Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ವಾಲ್ಮೀಕಿ ಜಯಂತಿ 2022: ದರೋಡೆಕೋರನಾಗಿದ್ದ ರತ್ನಾಕರ ವಾಲ್ಮೀಕಿಯಾದ ಕಥೆ!
ಅಕ್ಟೋಬರ್ 9 ರಂದು ವಾಲ್ಮೀಕಿ ಜಯಂತಿ. ಪ್ರತಿ ವರ್ಷ ಅಶ್ವಿನಿ ಮಾಸದ ಹುಣ್ಣಿಮೆಯಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಇದೇ ವಾಲ್ಮೀಕಿ ಮಹರ್ಷಿಯೇ ರಾಮಾಯಣ ಮಹಾಕಾವ್ಯವನ್ನು ರಚಿಸಿದವರು.

ಆದರೆ ಈ ವಾಲ್ಮೀಕಿ ಮೊದಲು ಒಳ್ಳೆಯವರಾಗಿಲಿಲ್ಲ. ಅವರೊಬ್ಬರು ದರೋಡೆಕೋರರಾಗಿದ್ದರು. ಕಾಡಿಗೆ ಬರುತ್ತಿದ್ದ ಜನರನ್ನು ಸುಲಿಗೆ ಮಾಡಿ ಬದುಕುತ್ತಿದ್ದರು. ಆದರೆ ಒಂದು ಘಟನೆಯು ಅವರ ಮನಪರಿವರ್ತನೆಯಾಗುವಂತೆ ಮಾಡಿತ್ತು. ಹಾಗಾದ್ರೆ ದರೋಡೆಕೋರನಾಗಿದ್ದ ರತ್ನಾಕರ ವಾಲ್ಮೀಕಿ ಮಹರ್ಷಿಯಾಗಿದ್ದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ವಾಲ್ಮೀಕಿ ಜಯಂತಿ ದಿನಾಂಕ:
ಈ ವರ್ಷ, ಹುಣ್ಣಿಮೆಯ ದಿನಾಂಕವು ಅಕ್ಟೋಬರ್ 9 ರಂದು ನಸುಕಿನ ಜಾವ 3 00 ಗಂಟೆಗೆ ಪ್ರಾರಂಭವಾಗಿ ಅಕ್ಟೋಬರ್ 10 ರಂದು ನಸುಕಿನ ಜಾವ 2:24 ಕ್ಕೆ ಕೊನೆಗೊಳ್ಳುತ್ತದೆ.
ವಾಲ್ಮೀಕಿ ಆಶ್ರಮ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀರಾಮನು ಸೀತಾಮಾತೆಯನ್ನು ದೂರವಿಟ್ಟ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿಯ ಆಶ್ರಮದ ಉಲ್ಲೇಖ ಬರುತ್ತದೆ. ಸೀತಾದೇವಿಯು ಕೆಲವು ವರ್ಷಗಳ ಕಾಲ ವಾಲ್ಮೀಕಿ ಋಷಿಗಳ ಆಶ್ರಮದಲ್ಲಿ ವಾಸಿಸಿದ್ದರು. ಜೊತೆಗೆ ಅಲ್ಲಿಯೇ ಸೀತೆ ಲವ ಮತ್ತು ಕುಶರಿಗೆ ಜನ್ಮ ನೀಡಿದಳು ಎಂಬ ಉಲ್ಲೇಖವಿದೆ.

