Latest Updates
-
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
National Farmers' Day 2022 : ರೈತರ ದಿನ: ರೈತರಿಗೆ ನಾವೇನೂ ಕೊಡುಗೆ ನೀಡಬಹುದು? ರೈತರ ದಿನಕ್ಕೆ ಇಲ್ಲಿದೆ ಸಂದೇಶಗಳು
ದೇಶದಲ್ಲಿ ಪ್ರತಿವರ್ಷವೂ ಡಿಸೆಂಬರ್ 23ರಂದು ಅನ್ನದಾತನ ದಿನ ಅಂದರೆ ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ಆಚರಿಸಲಾಗುವುದು. ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುವುದು. ಈ ದಿನ ರೈತರಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ತುಂಬಾನೇ ಪ್ರಮುಖವಾದ ದಿನವಾಗಿದೆ.

ರೈತರಿಲ್ಲ ಎಂದರೆ ಯಾವ ಕ್ಷೇತ್ರಕ್ಕೂ ಉಳಿಗಾಲವಿಲ್ಲ, ರೈತ ದುಡಿದು ಬೆಳೆ ಬೆಳೆದರಷ್ಟೇ ನಮ್ಮೆಲ್ಲರ ಹೊಟ್ಟೆ ತುಂಬಲು ಸಾಧ್ಯ, ಕೋಟಿಗಟ್ಟಲೆ ಹಣವಿದ್ದು ತಿನ್ನಲು ಆಹಾರವಿಲ್ಲವೆಂದರೆ ಏನು ಪ್ರಯೋಜನ ಅಲ್ವಾ? ಆದ್ದರಿಂದ ರೈತರನ್ನು ನಾವೆಲ್ಲಾ ಪೂಜಿಸಬೇಕು, ಅವನ ತ್ಯಾಗವನ್ನು ಕೊಂಡಾಡಬೇಕು, ಅವನು ಕೂಡ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಲು ನಾವೂ ಕೊಡುಗೆ ನೀಡಬೇಕು, ಹೇಗೆ ಎಂದು ವಿವರವಾಗಿ ಈ ಲೇಖನದಲ್ಲಿ ನೋಡೋಣ, ಅದಕ್ಕೂ ಮೊದಲು ಇದರ ಇತಿಹಾಸ ತಿಳಿಯೋಣ:
ಪಂಡಿತ್ ಜವಹರಲಾಲ್ ನೆಹರೂ ಅವರನ್ನು ವಿರೋಧಿಸಿದ ನಾಯಕ ಚೌಧರಿ ಚರಣ್ ಸಿಂಗ್
ಚೌಧರಿ ಚರಣ್ ಸಿಂಗ್ ಮೀರತ್ ನ ನೂರ್ಪುರ್ ನಲ್ಲಿ 1902ರ ಡಿಸೆಂಬರ್ 23ರಂದು ಜನಿಸಿದರು. ಚೌಧರಿ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದವರು. ಜುಲೈ 1979ರಲ್ಲಿ ಪ್ರಧಾನಿಯಾಗಿ ಹುದ್ದೆ ವಹಿಸಿ 1980ರ ಜನವರಿಯವರಿಗೆ ಇದ್ದರು. ಈ ಅವಧಿಯಲ್ಲಿ ಕೃಷಿ ಆರ್ಥಿಕತೆಯ ಮಹತ್ವದ ಅರಿವಿದ್ದ ಇವರು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತರಲು ಬಯಸಿದರು.
ಚೌಧರಿ ಚರಣ್ ಸಿಂಗ್ ಅವರು ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರನ್ನು ವಿರೋಧಿಸಿ ಅದ್ವಿತೀಯ ನಾಯಕ ಎನಿಸಿಕೊಂಡಿದ್ದರು. 1959ರ ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಚೌಧರಿಯವರು, ನೆಹರೂರವರನ್ನು ಸಾರ್ವಜನಿಕವಾಗಿಯೇ ಅವರ ಸಾಮೂಹಿಕ ಮತ್ತು ಸಾಮಾಜಿಕ ನೀತಿಗಳನ್ನು ವಿರೋಧಿಸಿದ್ದರು.
ಚೌಧರಿ ಚರಣ್ ಸಿಂಗ್ ಸ್ಮರಣೆಯಲ್ಲಿ ಕಿಸಾನ್ ದಿವಸ್ ಆಚರಣೆ
ಇವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದದ್ದಕ್ಕಾಗಿ ಅವರ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ರೈತ ದಿನಾಚರಣೆಯ ಉದ್ದೇಶ: ಕೃಷಿ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳು, ಅದನ್ನು ಬಗೆಹರಿಸಲು ಸರ್ಕಾರ ಏನು ಮಾಡಬೇಕು ಈ ಬಗ್ಗೆ ಚರ್ಚಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅಗ್ಯತವಾದ ಸೌಲಭ್ಯ ಕಲ್ಪಿಸಿ ಅವರ ಆರ್ಥಿಕ ಮಟ್ಟ ಸುಧಾರಿಸುವುದು, ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಒದಗಿಸುವುದು ಹೇಗೆ ಎಂಬುವುದರ ಬಗ್ಗೆ ಯೋಜನೆಗಳನ್ನು ರೂಪಿಸಲಾಗುವುದು.
ರೈತರಿಗೆನಾವು ಹೇಗೆ ಕೊಡುಗೆ ನೀಡಬಹುದು?
* ನೀವು ರೈತರಿಗೆ ನೇರವಾಗಿ ಸಹಾಯ ಮಾಡಬಹುದು. ದೊಡ್ಡ ಆರ್ಡರ್‌ಗಳನ್ನು ಮಧ್ಯವರ್ತಿ ಅಂಗಡಿಗಳಿಂದ ಕೊಳ್ಳದೆ ನೇರವಾಗಿ ರೈತರಿಂದ ಖರೀದಿಸಿದರೆ ಅವರಿಗೆ ಹೆಚ್ಚಿನ ಲಾಭಾಂಶ ದೊರೆಯುವುದು.
ಉದಾಹರಣೆಗೆ ನೀವು ಯಾವುದೋ ದೊಡ್ಡ ಸಮಾರಂಭ ನಡೆಸುತ್ತಿದ್ದರೆ ಅದಕ್ಕೆ ಬೇಕಾದ ತರಕಾರಿ ಮತ್ತಿತರ ಸಾಮಗ್ರಿಗಳನ್ನು ನೇರವಾಗಿ ರೈತರ ಬಳಿಯಿಂದಲೇ ಖರೀದಿಸಿ.
ರೈತರಿಗೆ ಸೂಕ್ತ ಮಾಹಿತಿ ನೀಡಿ
ತುಂಬಾ ರೈತರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಕೂಡ ಮಾಹಿತಿ ಇರಲ್ಲ, ಈ ಕುರಿತು ಅವರಿಗೆ ತಿಳುಹಿಸಿ ಸಿಗುವಂತೆ ಮಾಡಬಹುದು.



Click it and Unblock the Notifications


