Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ತಾನು ಶರಬತ್ತು ಮಾರುತ್ತಿದ್ದ ಊರಿನಲ್ಲಿಯೇ ಸಬ್ ಇನ್ಸ್‌ಪೆಕ್ಟರ್ ಆದ ಆ್ಯನಿ ಶಿವ: ಸಿನಿಮಾ ಸ್ಟೋರಿಯಂತಿದೆ ಇವರ ಕತೆ
ಹೆಣ್ಣಿಗೆ ಮದುವೆ, ಮಕ್ಕಳು ಇವುಗಳ ಬಗ್ಗೆ ಸಾಕಷ್ಟು ಕನಸ್ಸಿಗಳಿರುತ್ತವೆ. ಒಂದು ಸುಂದರವಾದ ಕುಟುಂಬ, ಮುದ್ದಾದ ಮಕ್ಕಳು ಇಷ್ಟ ಸಿಕ್ಕರೆ ನಾನೇ ಪರಮ ಸುಖಿ ಅಂದುಕೊಂಡಿರುತ್ತಾರೆ, ಎಷ್ಟೋ ಹೆಣ್ಣು ಮಕ್ಕಳು. ಆದರೆ ಬದುಕ್ಕೆಂಬುವುದು ಅದರಲ್ಲೂ ಹೆಣ್ಣು ಮಕ್ಕಳ ಬದುಕು ಎಷ್ಟೋ ಬಾರಿ ಅಂದುಕೊಂಡಂತೆ ಸಿಗಲ್ಲ. ಬದುಕು ನರಕವಾಗುವುದು, ಮುಂದೇನು ಎಂದು ದಿಕ್ಕು ತೋಚದೆ ನಿಂತಿರುವ ಎಷ್ಟೋ ಹೆಣ್ಣು ಮಕ್ಕಳಿದ್ದಾರೆ, ಆದರೆ ಅವರಲ್ಲಿ ಫೀನಿಕ್ಸ್ ಪಕ್ಷಿಯಂತೆ ಎದ್ದು ಬರುವವರು, ಗೆದ್ದು ಬರುವವರು ಕೆಲವೇ ಕೆಲವರಷ್ಟೇ... ಯಾವ ಸಮಾಜದಲ್ಲಿ ಕಷ್ಟ, ಅವಮಾನಗಳನ್ನು ಸಹಿಸಿರುತ್ತಾಳೋ ಅದೇ ಸಮಾಜ ತನ್ನನ್ನು ತಿರುಗಿ ನೋಡುವಂತೆ, ಗೌರವಿಸುವಂತೆ ಬೆಳೆದು ಬಿಡುತ್ತಾಳೆ, ಆಕೆ ಅಂಥದ್ದೊಂದು ಸಾಧನೆ ಮಾಡಲು ಅವಳಿಗೆ ನೆರವಾಗಿರುವುದು ಅವಳಲ್ಲಿರುವ ಛಲ, ಶ್ರಮವಾಗಿರುತ್ತದೆ, ಅಂಥದ್ದೊಂದು ಸ್ಪೂರ್ತಿದಾಯಕ ಕತೆಯನ್ನು ಇಲ್ಲಿ ಹೇಳುತ್ತಿದ್ದೇವೆ.

ನಿಂಬೆ ಷರಬತ್ತು, ಐಸ್‌ಕ್ರೀಂ ಮಾರುತ್ತಾ ಜೀವನ ಸಾಗಿಸುತ್ತಿದ್ದ ಮಹಿಳೆ ಈಗ ಅದೇ ಊರಿಗೆ ಸಬ್ ಇನ್ಸ್‌ಪೆಕ್ಟರ್
ಇತ್ತೀಚೆಗೆ ಕೇರಳ ಆ್ಯನಿ ಶಿವ ಎಂಬ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಫೋಟೋವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು, ಮಂತ್ರಿಗಳು, ಸೆಲೆಬ್ರಿಟಿಗಳು ಆಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು ಅದಕ್ಕೆ ಕಾರಣ ಒಂದು ಕಾಲದಲ್ಲಿ ನಿಂಬೆ ಷರಬತ್ತು, ಐಸ್‌ಕ್ರೀಂ ಮಾರುತ್ತಾ ಜೀವನ ಸಾಗಿಸುತ್ತಿದ್ದ ಮಹಿಳೆ ಈಗ ಅದೇ ಊರಿಗೆ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕವಾಗಿದ್ದಾರೆ, ಇದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ? ನನ್ನ ಬದುಕಿನಲ್ಲಿ ಕಷ್ಟ ಎಂದು ಕಣ್ಣೀರು ಹಾಕುತ್ತಾ ಕೂರುವ ಬದಲಿಗೆ ಒಂದು ಗುರಿಯಿದ್ದು ಆ ಗುರಿ ಮುಟ್ಟಲು ಪ್ರಯತ್ನಿಸಿದರೆ ಎಲ್ಲಾ ವಿಘ್ನಗಳು ದೂರವಾಗುವುದು ಎಂಬುವುದಕ್ಕೆ ಉದಾಹರಣೆಯೇ ಆ್ಯನಿ ಶಿವ.
