Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಶ್ರೀ ಕೃಷ್ಣನಿಗೆ ರಾಂಚೋಡ್ ಎಂಬ ಹೆಸರು ಏಕೆ ಬಂತು ಗೊತ್ತೆ?
ದುಷ್ಟ ಶಕ್ತಿಯ ನಿಗ್ರಹ, ಶಿಷ್ಟರ ರಕ್ಷಣೆಗಾಗಿ ವಿಷ್ಣುದೇವನು ಅವತರಿಸಿ ಬಂದ ಒಂದು ಅವತಾರವೇ ಶ್ರೀಕೃಷ್ಣನ ಅವತಾರ. ವಿಶಿಷ್ಟವಾದ ಅವತರಾದೊಂದಿಗೆ ಜಗತ್ ಅನ್ನು ರಕ್ಷಿಸಿದ ಹಿರಿಮೆ ಕೃಷ್ಣನ ಅವತಾರಕ್ಕೆ ಸಲ್ಲುವುದು. ತನ್ನ ಬಾಲ್ಯದಿಂದಲೇ ಅಧರ್ಮದ ಸಂಗತಿಯ ವಿರುದ್ಧ ಹೋರಾಡುತ್ತಾ, ಧರ್ಮ ಮತ್ತು ಸತ್ಯದ ಪರವಾಗಿ ನಿಂತು ಹೋರಾಡಿದ ಮಹಾನ್ ದೇವ ಎನಿಸಿಕೊಂಡಿದ್ದಾನೆ. ಶ್ರೀಕೃಷ್ಣನು ತನ್ನ ಬಾಲ್ಯದಲ್ಲಿ ಅನೇಕ ಲೀಲೆಗಳನ್ನು ತೋರಿಸಿದ್ದಾನೆ. ಅನ್ಯಾಯದ ಕಡೆಗೆ ಇರುವ ಶಕ್ತಿಯನ್ನು ಕೇವಲ ತನ್ನ ಸ್ಪರ್ಶಗಳ ಮೂಲಕವೇ ದ್ವಂಸ ಮಾಡಿದ್ದಾನೆ. ತನ್ನ ಬಾಲ್ಯದಲ್ಲಿ ಮಾಡಿದ ತುಂಟಾಟ, ಮಹಾನ್ ಲೀಲೆಗಳು, ಆಶ್ಚರ್ಯದ ಸಂಗತಿಗಳಿಂದಾಗಿ ಅನೇಕ ಹೆಸರುಗಳನ್ನು ಪಡೆದುಕೊಂಡಿದ್ದಾನೆ. ಅಂತಹ ವಿಶಿಷ್ಟ ಹೆಸರುಗಳಲ್ಲಿ ರಾಂಚೋಡ್ ಎನ್ನುವುದು ಸಹ ಒಂದು.

ಕೃಷ್ಣನು ಅನೇಕ ರಾಕ್ಷಸರನ್ನು ಸದೆ ಬಡಿದಿದ್ದಾನೆ. ಅವನು ಕೊಂದ ರಾಕ್ಷಸರ ಹೆಸರನ್ನು ಸಹ ಕೃಷ್ಣನಿಗೆ ಇಟ್ಟು ಕರೆಯಲಾಗುತ್ತದೆ. ಉದಾಹರಣೆಗೆ ಮಧುಸೂದನ್. ಮಧು ಎನ್ನುವ ರಾಕ್ಷಸನನ್ನು ಕೊಂದಿರುವುದರ ಹಿನ್ನೆಲೆಯಲ್ಲಿ ಅವನಿಗೆ ಈ ಹೆಸರು ಬಂತು ಎನ್ನಲಾಗುತ್ತದೆ. ಹೀಗೆ ಸನ್ನಿವೇಶಗಳಿಗೆ ಅನುಗುಣವಾಗಿಯೂ ಕೃಷ್ಣನಿಗೆ ಕೆಲವು ಹೆಸರನ್ನು ಇಡಲಾಗಿದೆ. ಅಂತಹ ಹೆಸರಿನಲ್ಲಿ ರಾಂಚೋಡ್ ಸಹ ಒಂದು. ರಾಂಚೋಡ್ ಎನ್ನುವುದು ಕೃಷ್ಣನ ವಿಶಿಷ್ಟ ಲೀಲೆಗಳನ್ನು ಆಧರಿಸಿ ಇಟ್ಟ ಹೆಸರು. ಇದರ ಅರ್ಥ "ಯುದ್ಧ ಭೂಮಿಯಿಂದ ಪಲಾಯನ ಆಗುವವನು" ಎಂದು. ಹಾಗಾದರೆ ಶ್ರೀಕೃಷ್ಣನಿಗೆ ಈ ಹೆಸರು ಏಕೆ ಬಂತು? ಎನ್ನುವುದನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗಿದೆ.

