Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
ವಿವಾಹ ಪಂಚಮಿ 2021: ಶ್ರೀರಾಮ-ಸೀತಾಮಾತೆ ಮದುವೆಯಾದ ಈ ದಿನ ಮದುವೆಯಾಗಲು ಜನರು ಭಯಪಡುವುದೇಕೆ?
ಡಿಸೆಂಬರ್ 8ರಂದು ವಿವಾಹ ಪಂಚಮಿಯನ್ನು ಆಚರಿಸಲಾಗುತ್ತಿದೆ. ಮಾಘಾ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಶ್ರೀರಾಮ್ ಮಹೋತ್ಸವ ಎಂದು ಆಚರಿಸಲಾಗುವುದು.

ಈ ಪಂಚಮಿಯಂದು ಎರಡು ವ್ಯಕ್ತಿಗಳು ಒಂದಾದರೆ (ವಿವಾಹ), ಕನ್ಯೆಯನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುವುದು, ಆದರೂ ವಿವಾಹ ಪಂಚಮಿಯಂದು ಮದುವೆಯಾಗಲು ಜನರು ಭಯ ಪಡುತ್ತಾರೆ, ಅದಕ್ಕೆ ಕಾರಣಗಳೆಂದರೆ...

ವಿವಾಹ ಪಂಚಮಿ
ವಿವಾಹ ಪಂಚಮಿಯಂದು ಮದುವೆಯಾದರೆ ಒಳ್ಳೆಯದು, ಆದರೂ ಈ ದಿನ ಮದುವೆಯಾಗಲು ಜನ ಹಿಂದೇಟು ಹಾಕುತ್ತಾರೆ, ಪಂಚಾಂಗ ನೋಡದೆ ಕೆಲವರು ಈ ದಿನ ಮದುವೆಯಾಗುತ್ತಾರೆ, ಆದರೆ ಕೆಲವರು ಈ ದಿನ ಬೇಡವೆಂದು ಹೇಳುತ್ತಾರೆ, ಅದಕ್ಕೆ ಕಾರಣ ಈ ದಿನ ಮದುವೆಯಾದರೆ ಬದುಕಿನಲ್ಲಿ ಹಲವಾರು ಸಲಾಲುಗಳು ಬರುತ್ತದೆ ಎಂಬುವುದು ಜನರ ನಂಬಿಕೆ. ಭಗವಂತ ಶ್ರೀರಾಮ ಹಾಗೂ ಸೀತಾಮಾತೆ ಈ ದಿನ ಮದುವೆಯಾದರು, ಆದರೆ ಅವರು ಅವರ ಬದುಕಿನಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು, ಆದ್ದರಿಂದ ಈ ದಿನ ಬೇಡ ಎಂದು ಹೆಳುತ್ತಾರೆ.

ವನವಾಸ ಮುಗಿಸಿ ಹಿಂತಿರುಗಿದರೂ ಸೀತಾಮಾತೆಗೆ ತಪ್ಪಲಿಲ್ಲ ಕಷ್ಟ
14 ವರ್ಷಗಳ ವನವಾಸದಲ್ಲಿ ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ರಕ್ಷಿಸಲು ರಾವಣ-ರಾಮನ ನಡುವೆ ದೊಡ್ಡ ಯುದ್ಧವೇ ನಡೆಯಿತು. ಶ್ರಿರಾಮ ಸೀತಾಮಾತೆಯನ್ನು ಸುರಕ್ಷಿತವಾಗಿ ಮರಳಿ ಪಡೆದನು, ಆದರೂ ಸೀತಾಮಾತೆಯ ಕಷ್ಟ ತಪ್ಪಲಿಲ್ಲ, ವನವಾಸದಿಂದ ಹಿಂತಿರುಗಿದ ಮೇಲೆ ಜನರ ಕೊಂಕು ಮಾತುಗಳು ಕೇಳಬೇಕಾಯಿತು, ಅಗ್ನಿ ಪರೀಕ್ಷೆ ಎದುರಿಸಿ ತನ್ನ ಪಾತಿವ್ರತ್ಯ ಸಾಬೀತು ಪಡಿಸಬೇಕಾಯಿತು.
ಭಗವಂತರಾದ ಶ್ರೀರಾಮ-ಸೀತಾ ಮಾತೆಗೇ ಅಷ್ಟೆಲ್ಲಾ ಕಷ್ಟಗಳು ಎದುರಾಗಿರುವಾಗ ಹುಲು ಮನುಜರು ನಾವು... ಆದ್ದರಿಂದ ಈ ದಿನ ಮದುವೆ ಬೇಡ, ಮದುವೆಯಾದರೆ ವೈವಾಹಿಕ ಜೀವನದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ ಎಂದು ಕೆಲವರು ನಂಬುತ್ತಾರೆ.

ಶ್ರೀವಿಷ್ಣುವಿನ ಅವತಾರ ರಾಮ
ಶ್ರೀರಾಮ ಶ್ರೀವಿಷ್ಣುವಿನ ಅವತಾರಗಳಲ್ಲಿ ಒಂದು. ಭಗವಾನ್ ಶ್ರೀವಿಷ್ಣುವಿನ ಏಳನೇ ಅವತಾರವೇ ಶ್ರೀರಾಮ. ಶ್ರೀವಿಷ್ಣುವಿನ ಪ್ರತಿಯೊಂದು ಅವತಾರಕ್ಕೂ ಒಂದೊಂದು ಉದ್ದೇಶವಿದೆ, ಅದರಂತೆ ಶ್ರೀರಾಮ ಅವತಾರದ ಹಿಂದೆಯೂ ಒಂದು ಉದ್ದೇಶವಿತ್ತು, ಅದರಂತೆಯೇ ಎಲ್ಲವೂ ನಡೆದವು.
ಶ್ರೀರಾಮ ಅಯೋಧ್ಯೆಯಲ್ಲಿ ಜನಿಸಿದ, ನಮ್ಮ ರಾಷ್ಟ್ರ ರಾಜಧಾನಿ ದೆಹಲಿಯಿಂದ ಅಯೋಧ್ಯೆ 55ಕಿ.ಮೀ ದೂರದಲ್ಲಿದೆ. ಉತ್ತರಬಾರತದ ಫೈಜಾಬಾದ್ ಜಿಲ್ಲೆಯಲ್ಲಿ ಅಯೋಧ್ಯೆ ಇದ್ದು ಅಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಭಾರತೀಯರ ಪ್ರಮುಖ ಪವಿತ್ರ ಸ್ಥಳಗಳಲ್ಲಿ ಅಯೋಧ್ಯೆಯೂ ಒಂದು.
ಶ್ರೀರಾಮ ಪೂಜಿಸಿದರೆ ಬದುಕಿನಲ್ಲಿರುವ ಬರುವ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಅವನು ನಮಗೆ ಕೊಡುತ್ತಾನೆ. ಜೈ ಶ್ರೀರಾಮ್....



Click it and Unblock the Notifications