Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಎಲ್ಲಿ ಕೆಲಸಕ್ಕೆ ಹೋದರೂ ಕೆಲಸದಿಂದ ತೆಗೆಯುತ್ತಿದ್ದ ಯುವಕನಿಗೆ ಈಗ ತಿಂಗಳಿಗೆ 10 ಲಕ್ಷ ಆದಾಯ
ಕೆಲಸ ತಪ್ಪಿ ಹೋದರೆ ಆಕಾಶವೇ ಕಳಚಿ ಬಿದ್ದಂತೆ ಭಾಸವಾಗುವುದು. ಆದರೆ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಹೇಳುವುದು ಸುಮ್ಮನ್ನಲ್ಲ ಎಂಬುವುದು ಈ ಯುವಕ ಕತೆ ನೋಡಿದಾಗ ಅನಿಸುವುದು. ಈತ ಇಂಗ್ಲೆಂಡ್‌ನಲ್ಲಿರುವ ಯುವಕ, ಹೆಸರು ರಯಾನ್ ಮ್ಯಾಕ್ಟೀರಿ ಲಿವರ್ ಪೂಲ್. ಈತ ಎಲ್ಲಿ ಕೆಲಸಕ್ಕೆ ಹೋದರೂ ಅಲ್ಲಿ ತುಂಬಾ ದಿನಗಳು ಕೆಲಸ ಮಾಡುತ್ತಿರಲಿಲ್ಲ, ಅವನನ್ನು ಕೆಲಸದಿಂದ ತೆಗೆದು ಬಿಡುತ್ತಿದ್ದರು.
ಯಾವ ಕೆಲಸವೂ ನನಗೆ ಕೈ ಹಿಡಿಯುತ್ತಿಲ್ಲ ಎಂದು ಅನಿಸಿದಾಗ ನಂದೇ ಸ್ವಂತ ಬ್ಯುಸ್‌ನೆಸ್ ಮಾಡಬಾರದು ಎಂದು ಯೋಚಿಸುತ್ತಾನೆ. ಸ್ವಂತ ಕಾರು ಕಂಪನಿ ಪ್ರಾರಂಭಿಸುತ್ತಾನೆ. ಈತ ಈಗ ತಿಂಗಳಿಗೆ 100,000 ಪೌಂಡ್ ಅಂದರೆ (ರು. 10,549990) ದುಡಿಯುತ್ತಿದ್ದಾನೆ.

ಆತ ತನ್ನ ಮೊದಲ ಕಾರನ್ನು 19ನೇ ವಯಸ್ಸಿಗೆ ಮಾರಿದ, ಆದರೆ ದೊಡ್ಡ ಲಾಭವೇನೂ ಗಳಿಸಲ್ಲ, ಆದ್ದರಿಂದ ಈತ ಬೇರೆ ಕಡೆ ಕೆಲಸ ಮಾಡಲು ನಿರ್ಧಸಿದ. ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ, ಆದರೆ ಅಲ್ಲಿಯೂ ತುಂಬಾ ಸಮಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಆದ್ದರಿಂದ ಕೆಲಸದಿಂದ ತೆಗೆದು ಹಾಕುತ್ತಾರೆ. ಏಕೆಂದರೆ ಕೆಲಸದ ಕಡೆಗೆ ಆತ ಹೆಚ್ಚು ಗಮನ ನೀಡುತ್ತಿಲ್ಲ ಎಂಬ ಕಾರಣಕ್ಕೆ ತೆಗೆದು ಹಾಕುತ್ತಾರೆ. ಆದರೆ ಆತನಿಗೆ ಕಾರು ಕಂಪನಿಗಳಲ್ಲಿ ಕೆಲಸ ಮಾಡಿದಾಗ ಗ್ರಾಹಕ ಬೇಡಿಕೆಯೇನು ಎಂದು ತಿಳಿಯಲು ಸಹಾಯ ಮಾಡುತ್ತದೆ.
22ನೇ ವರ್ಷದಲ್ಲಿ ಆತ ಕಾರು ಬ್ಯುಸ್‌ನೆಸ್ ಪ್ರಾರಂಭಿಸುತ್ತಾನೆ, ಆತ ತನ್ನ ಗ್ರಾಹಕರನ್ನು ಇನ್‌ಸ್ಟಾಗ್ರಾಂ ಮೂಲಕ ಪಡೆಯುತ್ತಾನೆ, ನಂತರ ಅವರ ಬೇಡಿಕೆಯಂತೆ ಕಾರುಗಳನ್ನು ಮಾರಾಟ ಮಾಡುವ ಕೆಲಸದಲ್ಲಿ ತೊಡಗುತ್ತಾನೆ. ಈಗ ನೋಡಿದರೆ ಆತ ತಿಂಗಳಿಗೆ ಲಕ್ಷಾಂತರ ರುಪಾಯಿ ಗಳಿಸುತ್ತಿದ್ದಾನೆ.
Rockstar Car Finance ಎಂಬ ಕಂಪನಿ ಕಟ್ಟಿಕೊಂಡು ತಿಂಗಳಿಗೆ ಲಕ್ಷಾಂತರ ರುಪಾಯಿ ದುಡಿಯುತ್ತಿದ್ದಾರೆ. ಎಲ್ಲರ ಬದುಕಿನಲ್ಲಿಯೂ ಸಾಧನೆಗೆ ಒಂದು ಮಾರ್ಗವಿರುತ್ತದೆ, ಅದನ್ನು ಕಂಡುಕೊಳ್ಳಬೇಕು ಅಷ್ಟೇ...
ಬದುಕಿನಲ್ಲಿ ಕೆಟ್ಟದ್ದು ಆದಾಗ ನನಗೆ ಮಾತ್ರ ಹೀಗೆ ಆಗುತ್ತಿದೆ, ಏಕೆ? ಎಂದನಿಸುವುದು, ಅದರಲ್ಲೂ ಕೆಲಸ ಕಳೆದುಕೊಂಡಾಗ ಮುಂದೇನು ಎಂಬ ಭಯ ಶುರುವಾಗುವುದು, ಆದರೆ ಭಯ ಪಡುವ ಅಗ್ಯತವಿಲ್ಲ, ಅದಕ್ಕಿಂತ ಉತ್ತಮವಾದದ್ದು ನಿಮಗೆ ಕಾದಿದೆ ಎಂದು ಮುಂದಕ್ಕೆ ಹೋಗಬೇಕು, ಹಾಗಾಗಿ ಈತನ ಕತೆಯೂ ನಮಗೆಲ್ಲಾ ಒಂದು ರೀತಿಯ ಸ್ಪೂರ್ತಿ ಅ ಹೌದು ಅಲ್ವೇ?



Click it and Unblock the Notifications
