Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ತಿರುಮಲ ವೆಂಕಟೇಶ್ವರ ದೇವರ ಮಹಿಮೆ ಗೊತ್ತೇನು?
ವೆಂಕಟೇಶ್ವರ ದೇವರು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವಂತವರು. ದೇವರ ಆಶೀರ್ವಾದ ಪಡೆಯಲು ಪ್ರತೀ ವರ್ಷ ಲಕ್ಷಾಂತರ ಮಂದಿ ಜನರು ತಿರುಮಲ ಬೆಟ್ಟಕ್ಕೆ ಹೋಗುತ್ತಾರೆ. ವೆಂಕಟೇಶ್ವರ ದೇವರು ತನ್ನ ಪತ್ನಿ ಪದ್ಮಾವತಿ ಜತೆಗೆ ತಿರುಮಲ ಬೆಟ್ಟದಲ್ಲಿ ವಾಸವಾಗಿದ್ದಾರೆಂದು ನಂಬಲಾಗಿದೆ.
ವೆಂಕಟೇಶ್ವರನನ್ನು ಬಾಲಾಜಿ, ಶ್ರೀನಿವಾಸ, ಗೋವಿಂದ ಹೆಸರಿನಿಂದಲೂ ಕರೆಯಲಾಗುತ್ತದೆ. ಭಾರತದಲ್ಲಿರುವ ಅತ್ಯಂತ ಶ್ರೀಮಂತ ದೇವರೆಂದರೆ ವೆಂಕಟೇಶ್ವರನೆಂದು ನಂಬಲಾಗಿದೆ. ಪದ್ಮಾವತಿಯನ್ನು ಮದುವೆಯಾಗುವ ವೇಳೆ ಕುಬೇರನಿಂದ ಪಡೆದಿದ್ದ ಸಾಲವನ್ನು ಈಗಲೂ ವೆಂಕಟೇಶ್ವರ ತೀರಿಸುತ್ತಿದ್ದಾನೆ ಎನ್ನುವ ಪುರಾಣ ಕಥೆಯಿದೆ.
ವೆಂಕಟೇಶ್ವರನನ್ನು ಅತ್ಯಂತ ಶಕ್ತಿಯುತ ದೇವರೆಂದು ನಂಬಲಾಗಿದೆ. ಭಕ್ತನು ಒಳ್ಳೆಯ ಮನಸ್ಸು ಮತ್ತು ದೃಢ ನಂಬಿಕೆಯಿಂದ ಯಾವುದೇ ಬೇಡಿಕೆ ಸಲ್ಲಿಸಿದರೂ ಅದನ್ನು ಈಡೇರಿಸುವ ಶಕ್ತಿ ವೆಂಕಟೇಶ್ವರನಿಗೆ ಇದೆ ಎನ್ನಲಾಗುತ್ತಿದೆ. ಕೆಲವರು ದೇವರಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಯಾಗಲಿ ಎಂದು ಬೇಡಿಕೆಯನ್ನಿಡುತ್ತಾರೆ ಮತ್ತು ಅದು ಈಡೇರಿದರೆ ಅವರು ತಮ್ಮ ಕೂದಲನ್ನು ಮುಡಿಗೆ ಅರ್ಪಿಸುತ್ತಾರೆ. ತಿರುಮಲದಲ್ಲಿರುವ ದೇವರ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಅವರು ಭೂಮಿಗೆ ಬಂದ ಕಥೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ತಿರುಪತಿಯ ವೆಂಕಟೇಶ್ವರ ದೇವರ ಕಥೆಯ ಬಗ್ಗೆ ನಾವು ಇಲ್ಲಿ ಕೇಳುವ.
ರಾಹು ದೋಷ ನಿವಾರಣೆಗೆ ಆಧ್ಯಾತ್ಮಿಕ ಪರಿಹಾರ