ಋಷಿಯಾಗಿ ಬದಲಾದ ದರೋಡೆಕೋರ ರತ್ನಾಕರ:
ಧಾರ್ಮಿಕ ನಂಬಿಕೆಗಳ ಪ್ರಕಾರ, ರತ್ನಾಕರ ಎಂಬುವವನು ಮೊದಲು ಕಾಡಿಗೆ ಬಂದ ಜನರನ್ನು ದರೋಡೆ ಮಾಡಿ ತನ್ನ ಬದುಕು ಸಾಗಿಸುತ್ತಿದ್ದ. ಒಮ್ಮೆ ರತ್ನಾಕರನು ಭೂಮಿಗೆ ಬಂದ ನಾರದ ಮುನಿಯನ್ನು ತಡೆಯುತ್ತಾನೆ. ದರೋಡೆ ಮಾಡುವುದು ರತ್ನಾಕರನ ಉದ್ದೇಶವಾಗಿರುತ್ತೆ. ಆಗ ಯಾಕೆ ಹೀಗೆ ವರ್ತಿಸುತ್ತಿದ್ದೀಯಾ? ಎಂದು ನಾರದ ಮುನಿಯು ರತ್ನಾಕರನನ್ನು ಕೇಳಿದಾಗ ರತ್ನಾಕರ - ಇದು ನನ್ನ ಆದಾಯದ ಮೂಲ. ಅದರ ಸಹಾಯದಿಂದ ನಾನು ನನ್ನ ಕುಟುಂಬವನ್ನು ಪೋಷಿಸುತ್ತಿದ್ದೇನೆ ಎನ್ನುತ್ತಾನೆ. ಅದಕ್ಕೆ ನಾರದರು ಈ ಕೃತ್ಯದ ಪರಿಣಾಮಗಳ ಬಗ್ಗೆ ನಿನಗೆ ತಿಳಿದಿದೆಯೇ? ನಿಮ್ಮ ಕುಟುಂಬದ ಸದಸ್ಯರು ಈ ಪಾಪದ ಪಾಲು ಪಡೆಯಲು ಸಿದ್ಧರಿದ್ದಾರೆಯೇ ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ರತ್ನಾಕರ, ನನ್ನ ಕುಟುಂಬದವರು ನನ್ನ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ ಎನ್ನುತ್ತಾರೆ. ಆಗ ನಾರದರು, ಹಾಗಾದರೆ, ಮನೆಗೆ ಹೋಗಿ, ನಿನ್ನ ಕುಟುಂಬದವರ ಬಳಿ ಈ ಬಗ್ಗೆ ಕೇಳಿ, ದೃಢಪಡಿಸಿಕೊಂಡು ಬಾ ಎನ್ನುತ್ತಾರೆ.
ಹೀಗೆ ಮನೆ ಕಡೆ ಹೋದ ರತ್ನಾಕರ ತನ್ನ ಕುಟುಂಬ ಸದಸ್ಯರ ಎದುರು ನಿಂತು ನನ್ನ ದುಷ್ಕೃತ್ಯ ಬೆಂಬಲಿಸಲು ಹಾಗೂ ಅದರ ಪರಿಣಾಮಗಳನ್ನು ಎದುರಿಸಲು ಎಲ್ಲರೂ ಸಿದ್ಧರಿದ್ದೀರಾ, ಅದರ ಪಾಲು ಪಡೆಯಲಯ ಎಲ್ಲರೂ ಸಿದ್ಧರೇ ಎಂದು ಕೇಳುತ್ತಾನೆ. ಆಗ ಕುಟುಂಬ ಸದಸ್ಯರೆಲ್ಲರೂ ತಮ್ಮ ತಲೆ ಕೆಳಗೆ ಮಾಡುತ್ತಾರೆ. ಈಗ ರತ್ನಾಕರನಿಗೆ ದುಷ್ಪರಿಣಾಮಗಳ ಪಾಲು ಪಡೆಯಲು ಸಿದ್ಧರಿಲ್ಲ ಎಂಬುದು ಮನವರಿಕೆಯಾಗುವುದು. ವಾಪಸು ಹೋಗಿ, ನಾರದರನ್ನು ಭೇಟಿಯಾಗಿ ನಡೆದ ಘಟನೆಗಳನ್ನು ತಿಳಿಸಿದ. ಆಗ ರತ್ನಾಕರನ ಮನ ಪರಿವರ್ತನೆ ಆಯಿತು. ತಾನು ಮಾಡಿದ್ದು ಎಂತಹ ತಪ್ಪು ಎಂದು ಅರಿವಾದ ಮೇಲೆ ದರೋಡೆ ಕೈ ಬಿಟ್ಟು, ದೇವರ ಧ್ಯಾನದ ಮೊರೆ ಹೋಗಲು ನಿರ್ಧರಿಸಿ ತಪಸ್ಸಿಗೆ ಕುಳಿತ.

ವಾಲ್ಮೀಕಿ ಎಂಬ ಹೆಸರು ಹೇಗೆ ಬಂತು?
ಬ್ರಹ್ಮ ದೇವರನ್ನು ಮೆಚ್ಚಿಸಲು ಮತ್ತು ತನ್ನ ಪಾಪ ಕೃತ್ಯಗಳ ಬಗ್ಗೆ ಕ್ಷಮೆಯನ್ನು ಕೇಳಲು ರತ್ನಾಕರನು ಕಠಿಣ ತಪಸ್ಸು ಮಾಡಿದನೆಂದು ಹೇಳಲಾಗುತ್ತದೆ. ಹೀಗೆ ತಪಸ್ಸಿನಲ್ಲಿದ್ದ ರತ್ನಾಕರನ ಸುತ್ತ, ಮೈಮೇಲೆ ಗೆದ್ದಲುಗಳ ದಪ್ಪ ಪದರದ ಹುತ್ತ ಬೆಳೆಯುತ್ತದೆ. ಇದರ ಅರಿವೇ ಇಲ್ಲದೆ ರತ್ನಾಕರ ತಪಸ್ಸು ಮುಂದುವರಿಸುತ್ತಾನೆ. ರತ್ನಾಕರನ ತಪಸ್ಸಿಗೆ ಮೆಚ್ಚಿದ ಬ್ರಹ್ಮ, ರತ್ನಾಕರನಿಗೆ ವಾಲ್ಮೀಕಿ ಎಂದು ನಾಮಕರಣ ಮಾಡಿದರು ಎನ್ನುತ್ತದೆ ಇತಿಹಾಸ.



Click it and Unblock the Notifications