Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಸುಧಾಮೂರ್ತಿಯವರ ಈ ನುಡಿಮುತ್ತುಗಳು ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸುವಂತಿದೆ ನೋಡಿ
ಸುಧಾಮೂರ್ತಿ... ಈ ಹೆಸರು ಕೇಳಿದರೆ ಸಾಕು ಎಂಥವರಿಗಾದರೂ ಅವರ ಮೇಲಿನ ಗೌರವ ಹೆಚ್ಚುವುದು. ಅವರ ವ್ಯಕ್ತಿತ್ವವೇ ಅಂಥದ್ದು. ಇನ್‌ಫೋಸಿಸ್ ಎಂಬ ಸಂಸ್ಥೆಯನ್ನು ಅವರ ಪತಿ ನಾರಾಯಣ ಮೂರ್ತಿಯವರು ಕಟ್ಟಿದರೆ ಅವರು ಕಂಪನಿ ಸ್ಥಾಪಿಸಲು ನೆರವಾದರು ಸುಧಾಮೂರ್ತಿ. ಲೇಖಕಿ, ಚಿಂತಕಿ, ಸಮಾಜ ಸೇವಕಿಯಾಗಿರುವ ಸುಧಾಮೂರ್ತಿಗಳು ಮಾತುಗಳು ಜನರ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ, ಏಕೆಂದರೆ ಆ ಮಾತುಗಳು ಸತ್ಯಕ್ಕೆ ಅಷ್ಟೊಂದು ಹತ್ತಿರವಾಗಿರುತ್ತದೆ, ಹೇಗೆ ಬದುಕಬೇಕೆಂದು ತಿಳಿ ಹೇಳುವಂತಿರುತ್ತದೆ.
ಕೋಟ್ಯಾಂತರ ರುಪಾಯಿ ವ್ಯವಹಾರ ನಡೆಸುವ ಕಂಪನಿಯ ಒಡತಿಯಾದರೂ ಯಾವುದೇ ಆಡಂಭರವಿಲ್ಲದ, ನೋಡಿದರೆ ಮಧ್ಯಮ ವರ್ಗದ ಗೃಹಿಣಿಯಂತೆ ಕಾಣುವ ಸುಧಾಮೂರ್ತಿ ಬದುಕಿನ ಬಗ್ಗೆ ಹೇಳುವ ಪಾಠಗಳು, ಅವರು ನಡೆದುಕೊಳ್ಳುವ ರೀತಿ ಅನೇಕ ಜನರಿಗೆ ಹೇಗೆ ಬದುಕಬೇಕೆಂಬ ಮಾರ್ಗದರ್ಶನ ನೀಡುವಂತಿರುತ್ತದೆ. ತಾವು ತುಂಬಾ ಸರಳವಾಗಿರುವುದು ಮಾತ್ರವಲ್ಲ, ತಮ್ಮ ಮಕ್ಕಳನ್ನು ತುಂಬಾ ಸರಳವಾಗಿ ಬೆಳೆಸಿದ ತಾಯಿ. ಒಂದು ರುಪಾಯಿ ಹಣವನ್ನು ಸುಮ್ಮನೆ ವ್ಯರ್ಥ ಮಾಡುವುದಿಲ್ಲ, ಮಕ್ಕಳಲ್ಲಿ ಹಣದ ಮೌಲ್ಯದ ಮನವರಿಕೆ ಮಾಡಿಸಿದ್ದಾರೆ.
ಆಗಸ್ಟ್ 19 ಅವರ ಜನ್ಮದಿನ. ಇವರು ನಮ್ಮ ಜೊತೆ ಇರುವುದು ನಮ್ಮ ಪುಣ್ಯ. ಆ ತಾಯಿಗೆ ಕನ್ನಡ ಬೋಲ್ಡ್ ಸ್ಕೈ ಬಳಗದವರಿಂದ ಹಾಗೂ ನಮ್ಮ ಓದುಗರ ಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು...
ಸುಧಾಮೂರ್ತಿಯವರು ಮಾತನಾಡುವುದನ್ನು ನೋಡುವುದು, ಕೇಳುವುದು ಚೆಂದ, ಅವರು ಎಷ್ಟೊಂದು ವಿಚಾರಗಳನ್ನು ಹೇಳುತ್ತಾರೆ. ಅವರ ಒಂದೊಂದು ಮಾತುಗಳು ನುಡಿಮುತ್ತುಗಳಂತೆ ಇರುತ್ತವೆ ಅಲ್ವಾ? ಇವರ ಈ ನುಡಿಮುತ್ತುಗಳು ಹೇಗೆ ಬದುಕಬೇಕು ಎಂಬುವುದನ್ನು ಹೇಳುತ್ತವೆ, ನಮ್ಮಲ್ಲಿ ಧೈರ್ಯ ತುಂಬುತ್ತವೆ, ಬದುಕಿನಲ್ಲಿ ಒಂದು ಸ್ಪಷ್ಟ ಗುರಿ ಬೇಕೆಂಬ ಸಂದೇಶ ಸಾರುತ್ತವೆ, ನಾವಿಲ್ಲಿ ಸುಧಾಮೂರ್ತಿಯವರು ಹೇಳಿರುವ ಕೆಲವೊಂದು ಕೋಟ್ಸ್ ನೀಡಿದ್ದೇವೆ ನೋಡಿ:

