Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕರ ಸಂಕ್ರಾಂತಿಯಂದು ಗಾಳಿಪಟವನ್ನು ಏಕೆ ಹಾರಿಸುತ್ತಾರೆ?
ರೈತರು ಬೆಳೆದ ಬೆಳೆಯ ಪೈರನ್ನು ಪಡೆದು ಮನೆಯ ಒಳಗೆ ಕೊಂಡೊಯ್ಯುವ ಸಂದರ್ಭವನ್ನು ಸಂಕ್ರಾಂತಿ ಹಬ್ಬ ಎಂದು ಆಚರಿಸಲಾಗುವುದು. ಸಂಕ್ರಾಂತಿ ಹಬ್ಬವು ಸಮೃದ್ಧಿಯ ಸಂಕೇತ ಎಂದು ಆಚರಿಸಲಾಗುವುದು. ಪವಿತ್ರವಾದ ಧಾರ್ಮಿಕ ಹಿನ್ನೆಲೆ ಹಾಗೂ ತತ್ವವನ್ನು ಒಳಗೊಂಡಿದೆ. ಖಗೋಳದಲ್ಲಿ ಸೂರ್ಯನು ದಕ್ಷಿಣ ಮುಖದ ಚಲನೆಯನ್ನು ಪಡೆದುಕೊಳ್ಳುವನು. ಉತ್ತರಾಯಣದ ಕಾಲವು ಮಕರ ಸಂಕ್ರಾಂತಿ ಮತ್ತು ಕರ್ಕ ಸಂಕ್ರಾಂತಿಯ ನಡುವಿನ ಆರು ತಿಂಗಳ ಅವಧಿ ಎಂದು ಗುರುತಿಸಲಾಗುವುದು. ಭೂಮಿಯು ಈ ಸಂದರ್ಭದಲ್ಲಿ ಉತ್ತರ ದಿಕ್ಕಿನಿಂದ ಚಂದ್ರನ ಖಗೋಳದಲ್ಲಿ ಗುರುತಿಸುತ್ತದೆ ಎಂದು ಹೇಳಲಾಗುವುದು.
ಸಂಭ್ರಮ, ಸಡಗರ, ಸಂತೋಷವನ್ನು ನೀಡುವ ಈ ಸಂಕ್ರಾಂತಿಯು ಎಲ್ಲೆಡೆ ಹೊಸತನವನ್ನು ನೀಡುವುದು. ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುವುದು. ರೈತರು ತಾವು ಬೆಳೆದ ಬೆಳೆಯನ್ನು ಪಡೆದು, ಪೂಜೆಯನ್ನು ಸಲ್ಲಿಸುತ್ತಾರೆ. ಉತ್ತಮ ಪೈರು ಬೆಳೆಯಲು ಸಹಾಯ ಮಾಡಿದ ಎತ್ತುಗಳಿಗೆ ಬಣ್ಣಗಳನ್ನು ಬಡಿದು ಪೂಜಿಸುತ್ತಾರೆ. ಜೊತೆಗೆ ಮನೆಯಲ್ಲಿ ಸಿಹಿ ತಿಂಡಿಯನ್ನು ಮಾಡಿ ದೇವರಿಗೆ ಹಾಗೂ ಹಸುಗಳಿಗೆ ನೈವೇದ್ಯವನ್ನು ಸಲ್ಲಿಸುವರು. ಮನೆಯ ಬಾಗಿಲಿಗೆ ಪೈರುಗಳ ಸಿಂಗಾರ ಮಾಡಿ ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.

ಕೆಲವೆಡೆ ಕಂಬಳ, ಓಡದ ಸ್ಪರ್ಧೆ, ಮಲ್ಲಯುದ್ಧ, ಹೆಂಗಳೆಯರಿಂದ ಜಾನಪದ ನೃತ್ಯ, ಗಾಳಿಪಟ ಹಾರಿಸುವುದು ಸೇರಿದಂತೆ ಇನ್ನಿತರ ಆಚರಣೆಯನ್ನು ಮಾಡಲಾಗುತ್ತದೆ. ಪ್ರತಿಯೊಂದು ಆಚರಣೆಯು ವಿಶೇಷವಾದ ನಂಬಿಕೆ ಹಾಗೂ ಹಿನ್ನೆಲೆಯನ್ನು ಪಡೆದುಕೊಂಡಿದೆ. ಹೆಂಗಳೆಯರೆಲ್ಲಾ ಹೊಸ ಬಟ್ಟೆಯನ್ನು ತೊಟ್ಟು ಎಳ್ಳು ಬೆಲ್ಲವನ್ನು ಮನೆ ಮನೆಗೆ ಹಂಚುತ್ತಾಎಲ್ಲರ ಬಾಯನ್ನು ಸಿಹಿ ಗೊಳಿಸುತಾರೆ. ಅಂತೆಯೇ ಮಕ್ಕಳು ಹಾಗೂ ದೊಡ್ಡವರು ಎಲ್ಲರು ಒಟ್ಟಾಗಿ ಸೇರಿ ಗಾಳಿಪಟವನ್ನು ಹಾರಿಸುತ್ತಾರೆ. ಯಾರ ಗಾಳಿಪಟ ಅತಿ ಎತ್ತರದಲ್ಲಿ ಹಾರಾಡುತ್ತಿದೆ ಎನ್ನುವ ಸ್ಪರ್ಧೆ ಏರ್ಪಡುವುದು ಒಂದು ಸುಂದರ ಅನುಭವ ನೀಡುವುದು.

