ಭಗವಾನ್ ಶ್ರೀಕೃಷ್ಣನ ಸಮಾಪ್ತಿ ಹಿಂದಿದೆ, ಸೋಜಿಗದ ಸಂಗತಿ

By Deepu

ಪಾಂಡವರ ಹಿತಚಿಂತಕನಾಗಿದ್ದ ಕೃಷ್ಣನು ಕಪಟ ನಾಟಕ ಸೂತ್ರಧಾರಿ ಎಂದೇ ಬಿರುದಾಂಕಿತನು. ಸಕಲವನ್ನು ತಿಳಿದಿದ್ದ ಭಗವಂತನು ಲೋಕಕಲ್ಯಾಣಕ್ಕಾಗಿ ಜನ್ಮವೆತ್ತುತ್ತಾನೆ ಅಂತೆಯೇ ಎಲ್ಲಿ ಅನ್ಯಾಯ ಅತ್ಯಾಚಾರ ಹೆಚ್ಚಾಗುತ್ತದೋ ಅಲ್ಲೆಲ್ಲಾ ನಾನು ಅವತಾರವೆತ್ತಿ ಲೋಕ ಕಲ್ಯಾಣವನ್ನು ಮಾಡುತ್ತೇನೆ ಎಂಬುದಾಗಿ ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಮಹಾಭಾರತದಲ್ಲಿ ಅರ್ಜುನನ ಸಾರಥಿಯಾಗಿ, ಪ್ರಿಯಮಿತ್ರನಾಗಿ ಪಾಂಡವರ ಹಿತಚಿಂತಕ ಮತ್ತು ದ್ರೌಪದಿಯ ಸಹೋದರನಾಗಿ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಿದ್ದ ಶ್ರೀಕೃಷ್ಣನ ಮರಣದ ಕುರಿತು ಅನೇಕ ಊಹಾಪೋಹಗಳು ಹರಿದಾಡಿವೆ.

ಮಹಾಭಾರತದಲ್ಲಿನ ಕೆಲವೊಂದು ಸಾವು ನೋವುಗಳಿಗೆ ಶ್ರೀಕೃಷ್ಣನೂ ಪರೋಕ್ಷವಾಗಿ ಕಾರಣವಾಗಿರುವುದರಿಂದ ಪಾಪದ ಹೊರೆ ಆತನನ್ನು ಬಿಟ್ಟಿಲ್ಲ. ಆದರೆ ಮಾಡಿದ್ದನ್ನು ಅನುಭವಿಸಲೇಬೇಕು ಎಂಬ ತತ್ವಕ್ಕೆ ಬದ್ಧನಾಗಿ ಎಲ್ಲವನ್ನೂ ಸ್ವೀಕರಿಸುತ್ತಾನೆ ತನ್ನ ವಂಶದ ಅಂತ್ಯವನ್ನು ತನ್ನ ಕಣ್ಣೆದುರಲ್ಲೇ ಕಾಣುತ್ತಾನೆ. ಇದುವೇ ಕರ್ಮಫಲ ಎಂಬುದನ್ನು ಆತ ನಮಗಿಲ್ಲಿ ತಿಳಿಸಿಕೊಟ್ಟಿದ್ದಾನೆ. ತನ್ನ ಮಕ್ಕಳನ್ನು ಕಳೆದುಕೊಂಡು ದುಃಖತಪ್ತೆಯಾಗಿದ್ದ ಗಾಂಧಾರಿಯು ಕೃಷ್ಣನಿಗೆ ನಿನ್ನ ವಂಶ ನಿರ್ವಂಶವಾಗಲಿ ಎಂದು ಶಾಪ ನೀಡುತ್ತಾಳೆ. ಇದನ್ನು ಸಂತೋಷದಿಂದಲೇ ಸ್ವೀಕರಿಸುವ ದೇವರು ತನ್ನ ಕಣ್ಣೆದುರೇ ತನ್ನ ವಂಶದ ನಿರ್ನಾಮವನ್ನು ನೋಡುತ್ತಾನೆ.

