Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಝೆನ್ ಕಥೆ: ಕೋಡಂಗಿ ನಿನಗಿಂತ ಮೇಲು

ಗುರುಗಳು ಇವನಿಗೆ ನನ್ನ ಬಳಿ ಏನೋ ಹೇಳಬೇಕಾಗಿದೆ ಎಂದು ಆ ಯುವ ಸನ್ಯಾಸಿಯ ಮುಖ ನೋಡಿದಾಗಲೇ ತಿಳಿಯಿತು. ಝೆನ್ ಗುರುಗಳು ಅವನ ಹತ್ತಿರ "ಏನು?" ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದರು. ಇವನು ಗುರುಗಳ ಹತ್ತಿರ ತನಗೆ ಹೊಸ ಜ್ಞಾನ ಪ್ರಾಪ್ತಿಯಾಗಿದೆ ಎಂದು ಹೇಳಿದನು.
ಇದನ್ನು ಕೇಳಿದ ಗುರುಗಳಿಗೆ ನಗು ಸಹಿಸಲು ಸಾಧ್ಯವಾಗಲಿಲ್ಲ, ಜೋರಾಗಿ ನಕ್ಕರು. ಶಿಷ್ಯನಿಗೆ ತುಂಬಾ ಅವಮಾನವಾಯಿತು. ತುಂಬಾ ಬೇಜಾರು ಮಾಡಿಕೊಂಡು ಮೂರು ದಿನಗಳವರೆಗೆ ಊಟ ತಿಂಡಿ ಮಾಡಲಿಲ್ಲ. ಮೂರನೇ ದಿನ ಸಾಯಾಂಕಾಲ ಗುರುಗಳ ಹತ್ತಿರ ಬಂದು "ನೀವು ನಕ್ಕಿದ ಕಾರಣ ನನಗೆ ತುಂಬಾ ಬೇಜಾರಾಗಿದೆ, ನನಗೆ ಊಟ, ನಿದ್ದೆ ಕೂಡ ಬರುತ್ತಿಲ್ಲ" ಎಂದು ಹೇಳಿದ.
ಆಗ ಗುರುಗಳು "ಆ ಶಿಷ್ಯನಿಗೆ ನಿನ್ನ ಸಮಸ್ಯೆ ಏನೆಂದು ಗೊತ್ತೇ?, ನಿನ್ನಲ್ಲಿರುವ ಸಮಸ್ಯೆ ಅಂದರೆ, ನಿನಗಿಂತ ಕೋಡಂಗಿ ಮೇಲು" ಎಂದರು. ಇದನ್ನು ಕೇಳಿದ ಆ ಶಿಷ್ಯ ಆಶ್ಚರ್ಯದಿಂದ "ಕೋಡಂಗಿಯನ್ನು ನನಗಿಂತ ಮೇಲು ಎಂದು ನಿಮಗೆ ಹೇಳಲು ಹೇಗೆ ಸಾಧ್ಯವಾಯಿತು ಗುರುಗಳೇ?" ಎಂದು ಕೇಳಿದ.
ಅದಕ್ಕೆ ಗುರುಗಳು "ಮತ್ತೇನು? ಕೋಡಂಗಿ ಕೊನೆಯ ಪಕ್ಷ ಬೇರೆಯವರನ್ನು ನಗಿಸುತ್ತಾನೆ, ಆದರೆ ನಿನಗೆ ಬೇರೆಯವರು ನಕ್ಕಿದ್ದೇ ಸಹಿಸಿಕೊಳ್ಳಲಾಗಲಿಲ್ಲವಲ್ಲ" ಎಂದರು. ಆಗ ಆ ಶಿಷ್ಯನು ತನ್ನ ತಪ್ಪನ್ನು ಅರಿತುಕೊಂಡನು.



Click it and Unblock the Notifications
