Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ವಿಶ್ವದ ಅತ್ಯಂತ ಎತ್ತರದ ತುಂಗನಾಥ ದೇವಾಲಯದ ಕುರಿತ ಆಸಕ್ತಿಕರ ಸಂಗತಿಗಳು
ತುಂಗನಾಥ ಮಂದಿರ, ವಿಶ್ವದಲ್ಲಿಯೇ ಅತ್ಯಂತ ಎತ್ತರದ ಶಿವ ದೇವಾಲಯವಾಗಿದೆ. ಉತ್ತರಾಖಂಡದಲ್ಲಿರುವ ಈ ದೇವಾಲಯ ತುಂಬಾನೇ ಪ್ರಸಿದ್ಧ ದೇವಾಲಯವಾಗಿದ್ದು ಹಿಮಾಲಯದ ರುದ್ರ ರಮಣೀಯ ಪ್ರಕೃತಿಯ ಸೌಂದರ್ಯದ ನಡುವೆ ಇದೆ. ಶಿವ ಭಕ್ತರ ಮೆಚ್ಚಿನ ತಾಣವಾಗಿರುವ ತುಂಗನಾಥ ದೇವಾಲಯದ ಬಗ್ಗೆ ಕೆಲ ಆಸಕ್ತಿಕರ ಸಂಗತಿಗಳನ್ನು ಈ ಲೇಖನದಲ್ಲಿ ನೋಡೋಣ:
ಕರಿಕಲ್ಲಿನಿಂದ ನಿರ್ಮಾಣಗೊಂಡಿರುವ ದೇವಾಲಯ
ಈ ದೇವಾಲಯವನ್ನು ಕರಿಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಚೋಪ್ಟಾ ಪಟ್ಟಣದಿಂದ 3 ಕಿ. ಮೀಗಳಷ್ಟು ಪರ್ವತದ ದಾರಿಯಲ್ಲಿ ಕಾಲ್ನಡಿಗೆಯಿಂದ ಕ್ರಮಿಸಿದರೆ ತುಂಗನಾಥನ ದರ್ಶನ ಪಡೆಯಬಹುದು. ವಿಮಾನದಲ್ಲಿ ಹೋಗುವವರು ಡೆಹ್ರಾಡೂನ್‌ನ ವಿಮಾನ ನಿಲ್ದಾಣದಲ್ಲಿ ಇಳಿದು ನಂತರ ಚೋಪ್ಟಾ ಪಟ್ಟಣಕ್ಕೆ ಟ್ಯಾಕ್ಸಿಯಲ್ಲಿ ಹೋಗಬಹುದು, ಇನ್ನು ರೈಲು ಪ್ರಯಾಣದ ಮೂಲಕ ಹೋಗುವವರು
ರಿಷಿಕೇಶ ತಲುಪಿ ನಂತರ ಅಲ್ಲಿಂದ ಟ್ಯಾಕ್ಸಿ ಅಥವಾ ಇತರ ಸಾರಿಗೆ ವ್ಯವಸ್ಥೆ ಮೂಲಕ ತಲುಪಬಹುದು.

1000ಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ದೇವಾಲಯ
ವಿಶ್ವದ ಅತ್ಯಂತ ಎತ್ತರದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ, ಅತ್ಯಂತ ಎತ್ತರದ ಶಿವನ ದೇವಾಲವಿರುವ ತುಂಗನಾಥ ದೇವಾಲಯಕ್ಕೂ 1000ಕ್ಕೂ ಹೆಚ್ಚಿನ ಇತಿಹಾಸವಿದೆ.
ಪಂಚ ಕೇದಾರಗಳಲ್ಲಿ ತುಂಗನಾಥ ದೇವಾಲಯ ಕೂಡ ಒಂದು
ಭಾರತದಲ್ಲಿರುವ ಪಂಚ ಕೇದಾರಗಳಲ್ಲಿ (ಶಿವನ ಪ್ರಮುಖ 5 ದೇವಾಲಯಗಳು) ಈ ದೇವಾಲಯವು ಒಂದಾಗಿದೆ. ಇದರ ಹಿಂದೆ ಪೌರಾಣಿಕ ಕತೆ ಕೂಡ ಇದೆ. ಮಹಾಭಾರತದ ಯುದ್ಧದ ನಂತರ ಪಾಂಡವರು ಶಿವನಲ್ಲಿ ತಪ್ಪು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬಯಸಿ ಹಿಮಾಲಯಕ್ಕೆ ಬರುತ್ತರೆ, ಆದರೆ ಪಾಂಡವರಿಂದ ಯುದ್ಧ ಆಗಿದ್ದಕ್ಕೆ ಕೋಪಗೊಂಡ ಶಿವ ಅವರನ್ನು ಭೇಟಿಯಾಗಲು ಇಷ್ಟಪಡದೆ ನಂದಿರೂಪ ತಾಳುತ್ತಾನೆ. ಆಗ ಭೀಮ ಎರಡು ಬೃಹತ್ ಬೆಟ್ಟಗಳಾಗಿ ಮಾರ್ಪಾಡುತ್ತಾನೆ.