ಋಷಿ ಭೃಗುವಿನ ಶಾಪ
ದಿವ್ಯ ಶಕ್ತಿ ಋಷಿ ಭೃಗು ಒಂದು ಸಲ ವೈಕುಂಠವನ್ನು ಬಿಟ್ಟು ನಿಜವಾದ ಜ್ಞಾನ ಪಡೆಯಲು ಭೂಮಿಯನ್ನು ಸುತ್ತಲು ಹೋಗುತ್ತಾರೆ. ಮೊದಲು ಅವರು ಬ್ರಹ್ಮನನ್ನು ಭೇಟಿಯಾಗಲು ಹೋಗುತ್ತಾರೆ. ಆದರೆ ಬ್ರಹ್ಮನು ವಿಷ್ಣುವಿನ ನಾಮಜಪದಲ್ಲಿ ಎಷ್ಟು ತಲ್ಲೀನನಾಗಿದ್ದನೆಂದರೆ ಭೃಗು ಬಂದಿರುವುದು ತಿಳಿಯುವುದೇ ಇಲ್ಲ. ಇದರಿಂದ ಕುಪಿತನಾದ ಭೃಗು, ಭೂಮಿ ಮೇಲೆ ಬ್ರಹ್ಮನನ್ನು ಯಾರೂ ಪೂಜಿಸಬಾರದೆಂದು ಶಾಪ ನೀಡುತ್ತಾನೆ. ಇದರ ಬಳಿಕ ಭೃಗು ಶಿವನಲ್ಲಿಗೆ ತೆರಳುತ್ತಾನೆ.

ಋಷಿ ಭೃಗುವಿನ ಶಾಪ
ಅಲ್ಲಿ ಶಿವನು ಪಾವರ್ತಿಯೊಂದಿಗೆ ಮಾತನಾಡುತ್ತಾ ಇರುತ್ತಾನೆ ಮತ್ತು ಋಷಿಯನ್ನು ಗುರುತಿಸುವುದೇ ಇಲ್ಲ. ಋಷಿಯು ಇದರಿಂದ ಕುಪಿತಗೊಂಡ ಶಾಪ ನೀಡಿ, ನಿನ್ನನ್ನು ಕೇವಲ ಕಲ್ಲ(ಲಿಂಗ)ನ್ನಾಗಿ ಪೂಜಿಸಬೇಕೆಂದು ಶಾಪವಿಡುತ್ತಾರೆ.

ಋಷಿ ಭೃಗುವಿನ ಶಾಪ
ಋಷಿ ಭೃಗು ಇದರ ಬಳಿಕ ವಿಷ್ಣುವಿನಲ್ಲಿಗೆ ತೆರಳುತ್ತಾನೆ. ಅಲ್ಲಿಯೂ ವಿಷ್ಣುನಿಂದ ಕಡೆಗಣಿಸಲ್ಪಡುತ್ತಾರೆ. ಇದರಿಂದ ಕುಪಿತಗೊಂಡ ಋಷಿ ವಿಷ್ಣುವಿನ ಎದೆಗೆ ಒದೆಯುತ್ತಾರೆ.

ಋಷಿ ಭೃಗುವಿನ ಶಾಪ
ವಿಷ್ಣುವಿನ ಎದೆಯಲ್ಲಿ ಮಹಾಲಕ್ಷ್ಮೀ ದೇವತೆ ನೆಲೆಸಿದ್ದಾರೆಂದು ನಂಬಲಾಗಿದೆ. ಋಷಿಯನ್ನು ಸಮಾಧಾನ ಮಾಡಲು ವಿಷ್ಣು, ಋಷಿಯ ಕಾಲನ್ನು ಹಿಡಿದು ನಿಧಾನವಾಗಿ ಅದನ್ನು ಒತ್ತಲು ಆರಂಭಿಸಿದ. ಇದನ್ನು ಮಾಡುವಾಗ ಋಷಿಯ ಕಾಲಿನಲ್ಲಿದ್ದ ಮೂರನೇ ಕಣ್ಣನ್ನು ತೆಗೆಯುತ್ತಾನೆ. ಇದರಿಂದ ಋಷಿಯ ಅಹಂ ಕಡಿಮೆಯಾಗುತ್ತದೆ. ತನ್ನ ತಪ್ಪಿಗೆ ಋಷಿಯು ಕ್ಷಮೆಯಾಚಿಸುತ್ತಾನೆ. ಅದಾಗ್ಯೂ ಮಹಾಲಕ್ಷ್ಮೀ ದೇವರು ಮಾತ್ರ ವಿಷ್ಣು, ಋಷಿಯ ಕ್ಷಮೆ ಕೋರಿದ್ದಕ್ಕೆ ತುಂಬಾ ಕುಪಿತಳಾಗುತ್ತಾಳೆ ಮತ್ತು ವೈಕುಂಠವನ್ನು ಬಿಟ್ಟು ಭೂಮಿಗೆ ಬರುತ್ತಾಳೆ.