ಕೋಟ್ 1
ಏಣಿಯನ್ನು ಹತ್ತಿದ ಮೇಲೆ ಒದ್ದು ಬೀಳಿಸುವುದು ಸುಲಭ, ಆದರೆ ಎಂದೆಂದಿಗೂ ಮೇಲೆಯೇ ಕೂರಲು ಸಾಧ್ಯವಿಲ್ಲ ಎಂಬುವುದನ್ನು ಮರೆಯಬಾರದು, ಎತ್ತರ ಹೋದಂತೆ The higher you go, the longer is the fall'-ಸುಧಾಮೂರ್ತಿ

ಕೋಟ್ 2
'ಬದುಕೆಂಬುವುದು ಒಂದು ಪರೀಕ್ಷೆಯಂತೆ ಆದರೆ ಇಲ್ಲಿ ಬರುವ ಪಠ್ಯಗಳು ಗೊತ್ತಿರುವುದಿಲ್ಲ, ಪ್ರಶ್ನೆ ಪತ್ರಿಕೆಗಳನ್ನೂ ತಯಾರಿಸಿರುವುದಿಲ್ಲ, ಅದಕ್ಕೆ ಮಾಡೆಲ್ ಉತ್ತರ ಪತ್ರಿಕೆ ಕೂಡ ಇರುವುದಿಲ್ಲ'-ಸುಧಾಮೂರ್ತಿ

ಕೋಟ್ 3
ನಾವು ನಮ್ಮ ಮಕ್ಕಳಿಗೆ ಅವರ ಜೀವನಕ್ಕೆ ಅವಶ್ಯಕವಾದ ಎರಡು ವಿಷಯಗಳನ್ನು ನೀಡಬೇಕು. ಅವುಗಳೆಂದರೆ ಬಲವಾದ ಅಡಿಪಾಯ ಹಾಗೂ ಶಕ್ತಿಯುತವಾದ ರೆಕ್ಕೆಗಳು. ಆಗ ಅವರು ಎಲ್ಲಿ ಬೇಕಾದರೂ ಹಾರಿ, ಸ್ವತಂತ್ರವಾಗಿ ಬದುಕುತ್ತಾರೆ-ಸುಧಾಮೂರ್ತಿ

ಕೋಟ್ 4
'ಜಂಜಾಟವೇ ಬದುಕು'- ಸುಧಾ ಮೂರ್ತಿ

ಕೋಟ್ 5
'ಕೋಗಿಲೆ ನೃತ್ಯ ಮಾಡೋಕೆ ಹೋಗಬಾರದು, ನವಿಲು ಹಡಲು ಹೋಗಬಾರದು'-ಸುಧಾಮೂರ್ತಿ

ಕೋಟ್ 6
ಸ್ವತಂತ್ರವಾಗಿರಲು ಪ್ರಯತ್ನಿಸಿ, ನಿಮ್ಮಲ್ಲಿ ಆ ಶಕ್ತಿ ಇದೆ ಎಂಬುವುದನ್ನು ಅರಿಯಿರಿ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ನೀವು ಪ್ರಯತ್ನಿಸುತ್ತಲೇ ಇದ್ದರೆ ಸಾಧ್ಯ-ಸುಧಾ ಮೂರ್ತಿ