ಬಣ್ಣ ಬಣ್ಣದ ಗಾಳಿಪಟವನ್ನು ಆಕಾಶದ ಎತ್ತರಕ್ಕೆ ಹಾರಿಸುವುದು
ಬಣ್ಣ ಬಣ್ಣದ ಗಾಳಿಪಟವನ್ನು ಆಕಾಶದ ಎತ್ತರಕ್ಕೆ ಹಾರಿಸುವುದು ಸಂಕ್ರಾಂತಿಯ ಆಚರಣೆಯಲ್ಲಿ ಒಂದು ವಿಶೇಷವಾದ ಭಾಗ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕೈಟ್ ಫ್ಲೈಯಿಂಗ್ ಉತ್ಸವವನ್ನು ಪ್ರತಿವರ್ಷ ಗುಜರಾತ್‍ಅಲ್ಲಿ ಆಯೋಜಿಸುತ್ತಾರೆ. ಅತ್ಯಂತ ಪ್ರಾಚೀನ ಹಿಂದೂ ಉತ್ಸವಗಳಲ್ಲಿ ಒಂದಾದ ಮಕರ ಸಂಕ್ರಾಂತಿಯ ಹಬ್ಬವು ಸೂರ್ಯ ದೇವನಿಗೆ ಮೀಸಲಾದ ಹಬ್ಬ ಎಂದು ಕರೆಯಲಾಗುವುದು. ಅಲ್ಲದೆ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಮಕರ ಜ್ಯೋತಿಯು ಕಾಣಿಸಿಕೊಳ್ಳುತ್ತದೆ ಎನ್ನುವ ನಂಬಿಕೆಯೂ ಇದೆ.

ಸೂರ್ಯ ದೇವನಿಗೆ ಆರಾಧನೆ ಮಾಡುವ ಹಬ್ಬ
ಸೂರ್ಯ ದೇವನಿಗೆ ಆರಾಧನೆ ಮಾಡುವ ಈ ಹಬ್ಬದ ಆರಮಭವು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ವಿಭಿನ್ನ ಸಂಪ್ರದಾಯ ಹಾಗೂ ಆಚರಣೆಗಳನ್ನು ಒಳಗೊಂಡಿರುವ ಈ ಪವಿತ್ರವಾದ ಹಬ್ಬ ಎಲ್ಲರ ಮನಸ್ಸಿನಲ್ಲಿ ಹಾಗೂ ಮನೆಯಲ್ಲಿ ಹೊಸದಿನ ಹಾಗೂ ಹೊಸ ತನದ ಅನುಭವವನ್ನು ನೀಡುತ್ತದೆ. ಸಾಂಪ್ರದಾಯಿಕ ಸಿಹಿ ತಿಂಡಿಗಳನ್ನು ಮನೆಯಲ್ಲಿ ತಯಾರಿಸಿ ಆತ್ಮೀಯರಿಗೆ ಹಾಗೂ ನೆರೆಹೊರೆಯವರಿಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಸೂರ್ಯನ ಚಲನೆಯು ಕರ್ಕ ರಾಶಿಗೆ ಪ್ರವೇಶಿಸುವುದು ಎಂದು ಗುರುತಿಸಲಾಗುವುದು. ಇತರ ಸಂಪ್ರದಾಯದಂತೆ ಮಕರ ಸಂಕ್ರಾಂತಿಯಂದು ಉತ್ಸವ ಹಾಗೂ ಗಾಳಿಪಟವನ್ನು ಹಾರಿಸುತ್ತಾರೆ. ಗಾಳಿ ಪಟವನ್ನು ಹಾರಿಸುವುದು ಒಂದು ವಿಶೇಷ ಹಿನ್ನೆಲೆಯನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು.

