Latest Updates
-
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ
ಸೂರ್ಯ ದೇವನಿಗೆ ಶರಣು ಹೇಳಿ, ಕಷ್ಟಕಾರ್ಪಣ್ಯ ಕಳೆದುಕೊಳ್ಳೋಣ..
ಹಿಂದೂ ಧರ್ಮದಲ್ಲಿರುವ ಶಾಸ್ತ್ರ ಸಂಪ್ರದಾಯಗಳು ರೀತಿ ರಿವಾಜುಗಳು ವಿದೇಶದವರನ್ನೂ ಆಕರ್ಷಿಸುತ್ತಿದ್ದು ವಿಶ್ವ ವಿಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ನಮ್ಮ ಧರ್ಮದಲ್ಲಿರುವ ಆಚರಣೆಗಳು, ನಂಬಿಕೆಗಳು ಅದರದ್ದೇ ಆದ ಶಿಸ್ತನ್ನು ಒಳಗೊಂಡಿದ್ದು ಇವುಗಳನ್ನು ಪಾಲಿಸುವುದರಿಂದ ಆಯುಸ್ಸು, ಆರೋಗ್ಯ, ಉನ್ನತಿ ದೊರೆಯುತ್ತದೆ. ವ್ರತ ಆಚರಣೆಗಳೂ ತನ್ನದೇ ಪಾವಿತ್ರ್ಯತೆಯನ್ನು ಹೊಂದಿರುವುದರಿಂದ ಅದರಲ್ಲೊಂದು ಜೀವನ ಮೌಲ್ಯ ಅಡಗಿರುವುದರಿಂದ ಈ ಧರ್ಮವು ತನ್ನದೇ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.
ಪೂಜೆ ಪುನಸ್ಕಾರಗಳು, ವ್ರತ ಪೂಜೆಗಳನ್ನು ನಿಯಮಿತವಾಗಿ ಇಲ್ಲಿ ಕೈಗೊಳ್ಳಲಾಗುತ್ತಿದ್ದು ಅದಕ್ಕೆ ಯಾವುದೇ ಕುಂದು ಕೊರತೆಗಳು ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ವಾರದಲ್ಲಿ ನಿತ್ಯವೂ ಆಯಾಯ ದೇವರುಗಳಿಗೆ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತಿದ್ದು ಸೂಕ್ತವಾದ ವ್ರತಗಳನ್ನು ಕೈಗೊಳ್ಳಲಾಗುತ್ತಿದೆ. ಭಾನುವಾರವು ಸೂರ್ಯ ದೇವರಿಗೆ ಮೀಸಲಾಗಿದ್ದು ಹಿಂದೂ ಧರ್ಮದಲ್ಲಿ ಸೂರ್ಯನಿಗೆ ವಿಶೇಷವಾದ ಸ್ಥಾನವಿದೆ. ಯಕ್ಷ ಪ್ರಶ್ನೆಯಂತೆ ಕಾಡುವ ಸೂರ್ಯನ ಕುರಿತಾದ ಅಚ್ಚರಿಯ ಸಂಗತಿಗಳು!
ನವಗ್ರಹದ ಅಧಿಪತಿಯಾಗಿರುವ ಸೂರ್ಯನು ವೈದಿಕ ಜ್ಯೋತಿಷ್ಯದ ಮುಖ್ಯ ಅಂಶಗಳಲ್ಲಿ ಒಬ್ಬನಾಗಿದ್ದಾನೆ. ಏಳು ಬಣ್ಣಗಳ ಕಾಮನ ಬಿಲ್ಲನ್ನು ಅಥವಾ ದೇಹದಲ್ಲಿರುವ ಏಳು ಚಕ್ರಗಳನ್ನು ಪ್ರತಿನಿಧಿಸುವ ಏಳು ಕುದುರೆಗಳುಳ್ಳ ರಥದಲ್ಲಿ ಸೂರ್ಯನ ಪ್ರಯಾಣ, ಆತನ ಧಾರ್ಮಿಕ ಚಿತ್ರಣವನ್ನು ಸಂಕೇತಿಸುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಸೂರ್ಯನ ಕುರಿತು, ನಿಯಮ ನಿಷ್ಟೆಗಳನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.
ಸೂರ್ಯ ದೇವರ ಗುಣ ಸ್ವಭಾವ
ಆದಿತ್ಯವಾರ ಎಂಬುದಾಗಿ ತನ್ನದೇ ದಿನವನ್ನು ಸೂರ್ಯನು ಸಂಕೇತಿಸುತ್ತಿದ್ದು, ವೇದ ಜ್ಯೋತಿಷ್ಯಶಾಸ್ತ್ರದಲ್ಲಿ ಬಿಸಿ ಮತ್ತು ಒಣ ಪ್ರಕೃತಿಯಿಂದಾಗಿ ಸೌಮ್ಯ ಉಪದ್ರವಕಾರಿ ಎಂದೇ ವಿವರಿಸಲಾಗಿದೆ.
ಆಶೀರ್ವಾದಗಳು
ಆತ್ಮಶಕ್ತಿ, ಹೆಸರು, ಕಣ್ಣುಗಳು, ಧೈರ್ಯ, ಒಡೆತನ, ತಂದೆ ಮತ್ತು ಔದಾರ್ಯವನ್ನು ನಿರೂಪಿಸುತ್ತಿದ್ದಾರೆ.
ಜನ್ಮಜಾತಕದಲ್ಲಿ ಸೂರ್ಯ ದೇವರು
ಸೂರ್ಯನಿಂದ ಆಳ್ವಿಕೆಗೆ ಒಳಪಟ್ಟವರ ಜನ್ಮಜಾತಕಗಳುಳ್ಳವರು ಅಂತೆಯೇ ತನ್ನ ಸೂರ್ಯನ ಉಪದ್ರವಕಾರಿ ಕಾರಣಗಳಿಂದ ಬಳಲುತ್ತಿರುವವರು ಭಾನುವಾರದಂದು ಈ ಆಹಾರಗಳನ್ನು ಕಡ್ಡಾಯವಾಗಿ ತಿನ್ನಲೇಬೇಕು. ಇದರಿಂದ ಸೂರ್ಯನ ಕ್ರೋಧವನ್ನು ತಗ್ಗಿಸಬಹುದಾಗಿದೆ...