ಆಗ ಆ ಪ್ರದೇಶದಲ್ಲಿದ್ದ ಎಲ್ಲಾ ಜಾನುವಾರುಗಳು ಭೀಮನ ಕಾಲಿನಡಿ ನುಸುಳಿ ಹೋಗಬೇಕಾಗುತ್ತದೆ, ನಂದಿ ರೂಪ ತಾಳಿದ ಶಿವ ಭೀಮನ ಕಾಲಿನಡಿ ನುಸುಳಲು ಸಾಧ್ಯವೇ? ಆವಾಗ ಭೀಮನಿಗೆ ಆ ನಂದಿಯ ಶಿವ ಎಂಬುವುದು ಗೊತ್ತಾಗಿ ಎಲ್ಲಿ ಆ ನಂದಿ ಅದೃಶ್ಯವಾಗಿ ಬಿಡುವುದೋ ಎಂದು ಕೂಡಲೇ ಅದರ ಕೊಂಬುಗಳನ್ನು ಹಿಡಿಯುತ್ತಾನೆ. ಶಿವ ತಪ್ಪಸಿಕೊಳ್ಳಲು ಭೂಮಿಯೊಳಗಡೆ ಹೋಗುತ್ತಾನೆ, ಆಗ ಭೀಮನಿಗೆ ಎತ್ತಿನ ಡುಬ್ಬ ಮಾತ್ರ ಸಿಕ್ಕಿ ಅದನ್ನಿಡಿದು ಮೇಲಕ್ಕೆ ಎತ್ತುತ್ತಾನೆ. ಎತ್ತಿನ ಡುಬ್ಬ ಕೇದರನಾಥದಲ್ಲಿ ಉಳಿದು ಬಿಡುತ್ತದೆ, ಶಿರೋ ಭಾಗ ರುದ್ರನಾಥ, ಮುಂಡ ಮಧ್ಯಮ ಮಹೇಶ್ವರದಲ್ಲಿ, ತೋಳುಗಳು ತುಂಗಾನಾಥದಲ್ಲಿ, ದೇಹದ ಉಳಿದ ಭಾಗ ನೇಪಾಳದ ಪಶುಪತಿನಾಥ ಹಾಗೂ ಕರೈಶ್ವರದಲ್ಲಿ ಹಂಚಿ ಹೋಗುವುದು. ನಂತರ ಶಿವ ಪ್ರತ್ಯಕ್ಷ್ಯವಾಗಿ ಪಾಂಡವರಿಗೆ ಆಶೀರ್ವಾದ ನೀಡುತ್ತಾನೆ ಎಂಬ ಪೌರಾಣಿಕ ಕತೆಯಿದೆ.
ರಾವಣನನ್ನು ಕೊಂದ ಬಳಿಕ ಬ್ರಹ್ಮಹತ್ಯೆದ ಶಾಪದಿಂದ ವಿಮೋಚನೆ ಪಡೆಯಲು ಶ್ರೀರಾಮನು ಈ ದೇವಾಲಯಕ್ಕೆ ಬಂದ ಎಂಬ ಕತೆಯೂ ಇದೆ.
ತುಂಗನಾಥ ದೇವಾಲಯಕ್ಕೆ ಭೇಟಿ ನೀಡಲು ಸೂಕ್ತ ಸಮಯ ಯಾವಾಗ?
ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ತುಂಗನಾಥ ದೇವಾಲಯಕ್ಕೆ ಭೇಟಿ ನೀಡಲು ತುಂಬಾನೇ ಸೂಕ್ತವಾಗಿದೆ, ಈ ಸಮಯದಲ್ಲಿ ಇಲ್ಲಿಯ ಪ್ರಕೃತ್ತಿ ಸೌಂದರ್ಯ ನೋಡಲು ಕೂಡ ತುಂಬಾನೇ ಚೆನ್ನಾಗಿರುತ್ತದೆ. ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಶಿವ ಭಕ್ತರು ಆಗಮಿಸಿ ಶಿವನ ಆಶೀರ್ವಾದ ಪಡೆಯುತ್ತಾರೆ. ಈ ದೇವಾಲಯಕ್ಕೆ ಬರುವುದು ಟ್ರಕ್ಕಿಂಗ್ ಪ್ರಿಯರಿಗೆ ತುಂಬಾನೇ ಇಷ್ಟ. ಇಲ್ಲಿಗೆ ಬರುವಾಗ ಈ ದೇವಾಲಯ ಹಾಗೂ ಇದರ ಸುತ್ತಲಿನ ಪ್ರಕೃತ್ತಿ ಸೌಂದರ್ಯ ನೋಡಲು ತುಂಬಾನೇ ಚೆನ್ನಾಗಿರುತ್ತದೆ.
ವಾಲುತ್ತಿದೆ ದೇವಾಲಯ
ಈ ದೇವಾಲಯ ಸ್ವಲ್ಪ ವಾಲಿದೆ ಎಂಬ ಆಘಾತಕಾರಿ ವಿಚಾರವನ್ನು ಇತ್ತೀಚೆಗೆ ಪುರಾತತ್ವ ಇಲಾಖೆ ಹೇಳಿದೆ. ಇದರ ಕುರಿತು ಕೂಲಂಕುಷವಾಗಿ ಪರೀಕ್ಷಿಸಲು ಸಲಹೆ ನೀಡಲಾಗಿದೆ. ಈ ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಪ್ರಕ್ರಿಯೆ ಆರಂಭಿಸಿದೆ.



Click it and Unblock the Notifications












