ದೇವಸ್ಥಾನದ 'ಧನಾತ್ಮಕ ಶಕ್ತಿಗೆ' ಇಲ್ಲಿದೆ ವೈಜ್ಞಾನಿಕ ಪುರಾವೆಗಳು

By manu

ವಿಶ್ವದಲ್ಲಿ ಅತ್ಯಂತ ಪುರಾತನ ಸಂಸ್ಕೃತಿಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ದೇಶಗಳಲ್ಲಿ ಭಾರತ ಪ್ರಮುಖವಾಗಿದೆ. ಚೀನಾ, ನೇಪಾಳ, ಮಂಗೋಲಿಯಾ, ಚಿಲಿ ಮೊದಲಾದವು ಸಹಾ ಪುರಾತನ ಸಂಸ್ಕೃತಿಯನ್ನು ಹಾಗೂ ಸಾವಿರಾರು ವರ್ಷ ಪುರಾತನ ದೇವಾಲಯ ಮತ್ತು ಆರಾಧನಾ ಕೇಂದ್ರಗಳನ್ನು ಉಳಿಸಿಕೊಂಡು ಬಂದಿವೆ. ಭಾರತದಲ್ಲಿಯೂ ಸಾವಿರಾರು ಸಂಖ್ಯೆಯ ಪುರಾತನ ದೇಗುಲಗಳಿದ್ದು ಅವುಗಳಲ್ಲಿ ಸಿಂಹಪಾಲು ತಮಿಳುನಾಡಿನಲ್ಲಿವೆ. ಭಕ್ತರು ಈ ದೇಗುಲಗಳಿಗೆ ಭೇಟಿನೀಡಿ ತಮ್ಮ ಇಷ್ಟದೇವರಿಗೆ ಪೂಜೆ ಸಲ್ಲಿಸಿ ದೇವರಿಂದ ರಕ್ಷಣೆ ಮತ್ತು ಅನುಗ್ರಹವನ್ನು ಅಪೇಕ್ಷಿಸುತ್ತಾರೆ. ಭಕ್ತರ ಇಷ್ಟಾರ್ಥ ಸಿದ್ಧಿಯಾಗುವ ಪವಾಡ ದೇವಾಲಯಗಳು

ಇದರ ಮಹತ್ವ ಅರಿಯದ ಯುವಜನತೆಗೆ ಇದೊಂದು ಸಮಯ ಪೋಲು ಮಾಡುವ ಬೂಟಾಟಿಕೆ ಎಂದು ಅನ್ನಿಸಬಹುದು. ಆದರೆ ವೈಜ್ಞಾನಿಕವಾಗಿ ಪರೀಕ್ಷಿಸಿದ ಬಳಿಕ ಈ ವಿಧಿಯಲ್ಲಿ ನಿಜವಾಗಿಯೂ ಪ್ರಯೋಜನವಿದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಇದರ ಅತಿ ಪ್ರಮುಖ ಪ್ರಯೋಜನವೆಂದರೆ ಈ ಸ್ಥಳಗಳಲ್ಲಿರುವ ಧನಾತ್ಮಕ ಶಕ್ತಿ.

ಇದರ ಇರುವಿಕೆಯನ್ನೇ ಅನುಮಾನಿಸಿದವರಿಗೆ ದೈವಭಕ್ತರಲ್ಲಿ ಕಂಡುಬಂದ ಅಪಾರವಾದ ಆತ್ಮಸ್ಥೈರ್ಯ, ಮನೋಬಲ, ಧನಾತ್ಮಕ ಚಿಂತನೆ, ಜೀವನದತ್ತ ಒಲವು ಮೊದಲಾದವುಗಳನ್ನು ಗಮನಿಸಿ ಇದೊಂದು ಉತ್ತಮವಾದ ಅಭ್ಯಾಸ ಎಂದು ವಿಜ್ಞಾನಿಗಳು ಈಗ ಒಪ್ಪಿಕೊಂಡಿದ್ದಾರೆ. ನಮ್ಮ ಐದೂ ಇಂದ್ರಿಯಗಳ ಮೇಲೆ ಈ ಧನಾತ್ಮಕ ಶಕ್ತಿ ಅಪಾರವಾದ ಪ್ರಭಾವ ಬೀರುತ್ತದೆ. ಈ ಶಕ್ತಿಗಳು ಹೇಗೆ ಪ್ರಭಾವಶಾಲಿಯಾಗಿವೆ ಎಂಬ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ದೇವಾಲಯವಿರುವ ಸ್ಥಳ ಅಥವಾ ಸ್ಥಾನದ ಮಹತ್ವ