ಈರುಳ್ಳಿ
ಎಲ್ಲಾ ಮನೆಗಳಲ್ಲಿ ಅತಿ ಸಾಮಾನ್ಯವಾಗಿರುವ ತರಕಾರಿ ಈರುಳ್ಳಿಯಾಗಿದ್ದು, ಭಾನುವಾರ ಇದರ ಸೇವನೆಯನ್ನು ಅಶುಭವೆಂದು ಪರಿಗಣಿಸಲಾಗಿದ್ದು ಸೂರ್ಯನಿಗೂ ನಿಷೇಧಿತ ತರಕಾರಿಯಾಗಿದೆ.

ಮೀನು
ಪೋಷಕಾಂಶದ ಹೆಚ್ಚು ಮುಖ್ಯ ಘಟಕವಾಗಿರುವ ಮೀನು ಕೂಡ ಭಾನುವಾರ ನಿಷೇಧಿತವಾಗಿದೆ. ಇದು ಮಾಂಸವಾಗಿರುವುದರಿಂದ ನಿಷೇಧವನ್ನು ಹೇರಲಾಗಿದೆ.

ಬೆಳ್ಳುಳ್ಳಿ
ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬೆಳ್ಳುಳ್ಳಿಯು ಸಹಕಾರಿಯಾಗಿದ್ದರೂ, ಭಾನುವಾರದಂದು ಇದರ ಸೇವನೆಯನ್ನು ನಿಷೇಧಿಸಲಾಗಿದೆ. ದೇಹದ ಬೆವರನ್ನು ಇದು ಸಂಕೇತಿಸುವುದರಿಂದ ಈ ನಿರ್ಬಂಧನೆಯನ್ನು ಹೇರಲಾಗಿದೆ.

ಲಾಲ್ ಸಾಗ್
ಭಾನುವಾರ ಇದನ್ನು ಸೇವಿಸುವುದು ಅಶುಭ ಎಂದು ಪರಿಗಣಿಸಲಾಗಿದೆ. ಮಿಶ್ರವಾಗಿರುವ ಅಲ್ಪಾವಧಿಯ ಚಿರಸ್ಥಾಯಿ ಸಸ್ಯವನ್ನು ವೈಷ್ಣವರು ಸಾವಿನ ಸಂಕೇತ ಎಂದು ಕರೆದಿದ್ದಾರೆ.

ಮಸ್ಸೂರ್
ಹೆಚ್ಚು ಪ್ರಮಾಣದ ಪೋಷಕಾಂಶವು ಮಾಂಸಕ್ಕಿಂತಲೂ ಅಧಿಕವಾಗಿ ಈ ಧಾನ್ಯದಲ್ಲಿರುವುದರಿಂದಾಗಿ 'ದೇವ ಭೋಗ' ದಲ್ಲಿ ನೀಡುವುದರಿಂದ ಇದನ್ನು ನಿರ್ಬಂಧಿಸಲಾಗಿದೆ.