ಗಾಳಿಪಟವನ್ನು ಏಕೆ ಹಾರಿಸುತ್ತಾರೆ?
ಮಕರ ಸಂಕ್ರಾಂತಿಯ ಹಬ್ಬದಂದು ಮುಂಜಾನೆಯಿಂದಲೇ ವರ್ಣ ರಂಜಿತ ಗಾಳಿಪಟವನ್ನು ಆಕಾಶದಲ್ಲಿ ಹಾರಿಸುತ್ತಾರೆ. ಇದು ಉತ್ತರಾಯಣದಾದ್ಯಂತ ಮುಂದುವರಿಯುತ್ತದೆ. ಸುಗ್ಗಿಯ ಋತುವಿನ ಆಗಮನವನ್ನು ಸೂಚಿಸುವ ಹಬ್ಬವು ಚಳಿಗಾಲದ ಅಂತ್ಯವನ್ನು ಸಹ ಸಂಕೇತಿಸುವುದು. ಸಾಮಾನ್ಯವಾಗಿ ಚಳಿಗಾಲದಲ್ಲಿ ಸಾಕಷ್ಟು ಸೂಕ್ಷ್ಮಾಣುಗಳು ಉತ್ಪತ್ತಿಯಾಗುತ್ತವೆ. ಇದರಿಂದ ಸಾಕಷ್ಟು ಅನಾರೋಗ್ಯ ಹಾಗೂಜ್ವರಗಳು ಬರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮಕರ ಸಂಕ್ರಾಂತಿಯ ಸಮಯದಲ್ಲಿ ಪ್ರಕಾಶಮಾನವಾದ ಸೂರ್ಯನ ಕಿರಣಗಳನ್ನು ಪಡೆಯುವುದರಿಂದ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿಯೇ ನಾಶವಾಗುತ್ತವೆ. ಈ ಕಾರಣದಿಂದಲೇ ಸಂತೋಷಗೊಂಡ ಜನರು ರೋಮಾಂಚನಕಾರಿಯಾಗಿ ಗಾಳಿಪಟವನ್ನು ಹಾರಿಸುವರು.

ಇನ್ನೊಂದು ನಂಬಿಕೆಯ ಪ್ರಕಾರ
ಅಲ್ಲದೆ ಇನ್ನೊಂದು ಅರ್ಥದಲ್ಲಿ ಮಕರ ಸಂಕ್ರಾಂತಿ ಮತ್ತು ಉತ್ತರಾಯಣದ ಸಂದರ್ಭದಲ್ಲಿ ಸ್ವರ್ಗಕ್ಕೆ ಹಾರಿಹೋಗುತ್ತವೆ ಎನ್ನುವ ನಂಬಿಕೆಯಿದೆ. ಉತ್ತಮ ಪೈರು ಹಾಗೂ ಜೀವನದಲ್ಲಿ ಸಂತೋಷವನ್ನು ನೀಡಿರುವುದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಗಾಳಿಪಟವನ್ನು ಹಾರಿಸಲಾಗುವುದು ಎಂದು ಹೇಳಲಾಗುವುದು. ಇನ್ನೊಂದು ನಂಬಿಕೆಯ ಪ್ರಕಾರ ದೇವರು ಆರು ತಿಂಗಳುಗಳ ಕಾಲ ನಿದ್ರಿಸುತ್ತಿದ್ದರು. ಇದೀಗ ಎದ್ದೇಳುವ ಸಮಯ. ಅದಕ್ಕಾಗಿ ಜಾಗ್ರತಿ ಮೂಡಿಸುವುದರ ಸಂಕೇತವಾಗಿರುತ್ತದೆ. ಅಲ್ಲದೆ ಉತ್ತರಾಯಣದ ಸಮಯದಲ್ಲಿ ನೀಲಿ ಆಕಾಶವು ಗಾಳಿಪಟ ಹಾರಿಸಲು ಸಜ್ಜಾದಂತೆ ಇರುತ್ತದೆ. ಅಲ್ಲದೆ ಗಾಳಿಪಟಗಳನ್ನು ಹಾರಿಸಲು ಸೂಕ್ತ ಸಮಯ ಮತ್ತು ಸುಂದರ ದೃಶ್ಯವನ್ನು ನೀಡುವುದು ಎಂದು ಹೇಳಲಾಗುವುದು.

ಗಾಳಿಪಟವನ್ನು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಹಾರಿಸಲಾಗುವುದು
ವರ್ಷದ ಬಹುತೇಕ ಸಂದರ್ಭದಲ್ಲಿ ಗಾಳಿಪಟವನ್ನು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಹಾರಿಸಲಾಗುವುದು. ಆ ಸಂಪ್ರದಾಯ ಹಾಗೂ ರೂಢಿಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಗುಜರಾತ್‍ಅಲ್ಲಿ ಗಾಳಿಪಟ ಹಾರಿಸುವ ಒಂದು ದೊಡ್ಡ ಸ್ಪರ್ಧೆಯನ್ನು ಸಹ ಕೈಗೊಳ್ಳಲಾಗುವುದು. ಈ ಸಮಯದಲ್ಲಿ ಪ್ರಪಂಚದಾದ್ಯಂತದ ಜನರು ಗಾಳಿಪಟ ಹಾರಿಸುವ ಪ್ರರ್ಧೆಗೆ ಭಾಗವಹಿಸಲು ಹಾಗೂ ವೀಕ್ಷಿಸಲು ಆಗಮಿಸುತ್ತಾರೆ ಎನ್ನುವುದು ವಿಶೇಷ. ಇದಕ್ಕಾಗಿ ಬಹಳ ಮುಂಚಿತವಾಗಿ ತಯಾರಿಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳುತ್ತಾರೆ.



Click it and Unblock the Notifications