ದೇವಾಲಯವಿರುವ ಸ್ಥಳ ಅಥವಾ ಸ್ಥಾನದ ಮಹತ್ವ

ದೇವಾಲಯವನ್ನು ನಿರ್ಮಿಸುವ ಮೊದಲು ಈ ಸ್ಥಳದ ಅಕ್ಕಪಕ್ಕ ಸದಾ ಧನಾತ್ಮಕ ಶಕ್ತಿ ಪ್ರವಹಿಸುತ್ತಿದೆ ಎಂದು ಖಾತರಿಪಡಿಸಿಕೊಂಡ ಬಳಿಕವೇ ಅಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. ವೈಜ್ಞಾನಿಕವಾಗಿ ಈ ಸ್ಥಳಗಳನ್ನು ಅವಲೋಕಿಸಿದಾಗ ಭೂಮಿಯ ಆಯಸ್ಕಾಂತೀಯ ಅಲೆಗಳು ಮತ್ತು ವಿದ್ಯುತ್ ಅಲೆಗಳು ಉತ್ತರ ಧ್ರುವದಿಂದ ದಕ್ಷಿಣ ಧೃವದತ್ತ ಯಾವುದೇ ಅಡೆತಡೆಯಿಲ್ಲದೇ ಈ ದೇಗುಲದ ಮೂಲಕ ಹಾದು ಹೋಗಬೇಕು. (ಉತ್ತರ ಧ್ರುವದಿಂ.. ದಕ್ಷಿಣ ಧೃವಕೂ.. ಚುಂಬಕ ಗಾಳಿ ಬೀಸುತಿದೆ.. ಹಾಡು ನೆನಪಾಯಿತೇ)

ದೇವಾಲಯವಿರುವ ಸ್ಥಳ ಅಥವಾ ಸ್ಥಾನದ ಮಹತ್ವ

ದೇವಾಲಯವಿರುವ ಸ್ಥಳ ಅಥವಾ ಸ್ಥಾನದ ಮಹತ್ವ

ಹೌದು, ಈ ಚುಂಬಕಗಾಳಿ ಅಡೆತಡೆಯಿಲ್ಲದೇ ಪ್ರವಹಿಸುವ ಸ್ಥಳಗಳು ದೇವಾಲಯಕ್ಕೆ ಅತಿ ಪ್ರಶಸ್ತವಾಗಿವೆ. ಅಂತೆಯೇ ಹೆಚ್ಚಿನ ದೇಗುಲಗಳು ಗುಡ್ಡದ ತುದಿಯಲ್ಲಿ, ಬಟಾಬಯಲಿನಲ್ಲಿ, ಸಮುದ್ರ ತೀರದಲ್ಲಿ, ನದಿ ತೀರದಲ್ಲಿ ಹಾಗೂ ಎತ್ತರದ ಸ್ಥಳಗಳಲ್ಲಿಯೇ ನಿರ್ಮಿಸಲ್ಪಟ್ಟಿವೆ.

ಗರ್ಭಗುಡಿಯಲ್ಲಿ ದೇವರ ಮೂರ್ತಿಯ ಸ್ಥಾಪನೆ

ಗರ್ಭಗುಡಿಯಲ್ಲಿ ದೇವರ ಮೂರ್ತಿಯ ಸ್ಥಾಪನೆ

ಯಾವುದೇ ಮಂದಿರದ ಕೇಂದ್ರ ಅದರ ಗರ್ಭಗುಡಿಯಾಗಿರುತ್ತದೆ. ಹಲವೆಡೆ ಇದನ್ನು ಮೂಲಸ್ಥಾನವೆಂದೂ ಕರೆಯುತ್ತಾರೆ. ಈ ಸ್ಥಳದಲ್ಲಿ ಆಯಸ್ಕಾಂತೀಯ ಶಕ್ತಿ ಅತಿ ಹೆಚ್ಚಿರುವುದರನ್ನು ವೈಜ್ಞಾನಿಕ ಸಮೀಕ್ಷೆಗಳು ಈಗ ದೃಢಪಡಿಸಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗರ್ಭಗುಡಿಯಲ್ಲಿ ದೇವರ ಮೂರ್ತಿಯ ಸ್ಥಾಪನೆ