ಶ್ರೀನಿವಾಸ ಮತ್ತು ಪದ್ಮಾವತಿ
ವಿಷ್ಣುವಿನ ನೋವನ್ನು ನೋಡಲಾರದೆ ಬ್ರಹ್ಮ ದೇವರು ಮತ್ತು ಶಿವನು ಹಸು ಮತ್ತು ಕರುವಿನ ರೂಪ ಪಡೆಯುತ್ತಾರೆ. ಚೋಲಾ ರಾಜನು ಇದನ್ನು ಪಡೆದು ಮೇಯಲು ವೈಕುಂಠ ಬೆಟ್ಟಕ್ಕೆ ಬಿಡುತ್ತಾನೆ. ವಿಷ್ಣುವನ್ನು ವೈಕುಂಠದಲ್ಲಿ ಪತ್ತೆಹಚ್ಚಿದ ಹಸು ಅವನಿಗೆ ಹಾಲುಣಿಸುತ್ತದೆ. ಅರಮನೆಯಲ್ಲಿದ್ದ ರಾಣಿಯು ಹಸು ಹಾಲು ಕೊಡದೇ ಇರುವ ಕಾರಣ ತುಂಬಾ ಕೋದ್ರಗೊಳ್ಳುತ್ತಾಳೆ. ಗೋಪಾಲಕರಿಗೆ ಹಸುವಿನ ಬಗ್ಗೆ ಗಮನಹರಿಸಬೇಕೆಂದು ತಿಳಿಸುತ್ತಾಳೆ. ಬೆಟ್ಟದಲ್ಲಿ ಒಂದು ಗೆದ್ದಲಿನ ಗೂಡಿಗೆ ಹಸು ಹಾಲೆರೆಯುತ್ತಿರುವುದನ್ನು ಗೋಪಾಲಕರು ನೋಡುತ್ತಾರೆ. ಇದರಿಂದ ಕೋಪಗೊಂಡ ಗೋಪಾಲಕ ತನ್ನ ಚೂರಿಯಿಂದ ಅದನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಈ ವೇಳೆ ವಿಷ್ಣು ಹೊರಬಂದು ಅದನ್ನು ನಿಲ್ಲಿಸುತ್ತಾನೆ.

ಶ್ರೀನಿವಾಸ ಮತ್ತು ಪದ್ಮಾವತಿ
ವಿಷ್ಣು ರಕ್ತದಲ್ಲಿ ತೊಯ್ದಿರುವುದನ್ನು ಕಂಡ ಗೋಪಾಲಕ ಕೆಳಗೆ ಬಿದ್ದು ಆಘಾತದಿಂದ ಸಾವನ್ನಪ್ಪುತ್ತಾನೆ. ಇದರ ಬಳಿಕ ರಾಜನು ಅಲ್ಲಿಗೆ ಓಡೋಡಿ ಬರುತ್ತಾನೆ ಮತ್ತು ಗೋಪಾಲಕ ಸತ್ತಿರುವುದನ್ನು ನೋಡುತ್ತಾನೆ. ವಿಷ್ಣುವು ಹೊರಬಂದು ರಾಜನಿಗೆ ತನ್ನ ದರ್ಶನ ನೀಡುತ್ತಾನೆ ಮತ್ತು ರಾಜನು ತನ್ನ ನೌಕರನ ತಪ್ಪಿಗೆ ಕ್ಷಮೆ ಕೇಳುತ್ತಾನೆ. ರಾಜನು ಕ್ಷಮೆಕೇಳಿ ತನ್ನನ್ನು ಕ್ಷಮಿಸುವಂತೆ ಬೇಡುತ್ತಾನೆ. ಈ ವೇಳೆ ವಿಷ್ಣುವು ರಾಜನು ನೀನು ಅಕಾಸ ರಾಜನಾಗಿ ಹುಟ್ಟಿ ಬಾ ಮತ್ತು ತನ್ನ ಮಗಳು ಪದ್ಮಾವತಿಯನ್ನು ವಿಷ್ಣುವಿಗೆ ಮದುವೆ ಮಾಡಿಕೊಡಬೇಕೆಂದು ಹೇಳುತ್ತಾನೆ.