ಕಾರಣಗಳು
ಭಾನುವಾರದಂದು ಈ ಐದು ಅಂಶಗಳ ಸೇವನೆಯನ್ನು ಏಕೆ ಮಾಡಬಾರದು ಎಂಬ ಕಾರಣವನ್ನು ಪುರಾಣಗಳಲ್ಲಿ ತಿಳಿಸಲಾಗಿದೆ. ಇಂದಿನ ದಿನಗಳಲ್ಲಿ ಗೋಹತ್ಯೆಯನ್ನು ಪಾಪವೆಂದೇ ಹಿಂದೂ ಧರ್ಮದಲ್ಲಿ ಪರಿಗಣಿಸಲಾಗಿದೆ. ಆದರೆ ಪುರಾತನ ಧರ್ಮದಲ್ಲಿ ಈ ಐದು ಆಹಾರಗಳ ಮೇಲೆ ಹೇರಲಾಗಿರುವ ನಿರ್ಬಂಧವು ತನ್ನದೇ ಕಾರಣಗಳನ್ನು ಒಳಗೊಂಡಿದೆ.

ದನದ ಯಜ್ಞ
ಹಿಂದೂ ದಂತಕಥೆಗಳಲ್ಲಿ ಗೋಮೆಡ್ ಯಜ್ಞದ ಬಗ್ಗೆ ಉಲ್ಲೇಖವಿದ್ದು, ದನದ ತ್ಯಾಗವನ್ನು ಆಚರಣೆಯಾಗಿ ಪರಿಗಣಿಸಲಾಗಿದೆ. ಒಬ್ಬ ಋಷಿಯು ದನದ ಯಜ್ಞವನ್ನು ಮಾಡಬೇಕೆಂದು ತೀರ್ಮಾನಿಸಿ ದಾರಿಯಲ್ಲಿ ಹೋಗುತ್ತಿದ್ದಾಗ ಬೆಳಗ್ಗೆ ಹತನಾದ ಹಸುವನ್ನು ಕಂಡು ಸಂಜೆ ಸಮಯದಲ್ಲಿ ಪುನರ್ಸ್ಥಾಪನೆ ಮಾಡಬೇಕೆಂದು ತೀರ್ಮಾನಿಸಿದ.ಋಷಿಯ ಪತ್ನಿಯು ಅಶಕ್ತಳಾಗಿದ್ದುದರಿಂದ ಹಸಿವೆಯನ್ನು ತಡೆಯುವ ಶಕ್ತಿ ಆಕೆಗಿರಲಿಲ್ಲ. ಹಣ್ಣು ಮತ್ತು ಬೇರುಗಳನ್ನೇ ತಿಂದು ದಂಪತಿಗಳು ಕಾಲ ಕಳೆಯುತ್ತಿದ್ದರು. ಆಕೆ ಸತ್ತ ದನದಿಂದ ಒಂದು ತುಂಡು ಮಾಂಸವನ್ನು ತೆಗೆದು ಅದನ್ನು ಬೇಯಿಸಲು ನಿರ್ಧರಿಸಿದಳು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದನದ ಯಜ್ಞ
ಆದರೆ ಋಷಿಯ ಪತ್ನಿಗೆ ಮಾಂಸದ ವಾಸನೆ ಸಹ್ಯವಾಗಲಿಲ್ಲ. ಆದ್ದರಿಂದ ಆಕೆ ಮಾಂಸದ ತುಂಡನ್ನು ಅರಣ್ಯಕ್ಕೆ ಎಸೆದಳು, ಈ ತುಂಡು ಎರಡು ಭಾಗವಾಯಿತು. ಸಂಜೆಯ ವೇಳೆಯಲ್ಲಿ, ಋಷಿಯು ದನವನ್ನು ಪುನಶ್ಚೇತನಗೊಳಿಸಿದಾಗ ಅರಣ್ಯಕ್ಕೆ ಎಸೆದ ತುಂಡಿಗೆ ಜೀವ ಬಂದಿತು. ಮಾಂಸದ ಮೊದಲ ಭಾಗವು ಭೂಮಿಗೆ ಬಿದ್ದು ಇದು ಬೆಳ್ಳುಳ್ಳಿಯಾಗಿ ಬದಲಾಯಿತು, ಎರಡನೇ ತುಂಡು ಕೊಳದ ಸಮೀಪಕ್ಕೆ ಬಿದ್ದಿದ್ದು ಅದು ಮೀನಾಯಿತು. ಭೂಮಿಗೆ ಬಿದ್ದ ರಕ್ತದ ಹನಿ ಮಸೂರ್ ದಾಲ್ ಆಗಿ ಪರಿವರ್ತನೆಯಾಯಿತು, ತ್ವಚೆಯು ಈರುಳ್ಳಿಯಾಯಿತು ಮತ್ತು ಮೂಳೆಯು ಕೆಂಪು ಅಮರನಾಥವಾಯಿತು.



Click it and Unblock the Notifications