ಕೋಟ್ 7
ಗುರಿಯಿದ್ದು ಪ್ರಯತ್ನಿಸದೇ ಇದ್ದರೆ ಅದು ಬರೀ ಕನಸು, ಗುರಿಯಿಲ್ಲದೆ ಪ್ರಯತ್ನಿಸುವುದು ಟೈಮ್ ಪಾಸ್, ಗುರಿ ಹಾಗೂ ಪ್ರಯತ್ನ ಎರಡೂ ಇದ್ದರೆ ನೀವು ಜಗತ್ತನ್ನೇ ಬದಲಾಯಿಸಬಹುದು-ಸುಧಾಮೂರ್ತಿ

ಕೋಟ್ 8
ನೀವು ಇತರರನ್ನು ಮೆಚ್ಚಿಸಲು ಪ್ರಯತ್ನಿಸಿದರೆ ನಿಮಗೆ ಯಾರನ್ನೂ ಮೆಚ್ಚಿಸಲು ಸಾಧ್ಯವಾಗಲ್ಲ. ನಿಮ್ಮ ಬದುಕನ್ನು ಇತರರ ಖುಷಿಗಾಗಿ ಬದುಕಲು ಸಾಧ್ಯವೇ ಇಲ್ಲ-ಸುಧಾಮೂರ್ತಿ

ಕೋಟ್ 9
ತುಂಬಾ ಸೆನ್ಸಿಟಿವ್ ಆಗಿರುವವರಿಗೆ ನಿಜ ಜಗತ್ತು ಅರಿವಾಗಲು ಸ್ವಲ್ಪ ಸಮಯ ಬೇಕಾಗುವುದು-ಸುಧಾ ಮೂರ್ತಿ

ಕೋಟ್ 10
ಹಣವು ಜನರನ್ನು ಒಗ್ಗೂಡಿಸುವುದು ಬಲು ಅಪರೂಪ, ಒಡೆಯುವುದೇ ಅಧಿಕ-ಸುಧಾ ಮೂರ್ತಿ

ಕೋಟ್ 11
ನೀವು ತುಂಬಾ ಸೆನ್ಸಿಟಿವ್ ಆಗಿರಬಾರದು, ಏಕೆಂದರೆ ಸೆನ್ಸಿಟಿವ್ ಜನರು ಜೀವನದಲ್ಲಿ ತುಂಬಾನೇ ನೋವು ಅನುಭವಿಸುತ್ತಾರೆ

ಕೋಟ್ 12
ಮಗಳು ದೊಡ್ಡವಳಾದ ಮೇಲೆ ತಾಯಿಗೆ ಒಳ್ಳೆಯ ಸ್ನೇಹಿತೆಯಾಗುತ್ತಾಳೆ, ಮಗ ಬೆಳೆದು ದೊಡ್ಡವನಾದ ಮೇಲೆ ತಾಯಿಗೆ ಅಪರಿಚಿತನಾಗುತ್ತಾನೆ-ಸುಧಾಮೂರ್ತಿ, ಹೌಸ್ ಆಫ್ ಕಾರ್ಡ್ಸ್

ಕೋಟ್ 13
ನಂಬಿಕೆ ಎಂಬುವುದು ಬೆಳೆಸುವುದು ತುಂಬಾನೇ ಕಷ್ಟ. ಅದನ್ನು ಬೆಳೆಸಲು ವರ್ಷಗಳೇ ಬೇಕಾಗಬಹುದು, ಆದರೆ ಒಂದು ಕೆಟ್ಟ ಅವಶ್ಯಕತೆಗಾಗಿ ಒಂದು ಕ್ಷಣದಲ್ಲಿ ಹಾಳಾಗಬಹುದು-ಸುಧಾ ಮೂರ್ತಿ



Click it and Unblock the Notifications