ಜರಸಂಧ ಕಲ್ಯಾವನನೊಂದಿಗೆ ಸ್ನೇಹವನ್ನು ಮಾಡಿದನು
ಕಂಸನನ್ನು ಕೊಂದ ಭಗವಾನ್ ಶ್ರೀಕೃಷ್ಣನ ಬಗ್ಗೆ ಜರಸಂಧ ಕೋಪಗೊಂಡಿದ್ದನು. ಕೃಷ್ಣನ ಮೇಲೆ ಸರಿಯಾದ ಸೇಡು ತೀರಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಕಲ್ಯಾವನನೊಂದಿಗೆ ಸ್ನೇಹವನ್ನು ಬೆಳೆಸಿದನು. ಅಂತೆಯೇ ಕೃಷ್ಣನ ವಿರುದ್ಧ ಸಾಕಷ್ಟು ಪಿತೂರಿಯನ್ನು ನಡೆಸಿದನು. ಕಲ್ಯಾವನ ಎಂಬುವನು ಶೇಷೀರಾಯನ್ ಎಂಬ ಋಷಿಯ ಮಗ. ಅಪ್ಸರ ಮತ್ತು ರಂಭ ಕಲ್ಯಾವನ ಮಕ್ಕಳು ಎಂದು ಹೇಳಲಾಗುತ್ತದೆ.

ಕಥೆಯು ಅವರ ಜನನದ ಹಿಂದೆ ಅಡಗಿದೆ
ಶೇಷೀರಾಯನ್ ಋಷಿಯು ಶಿವನ ಕೃಪೆಗೆ ಒಳಗಾಗಲು ಗೋರ ತಪಸ್ಸನ್ನು ಮಾಡಿದನು. ಆಗ ಶಿವನು ಅವನಿಗೆ ಯಾರಿಂದಲೂ ಸೋಲದಂತಹ ಶಕ್ತಿಯುಳ್ಳ ಮಗನನ್ನು ಪಡೆಯುವಂತೆ ಆಶೀರ್ವದಿಸಿದನು. ಹಾಗಾಗಿಯೇ ಕಲ್ಯಾವನನು ಶಕ್ತಿ ಶಾಲಿ ಹಾಗೂ ಸೋಲನ್ನು ಕಾಣದ ವ್ಯಕ್ತಿಯಾಗಿ ಬೆಳೆದನು.

ಕೃಷ್ಣನಿಗೂ ಸಹ ಸೋಲಿಸಲು ಸಾಧ್ಯವಾಗಲಿಲ್ಲ `
ಶಿವನ ಆಶೀರ್ವಾದದಿಂದ ಜನಿಸಿದ ಕಲ್ಯಾವನನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದು ಕೃಷ್ಣನಿಗೆ ತಿಳಿದಿತ್ತು. ಮಥುರಾ ನಗರವನ್ನು ಯುದ್ಧದಿಂದ ರಕ್ಷಿಸಬೇಕು ಎನ್ನುವ ಉದ್ದೇಶದಿಂದ ಕೃಷ್ಣನು ಕೆಲವು ಯೋಜನೆಯನ್ನು ಕೈಗೊಂಡನು. ಆಗ ತಾನು ಯುದ್ಧದಿಂದ ದೂರವಾದರೆ ಮಾತ್ರ ಯುದ್ಧವನ್ನು ತಡೆಯಬಹುದು ಎಂದು ನಿರ್ಣಯಿಸಿದನು. ನಂತರ ಕೃಷ್ಣನು ಜನರಿಂದ ಮತ್ತು ಸೈನ್ಯದಿಂದ ದೂರದ ಪರ್ವತದ ಕಡೆಗೆ ಓಡಿ ಹೋದನು.

ಕಲ್ಯಾವನ ಇಷ್ಟಕ್ಕೆ ಸುಮ್ಮನಾಗಲಿಲ್ಲ
ಕಲ್ಯಾವನನು ತನ್ನ ಯುದ್ಧದಲ್ಲಿ ಸೋಲ ಬಾರದು ಎನ್ನುವ ನಿರೀಕ್ಷೆ ಹೊಂದಿದ್ದನು. ಅಂತೆಯೇ ಓಡಿ ಹೋದ ಕೃಷ್ಣನನ್ನು ಹಿಂಬಾಲಿಸಿ ಹೋದನು. ಪರ್ವತಗಳು ಮತ್ತು ಗುಹೆಗಳನ್ನು ದಾಟಿ ಮುಂದೆ ಸಾಗಿದ ಕೃಷ್ಣನ್ನು ನಿರಂತರವಾಗಿ ಹಿಂಬಾಲಿಸಿದನು. ನಂತರ ವಿಶಿಷ್ಟ ಹಳದಿ ಬಟ್ಟೆಯನ್ನು ತೊಟ್ಟಿರುವ ವ್ಯಕ್ತಿಯೊಬ್ಬ ಗುಹೆ ಒಳಗೆ ಇರುವುದನ್ನು ಗಮನಿಸಿದನು. ನಂತರ ಅವನೇ ಶೀಕೃಷ್ಣ ಎಂದು ತಿಳಿದನು.