ಗರ್ಭಗುಡಿಯಲ್ಲಿ ದೇವರ ಮೂರ್ತಿಯ ಸ್ಥಾಪನೆ

ಆದ್ದರಿಂದ ದೇವಾಲಯವನ್ನು ಕಟ್ಟುವಾಗ ಈ ಶಕ್ತಿಯ ಕೇಂದ್ರವನ್ನು ಪರಿಶೀಲಿಸಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕವೇ ದೇವಾಲಯದ ನಿರ್ಮಾಣವಾಗುತ್ತಿತ್ತು. ಆದರೆ ಈ ಶಕ್ತಿಯನ್ನು ಹಿಂದಿನ ಕಾಲದಲ್ಲಿ ಹೇಗೆ ಗುರುತಿಸುತ್ತಿದ್ದರು ಎಂಬುದು ಒಂದು ಯಕ್ಷಪ್ರಶ್ನೆಯಾಗಿದೆ.

ಚಪ್ಪಲಿಯನ್ನು ಹೊರಗೆ ಕಳಚುವ ಮಹತ್ವ

ಚಪ್ಪಲಿಯನ್ನು ಹೊರಗೆ ಕಳಚುವ ಮಹತ್ವ

ಮಂದಿರಗಳಲ್ಲಿ ಪಾದರಕ್ಷೆಯನ್ನು ತೊಡುವುದು ಸಲ್ಲದು. ಬರಿಗಾಲಿನಲ್ಲಿಯೇ ಒಳಗಡಿಯಿಡಬೇಕು. ಮಂದಿರಗಳ ಸ್ಥಳದಲ್ಲಿ ಭೂಮಿಯ ಆಯಸ್ಕಾಂತೀಯ ಕ್ಷೇತ್ರ ಅಡೆತಡೆಯಿಲ್ಲದೇ ಗರಿಷ್ಟ ಮಟ್ಟದಲ್ಲಿರುವ ಕಾರಣ ಇದನ್ನು ದೇಹ ಹೀರಿಕೊಳ್ಳಲು ದೇಗುಲದ ನೆಲ ನೆರವಾಗುತ್ತದೆ.

ಚಪ್ಪಲಿಯನ್ನು ಹೊರಗೆ ಕಳಚುವ ಮಹತ್ವ

ಚಪ್ಪಲಿಯನ್ನು ಹೊರಗೆ ಕಳಚುವ ಮಹತ್ವ

ಅಲ್ಲದೆ ಕಲ್ಲು ಸಹಾ ಈ ಶಕ್ತಿಯನ್ನು ಪ್ರವಹಿಸಲು ಸಕ್ಷಮವಾಗಿದೆ. ಪಾದರಕ್ಷೆಯನ್ನು ತೊಡುವ ಮೂಲಕ ಈ ಶಕ್ತಿಯನ್ನು ದೇಹ ಹೀರಿಕೊಳ್ಳಲು ಅಡ್ಡಿಯಾಗುತ್ತದೆ. ಬರಿಗಾಲಿನಲ್ಲಿ ನಡೆದಾಡಿದಾಗ ನೆಲದಲ್ಲಿ ಸಂಗ್ರಹವಾಗಿದ್ದ ಶಕ್ತಿ ದೇಹಕ್ಕೆ ಪ್ರವಹಿಸಿ ಮನಸ್ಸು ಮತ್ತು ದೇಹಗಳನ್ನು ಉತ್ತಮ ಸ್ವಾಸ್ಥ್ಯದಲ್ಲಿಡುತ್ತವೆ ಮತ್ತು ಧನಾತ್ಮಕ ಚಿಂತನೆಗೆ ನೆರವಾಗುತ್ತದೆ.