ಸುಖಲೋಲುಪತೆಯಿಂದ ತಮ್ಮ ಇರುವಿಕೆಯನ್ನು ಮರೆತ ಯಾದವರು ಪರಸ್ಪರ ಕಾದಾಟದಲ್ಲಿ ತೊಡಗಿ ನಾಶವನ್ನು ಕಂಡುಕೊಳ್ಳುತ್ತಾರೆ. ಕೃಷ್ಣನಿಗೆ ಈ ಸಂದರ್ಭದಲ್ಲಿ ಏನೂ ಮಾಡಲೂ ಆಗುವುದಿಲ್ಲ. ತನ್ನ ಅಸಹಾಯಕತೆಯನ್ನು ನೆನೆದು ಯಾದವರ ಕುಲ ಅಳಿಯುವುದನ್ನು ನೋಡಿ ದುಃಖತಪ್ತನಾದ ಕೃಷ್ಣನು ಕಾಡಿಗೆ ತೆರಳುತ್ತಾನೆ. ಅಲ್ಲಿ ಬೇಸರಗೊಂಡು ಮರದ ನೆರಳಿನಲ್ಲಿ ಆಸರೆಯನ್ನು ಪಡೆದುಕೊಂಡಿರುತ್ತಾನೆ. ಕೃಷ್ಣನ ಪಾದದಲ್ಲಿದ್ದ ಕಮಲದ ಗುರುತನ್ನು ಪ್ರಾಣಿಯೆಂದು ತಿಳಿದು ಬೇಡನೊಬ್ಬ ಕೃಷ್ಣನ ಕಾಲಿಗೆ ವಿಷಬಾಣವನ್ನು ಬಿಡುತ್ತಾನೆ. ನಂತರ ಬೇಡನು ಕ್ಷಮೆಯಾಚಿಸಿದರೂ ಬಂದಿದ್ದನ್ನು ಅನುಭವಿಸಲೇಬೇಕು ಎಂದು ಹೇಳುತ್ತಾನೆ.

Story of Lord krishna's death, which should surprisse you

ಪುರಾಣಗಳ ಪ್ರಕಾರ ಈ ಬೇಡನು ಬೇರಾರು ಆಗಿರದೇ ರಾಮಾಯಣದಲ್ಲಿ ರಾಮನಿಂದ ಮರೆಯಾಗಿ ಹತನಾದ ವಾಲಿ ಎಂಬುದಾಗಿ ಪ್ರತೀತಿಯಲ್ಲಿದೆ. ಹೀಗೆ ಶ್ರೀಕೃಷ್ಣನ ಮರಣವು ಹೆಚ್ಚು ಕುತೂಹಲಗಳಿಂದ ಕೂಡಿದ್ದು ಇಂದಿಗೂ ಅದು ಬೇರ್ಪಡಿಸಲಾಗದ ರಹಸ್ಯವಾಗಿ ಮಾರ್ಪಟ್ಟಿದೆ. ಈ ಕುರಿತು ಇನ್ನಷ್ಟು ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದು ಮಾಹಿತಿ ತಿಳಿದುಕೊಳ್ಳಿ.

ಗಾಂಧಾರಿಯ ಶಾಪ
ತನ್ನ ನೂರು ಮಕ್ಕಳ ಸಾವಿನಿಂದ ದುಃಖಿತಳಾಗಿ ಗಾಂಧಾರಿಯು ಸಂಪೂರ್ಣ ರಕ್ತಪಾತಕ್ಕೆ ಶ್ರೀ ಕೃಷ್ಣನನ್ನು ಆರೋಪಿಸಿದಳು. ಶ್ರೀ ಕೃಷ್ಣನು ಸ್ವತಃ ದೇವರಾಗಿದ್ದರಿಂದ ಕುರು ಕ್ಷೇತ್ರಯುದ್ಧವನ್ನು ಸುಲಭವಾಗಿ ತಪ್ಪಿಸಬಹುದಾಗಿತ್ತೆಂದು ಗಾಂಧಾರಿಯು ಹೇಳಿದಳು. ಆದರೆ ಅವನು ಸಹೋದರರು ಒಬ್ಬರೊನ್ನೊಬ್ಬರು ಪರಸ್ಪರ ಕೊಲ್ಲಲು ಅವಕಾಶ ಮಾಡಿದನು. ಹಾಗಾಗಿ, ಗಾಂಧಾರಿಯು ಕೃಷ್ಣನಿಗೆ ಯಾದವ ಕುಲವೂ ಕೂಡ ಕುರುವಂಶವು ನಾಶವಾದ ರೀತಿಯಲ್ಲಿ ನಾಶವಾಗಿಹೋಗಲಿ ಎಂದು ಶಪಿಸಿದಳು. ಯಾದವ ಕುಲದಲ್ಲಿಯೂ ಸಹೋದರರು ಪರಸ್ಪರ ಕೊಂದು ಕೃಷ್ಣನ ರಾಜ್ಯವು ಅಂತ್ಯವಾಗಲಿಯೆಂದು ಹೇಳಿದಳು. ಹಾಗೆಯೇ ಶ್ರೀ ಕೃಷ್ಣನು ಏಕಾಂಗಿಯಾಗಿ ಸಾಯುವನೆಂದು ಮತ್ತು ದ್ವಾರಕಾ ಪಟ್ಟಣವನ್ನು ಸಮುದ್ರವು ನುಂಗಿ ಹಾಕಲಿಯೆಂದೂ ಸಹ ಶಾಪ ಕೊಟ್ಟಳು. ಶ್ರೀ ಕೃಷ್ಣನು ಎಷ್ಟಾದರೂ ಗಾಂಧಾರಿಯು ತನ್ನ ಭಕ್ತಳೆಂದು ಮುಗುಳ್ನಗೆಯಿಂದ ಶಾಪವನ್ನು ಸ್ವೀಕರಿಸಿದನು.