ಮುಚುಕುಂದ ಋಷಿಯ ದರ್ಶನ
ಆದರೆ ಆ ಪರ್ವತದ ಗುಹೆಯಲ್ಲಿ ಎಚ್ಚರಗೊಳ್ಳದ ಒಬ್ಬ ಪ್ರಾಚೀನ ಕಾಲದ ಋಷಿ ಮಲಗಿದ್ದನು. ಒಮ್ಮೆ ರಾಕ್ಷಸರ ವಿರುದ್ಧ ದೇವತೆಗಳು ಯುದ್ಧ ಮಾಡುವಾಗ ಅವರಿಗೆ ಸಹಾಯ ಮಾಡಿದ್ದರು ಎಂದು ಹೇಳಲಾಗುತ್ತದೆ. ಆ ಯುದ್ಧದಲ್ಲಿ ದಣಿದಿದ್ದ ಋಷಿಯು ದೇವತೆಗಳಿಂದ ವರವನ್ನು ಪಡೆದಿದ್ದನು. ಆ ವರದ ಪ್ರಕಾರ ಋಷಿಯು ನಿದ್ರೆ ಮಾಡುತ್ತಿರುವಾಗ ಯಾರಾದರೂ ಅವನನ್ನು ಎಚ್ಚರಿಸಲು ಹೋದರೆ ಅವನ ಕಣ್ಣುಗಳಿಂದ ಬೆಳಕೊಂದು ಹೊರ ಹೊಮ್ಮುತ್ತದೆ. ಆ ಬೆಳಕಿನಿಂದ ಎದುರಿಗಿದ್ದವರು ಸುಟ್ಟುಹೋಗುತ್ತಿದ್ದರು.

ಕೃಷ್ಣ ಎಲ್ಲವನ್ನೂ ತಿಳಿದಿದ್ದನು
ಕಲ್ಯಾವನ ಮತ್ತು ಮುಚುಕುಂದ ಇಬ್ಬರೂ ಹೊಂದಿರುವ ವರಗಳ ಬಗ್ಗೆ ಶ್ರೀ ಕೃಷ್ಣನು ತಿಳಿದಿದ್ದನು. ಹಾಗಾಗಿ ಋಷಿ ಧರಿಸಿದ ಹಳದಿ ಬಟ್ಟೆಯಂತೆಯೇ ಕೃಷ್ಣನೂ ಧರಿಸಿ, ಬಂಡೆಯ ಹಿಂದೆ ಅಡಗಿಕೊಂಡಿದ್ದನು.

ಕಲ್ಯಾವನ್ ಮುಚುಕುಂದನನ್ನು ಕೃಷ್ಣ ಎಂದು ತಪ್ಪಾಗಿ ತಿಳಿದನು
ಕೃಷ್ಣನ ಬಟ್ಟೆಯನ್ನು ಗುರುತಿಸಿದ ಕಲ್ಯಾವನ್ ಕೃಷ್ಣನೇ ಅಲ್ಲಿ ಮಲಗಿದ್ದಾನೆ ಎಂದು ತಪ್ಪಾಗಿ ಭಾವಿಸಿದನು. ನಂತರ ಕೃಷ್ಣನನ್ನು ಎಬ್ಬಿಸಬೇಕು ಎಂದು ಋಷಿಯನ್ನು ಎಬ್ಬಿಸುವ ಪ್ರಯತ್ನ ಮಾಡಿದನು. ಆದರೆ ಅದು ಅವನ ತಪ್ಪಾದ ಕಲ್ಪನೆಯಾಗಿತ್ತು. ಎಚ್ಚರಗೊಂಡ ಋಷಿಯ ಕಣ್ಣಿನಿಂದ ಹೊರ ಬಂದ ಬೆಳಕಿನಿಂದ ಕಲ್ಯಾವನ್ ಸುಟ್ಟಿ ಹೋದನು. ಶ್ರೀಕೃಷ್ಣನು ಋಷಿಯ ಮುಂದೆ ಪ್ರತ್ಯಕ್ಷನಾದನು. ಜೊತೆಗೆ ದುಷ್ಟನನ್ನು ಕೊಲ್ಲಲು ಸಹಾಯ ಮಾಡಿರುವುದಕ್ಕೆ ಆಶೀರ್ವದಿಸಿದನು. ನಂತರ ಅವರನ್ನು ಬದ್ರಿ ಆಶ್ರಮಕ್ಕೆ ಹೋಗಲು ಹೇಳಿದನು.