ದೇವಸ್ಥಾನಗಳಲ್ಲಿ ಘಂಟೆ ಬಾರಿಸುವ ಮಹತ್ವ

ದೇವಸ್ಥಾನಗಳಲ್ಲಿ ಘಂಟೆ ಬಾರಿಸುವ ಮಹತ್ವ

ಸಾಮಾನ್ಯವಾಗಿ ದೇವಾಲಯ, ಚರ್ಚ್, ಬೌದ್ಧಮಠಗಳಲ್ಲಿ ಘಂಟಾನಾದ ಮೊಳಗುತ್ತಿರುತ್ತದೆ. ಮಂದಿರಗಳ ಒಳಗೆ ಅಡಿಯಿಟ್ಟ ಬಳಿಕ ಗರ್ಭಗುಡಿಯ ಬಳಿ ಇರುವ ಘಂಟೆಯನ್ನು ಮೊಳಗಿಸುವುದು ಒಂದು ಧಾರ್ಮಿಕ ವಿಧಿಯಾಗಿದೆ.

ದೇವಸ್ಥಾನಗಳಲ್ಲಿ ಘಂಟೆ ಬಾರಿಸುವ ಮಹತ್ವ

ದೇವಸ್ಥಾನಗಳಲ್ಲಿ ಘಂಟೆ ಬಾರಿಸುವ ಮಹತ್ವ

ವೈಜ್ಞಾನಿಕವಾಗಿ ಪರಿಶೀಲಿಸಿದಾದ ಘಂಟೆಯ ನಾದ ಕಿವಿಯಲ್ಲಿ ಮೊಳಗಿದಾಗ ಇದು ನಮ್ಮ ದೇಹದಲ್ಲಿ ಕೇಳುವ ಮತ್ತು ವಿಷಯವನ್ನು ಗ್ರಹಿಸುವ ಶಕ್ತಿಯನ್ನು ಉತ್ತಮಗೊಳಿಸುವುದು ಕಂಡುಬಂದಿದೆ

ವಿಗ್ರಹದ ಎದುರು ಕರ್ಪೂರವನ್ನು ಉರಿಸುವ ಮಹತ್ವ

ವಿಗ್ರಹದ ಎದುರು ಕರ್ಪೂರವನ್ನು ಉರಿಸುವ ಮಹತ್ವ

ಕರ್ಪೂರ ಒಂದು ವಿಶಿಷ್ಟ ವಸ್ತುವಾಗಿದೆ. ಇದನ್ನು ಬಿಸಿಮಾಡಿದಾಗ ಘನವಸ್ತುವಿನಿಂದ ನೇರವಾಗಿ ಅನಿಲರೂಪಕ್ಕೆ ಪರಿವರ್ತಿತವಾಗುತ್ತದೆ. ಉತ್ಪತನ (sublimation) ಎಂದು ಕರೆಯಲಾಗುವ ಈ ವಿಧಾನದಲ್ಲಿ ಕರ್ಪೂರದ ಸುವಾಸನೆ ಹಾಗೂ ಇದರ ಬೆಳಕು ಕಣ್ಣುಗಳನ್ನು ಚುರುಕುಗೊಳಿಸುತ್ತದೆ.

ವಿಗ್ರಹದ ಎದುರು ಕರ್ಪೂರವನ್ನು ಉರಿಸುವ ಮಹತ್ವ

ವಿಗ್ರಹದ ಎದುರು ಕರ್ಪೂರವನ್ನು ಉರಿಸುವ ಮಹತ್ವ

ಸಾಮಾನ್ಯವಾಗಿ ಗರ್ಭಗುಡಿಯ ಭಾಗವನ್ನು ಕತ್ತಲಾಗಿರಿಸಿ ಕರ್ಪೂರ ಮತ್ತು ದೀವಟಿಗೆಗಳ ಬೆಳಕಿನಲ್ಲಿ ವಿಗ್ರಹವನ್ನು ನೋಡುವಂತೆ ಸ್ಥಾಪಿಸಲಾಗಿರುತ್ತದೆ. ಇದರಿಂದ ಕಡಿಮೆ ಬೆಳಕಿನಲ್ಲಿ ವಿಗ್ರಹವನ್ನು ಗಮನಿಸುವ ಪ್ರಯತ್ನದಲ್ಲಿ ಕಣ್ಣುಗಳ ಪಾಪೆಗಳು ಬಹುವಾಹಿ ಹಿಗ್ಗಿ ಉತ್ತಮವಾದ ವ್ಯಾಯಾಮವನ್ನು ಪಡೆಯುತ್ತವೆ.

