Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗುರುಗಳ ಕಣ್ಣು ತೆರೆಸಿದ ಆ ಅನಕ್ಷರಸ್ಥರ ಪ್ರಶ್ನೆ

ಹೀಗೆ ಗುರುಗಳು ಮಾತನಾಡಿಸುತ್ತಿದ್ದವರಲ್ಲಿ ಬಹಳಷ್ಟು ಜನರು ಅನಕ್ಷರಸ್ಥರು, ಮತ್ತು (ಟಬ್ ಮೇಕರ್) ತೊಟ್ಟಿಗಳನ್ನು ಮಾಡುವವರಾಗಿದ್ದರು. ಇವರೆಲ್ಲರೂ ಗುರುಗಳಿಗೆ ಮೂರ್ಖತನದ ಪ್ರಶ್ನೆಗಳನ್ನು ಕೇಳುತ್ತಿದ್ದರು..
ಒಮ್ಮೆ ಮೊಕುರಾಯ್ ಗುರುಗಳು ತೊಟ್ಟಿ ತಯಾರಿಕರು (ಟಬ್ ಮೇಕರ್) ಹಾಜರಿದ್ದ ಸಮಯದಲ್ಲಿ ತನ್ನ ಕೆಲವು ಶಿಷ್ಯರೊಂದಿಗೆ ಮಾತನಾಡುತ್ತಿದ್ದರು. "ನಾನು ಶಿಷ್ಯರೊಂದಿಗೆ ಮಾತನಾಡುತ್ತಿರುವಾಗ ನೀವೆಲ್ಲರೂ ಮತ್ತೊಂದು ಕೊಠಡಿಯಲ್ಲಿ ಇರಿ" ಅಂತ ಗುರುಗಳು ತೊಟ್ಟಿ ತಯಾರಕರಿಗೆ ಹೇಳಿದರು. ಆದರೆ ಅವರು ಹೋಗಲು ನಿರಾಕರಿಸಿದರು.
ಆ ಅನಕ್ಷರಸ್ಥರು ಗುರುಗಳನ್ನು ಕುರಿತು "ನೀವು ಜೀವಂತವಾಗಿರುವ ಬುದ್ಧ ಎಂದು ನಾವು ನಂಬಿದ್ದೇವೆ.. ಮಂದಿರದಲ್ಲಿ ಇರುವ ಆ ಕಲ್ಲು ಬುದ್ಧನೂ ಕೂಡಾ ನಮ್ಮಂಥ ಹಲವಾರು ಜನರು ಬಂದಾಗ "ಬೇಡ ಬರಬೇಡಿ" ಎಂದು ನಿರಾಕರಿಸುವುದಿಲ್ಲ.. ಆದರೆ ನೀವು ಯಾಕೆ ನಮ್ಮನ್ನು ಹೊರಗೆ ಹೋಗಿ ಎಂದು ಹೇಳುತ್ತಿದ್ದೀರಿ? ಎಂದು ಕೇಳಿದರು.
ಈ ಮಾತನ್ನು ಕೇಳಿದ ಗುರು ಮೊಕುರಾಯ್ ಗೆ ತನ್ನ ತಪ್ಪಿನ ಅರಿವಾಯಿತು. ನಂತರ ತನ್ನ ಎಲ್ಲಾ ಶಿಷ್ಯರೊಂದಿಗೆ ತಾವು ಹೇಳಬೇಕೆಂದಿರುವ ಮಾತುಗಳನ್ನು ಹಂಚಿಕೊಂಡರು. ಸಾರ್ವಜನಿಕರು, ಕುಲೀನರು ಎಲ್ಲರೂ ಅವರ ಮಾತುಗಳನ್ನು, ಹಿತನುಡಿಗಳನ್ನು ಆಲಿಸಿದರು.



Click it and Unblock the Notifications