ಹಿನ್ನೆಲೆ
ರಾಂಚೋಡ್ ಎನ್ನುವುದು ನಕಾರಾತ್ಮಕವಾಗಿರುವಂತೆ ತೋರುತ್ತದೆ. ಆದರೆ ಬಹಳ ಉತ್ತಮ ಉದ್ದೇಶಕ್ಕಾಗಿ ಶ್ರೀಕೃಷ್ಣನು ಓಡಿ ಹೋಗಿದ್ದನು. ದುಷ್ಟರನ್ನು ನಾಶಮಾಡಿ ಸೈನ್ಯವನ್ನು ಕೊಲ್ಲುವ ಯೋಜನೆಯನ್ನು ತಡೆಯುವ ಉದ್ದೇಶಕ್ಕೆ ಓಡಿ ಹೋಗಿದ್ದನು ಎಂದು ಹೇಳಲಾಗುತ್ತದೆ. ಹಾಗಾಗಿ ಕೃಷ್ಣನನ್ನು ಉತ್ತಮ ದೃಷ್ಟಿಯಿಂದಲೇ ರಾಂಚೋಡ್ ಎಂದು ಕರೆಯಲಾಗುತ್ತದೆ.

ಕೆಲವು ಹೆಸರುಗಳು ಪರಿಸ್ಥಿತಿಗೆ ಅನುಗುಣವಾಗಿ ನೀಡಿದ್ದಾರೆ
ಕಷ್ಣನು ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದ ಎಂದು ಮಖಾನ್ ಚೋರ್ ಅಥವಾ ಬೆಣ್ಣೆಯ ಕಳ್ಳ ಎಂದು ಕರೆಯುತ್ತಿದ್ದರು. ಅಂತೆಯೇ ರಾಂಚೋಡ್ ಎನ್ನುವ ಹೆಸರು ಸಹ ಪ್ರೀತಿಯಿಂದಲೇ ಕರೆಯುವ ಹೆಸರಾಗಿದೆ. ಈ ಹಿನ್ನೆಲೆಯಲ್ಲಿಯೇ ಕೃಷ್ಣನ ಹೆಸರು ಪ್ರಸಿದ್ಧಿಯನ್ನು ಪಡೆದುಕೊಂಡಿತು ಎಂದು ಹೇಳಲಾಗುವುದು. ರಾಂಚೋಡ್ ಎನ್ನುವುದು ಒಂದು ಘಟನೆಯಿಂದ ಕೃಷ್ಣನು ಪಡೆದುಕೊಂಡ ಹೆಸರು. ಹಾಗಾಗಿ ಇದು ಅತ್ಯಂತ ಪವಿತ್ರತೆಯಿಂದಲೇ ಕೂಡಿದೆ.

ನಿಮ್ಮ ಆಲೋಚನೆಯಂತೆ ಇರುವುದು
ನಾವು ಯಾವ ರೀತಿಯ ಆಲೋಚನೆ ಮಾಡುತ್ತೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಭಾವನೆಗಳು ನಿಂತಿರುತ್ತವೆ. ಅಂತೆಯೇ ಕೃಷ್ಣನಿಗೆ ಪ್ರೀತಿಯಿಂದ ಕರೆಯುವ ಹೆಸರುಗಳು ಸಹ ಕೆಲವೊಂದು ನಕಾರಾತ್ಮಕ ಶಬ್ದಗಳಿಂದ ಕೂಡಿದೆ ಅಷ್ಟೆ. ಹಾಗಾಗಿ ಭಕ್ತರು ಶ್ರೀಕೃಷ್ಣನಿಗೆ ಸಾಕಷ್ಟು ಹೆಸರುಗಳಿಂದ ಕರೆಯುವುದರ ಮೂಲಕ ತಮ್ಮ ಜನ್ಮವನ್ನು ಪಾವನಗೊಳಿಸಿಕೊಳ್ಳುತ್ತಾರೆ. ದೇವರ ಆಶೀರ್ವಾದಕ್ಕೆ ಪಾತ್ರರಾಗುವರು ಎಂದು ಹೇಳಲಾಗುವುದು.



Click it and Unblock the Notifications