ಆರತಿಯ ಮೇಲೆ ಎರಡೂ ಕೈಗಳನ್ನು ಆವರಿಸುವ ಮಹತ್ವ

ಆರತಿಯ ಮೇಲೆ ಎರಡೂ ಕೈಗಳನ್ನು ಆವರಿಸುವ ಮಹತ್ವ

ಪೂಜೆಯ ಬಳಿಕ ನೆರವೇರಿಸುವ ಆರತಿ ಅಥವಾ ಕರ್ಪೂರದ ಜ್ವಾಲೆಯ ಮೇಲೆ ಎರಡೂ ಕೈಗಳನ್ನು ಆವರಿಸಿ ಬಳಿಕ ಆ ಕೈಗಳಿಂದ ಕಣ್ಣುಗಳನ್ನು ಮುಟ್ಟಿಕೊಳ್ಳುವುದು ಒಂದು ಧಾರ್ಮಿಕ ವಿಧಿಯಾಗಿದೆ.

ಆರತಿಯ ಮೇಲೆ ಎರಡೂ ಕೈಗಳನ್ನು ಆವರಿಸುವ ಮಹತ್ವ

ಆರತಿಯ ಮೇಲೆ ಎರಡೂ ಕೈಗಳನ್ನು ಆವರಿಸುವ ಮಹತ್ವ

ಇದರ ವೈಜ್ಞಾನಿಕ ಕಾರಣವನ್ನು ಕಂಡುಕೊಂಡಾಗ ಆರತಿಯ ಜ್ವಾಲೆಯ ಬಿಸಿಯಿಂದ ಬೆಚ್ಚಗಾಗಿದ್ದ ಕೈಬೆರಳುಗಳಿಂದ ಕಣ್ಣುಗಳನ್ನು ಮುಟ್ಟಿಕೊಂಡಾಗ ಈ ಶಾಖ ಕಣ್ಣುಗಳಿಗೂ ತಟ್ಟಿ ಸ್ಪರ್ಶದ ಗ್ರಹನೆ ಚುರುಕುಗೊಳ್ಳುತ್ತದೆ.

ದೇವರಿಗೆ ಹೂವುಗಳನ್ನು ಅರ್ಪಿಸುವ ಮಹತ್ವ

ದೇವರಿಗೆ ಹೂವುಗಳನ್ನು ಅರ್ಪಿಸುವ ಮಹತ್ವ

ಪೂಜೆಯಲ್ಲಿ ಹೂವು ಮತ್ತು ಹೂವಿನ ದಳಗಳಿಗೆ ವಿಶೇಷ ಮಹತ್ವವಿದೆ. ಹೂವುಗಳು ಸ್ವಚ್ಛ, ಕೋಮಲ ಹಾಗೂ ಸುವಾಸನೆಯಿಂದ ಕೂಡಿರುತ್ತವೆ. ಆದರೆ ಎಲ್ಲಾ ಹೂವುಗಳು ಪೂಜೆಗೆ ಅರ್ಹವಲ್ಲ. ಗುಲಾಬಿ, ಮಲ್ಲಿಗೆ, ಗೊಂಡೆ, ಸೇವಂತಿಗೆ, ಅಬ್ಬಲಿಗೆ ಮೊದಲಾದವು ಪೂಜೆಗೆ ಸೂಕ್ತವಾಗಿವೆ. ಆದರೆ ಸುವಾಸನೆಯಿಲ್ಲದ ಅಥವಾ ದುರ್ವಾಸನೆಯ ಹೂವುಗಳು ಪೂಜೆಗೆ ಅರ್ಹವಲ್ಲ. ಹೂವು, ಅಗರಬತ್ತಿ, ಕರ್ಪೂರ ಮೊದಲಾದವುಗಳ ಸುವಾಸನೆ ಮಂದಿರದಲ್ಲಿ ತುಂಬಿದ್ದು ಇದು ನಾಸಿಕಗಳ ಗ್ರಹಣಶಕ್ತಿಯನ್ನು ಚುರುಕುಗೊಳಿಸುತ್ತವೆ.