ಶ್ರೀನಿವಾಸ ಮತ್ತು ಪದ್ಮಾವತಿ
ವಿಷ್ಣು ದೇವರು ಶ್ರೀನಿವಾಸನ ರೂಪ ಪಡೆದು ವರಾಹ ಕ್ಷೇತ್ರದಲ್ಲಿ ವಾಸಿಸುತ್ತಾನೆ. ಹಲವು ವರ್ಷಗಳ ಬಳಿಕ ಆಕಾಸ ರಾಜನೆಂಬ ದೊರೆಯು ಈ ಪ್ರದೇಶಕ್ಕೆ ಬರುತ್ತಾನೆ. ಆ ರಾಜನಿಗೆ ಪದ್ಮಾವತಿ ಎನ್ನುವ ಸುಂದರವಾದ ಮಗಳಿರುತ್ತಾಳೆ. ಒಂದು ಸಲ ಆನೆಯ ಹಿಂಡೊಂದು ಪದ್ಮಾವತಿಯನ್ನು ಅಟ್ಟಿಸಿಕೊಂಡು ಬರುತ್ತದೆ. ಈ ವೇಳೆ ಶ್ರೀನಿವಾಸ ಆಕೆಯನ್ನು ರಕ್ಷಿಸುತ್ತಾನೆ. ಇದರ ಬಳಿಕ ಅವರಿಬ್ಬರು ಪ್ರೀತಿಸಲು ಆರಂಭಿಸುತ್ತಾರೆ. ಇದರ ಬಗ್ಗೆ ತಿಳಿದುಕೊಂಡ ರಾಜ ಎಲ್ಲಾ ಜ್ಯೋತಿಷ್ಯರು ಹಾಗೂ ರಾಜಗುರುಗಳೊಂದಿಗೆ ಚರ್ಚಿಸಿ ಶ್ರೀನಿವಾಸನಿಗೆ ಪದ್ಮಾವತಿಯನ್ನು ಮದುವೆ ಮಾಡಿಕೊಡಲು ನಿರ್ಧರಿಸುತ್ತಾನೆ.

ಶ್ರೀನಿವಾಸ ಮತ್ತು ಪದ್ಮಾವತಿ
ತನ್ನ ಮದುವೆ ಹಣ ನೀಡುವಂತೆ ಶ್ರೀನಿವಾಸನು ಕಬೇರನಿಂದ ಸಾಲ ಪಡೆಯುತ್ತಾನೆ. ಇದರಿಂದ ಶ್ರೀನಿವಾಸ ಮತ್ತು ಪದ್ಮಾವತಿ ದೇವತೆಯ ಪವಿತ್ರ ಮದುವೆಯು ನೆರವೇರುತ್ತದೆ. ಲಕ್ಷ್ಮೀ ದೇವಿಯು ಮತ್ತೆ ವಿಷ್ಣುವಿಗೆ ಜತೆಯಾಗುತ್ತಾರೆ ಮತ್ತು ಆತನ ಹೃದಯದಲ್ಲಿ ಉಳಿಯುತ್ತಾಳೆ. ಇದರಿಂದಾಗಿ ಹೆಚ್ಚಿನವರು ವೆಂಕಟೇಶ್ವರ ದೇವರು ಮತ್ತು ಪದ್ಮಾವತಿ ದೇವಿಯಿರುವ ತಿರುಮಲ ಮಂದಿರದಲ್ಲಿ ಮದುವೆಯಾಗಲು ಬಯಸುತ್ತಾರೆ. ಇಲ್ಲಿ ಮದುವೆಯಾದರೆ ದೇವರ ಆರ್ಶೀವಾದ ಯಾವಾಗಲೂ ಇರುತ್ತದೆ ಮತ್ತು ದಂಪತಿ ಜೀವಮಾನವಿಡಿ ಸಂತೋಷವಾಗಿರುತ್ತಾರೆ ಎನ್ನುವ ನಂಬಿಕೆಯಿದೆ.



Click it and Unblock the Notifications