ಎಲ್ಲರನ್ನೂ ಕಣ್ಣೆದುರಿಗೆಯೇ ಕಳೆದುಕೊಂಡ ಕೃಷ್ಣ
ಇತ್ತ ತನ್ನ ಆಪ್ತ ಸ್ನೇಹಿತರನ್ನು, ಪಾಂಡವರನ್ನು, ತಂದೆ ವಸುದೇವ, ಹಾಗೂ ಅಣ್ಣನಾದ ಬಲರಾಮ, ಹೀಗೆ ಎಲ್ಲರನ್ನೂ ಕಣ್ಣೆದುರಿಗೆಯೇ ಕಳೆದುಕೊಂಡ ಕೃಷ್ಣನು ಬಹಳ ದುಃಖಿತನಾಗಿ ಒಂದು ಮರದಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದನು. ಒಬ್ಬ ಬೇಡನು ದೂರದಿಂದ ಕೃಷ್ಣನ ಪಾದದಲ್ಲಿ ಕಾಣುತ್ತಿದ್ದ ಕಮಲದ ಚಿಹ್ನೆಯನ್ನು ಒಂದು ಪ್ರಾಣಿಯೆಂದು ತಪ್ಪಾಗಿ ಅರಿತುಕೊಂಡನು. ಬೇಡನು ಆ ಕಮಲದ ಮೇಲೆ ಗುರಿಯಿಟ್ಟು ಬಾಣ ಬಿಟ್ಟಾಗ ಅದು ಕೃಷ್ಣನ ಪಾದಕ್ಕೆ ಹೊಡೆಯಿತು. ತನ್ನ ತಪ್ಪು ಅರಿವಾದ ತಕ್ಷಣವೇ ಬೇಡನು ಕೃಷ್ಣನ ಬಳಿ ಬಂದು ಕ್ಷಮೆಯಾಚಿಸಿದನು. ಶ್ರೀ ಕೃಷ್ಣನು ಇದೆಲ್ಲ ವಿಧಿನಿಯಮವೆಂದು ಹೇಳಿದನು. ಹೀಗೆ ಶ್ರೀ ಕೃಷ್ಣನು ಇಹಲೋಕವನ್ನು ತೊರೆದು ದ್ವಾಪರಯುಗದ ಅಂತ್ಯವಾಗುವಂತಾಯಿತು.

ಕೃಷ್ಣನನ್ನು ಕೊಂದ ಬೇಡ ಯಾರು?
ಪುರಾಣಗಳ ಪ್ರಕಾರ ಶ್ರೀ ಕೃಷ್ಣನನ್ನು ಕೊಂದ ಬೇಡನು ಮತ್ತೆ ಯಾರೂ ಅಲ್ಲದೆ ಬೇಡನಾಗಿ ಜನ್ಮ ತಾಳಿದ ವಾನರ ರಾಜ ವಾಲಿ. ಶ್ರೀ ಕೃಷ್ಣನ ಹಿಂದಿನ ಜನ್ಮದಲ್ಲಿ ಶ್ರೀ ರಾಮನಾಗಿ ವಾನರ ರಾಜ ವಾಲಿಯನ್ನು ಮರಗಳ ಹಿಂದೆ ನಿಂತು ಯಾವ ನಿರ್ದಿಷ್ಟ ಕಾರಣವಿಲ್ಲದೆ ಕೊಂದಿದ್ದರಿಂದ ಈ ಜನ್ಮದಲ್ಲಿ ಬೇಡನ ಜನ್ಮತಾಳಿದ ವಾಲಿಯಿಂದ ಸಾಯಬೇಕೆಂದು ಪೂರ್ವ ನಿಯೋಜಿತವಾಗಿತ್ತು. ಹೀಗಾಗಿರುವುದನ್ನು ನೋಡಿದರೆ ಪರಮಾತ್ಮನೂ ಸಹ ಕರ್ಮ ಫಲದಿಂದ ಹೊರಗಿಲ್ಲವೆಂದು ಸ್ಪಷ್ಟವಾಗಿ ಗೋಚರಿಸುತ್ತದೆ.

English summary

Story of Lord krishna's death, which should surprisse you

There are many intriguing stories in Hindu mythology which only a few of us know about. One such story happens to be of Lord Krishna's death, have a look...
X
Desktop Bottom Promotion