ಚರ್ಣಾಮೃತವನ್ನು ಸೇವಿಸುವ ಮಹತ್ವ

ಚರ್ಣಾಮೃತವನ್ನು ಸೇವಿಸುವ ಮಹತ್ವ

ದೇವರ ಪೂಜೆಯ ಬಳಿಕ ಚರ್ಣಾಮೃತ ಅಥವಾ ನೀರಿನ ರೂಪದ ಪ್ರಸಾದವನ್ನು ಭಕ್ತರಿಗೆ ಹಂಚಲಾಗುತ್ತದೆ. ಇದನ್ನು ಬೆಣ್ಣೆ ಅಥವಾ ತುಪ್ಪ, ಹಾಲು ಮತ್ತು ಮೊಸರನ್ನು ಮಿಶ್ರಣ ಮಾಡಿ ತಯಾರಿಸಲಾಗಿರುತ್ತದೆ. ಇದನ್ನು ಬೆಳ್ಳಿಯ ಅಥವಾ ತಾಮ್ರದ ಪಾತ್ರೆಯಲ್ಲಿಟ್ಟು ಅದರಿಂದಲೇ ವಿತರಿಸಲಾಗುತ್ತದೆ. ಇದರ ವೈಜ್ಞಾನಿಕ ವಿವರಣೆ ಏನೆಂದರೆ ಈ ದ್ರವವನ್ನು ತಾಮ್ರದ ಪಾತ್ರೆಯಲ್ಲಿಟ್ಟಿದ್ದರೆ ಈ ದ್ರವ ದೇಹದಿಂದ ಮೂರು ತರಹದ ದೋಷಗಳನ್ನು ಸಮಸ್ಥಿತಿಯಲ್ಲಿರಿಸಲು ನೆರವಾಗುತ್ತದೆ. ಅಲ್ಲದೇ ಇದರ ಸೇವನೆಯಿಂದ ನಾಲಿಗೆಯ ಗ್ರಹಣಶಕ್ತಿಯೂ ಚುರುಕುಗೊಳ್ಳುತ್ತದೆ.

ಗರ್ಭಗುಡಿಗೆ ಸುತ್ತುಬರುವ ಮಹತ್ವ

ಗರ್ಭಗುಡಿಗೆ ಸುತ್ತುಬರುವ ಮಹತ್ವ

ಪೂಜೆಯ ಬಳಿಕ ಗರ್ಭಗುಡಿಯ ಸುತ್ತ ಸುತ್ತುಬರುವುದು ಒಂದು ಧಾರ್ಮಿಕ ವಿಧಿಯಾಗಿದೆ. ಇದು ಮೇಲಿನಿಂದ ನೋಡಿದರೆ ಪ್ರದಕ್ಷಿಣೆಯ (ಅಂದರೆ ಗಡಿಯಾರದ ಮುಳ್ಳು ತಿರುಗುವ) ದಿಕ್ಕಿನಲ್ಲಿದ್ದು ಒಟ್ಟು ಎಂಟರಿಂದ ಒಂಬತ್ತು ಸುತ್ತು ಸುತ್ತಬೇಕಾಗುತ್ತದೆ. ಇದಕ್ಕೆ ಪರಿಕ್ರಮ ಎಂದೂ ಕರೆಯಲಾಗುತ್ತದೆ.

ಗರ್ಭಗುಡಿಗೆ ಸುತ್ತುಬರುವ ಮಹತ್ವ

ಗರ್ಭಗುಡಿಗೆ ಸುತ್ತುಬರುವ ಮಹತ್ವ

ಈ ವಿಧಿಯ ವೈಜ್ಞಾನಿಕ ಕಾರಣವನ್ನು ಅವಲೋಕಿಸಿದರೆ ಇದಕ್ಕೂ ಆಯಸ್ಕಾಂತೀಯ ಅಲೆ ಕಾರಣವಾಗಿರುವುದು ಕಂಡುಬರುತ್ತದೆ. ಗರ್ಭಗುಡಿಯ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಉತ್ತರ ಧೃವದಿಂದ ದಕ್ಷಿಣ ಧೃವದ ಚುಂಬಕಗಾಳಿಯ ಅತ್ಯಧಿಕ ಪ್ರಮಾಣವನ್ನು ದೇಹ ಸಂಗ್ರಹಿಸುತ್ತದೆ. ಇದರಿಂದ ಮಾನಸಿಕ ಶಾಂತಿ ಮನದಲ್ಲಿ ನೆಲೆಸಲು

ಸಾಧ್ಯವಾಗುತ್ತದೆ.

X
Desktop Bottom Promotion