ಎಲ್ಲಾ ಕಷ್ಟಗಳು, ಸವಾಲುಗಳನ್ನು ಮೆಟ್ಟಿ ನಿಂತು 31ರ ಪ್ರಾಯದ ಆ್ಯನಿ ಶಿವ ಈಗ ವರ್ಕಳ ಪೋಲೀಸ್ ಸ್ಟೇಷನ್‌ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗಂಡ ಬಿಟ್ಟು ಹೋದಾಗ ಕೈಯಲ್ಲಿ 6 ತಿಂಗಳ ಕೂಸು, ಮುಂದೇನು ಎಂಬ ಚಿಂತೆ ಕಾಡಿತ್ತು
ಗಂಡ ಹಾಗೂ ಆತನ ಕುಟುಂಬ ಈಕೆಗೆ ನೀನು ಬೇಡ ಎಂದು ಬಿಟ್ಟು ಹೋದಾಗ ಆ್ಯನಿಯವರ ಪ್ರಾಯ 18, ಕೈಯಲ್ಲಿ 6 ತಿಂಗಳ ಕೂಸು ಬೇರೆ. ಮುಂದೇನು, ಈ ಮಗುವನ್ನು ಸಾಕಿ ದೊಡ್ಡದು ಮಾಡುವುದು ಹೇಗೆ ಎಂದು ದಿಕ್ಕೇ ತೋಚದ ಸ್ಥಿತಿ. ಆದರೆ ಆ್ಯನಿ ಪರಿಸ್ಥಿತಿಗೆ ಹಿಡಿಶಾಪ ಹಾಕಿ ಕಣ್ಣೀರು ಹಾಕಿ ಕೂರಲಿಲ್ಲ. ಬದಲಿಗೆ ತನ್ನ ಹಾಗೂ ಹೊಟ್ಟೆ ತುಂಬಲು ಸಾಕಷ್ಟು ಕಷ್ಟಪಟ್ಟಳು, ನಿಂಬೆ ಶರಬತ್ತು ಮಾರುವ ಅಂಗಡಿ ತೆರೆದರು, ಕರಕುಶಲ ವಸ್ತುಗಳನ್ನು ಮಾಡಿ ಪ್ರವಾಸಿಗರಿಗೆ ಮಾರುತ್ತಿದ್ದರು. ಆದರೆ ಅವುಗಳಲ್ಲಿ ಅಂದುಕೊಂಡಷ್ಟು ಲಾಭ ಸಿಗಲಿಲ್ಲ, ಬ್ಯುಸ್‌ನೆಸ್ ಪ್ಲಾಪ್ ಆಯ್ತು. ಆಗ ಅವರಿಗೆ ಒಬ್ಬರು ನೀವ್ಯಾಕೆ ಪೋಲೀಸ್ ಆಗಬಾರದು ಎಂದು ಸಲಹೆ ನೀಡುತ್ತಾರೆ, ಜೊತೆಗೆ ಓದಲು ದುಡ್ಡಿನ ಸಹಾಯ ಕೂಡ ಮಾಡುತ್ತಾರೆ. ಕಷ್ಟಪಟ್ಟು ಓದಿ ಈಗ ಯಾವ ಊರಿನಲ್ಲಿ ಒಂದು ಕಾಲದಲ್ಲಿ ಹೊಟ್ಟೆ ಪಾಡಿಗಾಗಿ ನಿಂಬೆ ಶರಬತ್ತು ಮಾರುತ್ತಿದ್ದರೋ ಅದೇ ಊರಿಗೆ ಸಬ್ ಇನ್ಸ್ಪೆಕ್ಟರ್ ಆಗಿ ಬಂದಿದ್ದಾರೆ, ಇವರ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಉದಾಹರಣೆ ಆ್ಯನಿ ಶಿವ
ಆ್ಯನಿ ಶಿವ "ನನಗೆ ಐಪಿಎಸ್ ಆಫೀಸರ್ ಆಗುವ ಆಸೆಯಿತ್ತು, ಆದರೆ ನನ್ನ ವಿಧಿಯೇ ಬೇರೆ ಇತ್ತು, ಆದರೆ ಈಗ ತುಂಬಾ ಹೆಮ್ಮೆಯಾಗುತ್ತಿದೆ, ಜನರ ಬೆಂಬಲ ನೋಡಿ ತುಂಬಾ ಖುಷಿಯಾಗುತ್ತಿದೆ, ನನ್ನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ಶೇರ್ ಆಗುತ್ತಿರುವುದನ್ನು ನೋಡುವಾಗ ಖುಷಿಯಾಗುತ್ತಿದೆ' ಎಂದಿದ್ದಾರೆ.
ಆಗದು ಎಂದು ಕೂತರೆ ಏನೂ ಆಗಲ್ಲ, ಆಗುತ್ತೆ ಎಂದು ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ ಎಂಬುವುದಕ್ಕೆ ಭರವಸೆಗೆ ಪುಷ್ಠಿ ನೀಡುವಂತಿದೆ ಆ್ಯನಿ ಶಿವರವರ ಬದುಕು. ಅವರು ವೃತ್ತಿಯಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆಯಲಿ ಎಂಬುವುದೇ ನಮ್ಮ ಆಸೆ...



Click it and Unblock the Notifications