ಇರಿಸಿದರೆ ತಕ್ಷಣ ಅದನ್ನು ತೆಗೆದುಹಾಕಿ. ಈ ರೀತಿ ಇದ್ದರೆ ಕುಟುಂಬದ ತಲೆಯ ಮೇಲೆ ಸಾಲದ ಹೊರೆ ಹಾಗೆಯೇ ಉಳಿಯುತ್ತಂತೆ. ಮತ್ತು ಅದಕ್ಕೆ ಪರಿಹಾರವೇ ಸಿಗುವುದಿಲ್ಲ. ಅಪ್ಪಿತಪ್ಪಿಯೂ ಮನೆಯ ಮಧ್ಯದಲ್ಲಿ ಭಾರವಾದ ವಸ್ತುಗಳನ್ನು ಇಡಬೇಡಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತದೆ.
ಮುಖ್ಯ ದ್ವಾರದ ಮುಂಭಾಗದಲ್ಲಿ ಅಡಚಣೆ ಇರಬಾರದು!
ಮನೆಯ ಮುಖ್ಯ ಬಾಗಿಲನ್ನು ಯಾವಾಘಲೂ ಸ್ವಚ್ಛವಾಗಿ ಇಡಬೇಕು. ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನಕ್ಕಾಗಿ ಸಂಘಟಿತವಾಗಿರುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮುಖ್ಯ ಬಾಗಿಲಿನ ಮುಂದೆ ಯಾವುದೇ ದೊಡ್ಡ ಮರ ಅಥವಾ ಯಾವುದೇ ದೊಡ್ಡ ಕಂಬ ಅಥವಾ ಯಾವುದೇ ರೀತಿಯ ಅಡಚಣೆ ಇರಬಾರದು. ಇದರಿಂದ ಕೋಪಗೊಂಡ ತಾಯಿ ಲಕ್ಷ್ಮಿ ನಿಮ್ಮ ಮನೆಯಿಂದ ಹೊರಟು ಹೋಗುತ್ತಾಳೆ ಅಂತ ಹೇಳಲಾಗುತ್ತದೆ.



Click it and Unblock the Notifications